ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ನಾಲ್ಕು ವಾರ ಮುಗಿದಿದ್ದು, ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹಂಸ ಪ್ರತಾಪ್ ರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಹೌದು ಇದೀಗ ಬಿಗ್ ಬಾಸ್ ಮನೆಯಿಂದ ನಾಲ್ಕು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್ ಹಾಗೂ ಹಂಸ ಪ್ರತಾಪ್ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.
Bigg Boss Kannada 5th Week Nomination, Bigg Boss Season 11 Kannada Voting In Online, 5th Week Eliminated Contestant, BBK11, Bigg Boss 11 Free Voting
ಇನ್ನು ಬಿಗ್ ಬಾಸ್ ನ ಐದನೇ ವಾರ ಆರಂಭವಾಗಿದ್ದು, ಐದನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.
ಬಿಗ್ ಬಾಸ್ 11ರ 5ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು:
14 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು ಅದರಲ್ಲಿ ಈಗ 14 ರಲ್ಲಿ 12 ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಕೇವಲ ಇಬ್ಬರು ಸ್ಪರ್ಧಿಗಳು ಅಷ್ಟೆ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.
ನೇರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು:
ಬಿಗ್ ಬಾಸ್ ನ 4ನೇ ವಾರ ಹಂಸರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗುತ್ತಾರೆ. ಇನ್ನು ಇವರು ಎಲಿಮಿನೇಟ್ ಆಗುವ ಮುಂಚೆ ಬಿಗ್ ಬಾಸ್ ಇವರಿಗೆ ವಿಶೇಷ ಅಧಿಕಾರವೊಂದನ್ನ ನೀಡಿತ್ತು. ಮನೆಯಲ್ಲಿ ಇರುವ ಒಬ್ಬ ಸದಸ್ಯರನ್ನ ನಾಮಿನೇಟ್ ಮಾಡುವುದು. ಆಗ ಅವರು ಹನುಮಂತನರವರ ಹೆಸರನ್ನ ತೆಗೆದುಕೊಳ್ಳುತ್ತಾರೆ.
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತರವರು ಒಬ್ಬ ಕಂಟೆಸ್ಟಂಟ್ ಅನ್ನು ನೇರವಾಗಿ ನಾಮಿನೇಟ್ ಮಾಡಲು ಹೇಳುತ್ತಾರೆ. ಆಗ ಅವರು ಗೋಲ್ಡ್ ಸುರೇಶ್ ರವರ ಹೆಸರನ್ನ ತೆಗೆದುಕೊಳ್ಳುತ್ತಾರೆ.
ಆದ್ದರಿಂದ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತ ಹಾಗೂ ಗೋಲ್ಡ್ ಸುರೇಶ್ ರವರು ಇಬ್ಬರು ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಉಳಿದ ಕಂಟೆಸ್ಟಂಟ್ ಗಳ ನಾಮಿನೇಷನ್ ಪ್ರಕ್ರಿಯೆ:ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಹನುಮಂತರವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಇನ್ನು ಬಿಗ್ ಬಾಸ್ 5ನೇ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸುತ್ತಾರೆ. ಈ ಸಲದ ನಾಮಿನೇಷನ್ ಪ್ರಕ್ರಿಯೆ ತುಂಬಾ ಕುತೂಹಲವಾಗಿತ್ತು. ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳನ್ನು ಸೂಚಿಸುತ್ತಾರೆ. ಅವರುಗಳು ಒಂದು ಹಾಗೂ ಎರಡು ಎನ್ನುವ ಬೋರ್ಡು ಮೇಲೆ ನಿಲ್ಲಬೇಕು. ಆಗ ಮನೆಯ ಸ್ಪರ್ಧಿಗಳು ಅವರ ಇಚ್ಛೆಯ ಅನುಸಾರ ಒಬ್ಬರನ್ನ ನಾಮಿನೇಟ್ ಮಾಡಬೇಕು. ಅತಿ ಹೆಚ್ಚು ವೋಟ್ ಯಾರು ಪಡೆದಿರುತ್ತಾರೊ ಅವರು ನಾಮಿನೇಟ್ ಆಗುತ್ತಾರೆ. ಇನ್ನು ಈ ವಾರದ ಮನೆಯ ಕ್ಯಾಪ್ಟನ್ ಹನುಮಂತರವರು ಅವರ ಇಚ್ಛೆಯ ಅನುಸಾರ ಆ ಇಬ್ಬರು ಕಂಟೆಸ್ಟಂಟ್ ಅಲ್ಲಿ ಯಾರೂ ಮನೆಯಿಂದ ಆಚೆ ಹೋಗಬೇಕು ಎಂದು ನಾಮಿನೇಟ್ ಮಾಡಬೇಕು. ಇನ್ನು ಇಲ್ಲಿ ಮನೆಮಂದಿ ಮಾಡಿರುವ ಅತಿ ಹೆಚ್ಚು ನಾಮಿನೇಷನ್ ವೋಟ್ ಹಾಗೂ ಕ್ಯಾಪ್ಟನ್ ಹನುಮಂತ ಮಾಡಿರುವ ನಾಮಿನೇಟ್ ಎರಡು ಒಂದೇ ಇದ್ದರೆ ಆ ಇಬ್ಬರಲ್ಲಿ ಒಬ್ಬರು ನಾಮಿನೇಟ್ ಆಗಿರುತ್ತಾರೆ. ಇನ್ನು ಎರಡು ಬೇರೆ ಬೇರೆ ಇದ್ದರೆ ಇಬ್ಬರು ಕೂಡ ನಾಮಿನೇಟ್ ಆಗುತ್ತಾರೆ. ಆದ್ದರಿಂದ ಈ ವಾರದ ನಾಮಿನೇಷನ್ ಈ ರೀತಿ ಸ್ವಲ್ಪ ವಿಭಿನ್ನವಾಗಿತ್ತು.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಅದೇ ರೀತಿ ಯಾರು ಯಾರು ನಾಮಿನೇಟ್ ಆಗಿದ್ದರೆ ಎನ್ನುವುದನ್ನ ನೋಡುತ್ತಾ ಹೋದ್ರೆ, ಮೊದಲು ಮೊಕ್ಷಿತಾ ಪೈ ಹಾಗೂ ಭವ್ಯ ಗೌಡ ಬೋರ್ಡು ಮೇಲೆ ನಿಲ್ಲುತ್ತಾರೆ. ಇಬ್ಬರು ಕೂಡ ನಾಮಿನೇಟ್ ಆಗುತ್ತಾರೆ. ನಂತರ ಮಂಜು ಹಾಗೂ ತ್ರಿವಿಕ್ರಮ ನಿಲ್ಲುತ್ತಾರೆ. ಆದರೆ ಇಲ್ಲಿ ಮಂಜುರವರಿಗೆ ಮನೆಯ ಸ್ಪರ್ಧಿಗಳ ಹೆಚ್ಚು ವೋಟ್ ಬಂದಿರುತ್ತದೆ ಹಾಗೂ ಹನುಮಂತರವರು ಕೂಡ ಮಂಜುರವರನ್ನ ಸೂಚಿಸುತ್ತಾರೆ. ಇದರಿಂದ ಮಂಜು ನಾಮಿನೇಟ್ ಆಗುತ್ತಾರೆ. ನಂತರ ಧರ್ಮ ಹಾಗೂ ಅನುಷಾ ರೈ ರವರು ನಿಲ್ಲುತ್ತಾರೆ. ಇಲ್ಲಿ ಇಬ್ಬರು ಕೂಡ ನಾಮಿನೇಟ್ ಆಗುತ್ತಾರೆ. ನಂತರ ಚೈತ್ರಾ ಹಾಗೂ ಮಾನಸಾರವರು ನಿಲ್ಲುತ್ತಾರೆ. ಆದರೆ ಇಬ್ಬರು ಕೂಡ ನಾಮಿನೇಟ್ ಆಗುತ್ತಾರೆ. ನಂತರ ಐಶ್ವರ್ಯ ಹಾಗೂ ಗೌತಮಿರವರು ನಿಲ್ಲುತ್ತಾರೆ. ಆದರೆ ಇಲ್ಲಿ ಐಶ್ವರ್ಯರವರಿಗೆ ಮನೆಯ ಸ್ಪರ್ಧಿಗಳ ಹೆಚ್ಚು ವೋಟ್ ಬಂದಿರುತ್ತದೆ ಹಾಗೂ ಹನುಮಂತರವರು ಕೂಡ ಐಶ್ವರ್ಯರವರನ್ನ ಸೂಚಿಸುತ್ತಾರೆ. ಇದರಿಂದ ಐಶ್ವರ್ಯರವರು ನಾಮಿನೇಟ್ ಆಗುತ್ತಾರೆ. ನಂತರ ಧನರಾಜ್ ಹಾಗೂ ಶಿಶಿರ್ ರವರು ನಿಲ್ಲುತ್ತಾರೆ. ಇಲ್ಲಿ ಇಬ್ಬರು ಕೂಡ ನಾಮಿನೇಟ್ ಆಗುತ್ತಾರೆ. ಆದ್ದರಿಂದ ಒಟ್ಟಾರೆಯಾಗಿ 12 ಜನ ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರದ ನಾಮಿನೇಷನ್ ನಿಂದ ತ್ರಿವಿಕ್ರಮ ಹಾಗೂ ಗೌತಮಿ ಜಾಧವ್ ರವರು ಸೇಫ್ ಆಗಿದ್ದಾರೆ.
ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
- ಧನರಾಜ್
- ಹನುಮಂತ
- ಧರ್ಮ
- ಐಶ್ವರ್ಯ
- ಅನುಷಾ ರೈ
- ಶಿಶಿರ ಶಾಸ್ತ್ರಿ
- ಮೋಕ್ಷಿತಾ ಪೈ
- ಮಾನಸ
- ಭವ್ಯ ಗೌಡ
- ಉಗ್ರಂ ಮಂಜು
- ಗೋಲ್ಡ್ ಸುರೇಶ್
- ಚೈತ್ರ ಕುಂದಾಪುರ
ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 12 ಜನ ನೋಮಿನೆಟ್ ಆಗಿದ್ದಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Bigg Boss Kannada 5th Week Nomination, Bigg Boss Season 11 Kannada Voting In Online, 5th Week Eliminated Contestant, BBK11, Bigg Boss 11 Free Voting
