ನಮಸ್ಕಾರ ಸ್ನೇಹಿತರೇ, ಸರ್ಕಾರವು ಬಡವರಿಗೆ ಆನೇಕ ಯೋಜನೆಗಳನ್ನ ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಜನರಿಗೆ ಅದರ ಬಗ್ಗೆ ಎಲ್ಲಿಯು ಕೂಡ ಮಾಹಿತಿ ಸಿಗುವುದಿಲ್ಲ. ಇನ್ನು ಯೋಜನೆಯನ್ನು ನೀಡುವಾಗ ರೇಷನ್ ಕಾರ್ಡ್ ಮೂಲಕ ಯೋಜನೆಗಳನ್ನ ನೀಡಲಾಗುತ್ತದೆ. ಅಂದ್ರೆ ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್. ಇನ್ನು ತುಂಬಾ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಇನ್ನು ಕೂಡ ಸಿಕ್ಕಿಲ್ಲ. ಆದರೆ ಇದೀಗ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ನಾವು ರೇಷನ್ ಕಾರ್ಡ್ ಗೆ ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡುತ್ತೀವಿ.
New Ration Card Apply Details, APL and BPL Ration Card, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration card Apply 2025, Government New Scheme
ಹೌದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳನ್ನ ನೀಡುತ್ತಲೇ ಬಂದಿದೆ. ಅದರಲ್ಲಿ ಗ್ಯಾರಂಟೀ ಯೋಜನೆ ಪ್ರಮುಖವಾದದ್ದು. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ ಹಾಗು ಯುವನಿಧಿ ಯೋಜನೆ. ಈ ಎಲ್ಲಾ ಯೋಜನೆ ಪ್ರಮುಖವಾಗಿ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ನೀಡಲಾಗುತ್ತದೆ. ಅಂದ್ರೆ ಬಿಪಿಎಲ್ ಕಾರ್ಡುದಾರರಿಗೆ ನೀಡಲಾಗುತ್ತದೆ. ಆದರೆ ಈ ಯೋಜನೆಗಳನ್ನ ಸರ್ಕಾರ ಜಾರಿಗೆ ತಂದ ನಂತರ ಎಲ್ಲರು ಕೂಡ ಬಿಪಿಎಲ್ ಪಡಿತರ ಕಾರ್ಡುಗಳನ್ನ ತೆಗೆದುಕೊಳ್ಳುತ್ತಾರೆ. ಅಂದ್ರೆ ಎಪಿಎಲ್ ಕಾರ್ಡುದಾದರು ಕೂಡ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಂಡು ಈ ಯೋಜನೆ ಲಾಭ ಪಡೆದುತ್ತಿದ್ದರು. ಆದರೆ ಸರ್ಕಾರ ಅದನ್ನ ತಿಳಿದು ಅನೇಕ ಜನರ ರೆಷನ್ ಕಾರ್ಡು ಗಳನ್ನ ಕ್ಯಾನ್ಸಲ್ ಮಾಡಿತ್ತು.
ಬಿಪಿಎಲ್ ಪಡಿತರ ಚೀಟಿಗೆ / BPL Ration Card: ಬಡತನ ರೇಖೆಗಿಂತ ಕೆಳಗಿರುವ ಹಾಗೂ ಬಡತನ ರೇಖೆಯಲ್ಲಿರುವ ಜನರಿಗೆ ಈ ಕಾರ್ಡ್ ಗಳನ್ನ ನೀಡಲಾಗುತ್ತದೆ. ಅಂದ್ರೆ ಸರ್ಕಾರದ ಅನೇಕ ಯೋಜನೆಗಳ ಲಾಭವನ್ನು ಪಡೆಯಲು ಈ ಕಾರ್ಡು ಗಳನ್ನ ವಿತರಿಸಲಾಗುತ್ತದೆ.
