ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ 13ರ ಆರಂಭಕ್ಕೂ ಮುನ್ನವೇ ಬಿಗ್ ಬಾಸ್ ಅಗ್ನಿಪರೀಕ್ಷೆ ನಿಯೋಜಿಸಲಾಗಿತ್ತು. ಅದರಲ್ಲಿ 19 ಜನ ಸ್ಪರ್ಧಿಗಳು ಆಯ್ಕೆ ಆಗಿದ್ದರು. ಇದೀಗ ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಟಾಸ್ಕ್ ಗಳು ಸಹ ನೀಡಲಾಗುತ್ತಿದ್ದು, ಇದೀಗ 4 ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಲಿದ್ದಾರೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
Bigg Boss Kannada Agniparikshe Eliminated, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆಯಲ್ಲಿ 4 ಸ್ಪರ್ಧಿಗಳು ಎಲಿಮಿನೇಟ್, BBK13, Kiccha Sudeep, BIgg Boss Kannada
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 13 ರ ಆರಂಭಕ್ಕೂ ಮುನ್ನ, ಸಾಮಾನ್ಯ ಜನರ (Common Man) ಆಯ್ಕೆ ಪ್ರಕ್ರಿಯೆಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಆಡಿಷನ್ ನೀಡಿ ಅದರಲ್ಲಿ ಆಯ್ಕೆ ಆದ ಸ್ಪರ್ಧಿಗಳು ಅಗ್ನಿಪರೀಕ್ಷೆಯಲ್ಲಿ ಆಡಲಿದ್ದಾರೆ. ಇನ್ನು ಮೊದಲ ವಾರದ ಅಗ್ನಿಪರೀಕ್ಷೆಯಲ್ಲಿ 4 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ.

ಎಲಿಮಿನೇಟ್ ಆದ ಸ್ಪರ್ಧಿಗಳು:
ಅಗ್ನಿಪರೀಕ್ಷೆಯಲ್ಲಿ 60 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಈಗ 19 ಜನ ಸ್ಪರ್ಧಿಗಳು ಇದ್ದಾರೆ. ಇದೀಗ 4 ಜನ ಸ್ಪರ್ಧಿಗಳು ಮೊದಲ ವಾರದಲ್ಲಿ ಎಲಿಮಿನೇಟ್ ಆಗಿ 4 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿರುತ್ತಾರೆ. ಯಾರೆಲ್ಲ ಸ್ಪರ್ಧಿಗಳು ಎಲಿಮಿನೇಟ್ ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
ಇದನ್ನ ಓದಿ: ಹಿಂದಿ ಬಿಗ್ ಬಾಸ್ 8ರ ಕಾನ್ಸೆಪ್ಟ್ Copy ಮಾಡಿದ ಕನ್ನಡ ಬಿಗ್ ಬಾಸ್ 13, BBK13, Kiccha Sideep, Bigg Boss Kannada
ಈಶಾ (Eesha): ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಡ್ಯಾನ್ಜೆರ್ ಝೋನ್ ನಲ್ಲಿ ಸ್ನೇಹ ಹಾಗೂ ಈಶಾ ರವರು ಇರುತ್ತಾರೆ. ಇಬ್ಬರು ಸಹ ಶ್ರುತಿ ರವರ ಟೀಮ್ ರವರಾಗಿರುತ್ತಾರೆ. ಇನ್ನು ಇವರಲ್ಲಿ ಈಶಾ ರವರು ಎಲಿಮಿನೇಟ್ ಆಗಿದ್ದಾರೆ.
ಕುಮಾರಿ (Kumari): ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಎಲ್ಲರ ಮೆಚ್ಚಿನ ಸ್ಪರ್ಧಿ ಕುಮಾರಿ ರವರು ಕೂಡ ಎಲಿಮಿನೇಟ್ ಆಗಿದ್ದಾರೆ. ಆದರೆ ಕುಮಾರಿ ರವರು ಕಳೆದ ಎರಡು ಮೂರು ಎಪಿಸೋಡ್ ನಿಂದ ಕಾಣಿಸುತ್ತಿಲ್ಲ. ಹಾಗೂ ವೋಟಿಂಗ್ ಪೋಲ್ ನಿಂದ ಸಹ ಅವರ ಹೆಸರನ್ನು ತೆಗೆಯಲಾಗಿದೆ. ಅದು ಯಾಕೆ ಎಂದರೆ ಅವರ ಆರೋಗ್ಯ ಸಮಸ್ಯೆ ಇರುವ ಕಾರಣ ಅವರು ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಇವರು ಸಹ ಎಲಿಮಿನೇಟ್ ಆಗಿದ್ದಾರೆ.
ರತ್ನಮ್ಮ (Ratnamma): ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಹಿರಿಯ ಸ್ಪರ್ಧಿ ಎಂದರೆ ಅವರೇ ರತ್ನಮ್ಮ. ಇನ್ನು ಇವರು ಸಹ ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಪೂರ್ಣಿಮಾ (Poornima): ಬಿಗ್ ಬಾಸ್ ಅಗ್ನಿಪರೀಕ್ಷೆ ಯಲ್ಲಿ ಚಂದನ್ ರವರ ತಂಡದವರು ಅನನ್ಯ ರವರನ್ನು ನಾಮಿನೇಟ್ ಮಾಡಿ ಡೇಂಜರ್ ಝೋನ್ ನಲ್ಲಿ ಇಡುತ್ತಾರೆ. ಹಾಗೂ ನೇರವಾಗಿ ಪೂರ್ಣಿಮಾ ರವರು ಆಯ್ಕೆ ಆಗಿರುತ್ತಾರೆ. ಇನ್ನು ಇವರ ಮದ್ಯ ಒಂದು ಟಾಸ್ಕ್ ನೀಡಿದಾಗ, ಪೂರ್ಣಿಮಾ ರವರು ಬಿಗ್ ಬಾಸ್ ನಿಯಮ ಹಾಗೂ ಆಯ್ಕೆ ಪ್ರಕ್ರಿಯೆ ಸರಿ ಇಲ್ಲ ಎಂದು ಹೇಳುತ್ತಾರೆ. ಅದ ಅಗ್ನಿಪರೀಕ್ಷೆಯ ತೀರ್ಪುಗಾರರು ನಿಮಗೆ ಈ ಶೋ ಬಗ್ಗೆ ನಂಬಿಕೆ ಇಲ್ಲ ಎಂದರೆ ದಯವಿಟ್ಟು ನೀವು ಹೋಗಬಹುದು ಎನ್ನುತ್ತಾರೆ. ಇದರಿಂದ ಪೂರ್ಣಿಮಾ ರವರು ಸಹ ಬಿಗ್ ಬಾಸ್ ಅಗ್ನಿಪರೀಕ್ಷೆ ಇಂದ ಹೊರ ಬರುತ್ತಾರೆ.
ಆದ್ದರಿಂದ ಒಟ್ಟಾರೆಯಾಗಿ ಅಗ್ನಿಪರೀಕ್ಷೆ ಮೊದಲ ವಾರ ನಾಲ್ಕು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.
ಇದನ್ನ ಓದಿ: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಅಹ್ವಾನ! How to apply New Ration Card 2026, New Ration Card Apply, ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
ಇನ್ನು ಬಿಗ್ ಬಾಸ್ ಅಗ್ನಿಪರೀಕ್ಷೆ ಎರಡು ವಾರಗಳು ಇದ್ದು, ಇನ್ನು ಬಿಗ್ ಬಾಸ್ ನಲ್ಲಿ 15 ಜನ ಸ್ಪರ್ಧಿಗಳು ಇದ್ದಾರೆ. ಇವರಲ್ಲಿ ಆಯ್ಕೆ ಆಗುವ 3 ಜನ ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಸೀಸನ್ 13ರ ಮನೆಗೆ ಹೋಗುತ್ತಾರೆ. ಇನ್ನು ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ 13ರ ಮನಗೆ ಹೋಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
