ಕ್ವಾಟ್ಲೆ ಕಿಚನ್ ಸೀಸನ್ 2ಕ್ಕೆ ಎಂಟ್ರಿ ಕೊಟ್ಟ 20 ಸ್ಪರ್ಧಿಗಳು! Kwatle kitchen season 2 contestant list,

ನಮಸ್ಕಾರ ಸ್ನೇಹಿತರೇ, ಕಿರುತೆರೆಯ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿರುವ ಜನಪ್ರಿಯ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್’ ಇದೀಗ ಎರಡನೇ ಸೀಸನ್‌ನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಕಾರ್ಯಕ್ರಮವು ಜೂನ್ 6ರಂದು 9 ಗಂಟೆಗೆ ಗ್ರ್ಯಾಂಡ್ ಲಾಂಚ್ ಅಧಿಕೃತವಾಗಿ ಆರಂಭವಾಗುತ್ತಿದ್ದು, ಈ ಬಾರಿಯ ಸೀಸನ್‌ನಲ್ಲಿ ಭಾಗವಹಿಸುವ 20 ಜನ ಸ್ಪರ್ಧಿಗಳ ಪಟ್ಟಿ ಇದೀಗ ಬಹಿರಂಗಗೊಂಡಿದೆ. ಈ ಕಾರ್ಯಕ್ರಮದಲ್ಲಿ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ ಮತ್ತು ಯಾರು ನಿಮ್ಮ ನೆಚ್ಚಿನ ತಾರೆ ಎಂಬುದನ್ನು ತಿಳಿಯಲು ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮನೆಮಾಡಿದೆ.

ಕ್ವಾಟ್ಲೆ ಕಿಚನ್ ಸೀಸನ್ 2ಕ್ಕೆ ಎಂಟ್ರಿ ಕೊಟ್ಟ 20 ಸ್ಪರ್ಧಿಗಳು! Kwatle kitchen season 2 contestant list, Kwatle kitchen Contestants, My edu update Kannada, Kannada

ಈ ಬಾರಿಯ ‘ಕ್ವಾಟ್ಲೆ ಕಿಚನ್ ಸೀಸನ್ 2‘ನಲ್ಲಿ ಭಾಗವಹಿಸುತ್ತಿರುವ 20 ಸ್ಪರ್ಧಿಗಳು ವಿವಿಧ ಕ್ಷೇತ್ರಗಳಿಂದ ಬಂದವರಾಗಿದ್ದು, ಅವರೆಲ್ಲರೂ ಈಗಾಗಲೇ ತಮ್ಮದೇ ಆದ ರೀತಿಯಲ್ಲಿ ಜನಪ್ರಿಯತೆಯನ್ನು ಗಳಿಸಿದವರು. ಹಾಗಾದರೆ ಕ್ವಾಟ್ಲೆ ಕಿಚನ್ ಸೀಸನ್ 02ಕ್ಕೆ ಎಂಟ್ರಿ ಕೊಟ್ಟಿರುವ 20 ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿದೆ:

ಕ್ವಾಟ್ಲೆ ಕಿಚನ್ ಸೀಸನ್ 2ಕ್ಕೆ ಎಂಟ್ರಿ ಕೊಟ್ಟ 20 ಸ್ಪರ್ಧಿಗಳು! Kwatle kitchen season 2 contestant list, Kwatle kitchen Contestants, kannada, my edu update, kannada

 