ಎಪಿಎಲ್ ಪಡಿತರ ಚೀಟಿ / APL Ration Card: ಬಡತನ ರೇಖೆಗಿಂತ ಮೇಲಿರುವ ಜನರಿಗೆ ಈ ಕಾರ್ಡು ಗಳನ್ನ ವಿತರಿಸಲಾಗುತ್ತದೆ. ಈ ಮೂಲಕ ಸರ್ಕಾರದ ಎಲ್ಲಾ ಸೌಕರ್ಯಗಳು ಅಲ್ಲ, ಕೆಲ ಸೌಕರ್ಯಗಳನ್ನ ಪಡೆದುಕೊಳ್ಳಬಹುದು.
Recent Post:
-
Gruhalakshmi Scheme 16th installment received, ಗೃಹಲಕ್ಷ್ಮೀ ಯೊಜನೆ 16ನೇ ಕಂತು 2000 ಜಮಾ, Congress Guarantee Scheme
-
PM Usha Scholarship 2025, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, NSP and SSP Scholarship, scholarship for Karnataka Students
-
ಮದುವೆ ಬಗ್ಗೆ ಭವ್ಯಾ ತ್ರಿವಿಕ್ರಮ್ ಹೇಳೋದೇನು , Bigg Boss season 11 Best Couples, ಭವ್ಯಾ ಗೌಡ & ತ್ರಿವಿಕ್ರಮ್ ಇಬ್ಬರು ಮದುವೆ ಆಗ್ತಾರೆ, BBK11 Love Story
ಇನ್ನು ಈ ಹಿಂದೆ ಎಪಿಎಲ್ ಕಾರ್ಡ್ ಗಳನ್ನ ಪಡೆದುಕೊಂಡವರು ಕೂಡ ಮತ್ತೆ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿ, ಬಿಪಿಎಲ್ ರೇಷನ್ ಕಾರ್ಡು ಪಡೆದು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದರು. ಇದನ್ನ ಗಮನಿಸಿದ ಸರ್ಕಾರ ಅನೇಕ ಜನರ ರೇಷನ್ ಕಾರ್ಡುಗಳು ಕ್ಯಾನ್ಸಲ್ ಮಾಡಿತ್ತು. ಆದರೆ ಇಲ್ಲಿ ಎಷ್ಟೋ ಜನರು ಬಡತನ ರೇಖೆಗಿಂತ ಕೆಳಗಿರುವ ಜನರ ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿದ್ದವು. ಅಂತವರಿಗೆ ಈಗ ಮತ್ತೆ ಹೊಸ ರೇಷನ್ ಕಾಡುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ pನೀಡಲಾಗುತ್ತಿದೆ.
ಅರ್ಜಿ ಸಲ್ಲಿಸುವ ಲಿಂಕ್: Apply Now
ಯಾರೆಲ್ಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು:
ಕಾಂಗ್ರೆಸ್ ನ ಅನೇಕ ಗ್ಯಾರಂಟೀ ಯೋಜನೆ ಯಿಂದ ಅನೇಕರ ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿರುತ್ತವೆ. ಅದನ್ನು ಸರಿಪಡಿಸಿ ಕೊಳ್ಳಲು ಮತ್ತೆ ಈಗ ರಾಜ್ಯ ಸರ್ಕಾರ ಅವಕಾಶವನ್ನು ನೀಡಿದೆ. ಅಂತವರು ಈಗ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು. ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದಲ್ಲಿ ಅಥವಾ ಎಪಿಎಲ್ ರೇಷನ್ ಕಾರ್ಡ್ ಆಗಿದ್ದಲ್ಲಿ ಮತ್ತೊಮ್ಮೆ ಸರಿಪಡಿಸಲು ಸರ್ಕಾರ ಅವಕಾಶವನ್ನು ನೀಡಿದೆ.
ಹೊಸ ಬಿಪಿಎಲ್ ರೇಷನ್ ಕಾರ್ಡು ಪಡೆಯಲು ಇರಬೇಕಾದ ಅರ್ಹತೆಗಳು:
- ನಿಮ್ಮ ಕುಟುಂಬದ ಆದಾಯ 1,20,000 ಕ್ಕಿಂತ ಮೀರಿರಬಾರದು.
