ನಮಸ್ಕಾರ ಸ್ನಹಿತರೇ, Gruhalaksmi Yojane ಮೇ ತಿಂಗಳ 2000 ಹಣ ಇದೀಗ ಜಮಾ ಆಗಿದೆ. ಒಂದು ಇದೀಗ ರಾಜ್ಯದಲ್ಲಿ ತುಂಬಾ ಜನರ ಖಾತೆಗಳಿಗೆ ಈ ಹಣ ಜಮಾ ಆಗುತ್ತಿದ್ದು, ಇನ್ನು ಕೆಲವರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಅಪ್ಲಿಕೇಶನ್ ಗಳು ಕ್ಯಾನ್ಸಲ್ ಆಗುತ್ತಿದ್ದೆ. ಇನ್ನು ಯಾರೆಲ್ಲ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳು ಕ್ಯಾನ್ಸಲ್ ಆಗಿದೆ ಯಾರಿಗೆಲ್ಲ ಯೋಜನೆ ಹಣ ಬಂದಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
Gruhalakshmi Scheme Update, ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣಕ್ಕೆ ಕಂಟಕ, ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! Congress Guarantee Scheme, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 18 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 36,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಮೇ ತಿಂಗಳಿನಲ್ಲಿ ಒಂದು ಕಂತು ಅಂದ್ರೆ 2000 ಹಣ ಇದೀಗ ಜಮಾ ಆಗಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲು ಸಾದ್ಯವಾಗುತ್ತಿರಲಿಲ್ಲ. ಆದರೆ ಇದೀಗ ಮೇ ತಿಂಗಳಲ್ಲಿ ಅಂದ್ರೆ ಈ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಇದೀಗ ತಲುಪಿದೆ.
ಗೃಹಲಕ್ಷ್ಮೀ ಮೇ ತಿಂಗಳ ಹಣ ಯಾರಿಗೆಲ್ಲ ಜಮಾ:
ಗೃಹಲಕ್ಷ್ಮೀ ಯೋಜನೆ ಮೇ ತಿಂಗಳಿನಲ್ಲಿ ಇದೀಗ ಜಮಾ ಆಗಿದೆ. ಹೌದು ಒಂದು ಕಂತು ಅಂದ್ರೆ 2000 ಹಣ ಇದೀಗ ಜಮಾ ಆಗಿದೆ. ಇದು ಯಾರಿಗೆಲ್ಲ ಜಮಾ ಆಗಿದೆ ಎನ್ನುವುದನ್ನ ನೋಡುವುದಾದರೆ ಇದೀಗ ಮೊದಲ ಹಂತದಲ್ಲಿ ಇರುವ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.
Recent Post:
-
9 to 5 Job ಗೆ ಹೇಳಿ ಗುಡ್ ಬೈ; ಮನೆಯಲ್ಲೇ ಕುಳಿತು ಲಕ್ಷ ಗಟ್ಟಲೆ ಸಂಪಾದಿಸಿ ಕೈ ತುಂಬ ಹಣ! Work Form Home, Online Earning Tips 2025
-
ಕರೆಂಟ್ ಬಿಲ್ ಕಟ್ಟುವವರಿಗೆ ಇನ್ನು ಮುಂದೆ ಸಿಗುತ್ತೆ 78000 ರೂ ಸಹಾಯಧನ.! Pradhan Mantri Gram Sadak Yojana ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಕೇಂದ್ರದ ಹೊಸ ಯೋಜನೆ, PMSGY Scheme 2025
-
SBI Bank: ಎಸ್ಬಿಐ ಗ್ರಾಹಕರಿಗೆ ಬಿಗ್ ನ್ಯೂಸ್! ಯುಪಿಐ ಸೇವೆ ಸ್ಥಗಿತ, UPI Shutdown From SBI
ಯಾರಿಗೆಲ್ಲ ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ:
ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಅನ್ನಭಾಗ್ಯ ಯೋಜನೆ (Anna Bhagya Scheme) ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ (BPL) ಬಹು ಮುಖ್ಯವಾಗಿರುತ್ತದೆ. ಇನ್ನು ಈ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಕೆಲವು ನಿಯಮಗಳು ಇರುತ್ತದೆ. ಇನ್ನು ಈ ಎಲ್ಲಾ ನಿಯಮಗಳು ಅನ್ವಯವಾದರೆ ಮಾತ್ರ ಈ ಕಾರ್ಡು ಸಿಗುತ್ತೆ. ಇನ್ನು ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಕಾಂಗ್ರೆಸ್ ನ ಗ್ಯಾರಂಟೀ ಯೋಜನೆಗಳು ಸಿಗುತ್ತೆ.
