ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆ ಜೀವನ ಸಾಧಿಸುವ ಸಲುವಾಗಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ಮುಂದಾಗಿದೆ. ಇನ್ನು ಈ ಯೋಜನೆಯನ್ನು ಪಡೆಯಲು ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಹಾಗು ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ, Free Sewing Machine Scheme, Free Sewing Machine Scheme Update 2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana):
ಭಾರತದ ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಕರಕುಶಲ ಕರ್ಮಿಗಳ ಕೌಶಲ್ಯಗಳನ್ನು ಬಲಪಡಿಸಿ, ಅವರನ್ನು ಆಧುನಿಕ ಮಾರುಕಟ್ಟೆಗೆ ಪರಿಚಯಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರವು 2023ರ ಸೆಪ್ಟೆಂಬರ್ 17 ರಂದು ಇದನ್ನು ₹13,000 ಕೋಟಿ ಬಜೆಟ್‌ನೊಂದಿಗೆ 5 ವರ್ಷಗಳ ಅವಧಿಗಾಗಿ ಆರಂಭಿಸಿತು. ಇನ್ನು 2025ರ ಡಿಸೆಂಬರ್ 4 ರಿಂದ ಈ ಯೋಜನೆಯ ಎರಡನೇ ಹಂತದ ಅರ್ಜಿ ಪ್ರಕ್ರಿಯೆಯು ಚುರುಕುಗೊಂಡಿದ್ದು, ಈ ಮೂಲಕ 18 ಸಾಂಪ್ರದಾಯಿಕ ವೃತ್ತಿಗಳ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿದೆ.

ಕರ್ನಾಟಕದಲ್ಲಿ ಈಗಾಗಲೇ 5.7 ಲಕ್ಷಕ್ಕೂ ಹೆಚ್ಚು ನೋಂದಣಿಗಳು ಆಗಿದೆ. ಹೊಲಿಗೆ (ಟೈಲರಿಂಗ್) ವೃತ್ತಿಯಲ್ಲಿರುವ ಮಹಿಳೆಯರಿಗೆ ಈ ಯೋಜನೆಯು ಉಚಿತ ಹೊಲಿಗೆ ಯಂತ್ರ, ಕೌಶಲ್ಯ ತರಬೇತಿ ಮತ್ತು ₹3 ಲಕ್ಷದವರೆಗೆ ಗ್ಯಾರಂಟಿ-ಮುಕ್ತ ಸಾಲದಂತಹ ಬೃಹತ್ ಸೌಲಭ್ಯಗಳನ್ನು ಒದಗಿಸುತ್ತದೆ. ಇನ್ನು ನೀವು ಸಹ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು.
ಪಿಎಂ ವಿಶ್ವಕರ್ಮ ಯೋಜನೆಯ ಮೂಲ ಗುರಿ ಸಾಂಪ್ರದಾಯಿಕ ಕೈಗಾರಿಕಾ ಕಾರ್ಮಿಕರ ಆದಾಯವನ್ನು ದ್ವಿಗುಣಗೊಳಿಸಿ, ಅವರನ್ನು ಡಿಜಿಟಲ್ ಅರ್ಥವ್ಯವಸ್ಥೆಯೊಂದಿಗೆ ಜೋಡಿಸುವುದು. ಬಡಗಿ, ಕಮ್ಮಾರ, ಟೈಲರ್, ಚಿನ್ನಕಾಸಾರ, ಕುಂಬಾರ, ಚಪ್ಪಲಿ ತಯಾರಕ, ಶಿಲ್ಪಿ, ಆಟಿಕೆ ತಯಾರಕ, ಬುಟ್ಟಿ ಹೆಣೆಯುವವರು, ಮೀನುಗಾರರ ಜಾಲ ತಯಾರಕರು ಮತ್ತು ಧೋಬಿ ಸೇರಿದಂತೆ ಒಟ್ಟು 18 ವೃತ್ತಿಗಳನ್ನು ಈ ಯೋಜನೆ ಒಳಗೊಂಡಿದೆ.
ಯೋಜನೆಯು ಕೆಲ ಹಂತಗಳಲ್ಲಿ ನಿರ್ದಿಷ್ಟ ಆರ್ಥಿಕ ಮತ್ತು ಉಪಕರಣಗಳ ನೆರವನ್ನು ನೀಡುತ್ತದೆ:
- ಆಯ್ಕೆಯಾದ ಫಲಾನುಭವಿಗಳಿಗೆ ಹತ್ತಿರದ ITI (ಕೈಗಾರಿಕಾ ತರಬೇತಿ ಸಂಸ್ಥೆ) ಅಥವಾ ಸ್ಥಳೀಯ ಕೌಶಲ್ಯ ಕೇಂದ್ರಗಳಲ್ಲಿ 5-7 ದಿನಗಳ ಕಾಲ ಅಗತ್ಯ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಇದರಲ್ಲಿ
- ಆಧುನಿಕ ಯಂತ್ರಗಳ ಬಳಕೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕುರಿತು ಮಾಹಿತಿ ಇರುತ್ತದೆ.
- ಹಾಜರಾದ ಪ್ರತಿ ದಿನಕ್ಕೆ ₹500 ಸ್ಟೈಫಂಡ್ ನೀಡಲಾಗುತ್ತದೆ.
- ಕೆಲಸಕ್ಕೆ ಅಗತ್ಯವಾದ ಆಧುನಿಕ ಉಪಕರಣಗಳನ್ನು ಖರೀದಿಸಲು ₹15,000 ಮೌಲ್ಯದ E-RUPI ವೌಚರ್ ಅನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಉದಾಹರಣೆಗೆ, ಟೈಲರ್‌ಗಳಿಗೆ
- ಹೊಸ ಹೊಲಿಗೆ ಯಂತ್ರವನ್ನು ಈ ಹಣದಿಂದ ಖರೀದಿಸಬಹುದು. ಈ ಹಣವನ್ನು ಮರಳಿ ಕಟ್ಟುವ ಅಗತ್ಯವಿಲ್ಲ.
- ಈ ಯೋಜನೆಯು ಕರಕುಶಲಕರ್ಮಿಗಳಿಗೆ ತಮ್ಮ ಉದ್ಯಮ ವಿಸ್ತರಣೆಗಾಗಿ ಕಡಿಮೆ ಬಡ್ಡಿದರದಲ್ಲಿ ಗ್ಯಾರಂಟಿ-ಮುಕ್ತ ಸಾಲವನ್ನು ಒದಗಿಸುತ್ತದೆ
- ಮೊದಲ ಹಂತದಲ್ಲಿ, ₹1 ಲಕ್ಷದವರೆಗೆ ಸಾಲ ಲಭ್ಯ. ಮರುಪಾವತಿ ಅವಧಿ 18 ತಿಂಗಳು.
- ಎರಡನೇ ಹಂತದಲ್ಲಿ, ಮೊದಲ ಸಾಲವನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದ ನಂತರ, ಅರ್ಜಿದಾರರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ₹2 ಲಕ್ಷದವರೆಗೆ ಎರಡನೇ ಹಂತದ ಸಾಲ ಪಡೆಯಬಹುದು. ಮರುಪಾವತಿ ಅವಧಿ 30 ತಿಂಗಳು.
- ಈ ಸಾಲಗಳಿಗೆ ಕೇವಲ 5% ಬಡ್ಡಿ ವಿಧಿಸಲಾಗುತ್ತದೆ. ಉಳಿದ ಬಡ್ಡಿ ಸಬ್ಸಿಡಿಯನ್ನು ಸರ್ಕಾರವೇ ಭರಿಸುತ್ತದೆ. ಸಾಲದ ಗ್ಯಾರಂಟಿಯನ್ನು ಸರ್ಕಾರವೇ ತೆಗೆದುಕೊಳ್ಳುವುದರಿಂದ ಯಾವುದೇ ಆಸ್ತಿ ಒತ್ತೆ ಇಡುವ ಅವಶ್ಯಕತೆ ಇರುವುದಿಲ್ಲ.
ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme
ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾದ ಅರ್ಹತೆ:
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
- ವಾರ್ಷಿಕ ಕುಟುಂಬ ಆದಾಯವು ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಆದಾಯ ತೆರಿಗೆ ಪಾವತಿಸುತ್ತಿರಬಾರದು.
ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು).
- ಬ್ಯಾಂಕ್ ಪಾಸ್‌ಬುಕ್/ಕ್ಯಾನ್ಸಲ್‌ಮೆಂಟ್ ಚೆಕ್.
- ವೃತ್ತಿಪರ ಅನುಭವದ ಸಾಬೀತು (ಸ್ವ-ಘೋಷಣೆ).
- ಜಾತಿ/ಆದಾಯ ಪ್ರಮಾಣಪತ್ರ.
- ಮೊಬೈಲ್ ನಂಬರ್.
- ಪಾಸ್‌ಪೋರ್ಟ್ ಸೈಜ್ ಫೋಟೋಗಳು.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
- ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಕ್ರಿಯೆಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿದೆ.
- ಅರ್ಜಿ ಸಲ್ಲಿಸಲು ಲಿಂಕ್ ಈ ಕೆಳಗೆ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ. ಮೊದಲು ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ Register ಮೇಲೆ ಕ್ಲಿಕ್ ಮಾಡಿ.
- ಮೊಬೈಲ್ ಸಂಖ್ಯೆ ಮತ್ತು ಆಧಾರ್ ಬಳಸಿ E-KYC ಪೂರ್ಣಗೊಳಿಸಬೇಕು.
- ನಂತರ Application Fill ಮಾಡಿ, ನೋಂದಣಿ ಫಾರ್ಮ್‌ನಲ್ಲಿ ವೃತ್ತಿ (ಉದಾ: ಟೈಲರ್), ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು.
- ಆನ್‌ಲೈನ್ ನೋಂದಣಿ ನಂತರ, ಹತ್ತಿರದ CSC (ಕಾಮನ್ ಸರ್ವೀಸ್ ಸೆಂಟರ್), ಗ್ರಾಮ ಒನ್, ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳಚ್ಚು/ಕಣ್ಣಿನ ಸ್ಕ್ಯಾನ್) ದೃಢೀಕರಣವನ್ನು ಉಚಿತವಾಗಿ ಮಾಡಿಸಬೇಕು.
- ಬಯೋಮೆಟ್ರಿಕ್ ದೃಢೀಕರಣದ ನಂತರ, 1-2 ತಿಂಗಳಲ್ಲಿ ತರಬೇತಿ ಮತ್ತು ಟೂಲ್ ಕಿಟ್ ವೌಚರ್ ದೊರೆಯುತ್ತದೆ.
- ಟೂಲ್ ಕಿಟ್ ಪಡೆದ ನಂತರ, ಅದೇ ಪೋರ್ಟಲ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಲವು 30 ದಿನಗಳೊಳಗೆ ಮಂಜೂರಾಗುತ್ತದೆ.
ಅರ್ಜಿ ಸಲ್ಲಿಸುವ ಲಿಂಕ್: pmvishwakarma.gov.in
ಈ ಯೋಜನೆಯು ಸಾಂಪ್ರದಾಯಿಕ ಕಲೆ ಮತ್ತು ಕೌಶಲ್ಯಗಳಿಗೆ ಆಧುನಿಕ ಸ್ಪರ್ಶ ನೀಡಿ, ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಅವರನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ನೆರವಾಗುತ್ತದೆ. ಇದು ಈ ಯೋಜನೆಯ ಮುಖ್ಯ ಗುರಿ. ಅರ್ಜಿ ಸಲ್ಲಿಸುವ ಅವಕಾಶ ಡಿಸೆಂಬರ್ 4ನೇ ತಾರೀಕಿನಿಂದ ಶುರು ಆಗಿದ್ದು, ಮಹಿಳೆಯರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.ಈ ಯೋಜನೆಯಿಂದ ಹೊಲಿಗೆ ಯಂತ್ರವನ್ನು ಪಡೆದು ಸ್ವಾವಲಂಬನೆಯ ಜೀವನವನ್ನು ಆರಂಭಿಸಬಹುದು.
ಇನ್ನು ಈ ಯೋಜನೆ ಪಡೆಯಲು ನಿಮಗೆ ಎಲ್ಲಾ ರೀತಿಯ ಅರ್ಹತೆ ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಿ. ಇನ್ನು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ನಿಮಗೆ ನೀಡಲಾಗಿದೆ. ಇನ್ನು ಇದರ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಈ ಕೆಳಗೆ ಕಾಮೆಂಟ್ ಬಾಕ್ಸ್ ಇದೆ. ನೀವು ಕಾಮೆಂಟ್ ಮಾಡಿ.
ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ, Free Sewing Machine Scheme, Free Sewing Machine Scheme Update 2025

Super
Super sweing machine