ಬಿಗ್‌ಬಾಸ್ ಸೀಸನ್ 13 ಕಾಮನ್‌ ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? ದೊಡ್ಮನೆ ಸೆಟ್ ನಿರ್ಮಾಣ ಶುರು, BBK13, Kiccha Sudeep 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುತ್ತಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಸಾಮಾನ್ಯ ಜನರಿಗೆ (ಕಾಮನ್ ಮ್ಯಾನ್ ಗಳಿಗೆ) ಅವಕಾಶ ಇರುತ್ತದೆ. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಬಿನ್ನವಾಗಿರುತ್ತದೆ. ಇನ್ನು ಈ ಬಾರಿ ಬಿಗ್ ಬಾಸ್ ಯಾವಾಗ ಆರಂಭ ಆಗುತ್ತದೆ? ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರುತ್ತದೆ? ಬಿಗ್ ಬಾಸ್ ಹೊಸ ಪ್ರೋಮೋ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

ಬಿಗ್‌ಬಾಸ್ ಸೀಸನ್ 13 ಕಾಮನ್‌ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? ದೊಡ್ಮನೆ ಸೆಟ್ ನಿರ್ಮಾಣ ಶುರು, BBK13, Bigg Boss Kannada, Kiccha Sudeep

ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ:

ಬಿಗ್‌ಬಾಸ್ ಕನ್ನಡ ಸೀಸನ್ 13 ಅನ್ನು ಸೆಪ್ಟೆಂಬರ್ ತಿಂಗಳ ವೇಳೆಗೆ ಆರಂಭಿಸಲು ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ಈ ಬಾರಿಯ ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ (ಕಾಮನ್‌ಮ್ಯಾನ್) ದೊಡ್ಮನೆ ಪ್ರವೇಶಿಸಲು ಅವಕಾಶ ಸಿಕ್ಕಿರುವುದು ವಿಶೇಷವಾಗಿದೆ. ಸಾವಿರಾರು ಆಕಾಂಕ್ಷಿಗಳು ತಮ್ಮ ಆಡಿಷನ್ ವೀಡಿಯೋಗಳನ್ನು ಈಗಾಗಲೇ ಕಳುಹಿಸಿದ್ದು, ಬಿಗ್‌ಬಾಸ್ ತಂಡವು ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ. ಆಯ್ಕೆಯಾಗದ ಅಭ್ಯರ್ಥಿಗಳಿಗೆ ಈಗಾಗಲೇ ಸಂದೇಶದ ಮೂಲಕ ಮಾಹಿತಿ ರವಾನಿಸಲಾಗುತ್ತಿದ್ದು, ಮುಂದಿನ ಹಂತಕ್ಕೆ ಆಯ್ಕೆಯಾದವರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ.

ಇದನ್ನ ಓದಿ: Bigg Boss Kannada 13 Contestants List, ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು, BBK13, Kiccha Sudeep, Bigg Boss Kannada 13 contestants

ಬಿಗ್‌ಬಾಸ್ ಅಗ್ನಿ ಪರೀಕ್ಷೆ ಡಿಜಿಟಲ್ ಪ್ರೀ-ಶೋ: 

ಈ ಬಾರಿ ಸಾಮಾನ್ಯ ಜನರನ್ನು ಆಯ್ಕೆ ಮಾಡಲು ಬಿಗ್‌ಬಾಸ್ ಅಗ್ನಿ ಪರೀಕ್ಷೆ ಎಂಬ ಹೊಸ ಡಿಜಿಟಲ್ ಪ್ರೀ-ಶೋ ಅನ್ನು ಜಿಯೋ ಹಾಟ್‌ ಸ್ಟಾರ್‌ (JioHotstar) ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದು ತೆಲುಗು ಬಿಗ್‌ಬಾಸ್‌ನ ಯಶಸ್ವಿ ಮಾದರಿಯಾಗಿದೆ. ಈ ಪ್ರಕ್ರಿಯೆಯಲ್ಲಿ, ಆಡಿಷನ್ ಮೂಲಕ ಆಯ್ಕೆಯಾದ 45 ಮಂದಿ ಸ್ಪರ್ಧಿಗಳಿಂದ ಕೇವಲ 6 ಮಂದಿಯನ್ನು ಮಾತ್ರ ಫೈನಲ್ ಮಾಡಿ, ಮುಖ್ಯ ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ಡಿಜಿಟಲ್ ಶೋ ಕುರಿತಾದ ಪ್ರೋಮೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಬಿಗ್‌ಬಾಸ್ ಸೀಸನ್ 13 ಕಾಮನ್‌ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? ದೊಡ್ಮನೆ ಸೆಟ್ ನಿರ್ಮಾಣ ಶುರು, BBK13, Bigg Boss Kannada, Kiccha Sudeep, BBK13 Update, Bigg Boss Kannada 13 Contestants list, My edu update kannada, trennding news

