Bigg Boss Kannada: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಕನ್ನಡದಲ್ಲಿ ಅತೀ ಹೆಚ್ಚು TRP ಯನ್ನ ತಂದು ಕೊಡುವ ಶೋ ಇದಾಗಿದೆ. ಇನ್ನು ಹಿಂದಿನ ಸೀಸನ್ ನಲ್ಲಿ ಬಿಗ್ ಬಾಸ್ ತಂಡ ಅತೀ ಹೆಚ್ಚು TRP ಯನ್ನ ತಂದು ಕೊಟ್ಟು ಸಾಧನೆಯನ್ನ ಮಾಡಿತ್ತು. ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 OTT ಸೀಸನ್ ಹಾಗೂ 1 ಮಿನಿ ಸೀಜನ್ ಅನ್ನು ಮುಗಿಸಿರುವ ಬಿಗ್ ಬಾಸ್ ತಂಡ 11ನೇ ಸೀಸನ್ ಗೆ ಬಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
Bigg Boss Kannada, ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಬರುವ ಸ್ಪರ್ಧಿಗಳ ಪಟ್ಟಿ ಬಿಡುಗಡೆ, BBK11, Bigg Boss Season 11 Contestant List, ಲೀಕ್ ಆಯ್ತಾ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್
ಒಂದು ಕಡೆ ಬಿಗ್ ಬಾಸ್ ತಂಡ ಮನೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ, ಇನ್ನೊಂದು ಕಡೆ ಈಗಾಗಲೇ ಪ್ರೊಮೋ ಶೂಟಿಂಗ್ ಅನ್ನು ಕೂಡ ಮುಗಿಸಿದೆ. ಇನ್ನು ಈ ಬಾರಿಯ ನಿರೂಪಕರು ಬದಲಾಗಲಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಾ ಇತ್ತು. ಆದರೆ ಪ್ರೊಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ರವರು ಬಾಗಿಯಾಗಿರುವುದರಿಂದ ಈ ಸಾಲವು ಕೂಡ ಕಿಚ್ಚ ಸುದೀಪ್ ರವರೇ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಿಗ್ ಬಾಸ್ ತಂಡ ಈ ಸಲದ ಸೀಸನ್ ಗಾಗಿ ಸ್ಪರ್ಧಿಗಳ ಹುಡುಕಾಟದ ಪ್ರಕ್ರಿಯೆಯನ್ನ ನಡೆಸುತ್ತಿದೆ.

Bigg Boss season 11 Contestants List
ಈ ಸಲದ Bigg Boss ಕಾರ್ಯಕ್ರಮ ನಡೆಸಲು ಭರ್ಜರಿ ತಯಾರಿ ನಡೆಯುತ್ತಿದ್ದು, 300 ಕ್ಕೂ ಹೆಚ್ಚು ತಂತ್ರಜ್ಞರೊಂದಿಗೆ ದೊಡ್ಮನೆ ತಯಾರಿಯಾಗುತ್ತಿದೆ. ಇವೆಲ್ಲದರ ನಡುವೆ ಬಿಗ್ ಬಾಸ್ ತಂಡ ಸ್ಪರ್ಧಿಗಳ ಹುಡುಕಾಟ ಪ್ರಕಿಯೆಯಲ್ಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಬರ್ತಾರೆ ಅನ್ನೋದನ್ನ ನೋಡುವುದಾದರೆ,
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಈ ಬಾರಿಯ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಸೀಸನ್ 11 ಅಕ್ಟೋಬರ್ 3ನೇ ವಾರದಿಂದ ಆರಂಭವಾಗಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ಯರು ಬರುತ್ತಾರೆ ಅನ್ನೋದನ್ನ ನೋಡೊದಾದ್ರೆ, ಸೋಷಿಯಲ್ ಮೀಡಿಯಾ ಗಳಲ್ಲಿ ಕೆಲವು ಕಲಾವಿದರ ಹೆಸರುಗಳು ಕೇಳಿಬರುತ್ತಿದೆ. ಇನ್ನು ಬಿಗ್ ಬಾಸ್ ತಂಡ ಎಲ್ಲಾ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಿನೆಮಾ ಕ್ಷೇತ್ರದಿಂದ, ಕಿರುತೆರೆಯ ಜನಪ್ರಿಯ ನಟ ನಟಿಯರು, ವಿವಾದಕ್ಕೆ ತುತ್ತಾದ ಕೆಲವರು, ಟಿವಿ ಆಂಕರ್, ರಿಲ್ಸ್ ಹಾಗು Instagram ನಲ್ಲಿ ಪ್ರಸಿದ್ಧಿ ಪಡೆದಿರುವವರು, ಗಾಯನ ಕ್ಷೇತ್ರದಿಂದ, ಟ್ರೊಲ್ ಗೆ ಗುರಿಯಾದವರು, ನ್ಯೂಸ್ ಚಾನಲ್ ನ ಕೆಲ ಆಂಕರ್, ಹಸ್ಯನಟರು ಹೀಗೆ ಅನೇಕ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಈ ಬಾರಿ ಇವರುಗಳೂ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಯಾರ್ಯಾರು ದೊಡ್ಮಾನೆಗೆ ಬರಲಿದ್ದಾರೆ ಅನ್ನೋದನ್ನ ನೋಡೊದಾದ್ರೆ, ಮೊಕ್ಷಿತಾ ಪೈ, ನಟ ಚೇತನ್ ಚಂದ್ರ, ಸುಕೃತಾ, ನಟ ಸುನಿಲ್ ರಾವ್, ಶರ್ಮಿಳಾ ಗೌಡ, ತರುಣ್ ಚಂದ್ರ, ಅಶ್ವಿನಿ ಗೌಡ, ವರ್ಷಾ ಕಾವೇರಿ, ತನ್ವಿ ಬಾಲರಾಜ್, ನಟ ಆಕಾಶ್, ಪಂಕಜ್ ನಾರಾಯಣ್, ಹಾಸ್ಯನಟ ಚಂದ್ರಪಭಾ, ಗಾಯಕಿ ಆಶಾ ಭಟ್, ರೀಲ್ಸ್ ರೇಷ್ಮಾ, ನಟಿ ಭವ್ಯಾ ಗೌಡ ಹೀಗೆ ಅನೇಕರುಗಳ ಹೆಸರುಗಳು ಕೇಳಿ ಬರುತ್ತಾ ಇದೆ. ಇವರುಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದು, ಎಲ್ಲೆಡೆ ತುಂಬಾ ಚರ್ಚೆಯಾಗುತ್ತಿದೆ.

ಇವರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಹಾಗು ಬರದೆ ಇರಬಹುದು. ನಿಮ್ಮ ಪ್ರಕಾರ ಇವರುಗಳಲ್ಲಿ ಯಾರು ಬರಬೇಕು ಹಾಗು ಬರಬಾರದು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಬಿಗ್ ಬಾಸ್ ಬಗ್ಗೆ ಯಾವುದೇ ಮಾಹಿತಿ ಬಂದರೆ ನಾವು ನಿಮಗೆ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.
Bigg Boss Kannada, ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಬರುವ ಸ್ಪರ್ಧಿಗಳ ಪಟ್ಟಿ ಬಿಡುಗಡೆ, BBK11, Bigg Boss Season 11 Contestant List, ಲೀಕ್ ಆಯ್ತಾ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!
