ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆ ಯಲ್ಲಿ 2025ನೇ ಸಾಲಿನಲ್ಲಿ ಅನೇಕ ಶುಭ ಸಮಾರಂಭಗಳು ಆಗಿದೆ. ಈ ವರ್ಷವು ಅನೇಕ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನು ತಂದಿದೆದ್ದಾರೆ. ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಮುಖ ಕನ್ನಡ ಕಿರುತೆರೆ ಕಲಾವಿದರ ಯಾರು ಹಾಗೂ ಅವರ ವೈವಾಹಿಕ ಜೀವನದ ವಿವರಗಳನ್ನು ಇದೀಗ ನೋಡೋಣ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು, Kannada Artists enter the Marriage, News Update Kannada, Kannada Artists Who got married in 2025, Kannada serial Actor Marriage Pictures
2025ರಲ್ಲಿ ಮದುವೆಯಾದ ಕಲಾವಿದರ ಲಿಸ್ಟ್ ದೊಡ್ಡದಾಗಿದ್ದು, ಇದರಲ್ಲಿ ವೈಷ್ಣವಿ ಗೌಡ, ದೀಪ್ತಿ ಮಾನೆ, ರಜನಿ, ಮೇಘಾ ಶೆಣೈ, ಅರುಣ್ ಅಗಸ್ತ್ಯ, ಯದುಶ್ರೇಷ್ಠ, ಶಮಂತ್ ಗೌಡ, ಶ್ರೀರಾಮ್, ಗಜೇಂದ್ರ ಮರಸಣಿಗೆ, ಮೇಘಶ್ರೀ ಗೌಡ ಮತ್ತು ಮೇಘನಾ ಶಂಕರಪ್ಪ ಸೇರಿದಂತೆ ಹನ್ನೊಂದು ಪ್ರಮುಖ ಕಲಾವಿದರು ಇದ್ದಾರೆ. ಇನ್ನು ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮತ್ತು ಅವರ ಹಿನ್ನಲೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ಕನ್ನಡ ಕಿರುತೆರೆತ ನಟ-ನಟಿಯರ ವೈವಾಹಿಕ ಜೀವನದ ವಿವರಗಳು:
ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರ:

ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಮನೆಮಾತಾದ ನಟಿ ವೈಷ್ಣವಿ ಗೌಡ ಅವರ ವಿವಾಹವು ಈ ವರ್ಷದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಅವರು ಜೂನ್ 4 ರಂದು ಅನುಕೂಲ್ ಮಿಶ್ರಾ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೈಷ್ಣವಿ ಅವರ ವಿವಾಹದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿದೆ.
ದೀಪ್ತಿ ಮಾನೆ ಮತ್ತು ರೋಹನ್:

ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟಿ ದೀಪ್ತಿ ಮಾನೆ ಅವರು ನವೆಂಬರ್ 7ರಂದು ರೋಹನ್ ಎಂಬುವವರನ್ನು ಮದುವೆಯಾದರು. ದೀಪ್ತಿ ಮಾನೆ ಅವರು ಕಿರುತೆರೆಯಲ್ಲಿ ಪೋಷಕ ಪಾತ್ರಗಳ ಮೂಲಕವೂ ಗಮನ ಸೆಳೆದಿದ್ದರು.
ರಜಿನಿ ಮತ್ತು ಅರುಣ್ ವೆಂಕಟೇಶ್:

ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಜನಪ್ರಿಯತೆಯನ್ನು ಪಡೆದ ನಟಿ ರಜಿನಿ ಅವರು ನವೆಂಬರ್ 10ರಂದು ಅರುಣ್ ವೆಂಕಟೇಶ್ ಎಂಬುವವರೊಂದಿಗೆ ಸಪ್ತಪದಿ ತುಳಿದರು. ರಜಿನಿ ಅವರು ಹಿಟ್ಲರ್ ಕಲ್ಯಾಣ, ನೀ ಇರಲು ಜೊತೆಯಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ, ಅವರು ಡ್ಯಾನ್ಸ್ ರಿಯಾಲಿಟಿ ಶೋಗಳು ಮತ್ತು ಮಜಾ ಟಾಕೀಸ್ ನಂತಹ ಕಾಮಿಡಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದರು.
ಇದನ್ನ ಓದಿ: Bigg Boss 12 No Elimination, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್, Bigg Boss Kannada, BBK12
ಮೇಘಾ ಶೆಣೈ ಮತ್ತು ಭರತ್ ಸಿಂಗ್:

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ನಾಯಕ ಗೌತಮ್ ಅವರ ತಂಗಿ ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ಅವರು ನವೆಂಬರ್ 12ರಂದು ಭರತ್ ಸಿಂಗ್ ಅವರೊಂದಿಗೆ ವಿವಾಹವಾದರು. ಧಾರಾವಾಹಿಯ ಮೂಲಕ ಸದ್ಯಕ್ಕೆ ಹೆಚ್ಚು ಜನಮನ್ನಣೆ ಗಳಿಸುತ್ತಿರುವ ಮೇಘಾ ಅವರ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ಸಹ ಈ ವರ್ಷದ ವಿಶೇಷವಾಗಿದೆ.
ಅರುಣ್ ಕುಮಾರ್ ಮತ್ತು ರೀತಿಕಾ ಅಶೋಕ್:

ಕನ್ನಡ ಕಿರುತೆರೆಯ ಜನಪ್ರಿಯ ನಟ ಅರುಣ್ ಕುಮಾರ್ ಅವರು ನವೆಂಬರ್ 30ರಂದು ರೀತಿಕಾ ಅಶೋಕ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದರು. ಅರುಣ್ ಕುಮಾರ್ ಅವರು ಮಿನಿಟ್, ನನ್ನರಸಿ ರಾಧೆ, ಮತ್ತು ನೀನಾದೇನಾ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಯದುಶ್ರೇಷ್ಟ ಮತ್ತು ವಿಶಾಖ ಹೇಮಂತ್:

ಕಲರ್ಸ್ ಕನ್ನಡ ವಾಹಿನಿಯ ಮಿಥುನ ರಾಶಿ ಧಾರಾವಾಹಿಯ ಮೂಲಕ ಗುರುತಿಸಿಕೊಂಡ ನಟ ಯದುಶ್ರೇಷ್ಟ ಅವರು ಜುಲೈ 14ರಂದು ಭರತನಾಟ್ಯ ಕಲಾವಿದೆ ವಿಶಾಖ ಹೇಮಂತ್ ಅವರೊಂದಿಗೆ ಮದುವೆಯಾದರು. ರಂಗಭೂಮಿ ಕಲಾವಿದರೂ ಆಗಿರುವ ಯದುಶ್ರೇಷ್ಟ ಅವರ ವಿವಾಹವು ಕಲಾತ್ಮಕ ಲೋಕದ ಸಂಗಮವಾಗಿತ್ತು.
ಶಮಂತ್ ಗೌಡ ಮತ್ತು ಮೇಘನಾ:

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟ ಶಮಂತ್ ಗೌಡ ಅಲಿಯಾಸ್ ಶಮಂತ್ ಬ್ರೋ ಗೌಡ ಅವರು ಮೇ 17ರಂದು ಮೇಘನಾ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಮಂತ್ ಗೌಡ ಅವರು ಬಿಗ್ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಸಹ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಮೇಘಶ್ರೀ ಗೌಡ ಮತ್ತು ಪುರಂದರ:

ಕನ್ನಡ ಕಿರುತೆರೆಯಲ್ಲಿ ವಿಲನ್ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮೇಘಶ್ರೀ ಗೌಡ ಅವರು ಫೆಬ್ರುವರಿ 23ರಂದು ಪುರಂದರ ಎಂಬುವವರನ್ನು ಮದುವೆಯಾಗುವ ಮೂಲಕ ಹೊಸ ಜೀವನವನ್ನು ಆರಂಭಿಸಿದರು. ಇವರು ಸತ್, ಮೈನಾ, ನಿನ್ನ ಜೊತೆ ನನ್ನ ಕಥೆ, ಪುಣ್ಯವತಿ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಮೇಘನಾ ಶಂಕರಪ್ಪ ಮತ್ತು ಜಯಂತ್:

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾರಾಮ ಧಾರಾವಾಹಿಯ ನಟಿ ಮೇಘನಾ ಶಂಕರಪ್ಪ ಅವರು ಫೆಬ್ರುವರಿ 9ರಂದು ಜಯಂತ್ ಅವರೊಂದಿಗೆ ಅದ್ದೂರಿ ವಿವಾಹವಾದರು.
ಗಜೇಂದ್ರ ಮರಸಣಿಗೆ ಮತ್ತು ಶ್ವೇತಾ:

ಕಲರ್ಸ್ ಕನ್ನಡ ವಾಹಿನಿಯ ಯಜಮಾನ ಧಾರಾವಾಹಿಯಲ್ಲಿ ನಟಿಸುತ್ತಿರುವ ಗಜೇಂದ್ರ ಮರಸಣಿಗೆ ಅವರು ಮೇ 16ರಂದು ಶ್ವೇತಾ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು. ಇವರು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಜೊತೆಗೆ ಪುಟ್ಟಕ್ಕನ ಮಕ್ಕಳು, ಅಣ್ಣ ತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಮುಂತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಶ್ರೀರಾಮ್ ಮತ್ತು ಸ್ಪೂರ್ತಿ:

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಟ ಶ್ರೀರಾಮ್ ಅವರು ಡಿಸೆಂಬರ್ 1ರಂದು ಸ್ಪೂರ್ತಿ ಎಂಬುವವರೊಂದಿಗೆ ಮದುವೆಯಾದರು.
ಒಟ್ಟಾರೆಯಾಗಿ, 2025ನೇ ಸಾಲಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ಕಲಾವಿದರುಗಳು. ಇವರಲ್ಲಿ ನಿಮಗೆ ಇಷ್ಟವಾದ ಜೋಡಿ ಯಾವುದೆಂದು ಕಾಮೆಂಟ್ ಮಾಡಿ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು, Kannada Artists enter the Marriage, News Update Kannada, Kannada Artists Who got married in 2025, Kannada serial Actor Marriage Pictures, husband and wife of kannada serial actors, nandini serial actress nithya ram marriage, kannada serial actress husband
