ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಬಾಕಿ ಇರುವ 21ನೇ ಕಂತಿನ ಹಣ ಇದೀಗ ಜಮಾ ಆಗಿದ್ದು, ಇನ್ನು ಕೆಲವರಿಂದ ಯೋಜನೆ ಬಂದಿಲ್ಲ. ಇನ್ನು ಈ ಯೋಜನೆಯ ಹಣ ಬಾರದೆ ಇರುವುದಕ್ಕೆ ಕೆಲ ಮುಖ್ಯ ಕಾರಣಗಳಿವೆ. ಯಾಕೆ ಈ ಯೋಜನೆ ಹಣ ಬಂದಿಲ್ಲ. ಇನ್ನು ಈ ಗೃಹಲಕ್ಷ್ಮೀ ಯೋಜನೆ ಹಣ ಬರಲು ಎನು ಮಾಡಬೇಕು ಎನ್ನುವುದನ್ನ ಇದೀಗ ನೋಡೋಣ. ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಮತ್ತು ಗೃಹ ಲಕ್ಷ್ಮೀ ಯೋಜನೆಯ ಫಲಾನುಬಾವಿಗಳಿಗೆ ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ.
ಗೃಹಲಕ್ಷ್ಮೀ ಹಣ ಬರದಿದ್ದರೆ ಶಾಕ್ ಆಗ್ಬೇಡಿ! ಏಕೆ ಬಂದಿಲ್ಲ? ಇಲ್ಲಿದೆ 5 ಮುಖ್ಯ ಕಾರಣಗಳು, Gruhalakshmi Scheme Update, Congress, ಗೃಹಲಕ್ಷ್ಮೀ ಯೋಜನೆ 21ನೇ ಕಂತು ಜಮಾ, Congress Garantee Scheme
ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದು. ಈ ಯೋಜನೆಯ ಮೂಲಕ ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳು ಸಿಗುತ್ತವೆ. ಇಲ್ಲಿಯವರೆಗೆ ಒಟ್ಟಾರೆಯಾಗಿ 20 ಕಂತಿನವರೆಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗಿದೆ. ಅಂದರೆ ಒಟ್ಟಾರೆಯಾಗಿ 40,000 ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನೀಡಲಾಗಿದೆ. ಇವಾಗ 21, 22, 23 ಮತ್ತು 24ನೇ ಕಂತಿನ ಹಣವನ್ನು ನೀಡಬೇಕಾಗಿರುವುದು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿದೆ.
ಇದನ್ನು ಓದಿ: ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ – Pension Scheme
ಇನ್ನು ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಜುಲೈ ತಿಂಗಳಲ್ಲಿ ನಾವು ಒಂದು ಕಂತಿನ ಹಣ ಜಮಾ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಯಾರಿಗೂ ಕೂಡ ಯೋಜನೆ ಹಣ ಜಮಾ ಮಾಡಲಾಗಿಲ್ಲ. ಅದಾದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಜಮಾ ಆಗುತ್ತೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು ನಾವು ಆಗಸ್ಟ್ ತಿಂಗಳಿನಲ್ಲಿ 2 ಕಂತಿನ ಹಣವನ್ನು ಜಮಾ ಮಾಡುತ್ತೇವೆ ಅಂತ ಹೇಳಿದ್ರು. ಆದರೆ ಇದೀಗ 21ನೇ ಕಂತಿನ ಹಣವನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆ ಹಣ ಬರದೇ ಇರಲು ಕಾರಣಗಳು:
ಇದೀಗ 21ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಇಲ್ಲಿ ತುಂಬಾ ಜನರಿಗೆ ಯೋಜನೆ ಹಣ ಇನ್ನು ಕೂಡ ಬಂದಿಲ್ಲ. ಇನ್ನು ಯಾರಿಗೆಲ್ಲ ಯೋಜನೆ ಹಣ ಜಮಾ ಆಗುತ್ತಿದೆ ಎನ್ನುವುದನ್ನ ನೋಡುವುದಾದರೆ, ಜೂನ್ ತಿಂಗಳಿನಲ್ಲಿ ಯಾರಿಗೆಲ್ಲ ಯೋಜನೆ ಹಣ ಜಮಾ ಆಗುತ್ತೋ, ಅವರುಗಳಿಗೆ ಮೊದಲು ಜಮಾ ಆಗುತ್ತೆ. ಇನ್ನು ಯೋಜನೆ ಹಣ ಜಮಾ ಆಗದೆ ಇರಲು ಮುಖ್ಯ ಕಾರಣಗಳು,
- E-KYC ಅಪ್ಡೇಟ್: ನಿಮ್ಮ ಬ್ಯಾಂಕ್ ಖಾತೆಯ KYC ಯನ್ನು ಅಪ್ಡೇಟ್ ಮಾಡಬೇಕು. ಹೌದು ನಿಮ್ಮ E-KYC ಅಪ್ಡೇಟ್ ಆಗದೆ ಇದ್ದಲ್ಲಿ ನಿಮಗೆ ಬರಬೇಕಾದ ಯೋಜನೆ ಹಣ ಪೆಂಡಿಂಗ್ ನಲ್ಲಿ ಇರುತ್ತದೆ. ಆದ್ದರಿಂದ ಮೊದಲು E-KYC ಅಪ್ಡೇಟ್ ಮಾಡಿ.