ಸಾಮಾನ್ಯರ ಭಾಗವಹಿಸುವಿಕೆಯ ಹಿನ್ನೆಲೆ:

ಬಿಗ್‌ಬಾಸ್ ಕನ್ನಡದಲ್ಲಿ ಸಾಮಾನ್ಯರಿಗೆ ಅವಕಾಶ ನೀಡುವುದು ಇದೇ ಮೊದಲೇನಲ್ಲ. ಸೀಸನ್ 5ರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ (Sales Representative) ದಿವಾಕರ್ ಅವರು ಸಾಮಾನ್ಯರ ಕೋಟಾದಲ್ಲಿ ಬಂದು ಫಿನಾಲೆ ಹಂತದವರೆಗೆ ತಲುಪಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಸಾಮಾನ್ಯರು ಕೂಡ ಸೆಲೆಬ್ರಿಟಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಬಹುದು ಎಂಬುದಕ್ಕೆ ಅದು ಉತ್ತಮ ಉದಾಹರಣೆಯಾಗಿತ್ತು.

ಇದನ್ನ ಓದಿ: ಬಿಗ್ ಬಾಸ್ ಸೀಸನ್ 13 ಯಾವಾಗ ಆರಂಭ? BiggBoss Season 13 Date Announced, ಕಾಮನ್ ಮ್ಯಾನ್ ಗೆ ಅವಕಾಶ ಇರುತ್ತಾ? BBK13

ಸೆಟ್ ನಿರ್ಮಾಣ:

ಬಿಗ್‌ಬಾಸ್ ಮನೆಯ ಸೆಟ್ ನಿರ್ಮಾಣ ಕಾರ್ಯಗಳು ಈಗಾಗಲೇ ಜಾಲಿವುಡ್ ಸ್ಟುಡಿಯೋದಲ್ಲಿ ಪ್ರಾರಂಭವಾಗಿವೆ. ಪ್ರತಿ ಸೀಸನ್ ಮುಗಿದ ಬಳಿಕ ಹಳೆಯ ಸೆಟ್ ಕೆಡವಿ, ಹೊಸ ಸೀಸನ್‌ಗಾಗಿ ಹೊಸ ವಿನ್ಯಾಸದೊಂದಿಗೆ ಮರು ನಿರ್ಮಾಣ ಮಾಡಲಾಗುತ್ತದೆ. ಕಳೆದ ಸೀಸನ್‌ನಲ್ಲಿ ಜಾಲಿವುಡ್ ಸ್ಟುಡಿಯೋದಲ್ಲಿ ಉಂಟಾದ ವಿವಾದದಿಂದಾಗಿ ಶೋ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡು, ಸ್ಪರ್ಧಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಈ ಬಾರಿ ಅಂತಹ ಯಾವುದೇ ಸಮಸ್ಯೆಗಳಾಗದಂತೆ ಎಚ್ಚರವಹಿಸಿ, ಸುಗಮವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಒಟ್ಟಾರೆಯಾಗಿ, ಈ ಬಾರಿಯ ಬಿಗ್‌ಬಾಸ್ ಸೀಸನ್ 13 ಸಾಮಾನ್ಯ ಜನರ ಪ್ರವೇಶ ಮತ್ತು ಹೊಸ ಸಿದ್ಧತೆಗಳೊಂದಿಗೆ ಕುತೂಹಲ ಮೂಡಿಸುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

ಬಿಗ್‌ಬಾಸ್ ಸೀಸನ್ 13 ಕಾಮನ್‌ ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? ದೊಡ್ಮನೆ ಸೆಟ್ ನಿರ್ಮಾಣ ಶುರು, BBK13, Bigg Boss Kannada, Kiccha Sudeep
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.

 ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment