ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 12 ಆರಂಭವಾಗಿದ್ದು, ಒಟ್ಟಾರೆಯಾಗಿ 18+1 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳ ವಯಸ್ಸು, ಅವರ ಹುಟ್ಟೂರು ಹಾಗೂ ಅವರ ಸಾಧನೆ ಹಾಗೂ ಎನೆಲ್ಲ ಮಾಡಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. 

ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, Bigg Boss 12 Contestant Age and Birthplace,  ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12, Bigg Boss Kannada

ಬಿಗ್ ಬಾಸ್ ಸೀಸನ್ 12 ಆರಂಭವಾಗಿದ್ದು, 18+1 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಬಂದಿರುವ ಸ್ಪರ್ಧಿಗಳ ಪೈಕಿ ಅವರ ವಯಸ್ಸು ಹಾಗೂ ಅವರ ಹುಟ್ಟೂರು ಯಾವುದು ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು:

ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, Bigg Boss 12 Contestant Age and Birthplace,  ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12, Bigg Boss Kannada, Bigg Boss Kannada, BBK, BBK12 Update, BBK12 Contestants List, BBK12 Contestants Age and details, Kannada News Update, Trending BBK12 Update, my edu update kannada

  • ಕಾಕ್ರೋಚ್ ಸುಧಿ : ಟಗರು, ಮಾದೇವ , ಕರಿಮಣಿ ಮಾಲೀಕ ನಾನಲ್ಲ ಇನ್ನು ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ಕೊಕ್ರೋಚ್ ಸುಧಿ ಅವರು ಮೂಲತಃ ಮಂಡ್ಯದವರಾಗಿದ್ದು, ಇವರಿಗೆ ಈಗ 43 ವರ್ಷ ವಯಸ್ಸು.
  • ಕಾವ್ಯ ಶೈವ : ಕೆಂಡಸಂಪಿಗೆ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕಾವ್ಯ ಶೈವ ಅವರು ನಂತರ ಕೊತ್ತಲವಾಡಿ ಎನ್ನುವ ಸಿನಿಮಾದಲ್ಲೂ ಸಹ ನಟಿಸಿದ್ದು ಇವರು ಮೂಲತಃ ಮಂಡ್ಯ ದವರಾಗಿದ್ದು ಇವರಿಗೆ ಈಗ 27 ವರ್ಷ ವಯಸ್ಸು.
  • ಡಾಗ್ ಸತೀಶ್ : ವರ್ಡ್ ನಂಬರ್ 1 ಡಾಗ್ ಬ್ರೀಡರ್ ಎಂದೇ ಖ್ಯಾತಿ ಗಳಿಸಿರುವ ಡಾಗ್ ಸತೀಶ್ ಅವರು ಮೂಲತಃ ಬೆಂಗಳೂರಿನವರಾಗಿದ್ದು ಇವರಿಗೆ ಈಗ 49 ವರ್ಷ ವಯಸ್ಸು.