- ಆಧಾರ್ ಬ್ಯಾಂಕ್ ಅಕೌಂಟ್ ಲಿಂಕ್: ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗದೆ ಇರುವುದರಿಂದ ನಿಮಗೆ ಬರಬೇಕಾದ ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಕಂತುಗಳು ನಿಮ್ಮ ಖಾತೆಗೆ ಬರುತ್ತೆ. ಆದ್ದರಿಂದ ಮೊದಲು ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ
- ಹೆಸರು ಬದಲಾವಣೆ: ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗು ಬ್ಯಾಂಕ್ ಪಾಸ್ಬುಕ್ ನಲ್ಲಿ ಇರುವ ಬೇರೆ ಬೇರೆ ಇರುವುದರಿಂದ ನಿಮಗೆ ಬರಬೇಕಾದ ಯೋಜನೆ ಹಣ ಫ್ರೀಜ್ ನಲ್ಲಿ ಇರುತ್ತದೆ. ಮೊದಲು ಅದನ್ನ ಸರಿಪಡಿಸಿಕೊಳ್ಳಿ.
- ಯಾವುದೇ ವಹಿವಾಟು ಇಲ್ಲದಿರುವುದು: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಿಂದಿನ ಆರು ತಿಂಗಳಲ್ಲಿ ಯಾವುದೇ ವಹಿವಾಟು ಆಗದೆ ಇರುವುದು ಅಂದ್ರೆ ಯಾವುದೇ ಟ್ರಾನ್ಸ್ಯಾಕ್ಷನ್ ಮಾಡದೇ ಇರುವುದರಿಂದ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಹೊಂದಿರುತ್ತದೆ. ಅದನ್ನು ಮೊದಲು ಸಕ್ರಿಯಗೊಳಿಸಿಕೊಂಡರೆ ನಿಮಗೆ ಬರಬೇಕಾದ ಎಲ್ಲಾ ಪೆಂಡಿಂಗ್ ಕಂತುಗಳು ಬರುತ್ತದೆ.
ಇದು ಕೆಲ ಮುಖ್ಯ ಕಾರಣಗಳಾಗಿರುತ್ತದೆ. ಮೊದಲು ಅದನ್ನ ಸರಿಪಡಿಸಿಕೊಳ್ಳಿ.
ಇದನ್ನು ಓದಿ: ರಾಜ್ಯದ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಗುಡ್ ನ್ಯೂಸ್, ಪಡಿತರ ಜೊತೆಗೆ ಈ ವಸ್ತುಗಳು ಫ್ರೀ, Government Scheme 2025
ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
ಗೃಹಲಕ್ಷ್ಮೀ ಹಣ ಬರದಿದ್ದರೆ ಶಾಕ್ ಆಗ್ಬೇಡಿ! ಏಕೆ ಬಂದಿಲ್ಲ? ಇಲ್ಲಿದೆ 5 ಮುಖ್ಯ ಕಾರಣಗಳು, Gruhalakshmi Scheme Update, Congress, ಗೃಹಲಕ್ಷ್ಮೀ ಯೋಜನೆ 21ನೇ ಕಂತು ಜಮಾ, Congress Garantee Scheme
