ನಮಸ್ಕರ ಸ್ನೇಹಿತರೇ, ಸರ್ಕಾರವು ಬಡವರಿಗೆ ಸಹಾಯವಾಗಲು ಅನೇಕ ಯೋಜನೆಗಳನ್ನ ಜಾರಿಗೆ ತರುತ್ತದೆ. ಅದರಲ್ಲಿಯೂ ಮುಖ್ಯವಾಗಿ ರೇಷನ್ ಕಾರ್ಡುಗಳ ಆಧಾರದ ಮೇಲೆ ಕೆಲ ಮೀಸಲಾತಿಗಳನ್ನು ನೀಡಲಾಗುತ್ತದೆ. ಆದರೆ ಇದು ಸರಿಯಾಗಿ ಬಡವರಿಗೆ ತಲುಪುತ್ತಿಲ್ಲ. ಆದ್ದರಿಂದ ಈಗ ಸರ್ಕಾರವು ಬಡವರಿಗೆ ಮಿಸಲಿಟ್ಟ ಪಡಿತರ ಚೀಟಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುಧ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
Ration cards cancelled, ರೇಷನ್ ಕಾರ್ಡ್ ಇರುವವರಿಗೆ ಶಾಕಿಂಗ್ ಸುದ್ದಿ, ಇನ್ಮುಂದೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ, BPL Ration card Cancel Check, Ration Card Status Check
ರೇಷನ್ ಕಾರ್ಡು ನೀಡುವಾಗ ಅನೇಕ ಷರತ್ತುಗಳ ಅನ್ವಯ ಕಾರ್ಡು ನೀಡಲಾಗುತ್ತದೆ. ಆದರೆ ಅದನ್ನು ಮೀರಿ ಎಲ್ಲರು ಮಾಡಿಸಿಕೊಂಡಿರುವ ಹಿನ್ನಲೆ ಮಡಿಸಿಕೊಂಡಿರುವ ಅನೇಕ ಜನರ ರೇಷನ್ ಕಾರ್ಡು ಗಳು ಸರ್ಕಾರ ಕ್ಯಾನ್ಸಲ್ ಮಾಡುತ್ತಿದೆ. ಕಾರು ಹಾಗು ಬೈಕ್ ವಾಹನಗಳನ್ನು ಹೊಂದಿರುವವರು ಆರ್ಥಿಕವಾಗಿ ಸಬಲರಾಗಿರುವುದರಿಂದ ಅವರಿಗೆ ರೇಷನ್ ಕಾರ್ಡ್ ಅಗತ್ಯವಿಲ್ಲ ಎಂದು ತಿಳಿದು ಸರ್ಕಾರ ಅನೇಕ ಜನರ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ 22 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನ ರದ್ದು ಮಾಡುತ್ತಿದ್ದಾರೆ. ಸರ್ಕಾರ ಕೆಲ ಕಾರ್ಯ ತಂತ್ರಾಂಶದಿಂದ ನಡೆಸುತ್ತಿದ್ದು, ಬಡವರಿಗೆ ಸಿಗಬೇಕಾದ ಸೌಲಭ್ಯಗಳು ನಿಜವಾದ ಅರ್ಹರಿಗೆ ಸಿಗುವಂತೆ ಮಾಡಿಕೊಳ್ಳುತ್ತಿದೆ. ಇನ್ನು ಯಾರ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಲಿದೆ ಎನ್ನುವುದನ್ನ ಇದೀಗ ನೋಡೋಣ.
ನಮ್ಮ ದೇಶದಲ್ಲಿ ಬಡವರಿಗೆ ಸಹಾಯವಾಗಲು ಸರ್ಕಾರ ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಗಳನ್ನ ಸರ್ಕಾರ ವಿತರಣೆಯನ್ನ ಮಾಡಿತ್ತು. ಬಿಪಿಎಲ್ ರೇಷನ್ ಕಾರ್ಡ್ ಅಂದ್ರೆ ಬಡತನ ರೇಖೆಗಿಂತ ಕೆಳಗೆ ಇರುವ ಜನರು (BPL- below Poverty Line), ಎಪಿಎಲ್ ರೇಷನ್ ಕಾರ್ಡ್ ಅಂದ್ರೆ ಬಡತನ ರೇಖೆಗಿಂತ ಮೇಲಿರುವ ಜನರು (APL – Above Poverty Line). ಇನ್ನು ಇಲ್ಲಿ ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಕುಟುಂಬಗಳಿಗೆ ಸರ್ಕಾರದಿಂದ ಸಹಾಯವಾಗಿ ಪಡಿತರ ಅಂಗಡಿಗಳಲ್ಲಿ ರೇಷನ್ ಲಭ್ಯವಾಗುತ್ತಿತ್ತು. ಉಚಿತ ಅಕ್ಕಿ, ಬೇಳೆಕಾಳು ಹಾಗೂ ಧಾನ್ಯಗಳು ಜನರಿಗೆ ಈ ಕಾರ್ಡ್ ಹೊಂದಿದವರಿಗೆ ಸಿಗುತ್ತಿತ್ತು. ಆದರೆ ಇದೀಗ ಸರ್ಕಾರ ಅನರ್ಹ ಫಲಾನುಭವಿಗಳ ಬಿಪಿಎಲ್ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡಿದ್ದಾರೆ. ಯಾರ್ಯಾರ ರೇಷನ್ ಕಾರ್ಡು ಕ್ಯಾನ್ಸಲ್ ಆಗಿದೆ ಎನ್ನುವುದನ್ನ ನೋಡೋಣ.
