ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಹೌದು, ಸೆಪ್ಟೆಂಬರ್ 28 ರಿಂದ ಈ ಬಾರಿಯ ಬಿಗ್ ಬಾಸ್ ಆರಂಭವಾಗಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ‘ಬಿಗ್ ಬಾಸ್’ ಆರಂಭಕ್ಕೂ ಮುನ್ನ ಕುತೂಹಲ ಹುಟ್ಟಿಸಿದೆ. ಹೌದು ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ ಮಧ್ಯ ಕೆಲವು ಕಂಟೆಸ್ಟಂಟ್ ಗಳ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಅವರು ಯಾರೆಲ್ಲ ಎನ್ನುವುದನ್ನ ಇದೀಗ ನೋಡೋಣ.
Bigg Boss Kannada 12 Contestants List leaked, ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಗಳ ಲಿಸ್ಟ್ ಲೀಕ್, ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ, BBK12, Bigg Boss Kannada
ಕಿಚ್ಚ ಸುದೀಪ್ (Kiccha Sudeep) ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಇನ್ನಷ್ಟು ಖುಷ್ ಆಗಿಸಿದೆ. ಇನ್ನು ‘ಬಿಗ್ ಬಾಸ್’ ಮೊದಲ ಪ್ರೋಮೋ ಮತ್ತು 2ನೇ ಪ್ರೋಮೋ ರಿಲೀಸ್ ಆಗಿದ್ದು, ಬಿಗ್ ಬಾಸ್ ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದಾರೆ. ಕಲರ್ಸ್ ಕನ್ನಡದ ಆಫೀಸಿಯಲ್ ಪೇಜ್ ಗಳಲ್ಲಿ ಟ್ವಿಟರ್, ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಲಿದೆ. ಕರ್ನಾಟಕದ ವಿವಿಧ ಪ್ರದೇಶ ಸಾಂಸ್ಕೃತಿಕ ಆಚರಣೆಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಕಿಚ್ಚ ಸುದೀಪ್ ಸಖತ್ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ 12ರ ಕಂಟೆಸ್ಟಂಟ್ ಗಳು:
ಬಿಗ್ ಬಾಸ್ ನ ಮೊದಲ ಪ್ರೋಮೋ ಮತ್ತು ಎರಡನೇ ಪ್ರೋಮೋ ರಿಲೀಸ್ ಆದ ಬಳಿಕ ಬಿಗ್ ಬಾಸ್ ಮನೆಗೆ ಹೋಗಲಿರುವ ಸ್ಪರ್ಧಿಗಳ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಅವರುಗಳು ಯಾರ್ಯಾರು ಎನ್ನುವುದನ್ನ ಇದೀಗ ನೋಡೋಣ. ಇನ್ನು ನಿಮ್ಮ ಪೈಕಿ ಯಾರು ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಸ್ವಾತಿ: ಕಿರುತೆರೆಯ ಹಿರಿಯ ನಟಿ ಸ್ವಾತಿ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ. ಇನ್ನು ಇವರು ಅನೇಕ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇವರ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.
ವಿಜಯ್ ಸೂರ್ಯ: ನಟ ವಿಜಯ್ ಸೂರ್ಯ ರವರ ಹೆಸರು ತುಂಬಾನೆ ಕೇಳಿ ಬರುತ್ತಾ ಇದೆ. ಈ ಹಿಂದೆ 2 ಸೀಸನ್ ಗಳಲ್ಲಿ ಇವರಿಗೆ ಬಿಗ್ ಬಾಸ್ ಕಡೆಯಿಂದ ಆಫರ್ ಬಂದಿತ್ತು. ಹಾಗು ಅದನ್ನ ನಿರಾಕರಿಸಿದ್ದರು. ಇನ್ನು ಈ ಬಾರಿಯ ಆಫರ್ ಅನ್ನು ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ.
ಸ್ಪಂದನಾ ಸೋಮಣ್ಣ: ಕನ್ನಡ ಕಿರುತೆರೆಯ ನಟಿ ಸ್ಪಂದನಾ ಸೋಮಣ್ಣ ರವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇವರು ಕೂಡ ಈ ಬಾರಿಯ ಬಿಗ್ಬಾಸ್ ಮನೆಗೆ ಹೋಗಬಹುದು.
ಸಾಗರ್ ಬಿಳಿಗೌಡ: ಕಿರುತೆರೆ ನಟ ಸಾಗರ್ ಬಿಳಿಗೌಡ (Sagar Biligowda) ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಕೇಳಿಬರುತ್ತಿದೆ. ‘ಸತ್ಯ’ ಧಾರಾವಾಹಿಯಲ್ಲಿ ಮಿಂಚಿದ ಸಾಗರ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಇನ್ನಷ್ಟು ಜನರ ಹೆಸರು ಕೇಳಿಬರುತ್ತಿದೆ.
ದಿವ್ಯಾ ವಸಂತ್: ಮಾಜಿ ನ್ಯೂಸ್ ಆಂಕರ್ ಆಗಿರುವ ದಿವ್ಯಾ ವಸಂತ್ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅಭಿಜಿತ್: ಕನ್ನಡದ ಹಿರಿಯ ನಟ ಅಭಿಜಿತ್ ರವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿದೆ.
ಗಿಲ್ಲಿ ನಟ: ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಕಾಣಿಸಿಕೊಂಡಿದ್ದ ಗಿಲ್ಲಿ ನಟ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಒಂದು ರಿಯಾಲಿಟಿ ಶೋ ನಲ್ಲಿಯು ಸಹ ಕಾಣಿಕೊಂಡಿದ್ದರು. ನಿಮ್ಮ ಪ್ರಕಾರ ಇವರು ಬರ್ತಾರಾ ಅಂತಾ ಕಾಮೆಂಟ್ ಮಾಡಿ ತಿಳಿಸಿ.
ಅರವಿಂದ್ ರತನ್: ಅರವಿಂದ್ ರತನ್ ರವರು ವಾಸ್ತು ಎಕ್ಸ್ಪೋರ್ಟ್ ಆಗಿರುತ್ತಾರೆ. ಇವರು ಈ ಬಾರಿಯ ಬಿಗ್ಬಾಸ್ ಮನೆಗೆ ಬರಲಿದ್ದಾರೆ ಎಂದು ಕೇಳಿಬರುತ್ತಿದೆ.
ಬಾಳು ಬೆಳಗುಂದಿ: ಸರಿಗಮಪ ಖ್ಯಾತಿಯ ಬಾಳು ಬೆಳಗುಂದಿ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿ ಬರುತ್ತಿದೆ. ನಿಮ್ಮ ಪ್ರಕಾರ ಇವರು ಬರ್ತಾರಾ ಅಥವಾ ಇಲ್ಲ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ದಿಲೀಪ್ ಶೆಟ್ಟಿ: ನಟ ದಿಲೀಪ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇವರು ಸೀರಿಯಲ್ ಹಾಗೂ ಅನೇಕ ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದಾರೆ.
ಭೂಮಿಕಾ ರಮೇಶ್: ಕಿರುತೆರೆಯ ನಟಿ ಭೂಮಿಕಾ ರಮೇಶ್ ಅವರ ಹೆಸರು ಇದೀಗ ಕೇಳಿ ಬರುತ್ತಿದೆ. ಹೌದು ಇದೀಗ ಇವರ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಇವರು ಸಹ ಈ ಬಾರಿಯ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ.
ತೇಸಜ್: ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಆಗಿರುವ ತೇಜಸ್ ರವರು ಈ ಬಾರಿಯ ಬಿಗ್ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ.
ಶ್ವೇತಾ ಪ್ರಸಾದ: ನಟಿ ಶ್ವೇತಾ ಪ್ರಸಾದ್ ರವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕೂಡ ಒಮ್ಮೆ ಇವರಿಗೆ ಬಿಗ್ ಬಾಸ್ ನ ಆಫರ್ ಕೂಡ ಬಂದಿತ್ತು. ಇನ್ನು ಈ ಬಾರಿಯ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.
R.K. ಚಂದನ್ : ಮಾಂಗಲ್ಯ ತಂತು ನಾನೇನ ಎಂಬ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದ ನಟ R.K. ಚಂದನ್ ರವರು ಈ ಬಾರಿಯ ಬಿಗ್ ಬಾಸ್ ಗೆ ಬರಲಿದ್ದಾರೆ.
ವಾಣಿ : ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಖ್ಯಾತಿ ಗಳಿಸಿರುವ ವಾಣಿ ಯವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
ಇನ್ನು ಇದರ ಬಗ್ಗೆ ಸಂಪೂರ್ಣವಾಗಿರುವ ಮಾಹಿತಿ YouTubeನಲ್ಲಿ ನೀಡಲಾಗಿದೆ. ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಇಲ್ಲಿದೆ ಸ್ಪರ್ಧಿಗಳ ಸಂಪೂರ್ಣ ಲಿಸ್ಟ್ ವೀಡಿಯೋ: Video Link
ಇನ್ನು ಇದಿಷ್ಟು ಕೇವಲ Expected Contestantಗಳ ಲಿಸ್ಟ್ ಆಗಿರುತ್ತದೆ. ಇವರು ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ ತಿಳಿಸಿ
Bigg Boss Kannada 12 Contestants List leaked, ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಗಳ ಲಿಸ್ಟ್ ಲೀಕ್, ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ, BBK12, Bigg Boss Kannada
