ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು, ಇದೀಗ ಅಂತ್ಯ ಕಂಡಿದೆ. ಇನ್ನು ಈ ಸೀಸನ್ ನ ವಿನ್ನರ್ ಆಗಿ ಹನುಮಂತ ಆಗಿದ್ದರೆ, ರನ್ನರ್ ಅಪ್ ಆಗಿ ತ್ರಿವಿಕ್ರಮ್ ಆಯ್ಕೆಯಾಗಿದ್ದಾರೆ. ಇನ್ನು ಕಿಚ್ಚ ಸುದೀಪ್ ರವರು 11 ಸೀಸನ್ ಗಳನ್ನ ನಿರೂಪಕರಾಗಿ ಬಿಗ್ ಬಾಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನ ಹೊಸ್ಟ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಇನ್ನು ಇದರ ನಡುವೆ ಇದೀಗ ಬಿಗ್ ಬಾಸ್ OTT Season ಆರಂಭದ ಬಗ್ಗೆ ಜೋರಾಗಿ ನಡಿಯುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೀಗ ನೋಡೋಣ.
Bigg Boss Kannada OTT Season 2, ಬಿಗ್ ಬಾಸ್ ಕನ್ನಡ OTT 2 ಶುರು, ನಿರೂಪಣೆ ಮಾಡೋದು ಯಾರು? BBK OTT 2, Colors Kannada
ಬಿಗ್ ಬಾಸ್ ಕನ್ನಡ OTT 2:
ಬಿಗ್ ಬಾಸ್ ಕನ್ನಡದಲ್ಲಿ ಇಲ್ಲಿಯವರೆಗೆ 11 ಸೀಸನ್, ಒಂದು OTT ಸೀಸನ್ ಹಾಗೂ ಒಂದು ಮಿನಿ ಸೀಸನ್ ಗಳನ್ನ ಮುಗಿಸಿದೆ. ಇನ್ನು ಇದರ ನಿರೂಪನೆ (Host) ಕಿಚ್ಚ ಸುದೀಪ್ ರವರು ಮಾಡಿದ್ದಾರೆ. ಇನ್ನು ಮುಂದಿನ ಸೀಸನ್ ನಲ್ಲಿ ಕಿಚ್ಚ ಸುದೀಪ್ ರವರು ನಿರೂಪಣೆ ಮಾಡುವುದಿಲ್ಲ ಎನ್ನುವಂತಹ ಸುದ್ದಿ ಕೂಡ ಬಂದಿತ್ತು. ಹಾಗೂ ಇದರ ಬಗ್ಗೆ ಕಿಚ್ಚ ಸುದೀಪ್ ರವರೆ ಸ್ಪಷ್ಟನೆಯೊಂದನ್ನ ನೀಡಿದ್ದಾರೆ. ಇದು ಕಿಚ್ಚನ ಅಭಿಮಾನಿಗಳಿಗೆ ಸ್ವಲ್ಪ ಬೇಸರದ ಸಂಗತಿ. ಇನ್ನು ಇದರ ಜೊತೆಗೆ ಬಿಗ್ ಬಾಸ್ ಸೀಸನ್ 12 ಆರಂಭವಾಗುತ್ತೆ ಅಂದುಕೊಳ್ಳುತ್ತಿದ್ದರು. ಆದರೆ ಇದೀಗ ಬಿಗ್ ಬಾಸ್ ಕಡೆಯಿಂದ ಒಂದು ಮಾಹಿತಿ ಕೂಡ ಕೇಳಿಬರುತ್ತಿದೆ. ಅದುವೇ ಬಿಗ್ ಬಾಸ್ ನ OTT ಸೀಸನ್ ಆರಂಭವಾಗಳಿದೆ. ಒಂದು ಇನ್ನು OTT ಸೀಸನ್ 2 ನ ನಿರೂಪಣೆ ಯಾರು ಮಾಡುತ್ತಾರೆ ಎನ್ನುವುದನ್ನ ನೋಡೋಣ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನರ ಹೆಸರುಗಳು ಕೇಳಿಬರುತ್ತಿದೆ. ಇನ್ನು ಇದರ ಕೆಳಗೆ ಒಂದು ವೋಟಿಂಗ್ ಪೋಲ್ ಇದೆ. ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ OTT 2ರ ನಿರೂಪಣೆ (Host) ಮಾಡುತ್ತಾರೆ ಎನ್ನುವುದನ್ನ ವೋಟ್ ಮಾಡಿ.
ಬಿಗ್ ಬಾಸ್ ಮುಂದಿನ ನಿರೂಪಣೆ ಯಾರು ಮಾಡ್ತಾರೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡಂತೆ ಹನುಮಂತ ಗೆದ್ದು ಬೀಗಿದ್ದಾನೆ. ಇತ್ತ ತ್ರಿವಿಕ್ರಮ್ ಅಭಿಮಾನಿಗಳಿಗೆ ಬೇಸರ ಆಗಿದ್ದರೂ, ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲರು ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೇನು ಕಾರಣ ಎನೆನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ರ ವರೆಗೆ ಕಿಚ್ಚ ಸುದೀಪ್ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನಲ್ಲಿ ನಿರೂಪಣೆ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಮುಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಶೋ ಮುಗಿಯುವುದಕ್ಕೂ ಮುನ್ನವೇ ಮತ್ತೊಮ್ಮೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಅಪ್ಲೋಡ್ ಮಾಡಿದ್ದರು. ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುವುದು ಅನುಮಾನ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕಿಚ್ಚ ಸುದೀಪ್ ರವರ ಅಭಿಮಾನಿಗಳು ಸ್ವಲ್ಪ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
Recent Post:
-
ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, NWKRTC Job 2025, Job Update 2025
-
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment
ಇದೀಗ ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಗಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಬಿಟ್ಟು ಬಿಗ್ ಬಾಸ್ ವೇದಿಕೆ ಮೇಲೆ ಮತ್ತೆ ಇನ್ಯಾರನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯ? ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟಂತಹ ಸುಳಿವು ಎನು? ಅನ್ನುವುದನ್ನ ನೋಡುವುದಾರೆ.
ಕಿಚ್ಚ ಸುದೀಪ್ ಬಿಗ್ ಬಾಸ್‌ನ ಕಳೆದ 11 ಸೀಸನ್‌ಗಳನ್ನು ನಡೆಸಿಕೊಟ್ಟಿದ್ದಾರೆ. ಒಂದು OTT ಸೀಸನ್ ಹಾಗೂ ಒಂದು ಮಿನಿ ಸೀಸನ್ ಗಳನ್ನ ನಡೆಸಿಕೊಟ್ಟಿದ್ದಾರೆ. ಇದೂವರೆಗೂ ಈ ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಬಿಟ್ಟರೆ ಬೇರೆ ಯಾರನ್ನೂ ನಡೆಸಿಕೊಟ್ಟಿಲ್ಲ. ಕಿರುತೆರೆ ವೀಕ್ಷಕರು ಕೂಡ ಕಿಚ್ಚ ಸುದೀಪ್ ಬಿಟ್ಟು ಬೇರೆ ಯಾರನ್ನೂ ಇದುವರೆಗೆ ಊಹಿಸಿಕೊಂಡಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಸ್ಥಾನದಲ್ಲಿ ಯಾರು ಬರಬಹುದು? ಅನ್ನುವಂತಹ ಪ್ರಶ್ನೆಗೆ ಅಷ್ಟು ಸುಲಭಕ್ಕೆ ಉತ್ತರ ಸಿಗೋದೂ ಇಲ್ಲ.
ಅಷ್ಟಕ್ಕೂ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಅಂತ ಹೇಳುತ್ತಿರುವುದು ಯಾಕೆ? ಮುಂದಿನ ಸೀಸನ್ ನಿರೂಪಣೆ ಮಾಡೋದು ಯಾರು? ಈ ಎರಡು ಪ್ರಮುಖ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ರವರು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಸ್ವತಃ ಅವರೇ ಹೇಳಿದ್ದಾರೆ.
ಇನ್ನು ಕಲರ್ಸ್ ಕನ್ನಡ ಟೀಮ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. “ಸುದೀಪ್ ಸರ್ ಅನ್ನು ಬಿಟ್ಟು ಬೇರೆ ಯಾರನ್ನಾದರೂ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದೂವರೆಗೂ ಬೇರೆ ಯಾರ ಬಗ್ಗೆನೂ ಯೋಚನೆಯೂ ಮಾಡಿಲ್ಲ. ಅವರನ್ನು ಕನ್ವಿನ್ಸ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ. ಹೌದು ಕಿಚ್ಚ ಸುದೀಪ್ ಅಷ್ಟು ಸ್ಪಷ್ಟವಾಗಿ ಮಾತಾಡೋರು ಕಾಣಿಸುತ್ತಿಲ್ಲ. ಸ್ಪರ್ಧಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಡೋರು, ತಪ್ಪನ್ನು ತಿದ್ದಿ ಹೇಳೋರು. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರೋರು, ಸ್ಪರ್ಧಿಗಳನ್ನು ನಗಿಸೋರು ಈ ಎಲ್ಲಾ ಪ್ಯಾಕೇಜ್‌ಗಳು ಒಟ್ಟಿಗೆ ಸಿಗೋದು ಸದ್ಯಕ್ಕಂತೂ ಕಷ್ಟ.
ಇವೆಲ್ಲದರ ಮಧ್ಯೆ ಕಿಚ್ಚ ಸುದೀಪ್ ಕನ್ನಡದ ‘ಕೋಟ್ಯಾಧಿಪತಿ’ ಶೋ ನಡೆಸಿಕೊಡುತ್ತಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ ನಿಮ್ಮ ಪ್ರಕಾರ ಎನು ಆಗುತ್ತೆ ಅಂತ ಪ್ರತಿಯೊಬ್ಬರೂ ಕೂಡ ಕಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ OTT ಸೀಸನ್ ನಡೆಸುವುದಕ್ಕೆ ಕಾರಣ ಹೊಸ ನಿರೂಪಕರನ್ನು ಬಿಗ್ ಬಾಸ್ ನಲ್ಲಿ ತರುತ್ತಾ ಇರುವಂತಹ ಒಂದು ಕಾರಣದಿಂದ. ಆದ್ದರಿಂದ ಸೀಸನ್ 12 ಕ್ಕಿಂತ ಮೊದಲು OTT ಸೀಸನ್ 2 ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು OTT ಸೀಸನ್ 2 ಯಾವಾಗ ಬರಲಿದೆ ಎನ್ನುವ ದಿನಾಂಕ ಬಂದ ನಂತರ ಇದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಮುಂದಿನ ದಿನಗಳಲ್ಲಿ ನಾನು ತಿಳಿಸಿಕೊಡುತ್ತೇನೆ.