ರೇಷನ್ ಕಾರ್ಡ್ ಅನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭಾವನ್ನ ಪಡೆಯಲು ಪ್ರಮುಖ ದಾಖಲೆಯ ಪಾತ್ರವಾಗಿರುತ್ತದೆ. ಆದರೆ ಇಲ್ಲಿ ಹೆಚ್ಚಾಗಿ ಅರ್ಹರಿಗಿಂತ ಅನರ್ಹರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇದರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳಲು ಆರಂಭಿಸಿದೆ. ಇದೀಗ ಬಂದಿರುವಂತ ಮಾಹಿತಿಗಳ ಪ್ರಕಾರ 23,81,371 ಅನರ್ಹ ಪಡಿತರ ಬಿಪಿಎಲ್ ಕಾರ್ಡುಗಳು ಹಾಗು ಅಂತ್ಯೋದ್ಯಮ ಕಾರ್ಡುಗಳನ್ನ ಸರ್ಕಾರ ಕ್ಯಾನ್ಸಲ್ ಮಾಡುವ ಸಾಧ್ಯತೆ ಇದೆ.
Recent Post:
-
ಸರ್ಕಾರದ ಬಂತು ಹೊಸ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದ ಕಡೆಯಿಂದ 25,000 ದಿಂದ 1,00,000 ಸಿಗುತ್ತೇ, Government New Scheme 2025
-
Government Free Sewing Machine for Women, ಮಹಿಳೆಯರಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ, Free sewing Machine Apply Online
ಸರ್ಕಾರವು ಆಯ್ಕೆಯಾದ ಆದಾಯ ತೆರಿಗೆ ಹಾಗೂ ಆಸ್ತಿ ತೆರಿಗೆಯ ಮಿತಿ ಮೀರಿ, ತಪ್ಪು ಮಾಹಿತಿಗಳನ್ನ ನೀಡಿ ಮಾಡಿಸಿಕೊಂಡ ಬಿಪಿಎಲ್ ರೇಷನ್ ಕಾರ್ಡ್ ಗಳು ಹೀಗೆ ಅನೇಕ ಮೂಲಗಳಿಂದ ಪತ್ತೆ ಹಚ್ಚಲಾಗಿದೆ. ಹೀಗೆ ಅನೇಕ ತಂತ್ರಾಂಶ ಗಳ ಮೂಲದಿಂದ ಮಾಹಿತಿಯನ್ನ ಕಲೆಹಾಕಿ 23 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳನ್ನ ಪತ್ತೆ ಹಚ್ಚಿ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಇನ್ನು ಕೆಲವೇ 10 ದಿನಗಳೊಳಗೆ ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ.
ರೇಷನ್ ಕಾರ್ಡುಗಳು ರದ್ದು ಮಾಡಲು ಕಾರಣ:
ಇದು ಕೇವಲ ಅರ್ಹ ಪಾಲಾನುಭವಿಗಳಿಗೆ ಮಾತ್ರವಲ್ಲದೆ, ಅನರ್ಹ ಫಲಾನುಭವಿಗಳು ಇದರ ಲಾಭವನ್ನ ಪಡೆಯುತ್ತಿದ್ದಾರೆ. ಇನ್ಮುಂದೆ ಅಂತವರಿಗೆ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಕ್ಯಾನ್ಸಲ್ ಮಾಡಲಾಗುತ್ತಿದೆ ಎನ್ನುವುದನ್ನ ಇದೀಗ ನೋಡೋದಾದ್ರೆ,
- 1.20 ಲಕ್ಷ ರೂಪಾಯಿ ಗಿಂತ ಹೆಚ್ಚು ಆದಾಯ ಗಳಿಸುವ ಕುಟುಂಬಗಳ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಲಿದೆ.
- ಸ್ವಂತ ಮನೆ ಹಾಗು ಆಸ್ತಿ ಹೊಂದಿರುವವರು.