  • ಪ್ರಶಾಂತ್: ಯೂಟ್ಯೂಬರ್ ಆಗಿರುವ ಪ್ರಶಾಂತ್ ಗಿಚ್ಚಿ ಗಿಲಿಗಿಲಿ ಮೂಲಕ ಖ್ಯಾತಿ ಗಳಿಸಿದ್ದು ಇವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿರುತ್ತಾರೆ
  • ಸೂರಜ್: ಕಾಮಿಡಿ ಕಿಲಾಡಿಗಳು ಖ್ಯಾತಿ ಗಳಿಸಿರುವ ಹಾಸ್ಯನಟ ಸೂರಜ್ ಅವರು ಕ್ವಾಟ್ಲೆ ಕಿಚನ್ ನಲ್ಲಿ ತಮ್ಮ ಕ್ವಾಟ್ಲೆ ಮೂಲಕ ಜನರ ಗಮನಸೆಳೆಯಲಿದ್ದಾರೆ.
  • ರಕ್ಷಿತಾ ಶೆಟ್ಟಿ: ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ, ಮೂಲತಃ ತುಳು ಮಾತನಾಡುವವರಾಗಿದ್ದರು ತಮ್ಮ ಡಿಫರೆಂಟ್ ಸ್ಟೈಲ್ ನಲ್ಲಿ ಕನ್ನಡ ಮಾತನಾಡುವ ಮೂಲಕ ಜನರ ಗಮನ ಸೆಳೆದಿದ್ದು, ಇವರಿಗೂ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ಇದ್ದು, ಇವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ.
  • ಸೂರಜ್ ಸಿಂಗ್: ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದಿರುವ ಸೂರಜ್ ಸಿಂಗ್ ಅವರು ಸಿಂಗಾಪುರದಲ್ಲಿ ಚೆಫ್ ಆಗಿ ಕೆಲಸ ಮಾಡಿದವರಾಗಿದ್ದು, ಬಿಗ್ ಬಾಸ್ ಮುಗಿದ ಬಳಿಕ ಪವಿತ್ರ ಬಂಧನ ಸೀರಿಯಲ್ ನಾಯಕನಾಗಿ ನಟಿಸುತ್ತಿದ್ದು ಇವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ
  • ಕಾವ್ಯಶ್ರೀ ಗೌಡ: ‘ಮಂಗಳಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ ಸಹ ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
  • ಓಂ ಪ್ರಕಾಶ್: ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಓಂ ಪ್ರಕಾಶ್ ರೈ ಅವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ
  • ಆಸಿಯಾ ಬೇಗಂ: ‘ಪ್ಯಾಟೆ ಹುಡುಗಿ ಹಳ್ಳಿ ಲೈಫ್’ ಸೀಸನ್ 4 ಮತ್ತು ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಆಸಿಯಾ ಬೇಗಂ ಸಹ ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
  • ಪುನೀತಾ ಆಚಾರ್ಯ: ‘ನಮ್ಮಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಪುನೀತಾ ಅವರು ಭರತನಾಟ್ಯ ಕಲಾವಿದೆಯಾಗಿದ್ದು, ಈಗ ತಮ್ಮ ತೂಕವನ್ನ ಸಹ ಇಳಿಸುವ ಮೂಲಕ ಸುಂದರವಾಗಿ ಕಾಣಿಸುತ್ತಿರುವ ಪುನೀತಾ ಸಹ ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ.
  • ಅಮ್ರಿಟಾ ರಾಜ್: ಮಹಾನಟಿ ಮತ್ತು ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಅಮ್ರಿಟಾ ರಾಜ್ ತಮ್ಮ ಮುದ್ದು ಮಾತಿನ ಮೂಲಕವೇ ಫೇಮಸ್ ಆಗಿದ್ದು ಇವರು ಈಗ ಕ್ವಾಟ್ಲೆ ಕಿಚನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನ ಓದಿ: ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ? BiggBoss Season 13 Date Announced, ಕಾಮನ್ ಮ್ಯಾನ್ ಗೆ ಅವಕಾಶ ಇರುತ್ತಾ? BBK13
  • ವಾಣಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ವಾಣಿ ಸಹ ಕ್ವಾಟ್ಲೆ ಕಿಚನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
