ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿಯೊಂದು ಸರ್ಕಾರದಿಂದ ಬಂದಿದೆ. ಹೌದು ಮಹಿಳೆಯರಿಗೆ ಸರ್ಕಾರದಿಂದ 4000 ಹಣ ದೀಪಾವಳಿ ದಿನದಂದು ನೇರವಾಗಿ ಖಾತೆಗಳಿಗೆ ಜಮಾ ಆಗುತ್ತಿದೆ. ಹೌದು ದೀಪಾವಳಿ ಹಬ್ಬದ ದಿನದಂದು ಗೃಹಲಕ್ಷ್ಮೀ ಹಣ ವರ್ಗಾವಣೆ ಆಗಲಿದೆ. ಆದ್ದರಿಂದ ಇದರ ಬಗ್ಗೆ ಅಂದ್ರೆ ಯಾವ ದಿನದಂದು, ಯಾವ ಯಾವ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
Good News Diwali festival for women, Gruhalaxmi Scheme Released, Congress Guarantee Scheme, Deepavali festival New Scheme, Congress, ಮಹಿಳೆಯರಿಗೆ ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ದೊಡ್ಡ ಸರ್ಪ್ರೈಸ್, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್,

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ, ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳು ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 11 ಕಂತುಗಳನ್ನ ನೀಡಲಾಗಿತ್ತು.ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ ಹಣ ಜಮಾ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅದೇ ರೀತಿ ಅಕ್ಟೋಬರ್ ತಿಂಗಳಲ್ಲಿ 2 ಕಂತುಗಳು ಅಂದ್ರೆ ಜುಲೈ ತಿಂಗಳ 12ನೇ ಕಂತು ಹಾಗೂ ಆಗಸ್ಟ್ ತಿಂಗಳ 13ನೇ ಕಂತು ಒಂದೇ ತಿಂಗಳಲ್ಲಿ ನಾವು ಇದಿದ್ದೇವೆ. ಇನ್ನು ನಾವು 14 ಹಾಗೂ 15ನೇ ಕಂತು ನೀಡಬೇಕಾಗಿದೆ. ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ನವಂಬರ್ ತಿಂಗಳಲ್ಲಿ 2 ಕಂತು ನೀಡಲಿದ್ದೇವೆ ಎಂದು ಕೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆ 13 ಕಂತುಗಳು ಅಂದ್ರೆ ಜುಲೈ ತಿಂಗಳ ಕಂತಿನವರೆಗೆ ಬಂದಿದೆ. ಒಟ್ಟಾರೆಯಾಗಿ 26,000 ರೂ. ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ 14 ಹಾಗೂ 15ನೇ ಕಂತಿನ ಹಣ ನವಂಬರ್ ತಿಂಗಳಲ್ಲಿ ನೀಡಲಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಬಂದಿಲ್ಲ:
ತುಂಬಾ ಜನ ಹೇಳುತ್ತಿರುವ ವಿಷಯ ಏನೆಂದರೆ ನಮಗೆ ಇನ್ನು ಕೂಡ ಗೃಹಲಕ್ಷ್ಮೀ ಹಣ ಬಂದಿಲ್ಲ ಅಂತಾ. ಇನ್ನು ರಾಜ್ಯದಲ್ಲಿ ಕೆಲವರಿಗೆ ಈ ಯೋಜನೆ ಹಣ ಬಂದಿದ್ರೆ ಇನ್ನು ಕೆಲವರಿಗೆ ಬಂದಿಲ್ಲ. ಇನ್ನು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಸಂಖ್ಯೆ 1.22 ಕೋಟಿ. ರಾಜ್ಯ ಸರ್ಕಾರಗೃ ಹಲಕ್ಷ್ಮೀ ಯೋಜನೆಗೆ 5000 ಕೋಟಿ ಹಣ ಬಿಡುಗಡೆ ಮಾಡಿದೆ. ಗೃಹಲಕ್ಷ್ಮೀ ಯೋಜನೆ ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತೆ. ಇನ್ನು DBT ಗೆ ಸರ್ಕಾರ ಟ್ರೆಸರಿಗೆ ನೀಡಿದ ನಂತರ DBT ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತೆ. ಇನ್ನು ವರ್ಗಾವಣೆ ಆಗುವ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ಸಮಯದಲ್ಲಿ ಜಮಾ ಆಗುವುದಿಲ್ಲ. ದಿನಕ್ಕೆ ಇಂತಿಷ್ಟು ಸಂಖ್ಯೆ ಜನರಿಗೆ ಅಂತ ಪ್ರತಿದಿನ ವರ್ಗಾವಣೆ ಆಗುತ್ತಾ ಇರುತ್ತದೆ.