- ಆದಾಯ ತೆರಿಗೆಯ ಪಾವತಿದಾರರು.
- ನೀರಾವರಿ ಅಥವಾ ಒಣಭೂಮಿಯನ್ನ ಹೊಂದಿರುವ ಕುಟುಂಬಗಳು.
- ಹೆಚ್ಚಿನ ಶ್ರೇಣಿಯ ವಾಹನಗಳ ಮಾಲೀಕರು: 100 ಸಿ ಸಿ ದ್ವಿಚಕ್ರ, ಕಾರು ಅಥವಾ ತ್ರಿಚಕ್ರ ವಾಹನಗಳ ಮಾಲಿಕರು.
- ನೊಂದಾಯಿತ ಗುತ್ತಿಗೆದಾರರು ಹಾಗು ಕೋಶಿತ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು.
ಬಿಪಿಎಲ್ ಕಾರ್ಡುಗಳು ಕ್ಯಾನ್ಸಲ್ ಆದ ಪರಿಣಾಮ:
ಈ ಒಂದು ಕ್ರಮವು ಸರ್ಕಾರ ಬಾರಿ ಬಂಡವಾಳವನ್ನು ಸದುಪಯೋಗ ಪಡಿಸಿಕೊಳ್ಳಲು, ಈ ರೀತಿಯ ಕ್ರಮಗಳನ್ನ ಕೈಗೊಳ್ಳಲಿದೆ. ಈ ಒಂದು ತಾಂತ್ರಿಕ ತಪಾಸಣೆಯ ಮೂಲಕ ಕೆಲ ತಪ್ಪುಗಳನ್ನ ಕಂಡುಹಿಡಿದು, ಈ ಯೋಜನೆಯನ್ನ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಇದರಿಂದ ತುಂಬಾ ಜನರ ಅರ್ಹ ಫಲಾನುಭವಿಗಳ ರೇಶನ್ ಕಾರ್ಡ್ ಗಳು ಕ್ಯಾನ್ಸಲ್ ಆಗುತ್ತಿದೆ. ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದಲ್ಲಿ ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ತಿಳಿಯಬಹುದು.
Ration Card Status Check Link : Click
ರೇಷನ್ ಕಾರ್ಡು ಕ್ಯಾನ್ಸಲ್ ಆಗಿರುವ ಸ್ಟೇಟಸ್ ಚೆಕ್ ಮಾಡೋದು ಹೇಗೆ?
- ಮೊದಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ನೇರವಾಗಿ ಆಹಾರ ಇಲಾಖೆಯ ವೆಬ್ಸೈಟ್ ಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೆ.
- ಮೇಲೆ Menu ನಲ್ಲಿ ನಿಮಗೆ E ಸೇವೆಗಳು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ಇನ್ನೊಂದು Sub Menu ಓಪನ್ ಆಗುತ್ತೆ. ಅಲ್ಲಿ ನಿಮಗೆ E ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.
- ಕೆಳಗೆ Show cancelled and Suspended ಲಿಸ್ಟ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಂತರ ಒಂದು ಪೇಜ್ ಓಪನ್ ಆಗುತ್ತೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಯಾವ ತಿಂಗಳಿನಲ್ಲಿ ಕ್ಯಾನ್ಸಲ್ ಆಗಿದ್ಯೋ ಇಲ್ಲವೋ ಎಂದು ನೋಡುವುದಿಕ್ಕೆ ತಿಂಗಳ ಒಪ್ಷನ್ ಕೊಟ್ಟಿರುತ್ತಾರೆ. ಅದನ್ನು ಸೆಲೆಕ್ಟ್ ಮಾಡಿ Go ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ತಾಲೂಕಿನಲ್ಲಿ ಯಾರ್ ಯಾರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆ ಎನ್ನುವುದರ ಲಿಸ್ಟ್ ನಿಮಗೆ ಸಿಗುತ್ತದೆ.
ಈ ರೀತಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
Youtube Video
ನೀವು ಕೂಡ ಒಮ್ಮೆ ಚೆಕ್ ಮಾಡಿ ಕೊಳ್ಳಿ. ಇನ್ನು ಯಾವ ರೀತಿ ಚೆಕ್ ಮಾಡೋದು ಎಂಬುದರ ವಿಡಿಯೋ ಯೂಟ್ಯೂಬ್ ನಲ್ಲಿ ಇದೆ. ಲಿಂಕ್ ಈ ಕೆಳಗೆ ನೀಡಲಾಗಿದೆ.
Ration cards cancelled, ರೇಷನ್ ಕಾರ್ಡ್ ಇರುವವರಿಗೆ ಶಾಕಿಂಗ್ ಸುದ್ದಿ, ಇನ್ಮುಂದೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ, BPL Ration card Cancel Check, Ration Card Status Check