ಇನ್ನು ಈ ಯೋಜನೆಗಳು ಸಿಗಬೇಕು ಅಂದ್ರೆ ಕೆಲವು ನಿಯಮಗಳು ಇದೆ. ಅದು ಯಾವುದೆಂದರೆ,
- ಬಡತನ ರೇಖೆಗಿಂತ ಮೇಲಾಗಿರುವವರು
- ಸರ್ಕಾರಿ ಉದ್ಯೋಗಿಗಳು
- ಆದಾಯ ತೆರಿಗೆ ಪಾವತಿದಾರರು
- GST ಪಾವತಿದಾದರು
- ವೈಟ್ ಬೋರ್ಡ್ ಕಾರು ಹೊಂದಿರುವವರು
- ಟಿಲ್ಲರ್ ಅಥವಾ ಟ್ರಾಕ್ಟರ್ (agricultural equipment) ಹೊಂದಿರುವವರ ಮಾಹಿತಿ ಪರಿಶೀಲನೆಗೆ ಒಳಪಡಲಿದೆ.
ಹಣ ಬಂದಿಲ್ಲ ಅಂದ್ರೆ ಈ ಕೆಲ್ಸ ಮಾಡಿ:
ಇದೀಗ ಗೃಹಲಕ್ಷ್ಮೀ ಯೋಜನೆ 19ನೇ ಕಂತು ಜಮಾ ಆಗಿದೆ. ಇನ್ನು ಕೆಲವರಿಗೆ 2 ರಿಂದ 3 ಕಂತುಗಳು ಬಂದಿಲ್ಲ. ಇದೀಗ ಅವರುಗಳಿಗೆ ಗೃಹಲಕ್ಷ್ಮೀ DBT ಮೂಲಕ ಹಣ ಜಮಾ ಅಗೋದಿಲ್ಲ. ಯಾಕಂದ್ರೆ ಇದೀಗ ಹೊಸ ನಿಯಮವೊಂದನ್ನ ತರಲಾಗಿದೆ. ನಿಮ್ಗೆ ಹಣ ಜಮಾ ಆಗಿಲ್ಲ ಅಂದ್ರೆ ನಿಮ್ಮ ಗ್ರಾಮ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಒಂದು ವೆರಿಫಿಕೇಷನ್ ಅನ್ನು ಮಾಡಲಾಗುತ್ತೆ. ಅದಾದ ನಂತರ ಯಾವ ತಿಂಗಳ ಹಣ ಬರಬೇಕಿತ್ತೋ ಆ ಹಣ ನಿಮ್ಮ ಖಾತೆಗಳಿಗೆ ಜಮಾ ಆಗುತ್ತೆ. ಅಂದ್ರೆ ಯಾವೆಲ್ಲ ಹಣ ಬರಬೇಕಿತ್ತೋ ಎಲ್ಲಾ ಹಣ ಜಮಾ ಆಗುತ್ತೆ. ಆದ್ದರಿಂದ ಮೊದಲು ಆ ಒಂದು verification ಮಾಡಲು ಮುಂದಾಗಿದೆ. ಆದ್ದರಿಂದ ಯಾರು ಕೂಡ worry ಮಾಡುವ ಅವಶ್ಯಕತೆ ಇರುವುದಿಲ್ಲ.
ಇನ್ನು ನಿಮ್ಮ ಗೃಹಲಕ್ಷ್ಮೀ ಯೋಜನೆ ಹಣ ಬರ್ತಾ ಇಲ್ಲ ಅಂದ್ರೆ ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿರುತ್ತದೆ. ಮತ್ತೊಮ್ಮೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.
Gruhalakshmi Scheme Update, ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣಕ್ಕೆ ಕಂಟಕ, ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! Congress Guarantee Scheme, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