ನಮಸ್ಕಾರ ಸ್ನೇಹಿತರೆ, ಪಿಎಂ ಸೂರ್ಯ ಘರ್ ಯೊಜನೆ ಮೂಲಕ ಕೇಂದ್ರ ಸರ್ಕಾರದಿಂದ ₹78,000, ರೂ. ಸಹಾಯಧನವನ್ನು ಪಡೆಯದುಕೊಳ್ಳಬಹುದು. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ, PM Surya Ghar Free Electricity Scheme, Government New Scheme Update, PM Scheme Update 2025
ಭಾರತ ಸರ್ಕಾರವು ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡವ ಸಲುವಾಗಿ ಮತ್ತು ಪರಿಸರ ಸ್ನೇಹಿ ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸವ ಸಲುವಾಗಿ “ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025” ಅನ್ನು ಪ್ರಾರಂಭಿಸಿದೆ. ಇದರ ಮುಖ್ಯ ಉದ್ದೇಶವೆಂದರೆ, ಮನೆಗಳ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು (Rooftop Solar) ಅಳವಡಿಸಲು ಪ್ರೋತ್ಸಾಹ ನೀಡಿ, ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವುದು.
ಈ ಯೋಜನೆಯ ಮುಖ್ಯ ಉದ್ದೇಶ ಮತ್ತು ಪ್ರಯೋಜನ:
ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಸರ್ಕಾರವು ಹಲವು ಮಹತ್ತರ ಗುರಿಗಳನ್ನು ಹೊಂದಿದೆ. ಅವುಗಳೆಂದರೆ,
ಮನೆಯವರು ತಮ್ಮ ಪ್ರತಿ ತಿಂಗಳ ವಿದ್ಯುತ್ ಬಿಲ್ ಖರ್ಚನ್ನು ಶೇಕಡಾ 90 ರಷ್ಟು ಕಡಿಮೆ ಮಾಡಿಕೊಳ್ಳಬಹುದು ಮತ್ತು 25 ವರ್ಷಗಳವರೆಗೆ ವಿದ್ಯುತ್ ಬಿಲ್ ಪಾವತಿಯ ಚಿಂತೆಯಿಂದ ಮುಕ್ತರಾಗಬಹುದು. ಇದರಿಂದ ವಿದ್ಯುತ್ ಬಿಲ್ ಉಳಿತಾಯ ವಾಗುತ್ತದೆ.
ಸೌರ ಘಟಕ ಅಳವಡಿಕೆಯ ಆರಂಭಿಕ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ನೇರವಾಗಿ ನಿಮಗೆ ₹78,000 ವರೆಗೆ ಸಹಾಯಧನವನ್ನು ಅಂದರೆ ಸಬ್ಸಿಡಿ ಮೂಲಕ ಆರ್ಥಿಕ ಸಹಾಯ ಧನವನ್ನು ನೀಡುತ್ತದೆ.
ಸೌರಶಕ್ತಿಯ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗುತ್ತದೆ, ಇದು ಪರಿಸರಕ್ಕೆ ದೊಡ್ಡ ಕೊಡುಗೆಯಾಗಿದೆ. ಅಂದರೆ ಪರಿಸರ ಸಂರಕ್ಷಣೆಗೆ ಸಹಾಯವಾಗುತ್ತದೆ.
ಮನೆಗಳು ಸ್ವತಃ ವಿದ್ಯುತ್ ಉತ್ಪಾದಕರಾಗಿ ರೂಪುಗೊಳ್ಳುತ್ತವೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡಲು ನೆಟ್ ಮೀಟರಿಂಗ್ ವ್ಯವಸ್ಥೆ ಇರುವುದರಿಂದ, ಇದರಿಂದ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ತಂದುಕೊಡುತ್ತದೆ.

ಸಹಾಯಧನದ ವಿವರ (Subsidy Details):
ಇದು ವಿಧ್ಯುತ್ ಉತ್ಪಾದನೆಯ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಅವುಗಳೆಂದರೆ,
- 1 ಕಿಲೋವ್ಯಾಟ್ (kW) ಸಾಮರ್ಥ್ಯಕ್ಕೆ: ₹30,000 ಸಹಾಯಧನ.
- 2 ಕಿಲೋವ್ಯಾಟ್ (kW) ಸಾಮರ್ಥ್ಯಕ್ಕೆ: ₹60,000 ಸಹಾಯಧನ.