  • ಗಿಲ್ಲಿ ನಟ : ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಗುರುತಿಸಿ ಕೊಂಡಿರುವ ಗಿಲ್ಲಿ ನಟ ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಭರ್ಜರಿ ಬ್ಯಾಚುಲರ್, ಹಾಗೂ ಕ್ವಾಟ್ಲೆ ಕಿಚನ್ ಅಂತಹ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದು ಸದ್ಯ ಇವರು ಬಿಗ್ ಬಾಸ್ ಸೀಸನ್ 12 ಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಇವರು ಮೂಲತಃ ಮಂಡ್ಯದವರಾಗಿದ್ದು, ಇವರಿಗೆ ಈಗ 32 ವರ್ಷ  ವಯಸ್ಸು.
ಇದನ್ನ ಓದಿ:ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ,  Rakshita First Day Eliminated, Bigg Boss Season 12 Updates, Bbk12
  • ಜಾನ್ವಿ : ನ್ಯೂಸ್ ಆಂಕರ್ ಆಗಿ ಹಲವಾರು ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಜಾನ್ವಿ ಅವರಿಗೆ ನಂತರ ಅವಕಾಶ ಸಿಕ್ಕದ್ದು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ಈ ಬಳಿಕ ಜಾನ್ವಿ ಅವರು ಗಿಚ್ಚಿ ಗಿಲಿ ಗಿಲಿ, ಸವಿ ರುಚಿ ಸಿನಿ ಕ್ವಿಜ್, ಮಜಾ ಕೆಫೆ ಇನ್ನು ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುತ್ತಾರೆ. ಇನ್ನು ಇವರು ತಮ್ಮ ಪತಿ ಕಾರ್ತಿಕ್ ಅವರ ಜೊತೆ ಡಿವೋರ್ಸ್ ಪಡೆದಿದ್ದು,ಇವರಿಗೆ ಒಬ್ಬ ಮುದ್ದಾದ ಮಗ ಸಹ ಇದ್ದಾನೆ, ಇನ್ನು ಇವರು ಮೂಲತಃ ಹಾಸನದವರಾಗಿದ್ದು, ಇವರಿಗೆ ಈಗ 35 ವರ್ಷ ವಯಸ್ಸು.
  • ಧನುಷ್ ಗೌಡ: ಗೀತಾ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಧನುಷ್ ಅವರು ಗೀತಾ ಧಾರಾವಾಹಿ ಮುಕ್ತಾಯಗೊಂಡ ನಂತರ ನೂರು ಜನ್ಮಕೂ ಎನ್ನುವ ಧಾರಾವಾಹಿಯಲ್ಲಿ ಸಹ ನಾಯಕನಾಗಿ ನಟಿಸಿದ್ದರು ಆದರೆ ಈ ಧಾರಾವಾಹಿ ಧನುಷ್ ಅವರಿಗೆ ಗೀತಾ ಧಾರಾವಾಹಿಯಷ್ಟು ಖ್ಯಾತಿ ತಂದು ಕೊಡದೆ ಇರುವ ಕಾರಣದಿಂದಾಗಿ ಧನುಷ್ ಅವರು ನೂರು ಜನ್ಮಕೂ ಧಾರಾವಾಹಿಯಿಂದ ಅರ್ಧದಲ್ಲಿ ಹೊರನಡೆದರು ಈಗ ಇವರು ಬಿಗ್ ಬಾಸ್ ಸೀಸನ್ 12 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಇವರಿಗೆ ಈಗ 30 ವರ್ಷ ವಯಸ್ಸು ಇವರು ಮೂಲತಃ ಬೆಂಗಳೂರಿನವರು.

ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, Bigg Boss 12 Contestant Age and Birthplace,  ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12, Bigg Boss Kannada, Bigg Boss Kannada, BBK, BBK12 Update, BBK12 Contestants List, BBK12 Contestants Age and details, Kannada News Update, Trending BBK12 Update, my edu update kannada

  • ಚಂದ್ರಪ್ರಭಾ : ಮಹಾಭಾರತ, ಗಿಲ್ಲಿ ಗಿಲಿ ಗಿಲಿ ಮೂಲಕ ಖ್ಯಾತಿ ಗಳಿಸಿರುವ ಹಾಸ್ಯ ಕಲಾವಿದರಾಗಿರುವ ಚಂದ್ರಪ್ರಭ ಅವರು ಗಿಚ್ಚಿ ಗಿಲಿ ಗಿಲಿ ಸೀಸನ್ 2 ನ ವಿನ್ನರ್ ಸಹ ಆಗಿದ್ದು ಇವರು ಮೂಲತಃ ಮಂಡ್ಯದವರಾಗಿದ್ದು ಇವರಿಗೆ ಈಗ 36ವರ್ಷ ವಯಸ್ಸು.
  • ಮಂಜು ಭಾಷಿಣಿ : ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಮಂಜು ಭಾಷಿಣಿ ಅವರು ಸದ್ಯ ಪುಟ್ಟಕ್ಕನ ಮಕ್ಕಳು ಎನ್ನುವ ಧಾರಾವಾಹಿಯಲ್ಲಿ ಸಹ ಕಾಣಿಸಿಕೊಂಡಿದ್ದು ಇವರು ಮೂಲತಃ ಚಾಮರಾಜನಗರದವರು, ಇವರಿಗೆ ಈಗ 50 ವರ್ಷ ವಯಸ್ಸು.
  • ರಷಿಕಾ ಶೆಟ್ಟಿ : ಮನಸ ಕಡಲು ಎನ್ನುವ ಸಿನಿಮಾದ ಮೂಲಕ ಗುರುತಿಸಿಕೊಂಡಿರುವ ರಶಿಕಾ ಅವರಿಗೆ ಈಗ 25 ವರ್ಷ ವಯಸ್ಸು ಇವರು ಮೂಲತಃ ಮೈಸೂರಿನವರಾಗಿರುತ್ತಾರೆ.
  • ಅಭಿಷೇಕ್ : ಲಕ್ಷಣ ಧಾರಾವಾಹಿ ಮೂಲಕ ವಿಲನ್ ಆಗಿ ಕಿರುತೆಗೆ ಎಂಟ್ರಿ ಕೊಟ್ಟ ಅಭಿಷೇಕ್ ಅವರು ನಂತರ ವಧು ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಇವರು ಮೂಲತಃ ಬೆಂಗಳೂರಿನವರಾಗಿದ್ದು ಇವರಿಗೆ ಈಗ 29 ವರ್ಷ ವಯಸ್ಸು.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
  • ಮಲ್ಲಮ್ಮ : ಯೂಟ್ಯೂಬರ್ ಆಗಿರುವ ಮಲ್ಲಮ್ಮ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು ನಂತರ ನಟ ಮನೋಜ್ ಅವರು ಮಲ್ಲಮ್ಮ ಅವರಿಗೆ ಯೂಟ್ಯೂಬ್ ಚಾನೆಲ್ ಅನ್ನ ಕ್ರಿಯೇಟ್ ಮಾಡಿ ಕೊಟ್ಟಿದ್ದರಂತೆ, ಅದೇ ರೀತಿ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುತ್ತಾ ತಮ್ಮ ಮಾತಿನ ಮೂಲಕ ಖ್ಯಾತಿ ಗಳಿಸಿದ್ದ ಮಲ್ಲಮ್ಮ ಅವರಿಗೆ ಈಗ 67 ವರ್ಷ ವಯಸ್ಸು ಇವರು ಮೂಲತಃ ಯಾದಗಿರಿಯವರಾಗಿರುತ್ತಾರೆ.
  • ಅಶ್ವಿನಿ S N : ಮುದ್ದುಲಕ್ಷ್ಮೀ ಧಾರಾವಾಹಿ ಮೂಲಕ ಗುರುತಿಸಿ ಕೊಂಡಿದ್ದ ಅಶ್ವಿನಿ ಅವರು ನಂತರ ಉದಯ ಟಿವಿಯಲ್ಲಿ ಸೂರ್ಯವಂಶ ಎನ್ನುವ ಧಾರಾವಾಹಿಯಲ್ಲಿ ಸಹ ನಟಿಸಿದ್ದು ಇವರಿಗೆ ಈಗ 29 ವರ್ಷ ವಯಸ್ಸು, ಇವರು ಮೂಲತಃ ಬೆಂಗಳೂರಿನವರಾಗಿರುತ್ತಾರೆ.
  • ಧ್ರುವಂತ್ : ಮುದ್ದುಲಕ್ಷ್ಮಿ ಧಾರಾವಾಹಿ ಮೂಲಕ ಗುರುತಿಸಿ ಕೊಂಡಿರುವ ಧ್ರುವಂತ್ ಅವರು ತಮ್ಮ ಪತ್ನಿಯಿಂದಾಗಿ ಕಾಂಟ್ರವರ್ಸಿಗೆ ಒಳಗಾಗಿದ್ದರು, ಹಾಗೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ವಿಡಿಯೋ ಸಹ ಇವರ ವಿರುದ್ದ ವೈರಲ್ ಆಗಿತ್ತು, ಆದರೆ ಈಗ ಧ್ರುವಂತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಇವರಿಗೆ ಈಗ 34 ವರ್ಷ ವಯಸ್ಸು, ಇವರು ಮೂಲತಃ ಮಂಗಳೂರಿನವರು.
  • ಅಶ್ವಿನಿ ಗೌಡ : 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 25ಕ್ಕೂ ಹೆಚ್ಚು ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ನಟಿ ಅಶ್ವಿನಿ ಅವರು ರಾಜಕೀಯದಲ್ಲೂ ಸಹ ಗುರುತಿಸಿ ಕೊಂಡಿರುವ ಅಶ್ವಿನಿ ಅವರು ಕನ್ನಡ ಪರ ಹೋರಾಟಗಾರ್ತಿ ಸಹ ಆಗಿದ್ದು, ಇವರು ಮೂಲತಃ ಬೆಂಗಳೂರಿನವರಾಗಿರುತ್ತಾರೆ, ಇನು ಇವರಿಗೆ ಈಗ 42 ವರ್ಷ ವಯಸ್ಸು.
  • ಕರಿಬಸಪ್ಪ : ಬಾಡಿ ಬಿಲ್ಡರ್ ಆಗಿರುವ ಕರಿಬಸಪ್ಪನವರು ಮೂಲತಃ ದಾವಣಗೆರೆಯವರಾಗಿದ್ದು, ಇವರಿಗೆ ಈಗ 54 ವರ್ಷ ವಯಸ್ಸು
  • ರಕ್ಷಿತಾ : ಯೂಟ್ಯೂಬರ್ ಆಗಿರುವ ರಕ್ಷಿತಾ ತುಳು ಮಾತನಾಡುವ ಹುಡುಗಿಯಾಗಿದ್ದು, ಕನ್ನಡ ಮಾತನಾಡಲು ಬರದೆ ಇದ್ದರು ಸಹ ಕನ್ನಡ ಮಾತನಾಡಲು ಪ್ರಯತ್ನ ಮಾಡುವ ಮೂಲಕ ಕನ್ನಡ ಜನರ ಮನಸ್ಸನ್ನು ಗೆದ್ದಿದೆ ರಕ್ಷಿತಾ ವರು ಮೂಲತಃ ಮುಂಬೈನವರಾಗಿದ್ದು, ಇವರಿಗೆ ಈಗ 24 ವರ್ಷ ವಯಸ್ಸು.
  • ಮಾಳು ನಿಪನಾಲ್ : ನಾ ಡ್ವರಾ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ಮಾಳು ಈ ಬಳಿಕ ಹಲವಾರು ಜನಪದ ಹಾಡುಗಳನ್ನ ಹಾಡುವ ಮೂಲಕ ಗುರುತಿಸಿಕೊಂಡಿದ್ದು, ಇವರಿಗೆ ಈಗ 32 ವರ್ಷ ವಯಸ್ಸು, ಇವರು ಮೂಲತಃ ಬೆಳಗಾವಿಯವರಾಗಿರುತ್ತಾರೆ.
  • ಸ್ಪಂದನಾ ಸೋಮಣ್ಣ : ಗೃಹಪ್ರವೇಶ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಪಂದನ ಅವರು ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕರಿಮಣಿ ಎನ್ನುವ ಧಾರಾವಾಹಿಯಲ್ಲಿ ಸಹ ನಟಿಸಿದ್ದು, ಇವರಿಗೆ ಈಗ 26 ವರ್ಷ ವಯಸ್ಸು, ಇನ್ನು ಇವರು ಮೂಲತಃ ಮೈಸೂರಿನವರಾಗಿರುತ್ತಾರೆ.
  • ಅಮಿತ್ : Rj ಆಗಿರುವ ಅಮಿತ್ ಮೂಲತಃ ಬೆಂಗಳೂರಿವರಾಗಿದ್ದು, ಇವರಿಗೆ ಈಗ 30 ವರ್ಷ ವಯಸ್ಸು.

ಇದಿಷ್ಟು ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಇರುವ ಮಾಹಿತಿ. ಇನ್ನು ನಿಮ್ಮ ಪ್ರಕಾರ ಇವರಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.

ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, Bigg Boss 12 Contestant Age and Birthplace,  ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment