ನಮಸ್ಕಾರ ಸ್ನೇಹಿತರೇ, ಇದೀಗ ಎಲ್ಲೆಡೆ ಚರ್ಚೆ ಆಗ್ತಾ ಇರುವುದು ಮೊಕ್ಷಿತಾ ಪೈ ರವರ ಮದುವೆಯ ವಿಚಾರ. ಹೌದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ. ಆದ್ದರಿಂದ ಪೂರ್ತಿಯಾಗಿ ಓದಿ.
Mokshita Pai Marriage, ಮೊಕ್ಷಿತಾ ಪೈ ಮದುವೆ ಆಗೋ ಹುಡುಗ, Mokshita Pai, BBK11, Bigg Boss Kannada, Kiccha Sudeep
ಬಿಗ್ ಬಾಸ್ 11 ಇದೀಗ ಮುಗಿದಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಮೊಕ್ಷಿತಾ ಪೈ ರವರ ಮದುವೆಯ ಬಗ್ಗೆ ತುಂಬಾನೇ ಚರ್ಚೆ ಆಗುತ್ತಿತ್ತು. ಹೌದು ತಾನು ತನ್ನ ಕುಟುಂಬವನ್ನ ನೋಡಿಕೊಳ್ಳುತ್ತಿದ್ದೇನೆ. ನಾನು ಮದುವೆಯಾದರೆ ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೆನೆ. ಅಂತಾ ಹೇಳಿದ್ರು. ಆ ನಂತರ ಬಿಗ್ ಬಾಸ್ ಮನೇಲಿ ಇದ್ದಾಗ ಮೊಕ್ಷಿತಾ ಪೈ ರವರ ತಂದೆ ತಾಯಿ ಹಾಗೂ ಅವರ ತಮ್ಮ ಬಿಗ್ ಬಾಸ್ ಮನೆಯೊಳಗೆ ಬಂದಾಗ ಮೊಕ್ಷಿತಾ ತಾಯಿ, ನೀನು ಆಚೆ ಬಂದ ನಂತರ ಮದುವೆ ಆಗ್ಬೇಕು ಅಂತ ಹೇಳಿದ್ರು. ಇದೀಗ ಅವರ ಮದುವೆ ವಿಚಾರ ಚರ್ಚೆ ಆಗುತ್ತಿದೆ.
Bigg Boss Kannada Season 11 ಇದೀಗ ಮುಗಿದಿದ್ದು, ಈ ಸೀಸನ್ ನ ವಿನ್ನರ್ ಹನುಮಂತ ಆಗಿದ್ದಾರೆ. ಇನ್ನು ರನ್ನರ್ ಆಫ್ ಆಗಿ ತ್ರಿವಿಕ್ರಮ್ ಆಗಿದ್ದಾರೆ. ಇನ್ನು ಮೊಕ್ಷಿತಾ ರವರು 3ನೇ ರನ್ನರ್ ಆಫ್ ಆಗಿದ್ದಾರೆ. ಇದೀಗ ಮೊಕ್ಷಿತ ಪೈ ಮದುವೆ ಬಗ್ಗೆ ಮಾದ್ಯಮದಲ್ಲಿ ಒಂದು ಇಂಟರ್ವ್ಯೂ ನಲ್ಲಿ ಮಾತನಾಡಿದ್ದಾರೆ.
ಪಾರು ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೊಕ್ಷಿತಾ ಪೈ ಅವರು ಪಾರು ಸೀರಿಯಲ್ ನಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಸ್ಸನ್ನ ಗೆದ್ದಿದ್ದರು. ಈ ಬಳಿಕ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊಕ್ಷಿತ ಪೈ ಅವರು ಬಿಗ್ ಬಾಸ್ ಮನೆಯೊಳಗೆ ತಮ್ಮ ಶಾಂತ ಸ್ವಭಾವ ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಇನ್ನಷ್ಟು ಜನರಿಗೆ ಹತ್ತಿರ ಆಗಿದ್ದ ಇವರು ಬಿಗ್ ಬಾಸ್ ಸೀಸನ್ 11 ಈ 3rd ರನ್ನರ್ ಆಫ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುತ್ತಾರೆ.ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೋಕ್ಷಿತಾ ಪೈ ಅವರು ಕೆಲವು ದಿನಗಳ ಬಳಿಕ ಸಂದರ್ಶನ ನೀಡಿದ್ದು. ತಾವು ನೀಡಿದ ಸಂದರ್ಶನ ಒಂದರಲ್ಲಿ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ಹೌದು ಮೋಕ್ಷಿತಾ ಪೈ ಅವರಿಗೆ ಈಗ 30 ವರ್ಷ ವಯಸ್ಸು ಮೋಕ್ಷಿತಾ ಅವರ ಮನೆಯಲ್ಲಿ ಅವರಿಗೆ ಮೊದಲಿನಿಂದಲು ಮದುವೆ ಆಗುವಂತೆ ಹೇಳುತ್ತಿದ್ದರು ಆದರೆ ಅವರು ಮದುವೆ ಆಗಿರಲಿಲ್ಲ ಇದಕ್ಕೆ ಒಂದು ಕಾರಣ ಇದೆ.
