ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದು. ಇವುಗಳಲ್ಲಿ ಹಲವು ವಿಧಗಳಿದ್ದು, ಈ ಪೈಕಿ ಬಿಪಿಎಲ್ ರೇಷನ್ ಕಾರ್ಡ್‌ಗೆ ಬರೀ ಪಡಿತರ ಅಷ್ಟೇ ಅಲ್ಲದೆ ಸರ್ಕಾರಿ ಸೌಲಭ್ಯಗಳು ಸಹ ದೊರೆಯುತ್ತದೆ. ಅಂದ್ರೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಜೊತೆಗೆ ಕೆಲ ಯೋಜನೆಗಳು ದೊರೆಯುತ್ತದೆ. ಆದರೆ ಈ ಕಾರ್ಡ್‌ಗಳನ್ನು ಅನರ್ಹರು ಕೂಡ ಹೊಂದಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕುವ ಮಾರ್ಗಗಳ ಬಗ್ಗೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಅವರು ಕೆಲ ವಿಷಯಗಳನ್ನ ಹೇಳಿದ್ದಾರೆ. ಆದ್ದರಿಂದ ತುಂಬಾ ಜನರ ರೇಷನ್ ಕಾರ್ಡುಗಳನ್ನೂ ಸರ್ಕಾರ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇನ್ನು ಯಾರದ್ದೆಲ್ಲ ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗುತ್ತೆ ಎನ್ನುವುದನ್ನ ಇದೀಗ ನೋಡೋಣ.
Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್, Ration Card Cancel by Government, Congress Garantee Scheme, Hwo to check Ration Card Suspended list
ಹೌದು.. ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ತುಂಬಾ ಜನ ಅರ್ಹರಲ್ಲದವರು ಸಹ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿತ್ತು. ಆದರೆ ಆ ಸಮಯದಲ್ಲಿ ಬಡವರ ಬಳಿಯಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಹಲವು ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಆನಂತರ ಎಚ್ಚೆತ್ತ ಸರ್ಕಾರ ಯಾರೆಲ್ಲಾ ಬಡವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆಯೋ ಅಂತಹವರಿಗೆ ಮತ್ತೆ ಬಿಪಿಎಲ್ ಕಾರ್ಡ್ ಅನ್ನು ಹಿಂತಿರುಗಿಸಲಾಗುತ್ತದೆ ಅಲ್ಲದೆ, ಅವರಿಗೆ ಸಿಗಬೇಕಾದ ಪಡಿತರವನ್ನು ಸಹ ತಲುಪಿಸುವುದಾಗಿಯೂ ಸರ್ಕಾರ ತಿಳಿಸಿತ್ತು. ಆನಂತರ ಅನರ್ಹರನ್ನು ಬಿಪಿಎಲ್‌ನಿಂದ ಎಪಿಲ್‌ಗೆ ವರ್ಗಾಹಿಸುವ ಕೆಲಸ ಮುಂದುವರೆಸಿತ್ತು.

ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಯನ್ನು ಸಹ ನಿಲ್ಲಿಸಲಾಗಿತ್ತು. ಏಕೆಂದರೆ, ಗ್ಯಾರಂಟಿ ಯೋಜನೆಗಳಿಗೆ ಹಲವರು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮತ್ತೆ ಇದೀಗ ರಾಜ್ಯದಲ್ಲಿ ತುಂಬಾ ಮಂದು ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಇದನ್ನು ಇದೀಗ ನಿಯಂತ್ರಣಕ್ಕೆ ತರುವ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಅವರು ವಿಧಾನಮಂಡಲ ಅಧಿವೇಶನದ ವೇಳೆ ಮಾತನಾಡಿದ್ದಾರೆ.
ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುವ ಲಿಸ್ಟ್ check ಮಾಡುವ ಲಿಂಕ್: Link
ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆ:
ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಆರಂಭ ಮಾಡಿಸುವುದಾಗಿ ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಬಿಜೆಪಿಯ ಪ್ರತಾಪಸಿಂಹ ನಾಯಕ್, ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು.
ಇದನ್ನ ಓದಿ: ಇನ್ಮುಂದೆ ಇವರುಗಳಿಗೆ ಗೃಹಲಕ್ಷ್ಮೀ ಹಣ ಬರೋದಿಲ್ಲ, ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಗಳು ಕ್ಯಾನ್ಸಲ್, Gruhalakshmi Scheme Cancel
ಹೊಸ ಪಡಿತರ ಚೀಟಿ ವಿತರಣೆ ಯಾವಾಗ?:
ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಪತ್ತೆ ಮಾಡಿ ಅಂತಹವರನ್ನು ಎಪಿಎಲ್ ರೇಷನ್ ಕಾರ್ಡ್‌ಗೆ ವರ್ಗಾವಣೆ ಮಾಡುವ ಕ್ರಮ ಕೈಗೊಳ್ಳಲಾಗುವುದು. ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದರು.
ಯಾರ ರೇಷನ್ ಕಾರ್ಡುಗಳು ರದ್ದು:
ಈ ಹಿಂದೆ 15 ಲಕ್ಷ ಅನರ್ಹ ಪಡಿತರ ಚೀಟಿ ರದ್ದು ಮಾಡಲು ಮುಂದಾದಾಗ ಗೊಂದಲ ಉಂಟಾಗಿದ್ದದ್ದು, ಇದರಿಂದ ಪಡಿತರ ಚೀಟಿ ರದ್ದು ಪ್ರಕ್ರಿಯೆ ನಿಲ್ಲಿಸಲಾಯಿತು. ಆದರೆ, ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಅನರ್ಹ ಪಡಿತರ ಚೀಟಿ ರದ್ದುಪಡಿಸಲಾಗುವುದು ಎಂದು ಹೇಳಿದರು.
ಇದನ್ನ ಓದಿ: Bigg Boss Kannada: ಸೀಸನ್-12ರ ಸ್ಪರ್ಧಿಗಳ ಪಟ್ಟಿ, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, BBK12 Contestants List
ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪರಿಷ್ಕರಿಸಿ ಅಂತಹ ಕಾಡುಗಳನ್ನು ರದ್ದುಪಡಿಸಲಾಗುವುದು. ಅರ್ಜಿ ಹಾಕಿರುವ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ವಿಧಾನಮಂಡಲ ಅಧಿವೇಶನ ತಿಳಿಸಿದರು.
Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್, Ration Card Cancel by Government, Congress Garantee Scheme, Hwo to check Ration Card Suspended list