- 3 ಕಿಲೋವ್ಯಾಟ್ (kW) ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯಕ್ಕೆ: ಗರಿಷ್ಠ ₹78,000 ವರೆಗೆ ಸಹಾಯಧನ.
ಉದಾಹರಣೆಗೆ, ಒಬ್ಬರು 2 kW ಸಿಸ್ಟಂ ಅನ್ನು ಸ್ಥಾಪಿಸಿದರೆ, ಅವರಿಗೆ ₹60,000 ಸಹಾಯಧನ ಸಿಗುತ್ತದೆ. 2 kW ಸಿಸ್ಟಮ್ ಸಾಮಾನ್ಯವಾಗಿ ತಿಂಗಳಿಗೆ 200 ರಿಂದ 300 ಯೂನಿಟ್‌ಗಳಷ್ಟು ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಈ ಘಟಕಗಳ ಆಯುಷ್ಯ ಸುಮಾರು 25 ವರ್ಷಗಳಾಗಿದ್ದು, ಒಂದು ಕುಟುಂಬಕ್ಕೆ ದೀರ್ಘಾವಧಿಯಲ್ಲಿ ₹3 ಲಕ್ಷಕ್ಕೂ ಹೆಚ್ಚು ಉಳಿತಾಯವಾಗುತ್ತದೆ.
ಇದನ್ನ ಓದಿ: ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಯೋಜನೆಗೆ ಇರಬೇಕಾದ ಅರ್ಹತೆಗಳು:
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಅರ್ಜಿ ಸಲ್ಲಿಸುವ ಮನೆಗೆ ವಿದ್ಯುತ್ ಸಂಪರ್ಕ ಇರಬೇಕು.
- ಸೌರ ಘಟಕ ಅಳವಡಿಸಲು ಮನೆಯು ಮೇಲ್ಛಾವಣಿಯನ್ನು ಹೊಂದಿರಬೇಕು.
- ಅರ್ಜಿದಾರರು ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಸೌರ ಯೋಜನೆಗಳಡಿ ಸಬ್ಸಿಡಿ ಪಡೆದಿರಬಾರದು.
ಆನ್ಲೈನ್ ಅರ್ಜಿಯ ವಿಧಾನ:
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದೆ. ಈ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್ ಈ ಕೆಳಗೆ ನೀಡಲಾಗಿದೆ.
- ವೆಬ್‌ಸೈಟ್‌ನಲ್ಲಿರುವ “Registration” ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ ರಾಜ್ಯ, ಜಿಲ್ಲೆ, ವಿದ್ಯುತ್ ಪೂರೈಕೆ ಕಂಪನಿಯ ಹೆಸರು (ಎಸ್ಕಾಂ) ಮತ್ತು ನಿಮ್ಮ ಗ್ರಾಹಕ ಖಾತೆ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿ.
- ಆ ನಂತರ, ಲಾಗಿನ್ ಆಗಿ “Apply for Rooftop Solar” ಆಯ್ಕೆಮಾಡಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ.
ಇದನ್ನ ಓದಿ: Bigg Boss Kannada 12 Prank Elimination, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡು
- ವಿದ್ಯುತ್ ಬಿಲ್
- ಮನೆ ಮಾಲೀಕತ್ವದ ದಾಖಲೆ
- ಮನೆ ಮೇಲ್ಛಾವಣಿಯ ಫೋಟೋ
- ಈ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸುವ ಲಿಂಕ್: https://pmsuryaghar.gov.in
ಅರ್ಜಿ ಸಲ್ಲಿಸಿದ ನಂತರ, ಅದನ್ನು ಸ್ಥಳೀಯ ಎಸ್ಕಾಂ ಸಂಸ್ಥೆಯು ಪರಿಶೀಲಿಸುತ್ತದೆ ಮತ್ತು ಅರ್ಹತೆ ದೃಢೀಕರಿಸಿದ ನಂತರ ಸರ್ಕಾರದಿಂದ ಸಹಾಯಧನವು ಮಂಜೂರಾಗುತ್ತದೆ.
ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡುವಲ್ಲಿ ಮತ್ತು ಭಾರತವನ್ನು ಹಸಿರು ಶಕ್ತಿಯ ಕಡೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ, ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆ (1800-180-3333) ಅನ್ನು ಸಂಪರ್ಕಿಸಬಹುದು.
ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ, PM Surya Ghar Free Electricity Scheme, Government New Scheme Update, PM Scheme Update 2025