- ನಿಮ್ಮ ಮನೆಯ ಯಾರೊಬ್ಬ ಸದಸ್ಯ ಸರ್ಕಾರಿ ನೌಕರಿಯನ್ನ ಪಡೆದುಕೊಂಡಿರಬಾರದು.
- ನಿಮ್ಮ ಬಳಿ White Board ನಾಲ್ಕು ಚಕ್ರ ವಾಹನ ಇರಬಾರದು.
- ನೀವು 1 ಎಕ್ರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರಬಾರದು.
- ನಿಮ್ಮ ಮನೆ 1000 square feet ಗಿಂತ ಹೆಚ್ಚಿನ ಭೂಮಿ ಹೊಂದಿರಬಾರದು.
- ಇವೆಲ್ಲವೂ ನಿಮ್ಮ ಬಡತನ ರೇಖೆಯನ್ನು ಅಳೆಯುವ ಮುಲಗಳಾಗಿರುತ್ತದೆ. ನೀವು ಬಡತನ ರೇಖೆಗಿಂತ ಕೆಳಗೆ ಇದ್ದರೆ ಮಾತ್ರ ನಿಮಗೆ ಬಿಪಿಎಲ್ ರೇಷನ್ ಕಾರ್ಡು ಸಿಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಯಾವಾಗ:
ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಒಂದು ಅವಧಿ ನೀಡಲಾಗುವುದಿಲ್ಲ. ಕೆಲ ಜಿಲ್ಲೆಗಳಿಗೆ ಇಂತಿಷ್ಟು ದಿನಗಳ ವರಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದು ಸೇವಾ ಸಿಂಧೂ ಪೋರ್ಟಲ್, ಕರ್ನಾಟಕ ಒನ್, ಗ್ರಾಂ ಒನ್, ಬಾಪೂಜಿ ಕೇಂದ್ರ ಹೀಗೆ ಕೆಲವೂ ಕಡೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದೆ. ಆದರೆ ಯಾವ ದಿನ ನೀಡಲಾಗುತ್ತೇ ಎನ್ನುವುದು ಪಿಕ್ಸ್ ಆಗಿರುವುದಿಲ್ಲ. ಇನ್ನು ಅರ್ಜಿ ಸಲ್ಲಿಕೆಗೆ ಅವಕಾಶ ಕೊಟ್ಟಾಗ ನೀವು ಅರ್ಜಿ ಸಲ್ಲಿಸಬಹುದು. ಇನ್ನು ನಿಮ್ಮ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದು ತಿಳಿಯಲು ಮೇಲೆ ನೀಡಿರುವ apply now ಮೇಲೆ ಕ್ಲಿಕ್ ಮಾಡಿ ನೀಡಬಹುದು.
ಇನ್ನು ರೇಷನ್ ಕಾರ್ಡ್ ಪಡೆಯಲು ನಾವು ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಎನ್ನುವುದರ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುತ್ತದೆ. ಅದರ ಲಿಂಕ್ ಈ ಕೆಳಗೆ ನೀಡಿರುತ್ತೇನೆ. ಅದನ್ನ ನೋಡಿ ನೀವು ಕೂಡ ಅರ್ಜಿ ಸಲ್ಲಿಸಬಹುದು.
Link: YouTube Video
ಇನ್ನು ಈ ಮಾಹಿತಿಗೆ ನಿಮಗೆ ಡೌಟ್ ಇದ್ರೆ, ಕೆಳಗಡೆ ನೀಡಿರುವ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ. ನಾವು ನಿಮಗೆ ಸಂಪೂರ್ಣ ಮಾಹಿತಿ ಮುಂದಿನ ದಿನಗಳಲ್ಲಿ ನೀಡುತ್ತೇವೆ.
New Ration Card Apply Details, APL and BPL Ration Card, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration card Apply 2025, Government New Scheme