ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರ ಮುಗಿದಿದ್ದು, ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರ ಧ್ರುವಂತ್ ರವರು ಮಾಡುವ ರೀತಿ ಇದೀಗ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಧ್ರುವಂತ್ ಎನು ಮಾಡಿದ್ದಾರೆ. ಹಾಗು ಇದೀಗ ಸಾಕಷ್ಟು ಟ್ರೊಲ್ ಗಳಿಗೆ ಯಾಕೆ ಗುರಿಯಾಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12, Bigg Boss Kannada, Dhruvanth insulted the viewers
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದು, ಎರಡನೇ ವಾರ ಮುಗಿದಿದೆ. ಇನ್ನು ಎರಡನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು 3ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ ಜಾನ್ವಿ, ಧನುಷ್, ರಕ್ಷಿತಾ, ಅಭಿಷೇಕ್, ಅಶ್ವಿನಿ SN, ಗಿಲ್ಲಿ ನಟ, ಕಾವ್ಯ, ಮಂಜು ಭಾಷಿಣಿ, ಚಂದ್ರಪ್ರಭಾ, ಡಾಗ್ ಸತೀಶ್, ಧ್ರುವಂತ್, ಮಲ್ಲಮ್ಮ ಮತ್ತು ರಶಿಕಾ ನಾಮಿನೇಟ್ ಆಗಿದ್ದಾರೆ. ಇನ್ನು ಅವರುಗಳಿಗೆ ಈಗ ವೋಟ್ ಮಾಡೋಣ.
ವೀಕ್ಷಕರ ವೋಟ್ ಗೆ ಅವಮಾನಿಸಿದ ಧ್ರುವಂತ್:
ಎರಡನೇ ವಾರ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಎರಡನೇ ವಾರ ಯಾರಿಗೆ ಹೆಚ್ಚು ವೋಟ್ ಬಂದಿರುತ್ತೋ ಅವರು ನೇರವಾಗಿ ಫೈನಲೆ ವಾರಕ್ಕೆ ಆಯ್ಕೆಯಾಗುತ್ತಾರೆ. ಅದರಂತೆ ಮಾಳು ಮತ್ತು ಸ್ಪಂದನಾ ನೇರವಾಗಿ ಫೈನಲೆ ಕಂಟೆಸ್ಟಂಟ್ ಆಗುತ್ತಾರೆ. ಇದರಿಂದ 4 ಜನ ಕಂಟೆಸ್ಟಂಟ್ ಗಳು ಫೈನಲೆ ವಾರಕ್ಕೆ ಆಯ್ಕೆಯಾಗುತ್ತಾರೆ. ಇದಾದ ಬಳಿಕ ಧ್ರುವಂತ್ ಹಾಗು ಸ್ಪಂದನಾ ನಡುವೆ ಜಗಳ ಆಗುತ್ತದೆ. ಆಗ ಧ್ರುವಂತ್ ರವರು ಹೇಳುವ ಮಾತು ಒಂದು ರೀತಿಯಲ್ಲಿ ವೀಕ್ಷಕರಿಗೆ ಅವಮಾನ ಮಾಡಿದ ರೀತಿ ಇತ್ತು.

ಧ್ರುವಂತ್ ಹಾಗು ಸ್ಪಂದನಾ ನಡುವೆ ಜಗಳ ಶುರುವಾಗುತ್ತದೆ. ಆಗ ಧ್ರುವಂತ್ ಸ್ಪಂದನಾ ರವರಿಗೆ ಹೇಳುತ್ತಾರೆ. ನೀನು ಜನರ ಸಿಂಪಟಿ ಯಿಂದ ಫೈನಲೆಗೆ ಆಯ್ಕೆಯಾಗಿದ್ದಿಯ ಎಂದು. ಜನರು ನಿನಗೆ ವೋಟ್ ಮಾಡಿದಕ್ಕೆ ನೀನು ಫೈನಲೆ ವಾರಕ್ಕೆ ಆಯ್ಕೆಯಾಗಿದ್ದು ಎಂದು. ಆಗ ಸ್ಪಂದನಾ ರವರು ಹೇಳುತ್ತಾರೆ. ಅದು ಜನರ opinion ಗೆ ಬಿಟ್ಟಿರುವುದು. ನಾನು ಫೈನಲೆ ಟಿಕೆಟ್ ಪಡೆದಕ್ಕೆ ನನ್ನ ಬಳಿ ಮಾತನಾಡುತ್ತಿರುವುದು ಎಂದು.