Recent Post:
-
ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಯಾರು? Bigg Boss Kannada 12th Season Host, ಕಲರ್ಸ್ ಕನ್ನಡ ಬಿಟ್ಟು ಕೊಟ್ಟ ಸುಳಿವೇನು?, BBK12
-
LIC ಯೋಜನೆ ಒಂದು ಸೂಪರ್ ಆಫರ್, ₹71 ಉಳಿತಾಯ ಮಾಡಿದ್ರೆ ಮೆಚ್ಯುರಿಟಿ ನಂತರ ₹48 ಲಕ್ಷ ಸಿಗುತ್ತೆ, New LIC Scheme 2025
ಆ ಕಾರಣ ಏನು ಎಂದು ನೋಡೋದಾದ್ರೆ,
ಮೋಕ್ಷಿತಾ ಅವರ ತಮ್ಮ ಅಂಗವಿಕಲ ಆಗಿದ್ದು ತಾನು ಮದುವೆ ಆದರೆ ತನ್ನ ತಮ್ಮ ಹಾಗು ತಂದೆ ತಾಯಿ ಅನ್ನು ನೋಡಿಕೊಳ್ಳೋರು ಯಾರು ಇರುವುದಿಲ್ಲ ಎನ್ನುವ ಭಯದಿಂದ ಮೋಕ್ಷಿತಾ ಅವರು ಇಲ್ಲಿಯ ವರೆಗೆ ಮದುವೆ ಆಗಿರಲಿಲ್ಲ.ಆದರೆ ಈಗ ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಂದರ್ಶ ನ ಒಂದರಲ್ಲಿ ಮೋಕ್ಷಿತಾ ಅವರು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಕೇಳಿದಾಗ ಅದಕ್ಕೆ ಮೊಕ್ಷಿತ ಅವರು ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವುದನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮೋಕ್ಷಿತಾ ಅವರು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನೋಡೋದಾದರೆ :
ಮೋಕ್ಷಿತಾ ಅವರು ಮದುವೆ ಆಗುವ ಹುಡುಗ ಸಿಂಪಲ್ ಆಗಿರಬೇಕು. ತನ್ನ ತಂದೆ ತಾಯಿ ಹಾಗೂ ತಮ್ಮ ನಿಂದ ನನ್ನನ್ನು ದೂರ ಮಾಡಬಾರದು. ಹಾಗೆ ಅವರ ವೃತ್ತಿ ಜೀವನಕ್ಕೆ ಮದುವೆ ಆಗುವ ಹುಡುಗ ಸಪೋರ್ಟ್ ಮಾಡಬೇಕು ಅಂತಹ ಹುಡುಗನನ್ನ ಮೋಕ್ಷಿತಾ ಅವರು ಮದುವೆ ಆಗುತ್ತಾರಂತೆ, ಹೌದು ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಜೋಡಿಯನ್ನ ನೋಡಿ ಜನ ಮೆಚ್ಚಿ ತ್ರಿಮೋಕ್ಷಿ ಎನ್ನುವ ಹೆಸರಿನಲ್ಲಿ ಹಲವು ಫ್ಯಾನ್ ಪೇಜಸ್ ಗಳನ್ನಾ ತೆರೆದು, ಇವರಿಬ್ಬರ ಜೋಡಿ ಮಾಡಿ ಆನಂದಿಸುತ್ತಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರ ಜೊತೆಗೆ ಅತಿ ಹೆಚ್ಚು ಅಂತರ ಕಾಯ್ದುಕೊಂಡಿದ್ದರು. ಆದರೆ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಮಾಡುತ್ತೀರಾ ಅಂತ ಕೇಳಿದಾಗ, ತಾನು ಮಾಡುತ್ತೀನಿ ಎನ್ನುವ ಉತ್ತರವನ್ನ ಸಹ ಮೋಕ್ಷಿತಾ ಪೈ ಅವರು ನೀಡಿದ್ದಾರೆ.
Mokshita Pai Marriage, ಮೊಕ್ಷಿತಾ ಪೈ ಮದುವೆ ಆಗೋ ಹುಡುಗ, Mokshita Pai, BBK11, Bigg Boss Kannada, Kiccha Sudeep