ಇಲ್ಲಿ ಇನ್ನೊದು ಮುಖ್ಯವಾದ ವಿಚಾರ ಎನೆಂದರೆ ಇಲ್ಲಿ ಒಂದು ಸಮಸ್ಯೆ ಎದುರಾಗುತ್ತೆ. ಇಲ್ಲಿ ಕೆಲವೊಮ್ಮೆ INCOME TAX ಹಾಗೂ GST Department ಕಂಡೆಯಿಂದ ಕೆಲವೊಮ್ಮೆ hold ಆಗುತ್ತದೆ. ಯಾಕೆಂದ್ರೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಹೆಚ್ಚುಬಾರಿ ಹಣ ವಿನಿಮಯ ( transaction ) ಮಾಡುವ ಕೆಲ ಕಾರಣದಿಂದ ಅವರಿಗೆ ವರ್ಗಾವಣೆ ಮಾಡಬೇಕಾದ ಹಣ Hold ಆಗುತ್ತೆ. 1.20 ಲಕ್ಷಕ್ಕೂ ಹೆಚ್ಚಿನ transaction ಆಗಿದ್ದಲ್ಲಿ ಕೆಲವೊಮ್ಮೆ Hold ಆಗುತ್ತೆ. ಆಗ ಸರ್ಕಾರ ಅದನ್ನ ಮತ್ತೊಮ್ಮೆ verify ಮಾಡಿ, manually ಮತ್ತೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಯಾವಾಗ ಗೃಹಲಕ್ಷ್ಮೀ ಹಣ ಬರುತ್ತೆ? ಕೊನೆಯ ದಿನಾಂಕ ಯಾವುದು?
ಈಗಾಗಲೇ ತುಂಬಾ ಜನರಿಗೆ ಗೃಹಲಕ್ಷ್ಮೀ ಯೋಜನೆ 12 ಹಾಗೂ 13ನೇ ಕಂತಿನ ಹಣ ವರ್ಗಾವಣೆ ಆಗಿದೆ. ಇನ್ನು ಕೆಲವರಿಗೆ ಇನ್ನು ಬಂದಿಲ್ಲ. ಅದ್ದರಿಂದ ಯಾರು ಕೂಡ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೆಲ ದಿನಗಳವರೆಗೆ ತಡವಾಗಬಹುದು. ಆದರೆ ಎಲ್ಲಾ ಫಲಾನುಭವಿಗಳಿಗೆ ಯೋಜನೆ ಹಣ ಬಂದೆ ಬರುತ್ತದೆ.
ಇನ್ನು ಸರ್ಕಾರ ಗೃಹಲಕ್ಷ್ಮೀ ಯೋಜನೆ ಅಕ್ಟೋಬರ್ ತಿಂಗಳಿನಲ್ಲಿ 2 ಕಂತುಗಳು ಅಂದ್ರೆ 12ನೇ ಕಂತು ಹಾಗೂ 13ನೇ ಕಂತು ಜಮಾ ಆಗಿದೆ. ಒಟ್ಟಾರೆಯಾಗಿ 4000 ಹಣ ಅಕ್ಟೋಬರ್ ತಿಂಗಳಿನಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿದೆ. ಇನ್ನು ದೀಪಾವಳಿ ಪ್ರಯುಕ್ತ 2 ಕಂತು ಅಂದ್ರೆ 4000 ಹಣ ಬಿಡುಗಡೆ ಆಗಲಿದೆ.
ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ
Good News Diwali festival for women, Gruhalaxmi Scheme Released, Congress Guarantee Scheme, Deepavali festival New Scheme, Congress, ಮಹಿಳೆಯರಿಗೆ ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ದೊಡ್ಡ ಸರ್ಪ್ರೈಸ್, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್
