ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುತ್ತಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರಬಹುದು ಎನ್ನುವ ಒಂದು ಅಂದಾಜು ಪಟ್ಟಿ ಬಗ್ಗೆ ಇದೀಗ ನೋಡೋಣ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಬರಬೇಕು ಹಾಗೂ ಈ ಲಿಸ್ಟ್ ನಲ್ಲಿ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬರಬಾರದು ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 13 Contestants List, ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು, BBK13, Kiccha Sudeep, Bigg Boss Kannada 13 contestants
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಜನಸಾಮಾನ್ಯರಿಗೂ ಮನೆಯೊಳಗೆ ಪ್ರವೇಶಿಸಲು ವಿಶೇಷ ಅವಕಾಶವನ್ನು ನೀಡಲಾಗುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದಾದ ಪ್ರಮುಖ ಸಂಭಾವ್ಯ ಸ್ಪರ್ಧಿಗಳ ವಿವರ ಇಲ್ಲಿದೆ.
Bigg Boss Kannada 13 Expected Contestants List:
- ಸುಷ್ಮಾ K ರಾವ್: ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಭಾಗ್ಯ ಎಂಬ ಮುಖ್ಯ ಪಾತ್ರದ ಮೂಲಕ ಮನೆಮಾತಾಗಿದ್ದ ಇವರು, ಪ್ರಸ್ತುತ ‘ಕಾಟ್ಲೆ ಕಿಚನ್’ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ.
- ರಿತ್ವಿಕ್: ಕಲರ್ಸ್ ಕನ್ನಡದ ಜನಪ್ರಿಯ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ.
- ರಾಘವೇಂದ್ರ: ‘ಮಜಾ ಭಾರತ’, ‘ಮಜಾ ಟಾಕೀಸ್’ ಮತ್ತು ‘ಗಿಚ್ಚಿ ಗಿಲಿಗಿಲಿ’ ಮುಂತಾದ ಕಾಮಿಡಿ ಶೋಗಳ ಮೂಲಕ ಹೆಸರು ಮಾಡಿರುವ ಇವರ ಹೆಸರು ಕಳೆದ ಸೀಸನ್ನಲ್ಲೂ ಕೇಳಿಬಂದಿತ್ತು. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ.
- ರಗಡ್ ರಶ್ಮಿ: ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಶ್ಮಿ ಅವರು ಈ ಬಾರಿಯ ಲಿಸ್ಟ್ನಲ್ಲಿದ್ದಾರೆ.
ಇದನ್ನ ಓದಿ: ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ? BiggBoss Season 13 Date Announced, ಕಾಮನ್ ಮ್ಯಾನ್ ಗೆ ಅವಕಾಶ ಇರುತ್ತಾ? BBK13
- ಸಮೀಕ್ಷಾ: ‘ಸುಬ್ಬಲಕ್ಷ್ಮಿ ಸಂಸಾರ’ ಸೀರಿಯಲ್ನಲ್ಲಿ ನೆಗೆಟಿವ್ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಇವರು, ಸದ್ಯ ‘ಕಾಟ್ಲೆ ಕಿಚನ್’ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಇವರು ಸಹ ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ.
- ಸೂರಜ್: ‘ಕಾಮಿಡಿ ಕಿಲಾಡಿಗಳು’, ‘ಕಾಟ್ಲೆ ಕಿಚನ್’ ಮತ್ತು ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋಗಳ ಮೂಲಕ ಕಾಮಿಡಿ ನಟನಾಗಿ ಪ್ರಸಿದ್ಧಿ ಪಡೆದಿರುವ ಸೂರಜ್ ಈ ಬಾರಿ ಕಾಣಿಸಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ.
- ನಿಶಾ ಯೋಗೇಶ್ವರ್: ಹಿರಿಯ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಅವರ ಪುತ್ರಿಯಾದ ನಿಶಾ ಯೋಗೇಶ್ವರ್ ಅವರ ಹೆಸರು ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
- ತಪಸ್ವಿನಿ ಪುಣಚ: ‘ಹರಿಕಥೆಯಲ್ಲ ಗಿರಿಕಥೆ’ ಮತ್ತು ‘ಗಜರಾಮ’ ಸಿನಿಮಾಗಳಲ್ಲಿ ನಟಿಸಿರುವ ಇವರು ಈ ಬಾರಿ ಬಿಗ್ ಬಾಸ್ ಪ್ರವೇಶಿಸುವ ನಿರೀಕ್ಷೆ ಇದೆ.
- ಭರತ್ ಭೂಪಣ್ಣ: ‘ಬ್ರಹ್ಮಗಂಟು’ ಧಾರಾವಾಹಿಯ ಖ್ಯಾತಿಯ ಭರತ್ ಭೂಪಣ್ಣ ಅವರ ಹೆಸರು ಕಳೆದ ಸೀಸನ್ನಲ್ಲೂ ಮುಂಚೂಣಿಯಲ್ಲಿತ್ತು, ಈ ಬಾರಿ ಇವರು ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
- ನಿಕಿತಾ ಸ್ವಾಮಿ: ‘ರಾಮಾಚಾರಿ’ ಧಾರಾವಾಹಿ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ನಟಿಸಿರುವ ನಿಕಿತಾ ಸ್ವಾಮಿ ಈ ಬಾರಿಯ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ನಲ್ಲಿ ಇದ್ದಾರೆ.
- ಹುಲಿ ಕಾರ್ತಿಕ್: ಕನ್ನಡದ ಹಲವಾರು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಪ್ರೇಕ್ಷಕರನ್ನು ನಗಿಸಿರುವ ಹುಲಿ ಕಾರ್ತಿಕ್ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸಬಹುದು.
ಇದನ್ನ ಓದಿ: ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
- ಮಾನಸ ಗುರುಸ್ವಾಮಿ: ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಮಾನಸ ಗುರುಸ್ವಾಮಿ ಅವರ ಹೆಸರು ಕೂಡ ಲಿಸ್ಟ್ನಲ್ಲಿದೆ.
- ರಜನಿ ರಾಘವನ್: ಕನ್ನಡದ ಹಲವು ಪ್ರಸಿದ್ಧ ಸೀರಿಯಲ್ಗಳು ಹಾಗೂ ಸಿನಿಮಾಗಳಲ್ಲಿ ನಟಿಸಿರುವ ರಜನಿ ರಾಘವನ್ ಅವರ ಹೆಸರು ಕಳೆದ ಸೀಸನ್ನಲ್ಲೂ ಚರ್ಚೆಯಲ್ಲಿತ್ತು, ಈ ಬಾರಿ ಅವರು ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.
- ಗಗನ: ‘ಮಹಾನಟಿ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD)’ ಮತ್ತು ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸಖತ್ ಫೇಮಸ್ ಆಗಿರುವ ಗಗನ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಇವರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇದು ಕೇವಲ expected ಕಂಟೆಸ್ಟಂಟ್ ಗಳ ಲಿಸ್ಟ್ ಆಗಿರುತ್ತದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಬರಬೇಕು ಹಾಗೂ ಈ ಲಿಸ್ಟ್ ನಲ್ಲಿ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬರಬಾರದು ಎಂದು ಕಾಮೆಂಟ್ ಮಾಡಿ ತಿಳಿಸಿ.