ಜನರ ಬಿಕ್ಷೆ ಬೇಕಾಗಿಲ್ಲ:
ಈ ಬಳಿಕ ಪ್ರತಿ ಸ್ಪರ್ಧಿಗಳೊಂದಿಗೆ ಮಾತನಾಡುತ್ತಾ, ಅವಳು ಮನೆಗೆ ಬಂದಾಗ ನಾವು ಒಂಟೆಗಳು ಆಯ್ಕೆ ಮಾಡಿಕೊಂಡಿದಕ್ಕೆ, ಅವಳು ಇರುವುದು, ಇಲ್ಲವಾದಲ್ಲಿ ಅವಳು ಆಚೆ ಇರಬೇಕಿತ್ತು. ಅವಳು ಜನರ ಬಿಕ್ಷೆಯಿಂದ ಫಿನಾಲೆ ವಾರಕ್ಕೆ ಆಯ್ಕೆ ಆಗಿದ್ದು ಎಂದು.
ಆದರೆ ಈ ಮಾತು ಬಿಗ್ ಬಾಸ್ ಮನೆಯಲ್ಲಿ ಹೇಳುವುದು ತಪ್ಪು. ಹಾಗು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿ ಹೇಳುವುದು ಅತಿ ಮುಠ್ಠಾಳ ತನ. ಏಕೆಂದರೆ, ಬಿಗ್ ಬಾಸ್ ನಲ್ಲಿ ಜನರ ತೀರ್ಮಾನದ ಮೇರೆಗೆ ವಿನ್ನರ್ ಯಾರೆಂಬುದು ಗೊತ್ತಾಗುವುದು. ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬ ಕಂಟೆಸ್ಟಂಟ್ ಗೆ ಜನರ ಅಭಿಪ್ರಾಯದ ಮೇರೆಗೆ ಆತನಿಗೆ ಅವಕಾಶ ಅಥವಾ ಅಧಿಕಾರ ಸಿಕ್ಕಾಗ ಜನರ ಬಿಕ್ಷೆ ಎಂದು ಹೇಳಿ ಜನರಿಗೆ ಅವಮಾನಿಸುವುದು ತಪ್ಪಾಗುತ್ತದೆ. ಇನ್ನು ಇದು ಬಿಕ್ಷೆ ಆಗಿದ್ದು ನನಗೆ ಇಂತಹ ಬಿಕ್ಷೆ ಬೇಡ ಎಂದಲ್ಲಿ ಆತ ಕಂಟೆಸ್ಟಂಟ್ ಆಗಿ ಹೋಗುವುದು ತಪ್ಪಾಗುತ್ತದೆ.
ಏಕೆಂದರೆ ಪ್ರತಿ ವಾರ ಆತ ಸೇಫ್ ಆದಲ್ಲಿ, ಅದು ಜನರಿಂದ ಆತನಿಗೆ ದೊರೆಯುವ ಬಿಕ್ಷೆ ಆಗುತ್ತದೆ. ಇಂತಹ ಬಿಕ್ಷೆ ಬೇಡವಾದವನು ಬಿಗ್ ಬಾಸ್ ಮನೆಗೆ ಹೋಗುವುದು. ಜನರ ತಮ್ಮ ಕಂಟೆಸ್ಟಂಟ್ ಸೇವ್ ಆಗಲು ಆತನಿಗೆ ವೋಟ್ ಮಾಡಿದರೆ, ಅದಕ್ಕೆ ಅವಮಾನಿಸಿದ ಅದು ಜನರಿಗೆ ಅವಮಾನಿಸಿದ ಹಾಗೆ.
ಇನ್ನು ಈತ ಜಂಟಿ ಅಥವಾ ಒಂಟಿ ಆಗಿ ಹೋಗಲು ಕೇಳಿದಾಗ ಆಗ ವೀಕ್ಷಕರ ಈತ ಒಂಟಿಯಾಗಿ ಹೋಗಲು ಎಂದು ವೋಟ್ ಮಾಡಿದ್ದು ಕೂಡ ಆತನಿಗೆ ನೀಡಿರುವ ಬಿಕ್ಷೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಧನುಷ್
- ರಕ್ಷಿತಾ
- ಅಭಿಷೇಕ್
- ಅಶ್ವಿನಿ SN
- ಗಿಲ್ಲಿ ನಟ
- ಕಾವ್ಯ ಶೈವ
- ಮಂಜು ಭಾಷಿಣಿ
- ಚಂದ್ರಪ್ರಭಾ
- ಧ್ರುವಂತ್
- ಮಲ್ಲಮ್ಮ
- ಸ್ಪಂದನಾ ಸೋಮಣ್ಣ
ಇವರಲ್ಲಿ ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಪ್ರತಿಯೊಬ್ಬರು ಕಾಮೆಂಟ್ ಮಾಡಿ.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12, Bigg Boss Kannada, Dhruvanth insulted the viewers
