2ನೇ ವಾರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳು, 2nd Week Nominations List, Bigg Boss Kannada, BBK13, Kiccha Sudeep

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಎಂಬುದು ಕೇವಲ ಒಂದು ಪ್ರಕ್ರಿಯೆಯಲ್ಲ, ಅದು ಆಟದ ದಿಕ್ಕನ್ನೇ ಬದಲಿಸುವ ಶಕ್ತಿಶಾಲಿ ಅಸ್ತ್ರ. ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಸ್ನೇಹ, ನಂಬಿಕೆ ಮತ್ತು ಹೊಂದಾಣಿಕೆಗಳು ತಲೆಕೆಳಗಾಗಿವೆ. ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್ ಮೂಲಕ ನಡೆದ ಈ ವಾರದ ನಾಮಿನೇಷನ್‌ನಲ್ಲಿ ಸಣ್ಣ ತಪ್ಪುಗಳೂ ದೊಡ್ಡ ಜಗಳಕ್ಕೆ ಕಾರಣವಾದವು.

2ನೇ ವಾರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳು, 2nd Week Nominations List, Bigg Boss Kannada, BBK13, Kiccha Sudeep

ಪರ್ಧಿಗಳು ತಮ್ಮ ವೈಯಕ್ತಿಕ ದ್ವೇಷ ಹಾಗೂ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಪರಸ್ಪರ ನಾಮಿನೇಟ್ ಮಾಡಿದ್ದಾರೆ. ಮುಖ್ಯವಾಗಿ “ಮಾಡರ್ನ್ ಕವಿ ಮಂಜ” ಮತ್ತು ಕಾವ್ಯಾ ಗೌಡ, ಕಿರಣ್ ಶಾಸ್ತ್ರಿ ವೈಷ್ಣವಿ, ಮತ್ತು ತಾಂಡವ್ ನಡುವೆ ನಡೆದ ವಾಕ್ಸಮರ ಇಡೀ ಮನೆಯ ವಾತಾವರಣವನ್ನು ಬಿಸಿಗೊಳಿಸಿತು. ಮಂಜ ಅವರು ಬಳಸಿದ ಕೆಲವು ಪದಗಳ ವಿರುದ್ಧ ಕಾವ್ಯಾ ಗೌಡ ಆಕ್ರೋಶ ವ್ಯಕ್ತಪಡಿಸಿದರೆ, “ನೀನು ಗಂಡಸೇ ಅಲ್ಲ” ಎಂದು ಕಾವ್ಯಾ ಹೇಳಿದ್ದು ಮನೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಯಿತು.

2ನೇ ವಾರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳು, 1st Week Nominations List, Bigg Boss Kannada, BBK13, Kiccha Sudeep, My edu update kannada, bigg boss kannada, BBK13 Update, Bigg Boss 13 2nd Week Voting Line, Trending News Update,

ಎರಡನೇ ವಾರದ ನಾಮಿನೇಷನ್ ಪಟ್ಟಿಯಲ್ಲಿರುವ ಪ್ರಮುಖ ಸ್ಪರ್ಧಿಗಳು ಇವರೇ:

ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆಯ ನಂತರ ಹಲವು ಪ್ರಮುಖ ಮತ್ತು ಪ್ರಭಾವಶಾಲಿ ಸ್ಪರ್ಧಿಗಳು ‘ಡೇಂಜರ್ ಝೋನ್’ ತಲುಪಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವ ಪ್ರಮುಖ ಸ್ಪರ್ಧಿಗಳ ವಿವರ ಹೀಗಿದೆ:

ವೈಷ್ಣವಿ ( Vaishnavi): ಫೈಲೆಟ್ ಆಗಿರುವ ಸಂಗೀತ ಅವರ ಆಯ್ಕೆಯಂತೆ ನಟಿ ವೈಷ್ಣವಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಆಗಿರುತ್ತಾರೆ.
ಕಾವ್ಯಾ ಗೌಡ (Kavya Gowda): ನಟಿ ಕಾವ್ಯ ಅವರು ಮಂಜಾ, ಕಿರಣ್ ಜೊತೆ ನಡೆದ ವಾದ ವಿವಾದದಿಂದಾಗಿ ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುತ್ತಾರೆ.
ಮಾಡರ್ನ್ ಕವಿ ಮಂಜ (Modern Kavi Manja): ಅಗ್ನಿಪರೀಕ್ಷೆಯ ಮೂಲಕ ಸಾಮಾನ್ಯ ಜನಪ್ರತಿನಿಧಿಯಾಗಿ ಬಂದ ಮಂಜ, ಆರಂಭದಲ್ಲೇ ಸೆಲೆಬ್ರಿಟಿಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಮಾತು ಹಾಗೂ ಕ್ಯಾರೆಕ್ಟರ್ ಕುರಿತು ಆಡಿದ ಮಾತುಗಳು ಇವರನ್ನು ಎರಡನೇ ವಾರದ ನಾಮಿನೇಷನ್ ಪಟ್ಟಿಗೆ ತಂದು ನಿಲ್ಲಿಸಿದೆ.
ಸೌಂದರ್ಯಾ ಶೆಟ್ಟಿ (Soundarya Shetty): ಸ್ಪ್ಲಿಟ್ಸ್‌ವಿಲ್ಲಾ ಖ್ಯಾತಿಯ ಸೌಂದರ್ಯಾ ಶೆಟ್ಟಿ ಟಾಸ್ಕ್‌ಗಳಲ್ಲಿ ತೀವ್ರವಾಗಿ ಜಟಾಪಟಿ ನಡೆಸುತ್ತಿದ್ದಾರೆ. ಅವರ ಆಕ್ರಮಣಕಾರಿ ಆಟದ ಶೈಲಿ ಮತ್ತು ಒಂಟಿಯಾಗಿ ಹೋರಾಡುವ ಗುಣ ಮನೆಯ ಇತರ ಸದಸ್ಯರಿಗೆ ಇಷ್ಟವಾಗದ ಕಾರಣ ಅವರು ಈ ವಾರ ನಾಮಿನೇಟ್ ಆಗಿದ್ದಾರೆ.
ಆಸಿಯಾ ಫಿರ್ದೋಸ್ (Aasiya Firdose): ಕಿರುತೆರೆ ನಟಿ ಆಸಿಯಾ ಇನ್ನು ಕೂಡ ಮನೆಯ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಂತೆ ಕಾಣುತ್ತಿಲ್ಲ. ಟಾಸ್ಕ್‌ಗಳಲ್ಲಿ ನಿರೀಕ್ಷೆ ಮೀರಿ ಪ್ರದರ್ಶನ ನೀಡಿದರು ಸಹ ಅವರೂ ಡೇಂಜರ್ ಜೋನ್‌ನಲ್ಲಿದ್ದಾರೆ.
ತಾಂಡವ್ ರಾಮ್ (Thandav Ram): ನಟ ತಾಂಡವ್ ರಾಮ್ ಸೌಮ್ಯ ಸ್ವಭಾವದವರಾಗಿದ್ದರೂ, ಎರಡನೇ ವಾರದ ಆಟದ ತಂತ್ರಗಾರಿಕೆಗೆ ಬಲಿಯಾಗಿ ನಾಮಿನೇಷನ್ ಪಟ್ಟಿ ಸೇರಿದ್ದಾರೆ.
ಅವಿನಾಶ್ ಶಾತಮರ್ಷನ್ (Avinash Shatamarshan): ರಂಗಭೂಮಿ ಮತ್ತು ಸಿನಿಮಾ ಪ್ರತಿಭೆಯಾದ ಅವಿನಾಶ್ ತಮ್ಮ ಬುದ್ಧಿವಂತಿಕೆಯ ಆಟ ಪ್ರದರ್ಶಿಸುತ್ತಿದ್ದರೂ, ಸಹ-ಸ್ಪರ್ಧಿಗಳ ಕಣ್ಣಿಗೆ ಪ್ರಬಲ ಸ್ಪರ್ಧಿಯಾಗಿ ಕಾಣುತ್ತಿರುವುದರಿಂದ ನಾಮಿನೇಟ್ ಆಗಿದ್ದಾರೆ.
ಗಗನ್ ( Gagan ): ಕಿರುತೆರೆ ಮೂಲಕ ಗುರುತಿಸಿಕೊಂಡಿರುವ ನಟ ಗಗನ್ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ತಂತ್ರದ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಇವರು ಎರಡನೇ ವಾರ ನಾಮಿನೇಟ್ ಆಗಿದ್ದಾರೆ.
ಕಿರಣ್ ಶಾಸ್ತ್ರಿ ( kiran shashtri): ಅಗ್ನಿಪರೀಕ್ಷೆ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಕಿರಣ್ ಶಾಸ್ತ್ರಿ ತಮ್ಮ ಮಾತು ಹಾಗೂ ಬೇರೆ ಸ್ಪರ್ಧಿಗಳ ಮದ್ಯ ತಾರತಮ್ಯ ಇರುವ ಕಾರಣ ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುತ್ತಾರೆ.

ಈ 9 ಸ್ಪರ್ಧಿಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಸ್ಪರ್ಧಿಗಳಾಗಿರುತ್ತಾರೆ.

ಇದನ್ನ ಓದಿ: ಮೊದಲ ವಾರದಲ್ಲೇ ಹೊರಬಿದ್ದ ಪ್ರಥಮಾ ಪ್ರಸಾದ್, ಮನೆಗೆ ಕಾಲಿಡದೆ ಗಳಿಸಿದ ಸಂಭಾವನೆ ಎಷ್ಟು? Bigg Boss Kannada, BBK13

ವೋಟಿಂಗ್ ಪ್ರಕ್ರಿಯೆ: 

ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸುವುದು ಹೇಗೆ? ಎರಡನೇ ವಾರದ ವೋಟಿಂಗ್ ಪ್ರಕ್ರಿಯೆ ಆರಂಭವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಸೀಸನ್‌ನ ನೇರ ಪ್ರಸಾರ ಮತ್ತು ವೋಟಿಂಗ್ ವ್ಯವಸ್ಥೆಯನ್ನು ಜಿಯೋಹಾಟ್‌ಸ್ಟಾರ್ (JioHotstar) ಆ್ಯಪ್‌ನಲ್ಲಿ ನೀಡಲಾಗಿದೆ.

ಮತದಾನದ ವಿಧಾನ: ಪ್ರೇಕ್ಷಕರು ತಮ್ಮ ಮೊಬೈಲ್‌ನಲ್ಲಿ ಜಿಯೋಹಾಟ್‌ಸ್ಟಾರ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಬಿಗ್ ಬಾಸ್ ಕನ್ನಡ 13 ರ ವೋಟಿಂಗ್ ಬ್ಯಾನರ್ ಕ್ಲಿಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗೆ ಮತ ಚಲಾಯಿಸಬಹುದು.ಸಮಯ: ಪ್ರತಿದಿನ ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರವಾದ ನಂತರ ವೋಟಿಂಗ್ ಲೈನ್‌ಗಳು ಮುಕ್ತವಾಗಿರುತ್ತವೆ.

ಇದನ್ನ ಓದಿ: ಬಿಗ್ ಬಾಸ್ ನಲ್ಲಿ ಓಂ ಪ್ರಕಾಶ್ ರಾವ್ ದಿಢೀರ್ ಹೊರಕ್ಕೆ, ಮುಂದಿನ ವಾರ ನೋ ಎಲಿಮಿನೇಷನ್ ಟ್ವಿಸ್ಟ್! BBK13, Bigg Boss Kannada

ಈ ವಾರ ಹೊರಹೋಗುವವರು ಯಾರು?

ಮೊದಲ ವಾರದಲ್ಲೇ ಪ್ರಥಮಾ ಪ್ರಸಾದ್ ಮನೆಯೊಳಗೆ ಸರಿಯಾಗಿ ಕಾಲಿಡುವ ಮುನ್ನವೇ ಹೊರಬಂದು ಇತಿಹಾಸ ಸೃಷ್ಟಿಸಿದ್ದರು. ಹೀಗಾಗಿ, ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮತ್ತಷ್ಟು ಕಠಿಣವಾಗಿರಲಿದೆ. ಇನ್ನು ಎರಡನೇ ವಾರದ ಆರಂಭದಲ್ಲಿಯೇ ಓಂ ಪ್ರಕಾಶ್ ರಾವ್ ಅವರು ಆರೋಗ್ಯ ಸಮಸ್ಯೆಯಿಂದ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು ಇವರನ್ನ ಹೊರಟು ಪಡಿಸಿ ಇನ್ನುಳಿದ 14 ಸ್ಪರ್ಧಿಗಳ ಪೈಕಿ ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಾವ್ಯಾ ಗೌಡ, ಮಂಜ, ಸೌಂದರ್ಯಾ, ತಾಂಡವ ರಾಮ್, ಗಗನ್, ಕಿರಣ್ ಶಾಸ್ತ್ರಿ, ವೈಷ್ಣವಿ, ಆಶಿಯಾ ಸೇರಿದಂತೆ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಯಾರು ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ ಮತ್ತು ಯಾರ ವೋಟಿಂಗ್ ಬ್ಯಾಂಕ್ ಗಟ್ಟಿಯಾಗಿದೆ ಎಂಬುದು ವಾರಾಂತ್ಯದ “ಕಿಚ್ಚನ ಕಥೆ ಕಿಚ್ಚನ ಜೊತೆ” ಸಂಚಿಕೆಯಲ್ಲಿ ನಿರ್ಧಾರವಾಗಲಿದೆ. ಬಿಗ್ ಬಾಸ್ ಆಟ ಸದ್ಯ ರೋಚಕ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ದೊಡ್ಮನೆಯಲ್ಲಿ ಇನ್ಯಾವ ಬಿರುಗಾಳಿ ಏಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

2ನೇ ವಾರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳು, 2nd Week Nominations List, Bigg Boss Kannada, BBK13, Kiccha Sudeep
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿ ದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು. 

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment