ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡಿ ಈಗ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಬೇಗನೆ ಆಗಂಭವಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ? BiggBoss Season 13 Date Announced, ಕಾಮನ್ ಮ್ಯಾನ್ ಗೆ ಅವಕಾಶ ಇರುತ್ತಾ? BBK13, Kiccha Sudeep
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ‘ಬಿಗ್ ಬಾಸ್ ಸೀಸನ್ 13’ಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಕಳೆದ ಹಲವಾರು ಸೀಸನ್‌ಗಳಂತೆ ಈ ಬಾರಿಯೂ ಸುದೀಪ್ ಅವರೇ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಹೆಚ್ಚಿನ ಸಂತಸ ತಂದಿದೆ.

ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭದ:
ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮವು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಈ ಕಾರ್ಯಕ್ರಮವು ಅಂದುಕೊಂಡಿದ್ದಕ್ಕಿಂತ ಬೇಗನೆ ಪ್ರಾರಂಭವಾಗುವ ಸಾಧ್ಯತೆಯಿದೆ. ಜೂನ್ ತಿಂಗಳಲ್ಲಿಯೇ ಮೊದಲ ಪ್ರೋಮೋ ಬಿಡುಗಡೆಯಾಗಿರುವುದರಿಂದ, ಜುಲೈ ತಿಂಗಳ ಮೊದಲ ವಾರ ಅಥವಾ ಅಂತ್ಯದ ವೇಳೆಗೆ ಬಿಗ್ ಬಾಸ್ ಸೀಸನ್ 13ರ ಅದ್ದೂರಿ ಚಾಲನೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನ ಓದಿ: ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
ಈ ಬಾರಿಯ ಬಿಗ್ ಬಾಸ್ ಸೀಸನ್ 13ರ ವಿಶೇಷತೆಗಳೇನು?
ಬಿಗ್ ಬಾಸ್ ಎಂದರೆ ಬದಲಾವಣೆಗಳಿಗೆ ಹೆಸರುವಾಸಿ. ಅದೇ ರೀತಿ ಈ ಬಾರಿಯೂ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಕಾರ್ಯಕ್ರಮದ ಗುಣಮಟ್ಟ ಮತ್ತು ಘನತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ, ಸುದೀಪ್ ಅವರ ಸೂಚನೆಯ ಮೇರೆಗೆ ಯಾವುದೇ ವಿವಾದಿತ ವ್ಯಕ್ತಿಗಳಿಗೆ ಈ ಬಾರಿ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಈ ಬಾರಿಯ ಬಿಗ್ ಬಾಸ್ ಸೀಸನ್ 13 ಅನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುವ ನಿರೀಕ್ಷೆಯಿದೆ.
ಬಿಗ್ ಬಾಸ್ ಸೀಸನ್ 13ಕ್ಕೆ ಕಾಮನ್ ಮ್ಯಾನ್ ಎಂಟ್ರಿ:
ಬಿಗ್ ಬಾಸ್ ಸೀಸನ್ 13ರ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಸಾಮಾನ್ಯ ಜನರಿಗೆ (Common Man) ಬಿಗ್ ಬಾಸ್ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಈ ಮೂಲಕ ಪ್ರತಿಭೆಯುಳ್ಳ ಸಾಮಾನ್ಯ ವ್ಯಕ್ತಿಗಳಿಗೂ ಬಿಗ್ ಬಾಸ್ ವೇದಿಕೆ ದೊರೆತಂತಾಗುತ್ತದೆ. ಇದು ಕಾರ್ಯಕ್ರಮದಲ್ಲಿ ಹೊಸತನವನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನ ಓದಿ: ಗೃಹಲಕ್ಷ್ಮೀ ಯೋಜನೆ ಹಣ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ, How to Check Gruhalakshmi Scheme Status, Gruhalakshmi Scheme amount Released
ಒಟ್ಟಾರೆಯಾಗಿ ಹೇಳುವುದಾದರೆ, ಬಿಗ್ ಬಾಸ್ ಸೀಸನ್ 13 ಹೊಸ ನಿರೀಕ್ಷೆಗಳು ಮತ್ತು ಬದಲಾವಣೆಗಳೊಂದಿಗೆ ಆರಂಭವಾಗಲು ಸಜ್ಜಾಗಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಮತ್ತು ಆಟ ಯಾವ ತಿರುವುಗಳನ್ನು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ನಿಮ್ಮ ಪ್ರಕಾರ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರಬೇಕು ಅಂತಾ ಕಾಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ? BiggBoss Season 13 Date Announced, ಕಾಮನ್ ಮ್ಯಾನ್ ಗೆ ಅವಕಾಶ ಇರುತ್ತಾ? BBK13, Kiccha Sudeep
