ನಮಸ್ಕಾರ ಸ್ನೇಹಿತರೇ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-12 ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಮನೆಯ ಪಂಚಾಯಿತಿ ನಡೆಸಿಕೊಡಲಿದ್ದಾರೆ. ಹಾಗಾಗಿ ವೀಕ್ಷಕರಿಗೆ ಇದ್ದ ಎಲ್ಲ ಗೊಂದಲಗಳು ದೂರಾಗಿವೆ. ಇನ್ನು ಈಗ ಎಲ್ಲರ ಚಿತ್ತ ಇರುವುದು ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿರುವ ಸ್ಪರ್ಧಿಗಳತ್ತ ಇದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಕೆಲವ ಸೆಲೆಬ್ರಿಟಿಗಳ ಹೆಸರುಗಳು ಓಡಾಡುತ್ತಿವೆ. ಸದ್ಯ ಹಲವು ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದ್ದು, ಅವರು ಯಾರು? ಎನ್ನುವುದನ್ನ ಇದೀಗ ನೋಡೋಣ.
Bigg Boss Kannada, ಬಿಗ್‌ಬಾಸ್ ಸೀಸನ್-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದಾರೆ, BBK12, BBK12 Contestants List, ಬಿಗ್ ಬಾಸ್ 12ರ ಸ್ಪರ್ಧಿಗಳು ಇವರೇ
ಕನ್ನಡದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್-12ರ ನಿರೂಪಕರಾಗಿ ಮತ್ತೆ ಮುಂದುವರಿಯುತ್ತಿರುವುದು ಖಚಿತವಾಗಿದೆ. ಈ ಸೀಸನ್ ಕಾರ್ಯಕ್ರಮದ ನಿರೂಪಕ ಯಾರು ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆಯೂ ಬಿದ್ದಿದೆ. ಹೀಗಾಗಿ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಈ ಜನಪ್ರಿಯ ರಿಯಾಲಿಟಿ ಶೋನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ರಹಸ್ಯವಾಗಿ ಉಳಿದಿದೆ. ಮೂಲಗಳ ಪ್ರಕಾರ ಕಿರುತೆರೆ, ಸಿನಿಮಾ, ಡಿಜಿಟಲ್ ಮಾಧ್ಯಮ ಮತ್ತು ಸಂಗೀತ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೆಸರುಗಳು ಹರಿದಾಡುತ್ತಿವೆ. ಈ ಪೈಕಿ ಕೆಲವರ ಹೆಸರು ಹಾಗೂ ವಿವರಗಳನ್ನ ಇದೀಗ ನೋಡೋಣ.
ಡಾಕ್ಟರ್ ಬೋ: ಕನ್ನಡದ ಖ್ಯಾತ ಯೂಟ್ಯೂಬರ್ “ಡಾಕ್ಟರ್ ಬೋ” ಎಂದು ಕರೆಯಲ್ಪಡುವ ಗಗನ್ ಶ್ರೀನಿವಾಸ್ ಅವರು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ಅದರ ವಿಡಿಯೋಗಳನ್ನು ಹಂಚಿಕೊಂಡಿರುವ ಗಗನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ವಿಜಯ್ ಸೂರ್ಯ: ಅಗ್ನಿಸಾಕ್ಷಿ ದೃಷ್ಟಿ ಬೊಟ್ಟು ಧಾರಾವಾಹಿಗಳಿಗೆ ಹೆಸರುವಾಸಿಯಾಗಿರುವ ಕಿರುತೆರೆ ನಟ ವಿಜಯ್ ಸೂರ್ಯ ಅವರಿಗೂ ಫ್ಯಾನ್ಸ್ ಹೆಚ್ಚಾಗಿದ್ದಾರೆ. ಹಾಗಾಗಿ ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಊಹಾ ಪೋಹಗಳು ಹರಿದಾಡುತ್ತಿದೆ.
ಬಾಳು ಬೆಳಗುಂದಿ: ಕನ್ನಡದ ಜಾನಪದ ಗಾಯಕ ಹಾಗೂ ಸರಿಗಮಪ ಖ್ಯಾತಿಯ ಬಾಳು ಬೆಳಗುಂದಿ ಕೂಡ ಬಿಗ್‌ಬಾಸ್ ಮನೆಗೆ ಬರುವ ಸಾಧ್ಯತೆ ಇದೆ.
ದಿವ್ಯಾ ವಸಂತ್: ಕನ್ನಡ ವಾಹಿನಿ ಸುದ್ದಿ ನಿರೂಪಕಿ ಹಾಗೂ ವಿವಾದಗಳಿಂದ ಖ್ಯಾತಿ ಗಳಿಸಿರುವ ದಿವ್ಯಾ ವಸಂತಾ ಈ ಬಾರಿಯ ಬಿಗ್ ಬಾಸ್ 12ರ ಮನೆಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
Recent Post:
-
Work Form Home, Online Earning Tips 2025, 9 to 5 Job ಗೆ ಹೇಳಿ ಗುಡ್ ಬೈ; ಮನೆಯಲ್ಲೇ ಕುಳಿತು ಲಕ್ಷ ಗಟ್ಟಲೆ ಸಂಪಾದಿಸಿ ಕೈ ತುಂಬ ಹಣ!
-
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, Government Free Laptop Scheme 2025, ಅರ್ಜಿ ಸಲ್ಲಿಸಿದ್ರೆ ಮಾತ್ರ
ಸಮೀರ್: ಖ್ಯಾತ ಯುಟ್ಯೂಬರ್ ಹಾಗೂ ಇತ್ತೀಚೆಗೆ ತಮ್ಮ ವಿಡಿಯೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ಸಮೀರ್ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ವೇತಾ ಪ್ರಸಾದ್: ರಾಧಾರಮಣ ಹಾಗು ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಅವರು ಕೂಡ ಈ ಬಾರಿ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ.
ಗಗನಾ: ಮಹಾನಟಿ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿರುವ ಗಗನಾ ರವರು ಕೂಡ ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿದೆ.
ಸುನಿಲ್: ಸರಿಗಮಪ ಮೂಲಕ ಖ್ಯಾತಿ ಗಳಿಸಿರುವ ಗಾಯಕ ಸುನಿಲ್ ಅವರು ತಮ್ಮ ಸಂಗೀತದ ಪ್ರತಿಭೆಯಿಂದ ಮನೆಮಾತಾಗಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಸುನಿಲ್ ಅವರು ಕೂಡ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಸಂಜನಾ ಬುರ್ಲಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ಕಿರುತೆರೆ ನಟಿ ಸಂಜನಾ ಹೆಸರು ಕೂಡ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಸಾಗರ್ ಬಿಳಿಗೌಡ: ಜನಪ್ರಿಯ ಧಾರಾವಾಹಿ ಸತ್ಯದಲ್ಲಿ ನಟಿಸಿರುವ ಸಾಗರ್ ಬಿಳಿಗೌಡ ಅವರು ಕನ್ನಡ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ 12ರ ಮನೆಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಸ್ವಾತಿ: ಹಿರಿಯ ಕಿರುತೆರೆ ನಟಿ ಸ್ವಾತಿ ಕನ್ನಡ ಧಾರಾವಾಹಿಗಳಾದ ಗಟ್ಟಿಮೇಳ, ಬ್ರಹ್ಮಗಂಟು ಮೂಲಕ ಜನಪ್ರಿಯರಾಗಿದ್ದಾರೆ. ಹಿರಿಯರ ಪೈಕಿ ಇವರು ಕೂಡ ಬಿಗ್‌ಬಾಸ್‌ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಿಷ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಸ್ಪರ್ಧಿಗಳ ಲಿಸ್ಟ್ ಆಗಿರುತ್ತದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಕಾಮೆಂಟ್ ಮಾಡಿ.
Bigg Boss Kannada, ಬಿಗ್‌ಬಾಸ್ ಸೀಸನ್-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದಾರೆ, BBK12, BBK12 Contestants List, ಬಿಗ್ ಬಾಸ್ 12ರ ಸ್ಪರ್ಧಿಗಳು ಇವರೇ