ನಮಸ್ಕಾರ ಸ್ನೇಹಿತರೇ, ಕರ್ನಾಟಕ ಸರ್ಕಾರವೂ ಮಹಿಳೆಯರಿಗೆ ಸ್ವಾವಲಂಬನೆ ಜೀವನವನ್ನು ಸಾಗಿಸಲು ಸರ್ಕಾರ ಒಂದು ಯೋಜನೆಯನ್ನ ತಂದಿದೆ. ಇಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿಯ ಹೊಲಿಗೆ ಯಂತ್ರ ವನ್ನು ನೀವು ಪಡೆಯಬಹುದು. ಇನ್ನು ಈ ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಯಾರಿಗೆ ಉಚಿತ ಹೊಲಿಗೆ ಯಂತ್ರ ಸಿಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026, Government Sewing machine For Free, Government Free Sewing machine Scheme Apply
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಸ್ವಾವಲಂಬನೆ ಜೀವನವನ್ನು ನಡೆಸಲು ಅನೇಕ ಯೋಜನೆಗಳನ್ನು ತಂದಿದೆ. ಅದರಲ್ಲಿ ಪ್ರಮುಖ ಯೋಜನೆ ಎಂದರೆ ಅದು ಉಚಿತ ಹೊಲಿಗೆ ಯಂತ್ರ. ಇದನ್ನು ಪಡೆದು ನೀವು ಸ್ವತಃ ಉದ್ಯಮವನ್ನು ಆರಂಬಿಸಿ, ಸ್ವಾವಲಂಬನೆ ಜೀವನ ನಡೆಸಬಹುದು. ಇದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಇದಕ್ಕೆ ನೀವು ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ಈ ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆಗಳು ಎನು, ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಹಾಗು ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಹೇಗೆ ಅರ್ಜಿ ಸಲ್ಲಿಸಬಹುದು ಎಂದು ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುತ್ತಿದ್ದು, ಇದಕ್ಕೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಹೌದು 2026- 27ನೇ ಸಾಲಿನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ನೀನೇನು ಎನ್ನುವುದನ್ನ ಈ ಕೆಳಗೆ ಇದೀಗ ನೋಡೋಣ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್ (Aadhaar Card)
- ಜಾತಿ ಪ್ರಮಾಣ ಪತ್ರ (Caste Certificate)
- ವಿಳಾಸ ಪುರಾವೆ (Address Proof)
- ಆದಾಯ ಪ್ರಮಾಣ ಪತ್ರ (Income Certificate)
- ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್
- ಮೊಬೈಲ್ ನಂಬರ್
- ಭಾವಚಿತ್ರ
- ವಯಸ್ಸಿನ ದೃಢೀಕರಣ (Age Proof)
- ಜನನ ಪ್ರಮಾಣಪತ್ರ (Birth Certificate)
- ಮತದಾರರ ಚೀಟಿ (Voter ID)
- ಬ್ಯಾಂಕ್ ಖಾತೆ ವಿವರಗಳು (Bank Account Details)
ಮೇಲೆ ನೀಡಿರುವ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.
ಇದನ್ನ ಓದಿ: ಗೃಹಲಕ್ಷ್ಮೀ ಯೋಜನೆ ಹಣ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ, How to Check Gruhalakshmi Scheme Status, Gruhalakshmi Scheme amount Released
ಈ ಯೋಜನೆಯ ಮುಖ್ಯ ಉದ್ದೇಶ:
ನಗರಸಭೆಯು ತನ್ನ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ರೂಪಿಸಿದೆ. ನಗರಸಭೆಯ ಶೇ. 24.10 ರ ಅನುದಾನದಡಿ ಈ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಅವರ ದೈನಂದಿನ ಜೀವನದ ವೆಚ್ಚವನ್ನು ಕಡಿಮೆ ಮಾಡಲು ಇದು ಸಹಾಯ ಮಾಡಬಹುದು.
ಯಾರಿಗೆ ಮೊದಲ ಆದ್ಯತೆ:
ಉಚಿತ ಹೊಲಿಗೆ ಯಂತ್ರ ಎಲ್ಲರಿಗೂ ಸಿಗುವುದಿಲ್ಲ. ಇದು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮೊದಲು ನೀಡಲಾಗುತ್ತಿದೆ. ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ನಂತರ ನಿಮಗೆ ಹೊಲಿಗೆ ಯಂತ್ರ ವಿತರಣೆ ಜಾರಿಯಾಗುತ್ತದೆ. ಇಲ್ಲಿ ನಿಮಗೆ ನೇರವಾಗಿ ಹೊಲಿಗೆ ಯಂತ್ರ ನೀಡಲಾಗುತ್ತದೆ. ಇಲ್ಲವಾದಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹೊಲಿಗೆ ಯಂತ್ರದ ಹಣವನ್ನು ನೀಡಲಾಗುತ್ತದೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ವಿಧವೆಯರಿಗೆ ಮೊದಲ ಆದ್ಯತೆ ಸರ್ಕಾರ ನೀಡುತ್ತಿದೆ.
ಇದನ್ನ ಓದಿ: ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme
ಅರ್ಹತಾ ಮಾನದಂಡಗಳು:
ಈ ಸೌಲಭ್ಯಗಳನ್ನು ಪಡೆಯಲು ಅರ್ಜಿದಾರರು ಕೆಲ ಷರತ್ತುಗಳನ್ನು ನೀಡಲಾಗುತ್ತದೆ. ಅವುಗಳು ಯಾವುದು ಎನ್ನುವುದನ್ನ ಇದೀಗ ನೋಡೋಣ.
- ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬೇಕು.
- ವಿಧವಾ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
- ಅರ್ಜಿದಾರರ ವಯಸ್ಸು 20 ರಿಂದ 45 ವರ್ಷದೊಳಗಿರಬೇಕು.
- ಅರ್ಜಿದಾರರು ಸ್ಥಳೀಯ ನಿವಾಸಿಗಳಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:
ಆಸಕ್ತ ಮತ್ತು ಅರ್ಹ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ನಗರಸಭೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 2026ರ ಜೂನ್ 15 ಕೊನೆಯ ದಿನಾಂಕವಾಗಿದೆ. ಗಡುವಿನ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಈ ಯೋಜನೆಯು ಹಿಂದುಳಿದ ವರ್ಗದ ಮಹಿಳೆಯರಿಗೆ, ಅದರಲ್ಲೂ ವಿಶೇಷವಾಗಿ ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುವ ವಿಧವಾ ಮಹಿಳೆಯರಿಗೆ ವರದಾನವಾಗಲಿದೆ. ಹೊಲಿಗೆ ಯಂತ್ರ ಪಡೆಯುವುದರಿಂದ ಅವರು ಮನೆಯಲ್ಲಿಯೇ ಸಣ್ಣ ಪ್ರಮಾಣದ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸದೃಢರಾಗಬಹುದು. ಸರ್ಕಾರದ ಇಂತಹ ಕಲ್ಯಾಣ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವಂತೆ ನಗರಸಭೆಯ ಅಧಿಕಾರಿಗಳು ಅರ್ಹರಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನೇರವಾಗಿ ನಗರಸಭೆ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
