ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರ ಮುಗಿದಿದ್ದು, ಮೊದಲ ವಾರದಲ್ಲಿ ಪ್ರಥಮಾ ಪ್ರಸಾದ್ ರವರು ಎಲಿಮಿನೆಟ್ ಆಗಿ ಹೊರ ಬಂದಿದ್ದಾರೆ. ಇನ್ನೂ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಯರೆಲ್ಲ ನಾಮಿನೇಷನ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
Bigg Boss 13 2nd Week Nomination, 2nd Week Nomination List, Bigg Boss Kannada, BBK13, Kiccha Sudeep
ಬಿಗ್ ಬಾಸ್ ಸೀಸನ್ 13ರಲ್ಲಿ ಒಂದು ವಾರ ಮುಗಿದಿದ್ದು, ಇಲ್ಲಿಯವರೆಗೆ ಇಬ್ಬರು ಸ್ಪರ್ಧಿಗಳು ಎಲಿಮಿನೆಟ್ ಆಗಿದ್ದಾರೆ. ಅವರೇ ಪ್ರಥಮಾ ಪ್ರಸಾದ್ ಹಾಗೂ ಓಂ ಪ್ರಕಾಶ್ ರಾಜ್. ಮೊದಲ ವಾರ ಪ್ರಥಮಾ ಪ್ರಸಾದ್ ರವರು ಎಲಿಮಿನೆಟ್ ಆದರು. ಇನ್ನೂ ಎರಡನೇ ವಾರ ಅನಾರೋಗ್ಯದ ಕಾರಣ ಓಂ ಪ್ರಕಾಶ್ ರಾಜ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಇರುವುದು 14 ಜನ ಸ್ಪರ್ಧಿಗಳು. ಅವರೇ ಜಗದೀಶ್ ಎಂ.ಬಿ, ಸೌಂದರ್ಯ ಶೆಟ್ಟಿ, ಅವಿನಾಶ್ ಶಾತಮರ್ಷನ್, ಗಗನ್ ಚಿನ್ನಪ್ಪ, ಸಂಗೀತಾ ಭಟ್, ಕಾವ್ಯಾ ಗೌಡ, ಆಸಿಯಾ ಫಿರ್ದೋಸ್, ತಾಂಡವ್ ರಾಮ್, ವೈಷ್ಣವಿ, ಯಶಸ್ ಕೃಷ್ಣ, ಲಿಖಿತ್ ಗೊಂಡಿ, ಧನುಷ್, ಕಿರಣ್ ಶಾಸ್ತ್ರಿ ಮತ್ತು ಮಂಜ. ಇವರುಗಳು ಎರಡನೇ ವಾರ ಬಿಗ್ ಬಾಸ್ ನಲ್ಲಿ ಇರುವ ಸ್ಪರ್ಧಿಗಳು.

ಇವರಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಯಾರು ಯರನ್ನ ನಾಮಿನೇಟ್ ಮಾಡಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
2nd Week Nomination:
ಬಿಗ್ ಬಾಸ್ ಎರಡನೇ ವಾರದ ನಾಮಿನೇಷನ್ ತುಂಬಾ ಚೆನ್ನಾಗಿ ಇತ್ತು. ಪೈಲೆಟ್ ಟಾಸ್ಕ್ ವಿನ್ನರ್ ಆಗಿರುವ ಸಂಗೀತಾ ಭಟ್ ರವರು ಒಬ್ಬರ ಹೆಸರನ್ನು ತೆಗೆದುಕೊಂಡು ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಸಂಗೀತಾ ಭಟ್ ರವರು ವೈಷ್ಣವಿ ರವರನ್ನು ನೇರವಾಗಿ ನಾಮಿನೇಟ್ ಮಾಡುತ್ತಾರೆ. ಇದರಿಂದ ಪ್ರತಿ ಸ್ಪರ್ಧಿ ವೈಷ್ಣವಿ ರವರನ್ನು ಹೊರತು ಪಡಿಸಿ ಇಬ್ಬರು ಸ್ಪರ್ಧಿ ಗಳನ್ನು ನಾಮಿನೇಟ್ ಮಾಡಬೇಕು. ಆಗ ಪ್ರತಿಯೊಬ್ಬರು ಇಬ್ಬರ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡುತ್ತಾರೆ. ಯಾರು ಯರನ್ನ ನಾಮಿನೇಟ್ ಮಾಡುತ್ತಾರೆ ಎನ್ನುವುದನ್ನ ನೋಡುವುದಾದರೆ,
ಕಿರಣ್ ರವರು ಕಾವ್ಯ ಹಾಗೂ ತಾಂಡವ್ ರಾಮ್ ನನ್ನು ನಾಮಿನೇಟ್ ಮಾಡುತ್ತಾರೆ. ವೈಷ್ಣವಿ ರವರು ಅವಿನಾಶ್ ಹಾಗೂ ಕಿರಣ್ ರವರನ್ನು ನಾಮಿನೇಟ್ ಮಾಡುತ್ತಾರೆ. ಕಾವ್ಯ ರವರು ಕಿರಣ್ ಹಾಗೂ ಅವಿನಾಶ್ ರವರನ್ನು ನಾಮಿನೇಟ್ ಮಾಡುತ್ತಾರೆ. ಆಸಿಯಾ ರವರು ಅವಿನಾಶ್ ಹಾಗೂ ಗಗನ್ ರವರನ್ನು ನಾಮಿನೇಟ್ ಮಾಡುತ್ತಾರೆ. ಗಗನ್ ರವರು ಆಸಿಯಾ ಹಾಗೂ ಸೌಂದರ್ಯ ರವರನ್ನು ನಾಮಿನೇಟ್ ಮಾಡುತ್ತಾರೆ. ಮಂಜು ಸೌಂದರ್ಯ ಹಾಗೂ ಕಾವ್ಯ ರವರನ್ನು ನಾಮಿನೇಟ್ ಮಾಡುತ್ತಾರೆ. ಯಶಸ್ ರವರು ಅವಿನಾಶ್ ಹಾಗೂ ತಾಂಡವ್ ರವರನ್ನು ನಾಮಿನೇಟ್ ಮಾಡುತ್ತಾರೆ. ಅವಿನಾಶ್ ರವರು ಆಸಿಯಾ ಹಾಗೂ ಧನುಷ್ ರವರನ್ನು ನಾಮಿನೇಟ್ ಮಾಡುತ್ತಾರೆ. ಲಿಖಿತ್ ರವರು ಅವಿನಾಶ್ ಹಾಗೂ ಜಗದೀಶ್ ರವರನ್ನು ನಾಮಿನೇಟ್ ಮಾಡುತ್ತಾರೆ. ಧನುಷ್ ರವರು ಅವಿನಾಶ್ ಹಾಗೂ ಯಶಸ್ ರವರನ್ನು ನಾಮಿನೇಟ್ ಮಾಡುತ್ತಾರೆ. ಜಗದೀಶ್ ರವರು ಕಾವ್ಯ ಹಾಗೂ ಲಿಖಿತ್ ರವರನ್ನು ನಾಮಿನೇಟ್ ಮಾಡುತ್ತಾರೆ. ತಾಂಡವ್ ರವರು ಕಿರಣ್ ಹಾಗೂ ಮಂಜು ರವರನ್ನು ನಾಮಿನೇಟ್ ಮಾಡುತ್ತಾರೆ. ಸೌಂದರ್ಯ ರವರು ಗಗನ್ ಹಾಗೂ ಮಂಜ ರವರನ್ನು ನಾಮಿನೇಟ್ ಮಾಡುತ್ತಾರೆ.
ಇದನ್ನ ಓದಿ: ಮೊದಲ ವಾರದಲ್ಲೇ ಹೊರಬಿದ್ದ ಪ್ರಥಮಾ ಪ್ರಸಾದ್, ಮನೆಗೆ ಕಾಲಿಡದೆ ಗಳಿಸಿದ ಸಂಭಾವನೆ ಎಷ್ಟು? Bigg Boss Kannada, BBK13
ನಿಮ್ಮ ಪ್ರಕಾರ ಇವರಲ್ಲಿ ಯಾರು ಈ ವಾರ ಎಲಿಮಿನೆಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.ಇನ್ನು ನಿಮ್ಮ ಸಪೋರ್ಟ್ ಯಾರಿಗೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 13ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ದಿನಕ್ಕೆ ಒಂದು ವೋಟ್ ಅಷ್ಟೇ ಮಾಡಬಹುದು. ನಿಮ್ಮ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hotstar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hotstar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 13 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಒಂದು ದಿನಕ್ಕೆ ಕೇವಲ ಒಂದೇ ವೋಟ್ ಮಾಡಬಹುದು. ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ನಲ್ಲಿ ತಿಳಿಸ ಬಹುದು.
