ನಮಸ್ಕಾರ ಸ್ನೇಹಿತರೇ, ಎಲ್ಲಾ ಕರ್ನಾಟಕ ಜನತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣಕ್ಕೆ ಸಹಾಯವಾಗಲು ಕೇಂದ್ರ ಸರ್ಕಾರದಿಂದ ಒಂದು ಯೋಜನೆಯೊಂದನ್ನ ತರಲಾಗಿದೆ. ಈ ಯೋಜನೆ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನ ಪಡೆಯಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
PM Usha Scholarship, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಬರೋಬ್ಬರಿ 52000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, New Scholarship For Students, Government Scheme for Students
ಇದೀಗ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಪಿಎಂ ಉಷಾ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ.
ಈ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳೇನು, ಸ್ಕಾಲರ್ಶಿಪ್ ನ ಮೂಲಕ ಎಷ್ಟು ವಿದ್ಯಾರ್ಥಿವೇತನ ಮತ್ತು ಬೇಕಾದ ದಾಖಲೆಗಳೇನು ಹಾಗೂ ಹೇಗೆ ಅರ್ಜಿ ಸಲ್ಲಿಸೋದು ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
ಪಿಎಂ ಉಷಾ ಸ್ಕಾಲರ್ಶಿಪ್/ PM Usha Scholarship:
2nd ಪಿಯುಸಿ ಅಲ್ಲಿ ಹೆಚ್ಚು ಅಂಕ ಪಡೆದ ಅಂದ್ರೆ 80% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣಕ್ಕೆ ಸಹಾಯವಾಗಲು ಈ ವಿದ್ಯಾರ್ಥಿವೇತನವನ್ನು ಸರ್ಕಾರ ನೀಡುತ್ತಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 2nd ಪಿಯುಸಿ ವಿದ್ಯಾರ್ಥಿಗಳು ಯಾರು ಬೇಕಾದರೂ ಈ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು.
PM Usha Scholarship / ಪಿಎಂ ಉಷಾ ಸ್ಕಾಲರ್ಶಿಪ್ ಯೋಜನೆಯ ಲಾಭ:
ಈ ವಿಧ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳು 52000 ಸಿಗಲಿದೆ. ಅದು ಹೇಗೆ ಎಂದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ 3 ವರ್ಷಗಳ ವರೆಗೆ ವಿಧ್ಯಾರ್ಥಿವೇತನ ಸಿಗುತ್ತೆ. 2nd ಪಿಯುಸಿ ಆದಾರದ ಮೇಲೆ ಅರ್ಜಿ ಸಲ್ಲಿಸಿದ ನಂತರ ಮೊದಲ ವರ್ಷದಲ್ಲಿ ತಿಂಗಳಿಗೆ ₹1000 ದಂತೆ ಒಂದು ವರ್ಷಕ್ಕೆ ₹12,000 ಸಿಗುತ್ತೆ. ನಂತರ ಮೊದಲ ವರ್ಷದ ಉತ್ತೀರ್ಣದ ನಂತರ ಎರಡನೇ ವರ್ಷಕ್ಕೆ ₹20,000 ಹಣ ಸಿಗುತ್ತೆ. ನಂತರ ಎರಡನೇ ವರ್ಷದ ಉತ್ತಿರ್ಣದ ನಂತರ ಮೂರನೇ ವರ್ಷಕ್ಕೆ ₹20,000 ಸಿಗುತ್ತೆ. ಹೀಗೆ ಹೀಗೆ 3 ವರ್ಷಕ್ಕೆ ಒಟ್ಟಾರೆಯಾಗಿ ₹52,000 ವಿದ್ಯಾರ್ಥಿಗಳಿಗೆ ಈ ವಿಧ್ಯಾರ್ಥಿವೇತನ ಸಿಗುತ್ತೆ.
ಪಿಎಂ ಉಷಾ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು:
- ಅರ್ಜಿ ಸಲ್ಲಿಸುವ ವಿಧ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು.
- 2nd ಪಿಯುಸಿ ಮುಗಿದ ನಂತರ ವಿದ್ಯಾರ್ಥಿ ತನ್ನ ಮುಂದಿನ ಶಿಕ್ಷಣಕ್ಕೆ ಸೇರ್ಪಡೆಯಾಗಿರಬೇಕು.
- ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- BA, B.com,BBA, BCA, BSC, ITI, ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿಧ್ಯಾರ್ಥಿಯ 2nd ಪಿಯುಸಿ ತರಗತಿ ಹಾಜರಾತಿ 75% ಗಿಂತ ಹೆಚ್ಚಿರಬೇಕು.
- ಹೊಸದಾಗಿ ಅರ್ಜಿ ಸಲ್ಲಿಸುವ ವಿಧ್ಯಾರ್ಥಿ ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ ನೀಡಬೇಕು.
ಈ ಮೇಲೆ ಹೇಳಿರುವ ಎಲ್ಲಾ ಅರ್ಹತೆಗಳು ನಿಮಗಿದ್ದರೆ ಈ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಬಹುದು.
ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು PM Usha Scholarship Documentation for applying:
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ.
- ವಿದ್ಯಾರ್ಥಿಯ ಆಧಾರ ಕಾರ್ಡ್.
- ಪೋಷಕರ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ವಿದ್ಯಾರ್ಥಿಯ ಮೊಬೈಲ್ ನಂಬರ್ ಹಾಗು ಮೇಲ್ ಐಡಿ.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಫೋಟೋ.
- ಪ್ರಸ್ತುತ ಕಾಲೇಜ್ ನ ಸ್ಟಡಿ ಸರ್ಟಿಫಿಕೇಟ್ ಅಥವಾ ಕಾಲೇಜ್ ID ಕಾರ್ಡ್.
ಈ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ರೆ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಪಿಎಂ ಉಷಾ ಸ್ಕಾಲರ್ಶಿಪ್ / PM Usha Scholarship ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/12/2024. ಇನ್ನು ಇದು ಕೆಲ ದಿನಗಳವರೆಗೆ ಕಾಲಾವಕಾಶ ನೀಡಬಹುದು ಹಾಗೂ ನೀಡದೆ ಇರಬಹುದು.
PM Usha Scholarship ಪಿಎಂ ಉಷಾ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ಲಿಂಕ್: Apply Now
PM Usha Scholarship ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನಿಮಗೆ ಪಿಎಂ ಉಷಾ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ Website ನೀಡಲಾಗಿದೆ. ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ website ಪೋರ್ಟಲ್ ಓಪನ್ ಆಗುತ್ತೆ.ನಂತರ ಈ ವೆಬ್ಸೈಟ್ ಗೆ ನೀವು ರಿಜಿಸ್ಟರ್ ಆಗಬೇಕು. ನಂತರ ಲಾಗಿನ್ ಆಗಿ.
- ಅಲ್ಲಿ ನಿಮಗೆ ನಾಮಿನೇಷನ್ ಎನ್ನುವ ಆಪ್ಷನ್ ಇರುತ್ತೆ. ಅಲ್ಲಿ ನೀವು ಕ್ಲಿಕ್ ಮಾಡಬೇಕು.
- ಅಲ್ಲಿ ನಿಮಗೆ ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಓಪನ್ ಆಗುತ್ತೆ.
- ಕೇಳಿರುವ ಎಲ್ಲಾ ದಾಖಲೆಗಳನ್ನ ನೀಡಿ ಅರ್ಜಿ ಸಲ್ಲಿಸಬಹುದು.
ಹೀಗೆ ಈ ಪೋರ್ಟಲ್ ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.
ಅದ್ದರಿಂದ ಈ ರೀತಿಯಲ್ಲಿ ವಿದ್ಯಾಸಿರಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ. ಆದ್ದರಿಂದ ನಿಮಗೆ ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಈ ಮೇಲೆ ಎಲ್ಲಾ ಮಹಿತಿ ನೀಡಿದ್ದೇನೆ. ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸಿ, ನೀವು ಕೂಡ ಯೋಜನೆಯ ಲಾಭವನ್ನ ಪಡೆಯಬಹುದು.
ಇನ್ನು ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಹಾಗೂ ಇನ್ನು ಆನೇಕ ಸ್ಕಾಲರ್ಶಿಪ್ ಬಗ್ಗೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ಮಾಹಿತಿ ಪಡೆಯಬಹುದು.
Scholorship Update
PM Usha Scholarship, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಬರೋಬ್ಬರಿ 52000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, New Scholarship For Students, Government Scheme for Students