  • ಕರಿಬಸಪ್ಪ: ಫಿಟ್ನೆಸ್ ಟ್ರೈನರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಕರಿಬಸಪ್ಪ ಸಹ ಈಗ ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
  • ಪ್ರಿಯಾಂಕ: ‘ಅಗ್ನಿಸಾಕ್ಷಿ’ , ಸತ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಪ್ರಿಯಾಂಕ ಅವರು ಈಗ ಕ್ವಾಟ್ಲೆ ಕಿಚನ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ
  • ಹನುಮಂತ: ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಸರಿಗಮಪ ಖ್ಯಾತಿಯ ಹನುಮಂತ ಈಗ ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ.
  • ತುಕಾಲಿ ಸಂತು: ಕಾಮಿಡಿ ಕಿಲಾಡಿಗಳು, ಗಿಚ್ಚಿ ಗಿಲಿಗಿಲಿ ಮತ್ತು ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು ಇವರು ಕ್ವಾಟ್ಲೆ ಕಿಚನ್ ನಲ್ಲಿ ಇರಲಿದ್ದಾರೆ.
  • ಭವಿಷ್ ಗೌಡ: ‘ಶ್ರೀಗಂಧದ ಗುಡಿ’ ಧಾರಾವಾಹಿಯ ನಾಯಕನಾಗಿರುವ ಭವಿಷ್ ಗೌಡ ಹೆಣ್ಣು ಮಕ್ಕಳ ಮನಸ್ಸಿನ ಜೊತೆ ಸಕ್ಕತ್ ಕುಕ್ ಮಾಡೋದು ರೆಡಿ ಅಂತ ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನ ಓದಿ: ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026 
  • ರವಿ ಚೇತನ್ : ಕನ್ನಡ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ರವಿ ಚೇತನ್ ಅವರು ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
  • ಮೇಘ: ‘ನಂದಗೋಕುಲ’ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಅವರು ಕ್ವಾಟ್ಲೆ ಕಿಚನ್ ಗೆ ಎಂಟ್ರಿ ಕೊಟ್ಟಿದ್ದಾರೆ.
  • ನವಾಜ್: ಪಂಚ್ ಡೈಲಾಗ್ ಗಳ ಮೂಲಕ ಹಾಗೂ ಬಿಗ್ ಬಾಸ್ ಮೂಲಕ ಖ್ಯಾತಿಗಳಿಸಿರುವ ನವಾಜ್ ಈಗ ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿದ್ದಾರೆ.
  • ಸಮೀಕ್ಷಾ: ‘ಮುದ್ದುಮಣಿಗಳು’ ಧಾರಾವಾಹಿ ಖ್ಯಾತಿಯ ಸಮೀಕ್ಷಾ ಕೆಲವರು ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋ ಗಳಲ್ಲಿ ಸಹ ಕಾಣಿಸಿಕೊಂಡಿದ್ದು ಈಗ ಇವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
  • ತಾಂಡವ್ ರಾಮ್: ‘ಜೋಡಿ ಹಕ್ಕಿಗಳು’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ಅವರು ಕ್ವಾಟ್ಲೆ ಕಿಚನ್ ಸ್ಪರ್ಧಿಯಾಗಿರುತ್ತಾರೆ

ಈ 20 ಜನ ಸ್ಪರ್ಧಿಗಳು ಅಡುಗೆ ಮನೆಯಲ್ಲಿ ತಮ್ಮ ಕೌಶಲ್ಯವನ್ನು ಹೇಗೆ ಪ್ರದರ್ಶಿಸಲಿದ್ದಾರೆ ಮತ್ತು ಯಾವ ರೀತಿಯ ‘ಕ್ವಾಟ್ಲೆ’ಗಳನ್ನು ಮಾಡಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ. ಅಡುಗೆ ಜೊತೆಗೆ ಈ ಕಲಾವಿದರ ನಡುವಿನ ತಮಾಷೆ, ಜಗಳ ಮತ್ತು ಹಾಸ್ಯದ ಸನ್ನಿವೇಶಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿವೆ ಎಂಬುದು ಖಚಿತ.

ಕ್ವಾಟ್ಲೆ ಕಿಚನ್ ಸೀಸನ್ 2ಕ್ಕೆ ಎಂಟ್ರಿ ಕೊಟ್ಟ 20 ಸ್ಪರ್ಧಿಗಳು! Kwatle kitchen season 2 contestant list, Kwatle kitchen Contestants

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment