ನಮಸ್ಕಾರ ಸ್ನೇಹಿತರೇ, Bigg Boss Kannada Season 11 ಮುಗಿದು ಇದೀಗ 12ನೇ ಸೀಸನ್ ಗೆ ಕಾಲಿಟ್ಟಿದೆ. ‘ಕಿಚ್ಚ ಸುದೀಪ್’ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೆ ಸೆಪ್ಟಂಬರ್ 28 ರಿಂದ ಆರಂಭವಾಗುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಬಿಡುಗಡೆ ಆಗಿದೆ. ಯಾರೆಲ್ಲ ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವುದನ್ನ ಇದೀಗ ತಿಳಿಯೋಣ.
Bigg Boss 12 Contestants List, ಬಿಗ್ ಬಾಸ್ ಕನ್ನಡ ಸೀಸನ್ 12 ಶುರು, Bigg Boss 12ರ ಸ್ಪರ್ಧಿಗಳು ಇವರೇ, BBK12, Kiccha Sudeep
Bigg Boss kannada
‘ಕಿಚ್ಚ’ ಸುದೀಪ್ ಅವರ ಸಾರಥ್ಯದಲ್ಲಿ ಆರಂಭವಾಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕೂಡ ಹುಟ್ಟಿಕೊಂಡಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ? ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಟಾಸ್ಕ್ ಇರಬಹುದು ಎಂಬ ಕುತೂಹಲ ಕೂಡ ಇದೆ. ಸದ್ಯ ಬಿಗ್ ಬಾಸ್ ನ ಬಗ್ಗೆ ಕೆಲ ಅಪ್‌ಡೇಟ್ ಸಿಕ್ಕಿದೆ. ಇನ್ನು ಎನೇನು ಎಂಬುದನ್ನ ಇದೀಗ ನೋಡೋಣ.

ಬಿಗ್ ಬಾಸ್ 12 ಆರಂಭ:
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಿಂದ ಆರಂಭವಾಗುತ್ತಿದೆ. ಹೌದು, ಇನ್ನು ಸೆಪ್ಟೆಂಬರ್ 29ರಿಂದ ಪ್ರತಿ ದಿನ ಎಪಿಸೋಡ್ ಗಳು ಕೂಡ ಶುರುವಾಗುತ್ತದೆ. ಇನ್ನು ಪ್ರತಿ ವಾರ ಶನಿವಾರ ಮತ್ತು ಭಾನುವಾರ ಕಿಚ್ಚನ ಪಂಚಾಯ್ತಿ ಕೂಡ ನಡೆಯುತ್ತದೆ.
ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ 70 ಕ್ಟಾಸ್ಕ್ ಗಳು ಇರುತ್ತದೆ. ಅದರ ಜೊತೆಗೆ 10 ಬ್ಯಾಕಪ್ ಟಾಸ್ಕ್ ಗಳು ಇರುತ್ತದೆ. ಇನ್ನು 13 ಕ್ಯಾಪ್ಟನ್ಸಿ ಟಾಸ್ಕ್ ಗಳು ಇದ್ದು, 3 ಬ್ಯಾಕಪ್ ಕ್ಯಾಪ್ಟನ್ಸಿ ಟಾಸ್ಕ್ ಗಳು ಇರುತ್ತದೆ.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಿಗ್ ಬಾಸ್ ಮನೆ ಬದಲಾವಣೆ:
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮೊದಲ ಎರಡು ಸೀಸನ್‌ಗಳನ್ನು ಪುಣೆಯ ಲೋನಾವಾಲಾದಲ್ಲಿ ನಡೆಸಲಾಯಿತು. ಇನ್ನು ಮೂರನೇ ಸೀಸನ್‌ನಿಂದ ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಯ್ತು. ಆರಂಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ವಿನ್ಯಾಸ ಮಾಡಲಾಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 3’ ರಿಂದ ‘ಬಿಗ್ ಬಾಸ್ ಕನ್ನಡ 9’ ವರೆಗಿನ ಶೋಗಳು ಹಾಗೂ ‘ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1’ ಕೂಡ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಡೆಸಲಾಗಿತ್ತು. ಆ ನಂತರ ಅಲ್ಲಿಂದ ಲೊಕೇಷನ್ ಅನ್ನು ಶಿಫ್ಟ್ ಮಾಡಲಾಯಿತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ.
ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮನೆ ನಿರ್ಮಾಣ:
ಇದೀಗ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದೀಗ ಪುನಃ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು:
ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿರುವುದು ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಇರುತ್ತಾರೆ ಎಂಬುವುದು. ಇದೀಗ ಒಂದಿಷ್ಟು ಜನರ ಹೆಸರುಗಳು ಇದೀಗ ಕೇಳಿಬರುತ್ತಿದೆ. ಅದರ ಬಗ್ಗೆ ನಮ್ಮ ಚಾನೆಲ್ ನಲ್ಲಿ ಒಂದು ಲೇಖನ ಈಗಾಗಲೇ ಬರೆಯಲಾಗಿದೆ. ಒಮ್ಮೆ ಅದನ್ನ ನೀವು ಕೂಡ ನೋಡಿ.
ಇಲ್ಲಿದೆ ಸ್ಪರ್ಧಿಗಳ ಪಟ್ಟಿ: Video Link
ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ.
Bigg Boss 12 Contestants List, ಬಿಗ್ ಬಾಸ್ ಕನ್ನಡ ಸೀಸನ್ 12 ಶುರು, Bigg Boss 12ರ ಸ್ಪರ್ಧಿಗಳು ಇವರೇ, BBK12, Kiccha Sudeep
