ನಮಸ್ಕಾರ ಸ್ನೇಹಿತರೇ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ಬಾಸ್ ಸೀಸನ್-12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್ಬಾಸ್ ಮನೆಯ ಪಂಚಾಯಿತಿ ನಡೆಸಿಕೊಡಲಿದ್ದಾರೆ ಎಂದು ವಾಹಿನಿಯು ಸ್ಪಷ್ಟಣೆ ನೀಡಿತ್ತು. ಹಾಗಾಗಿ ವೀಕ್ಷಕರಿಗೆ ಇದ್ದ ಎಲ್ಲ ಗೊಂದಲಗಳು ದೂರಾಗಿವೆ. ಇನ್ನು ಈಗ ಎಲ್ಲರ ಚಿತ್ತ ಇರುವುದು ಈ ಸೀಸನ್ನಲ್ಲಿ ಕಾಣಿಸಿಕೊಳ್ಳಲಿರುವ ಸ್ಪರ್ಧಿಗಳತ್ತ ಇದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಕೆಲವ ಸೆಲೆಬ್ರಿಟಿಗಳ ಹೆಸರುಗಳು ಓಡಾಡುತ್ತಿವೆ. ಸದ್ಯ ಹಲವು ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದ್ದು, ಅವರು ಯಾರು? ಎನ್ನುವುದನ್ನ ಇದೀಗ ನೋಡೋಣ.
Bigg Boss Kannada, ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಪಟ್ಟಿ, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, BBK12 Contestants List, Bigg Boss 12 Contestants List
ಕನ್ನಡದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್-12ರ ನಿರೂಪಕರಾಗಿ ಮತ್ತೆ ಮುಂದುವರಿಯುತ್ತಿರುವುದು ಖಚಿತವಾಗಿದೆ. ಈ ಸೀಸನ್ ಕಾರ್ಯಕ್ರಮದ ನಿರೂಪಕ ಯಾರು ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆಯೂ ಬಿದ್ದಿದೆ. ಹೀಗಾಗಿ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗುವ ಈ ಜನಪ್ರಿಯ ರಿಯಾಲಿಟಿ ಶೋನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಬಿಗ್ ಬಾಸ್ 12ರ ಸ್ಪರ್ಧಿಗಳ ಪಟ್ಟಿ:
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ರಹಸ್ಯವಾಗಿ ಉಳಿದಿದೆ. ಮೂಲಗಳ ಪ್ರಕಾರ ಕಿರುತೆರೆ, ಸಿನಿಮಾ, ಡಿಜಿಟಲ್ ಮಾಧ್ಯಮ ಮತ್ತು ಸಂಗೀತ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೆಸರುಗಳು ಹರಿದಾಡುತ್ತಿವೆ. ಈ ಪೈಕಿ ಕೆಲವರ ಹೆಸರು ಹಾಗೂ ವಿವರಗಳನ್ನ ಇದೀಗ ನೋಡೋಣ.

ವಿಜಯ್ ಸೂರ್ಯ: ಅಗ್ನಿಸಾಕ್ಷಿ ದೃಷ್ಟಿ ಬೊಟ್ಟು ಧಾರಾವಾಹಿಗಳಿಗೆ ಹೆಸರುವಾಸಿಯಾಗಿರುವ ಕಿರುತೆರೆ ನಟ ವಿಜಯ್ ಸೂರ್ಯ ಅವರಿಗೂ ಫ್ಯಾನ್ಸ್ ಹೆಚ್ಚಾಗಿದ್ದಾರೆ. ಹಾಗಾಗಿ ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಊಹಾ ಪೋಹಗಳು ಹರಿದಾಡುತ್ತಿದೆ.
ಸಂಜನಾ ಬುರ್ಲಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ಕಿರುತೆರೆ ನಟಿ ಸಂಜನಾ ಹೆಸರು ಕೂಡ ಬಿಗ್ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಧನುಷ್: ಕನ್ನಡದ ಕಿರುತೆರೆಯ ನಟ ಧನುಷ್ ರವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿದೆ. ಇನ್ನು ಇವರು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿಯು ಸಹ ಕಂಟೆಸ್ಟಂಟ್ ಆಗಿ ಬಂದಿದ್ದರು.
ಇದನ್ನ ಓದಿ: ಬಿಗ್ ಬಾಸ್ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್ 12ರ ಹೊಸ ಲೋಗೋ, BBK12
ರೀಲ್ಸ್ ರೇಷ್ಮಾ: ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಅತಿ ಹೆಚ್ಚು ಟ್ರೊಲ್ ಆಗಿ ಅಧಿಕ ಫಾಲೋವರ್ಸ್ ಗಳನ್ನ ಪಡೆದಿರುವ ಇವರು ಈ ಹಿಂದೆ ಒಂದು ರಿಯಾಲಿಟಿ ಶೋ ನಲ್ಲಿಯು ಸಹ ಕಾಣಿಕೊಂಡಿದ್ದರು. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಹುಲಿ ಕಾರ್ತಿಕ್: ಮಜಾಭಾರತ ಕಾಮಿಡಿ ಶೋ ನಲ್ಲಿ ಹುಲಿ ಕಾರ್ತಿಕ್ ಎಂದೇ ಖ್ಯಾತಿಯಾಗಿರುವ ಕಾರ್ತಿಕ್ ರವರು ಈ ಬಾರಿಯ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಮೇಘನಾ ಶೆಟ್ಟಿ: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಇವರು ಕೆಲ ಸಿನಿಮಾದಲ್ಲಿಯೂ ನಟಿಸಿದ್ದರು. ಇನ್ನು ಇವರು ಈ ಬಾರಿಯ ಬಿಗ್ ಬಾಸ್ ಸೀಸನ್ 12ರಲ್ಲಿ ಕಂಟೆಸ್ಟಂಟ್ ಆಗಿ ಬರಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಗಿಲ್ಲಿ ನಟ: ತನ್ನದೇ ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ಗಿಲ್ಲಿ ನಟ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರು ಸಹ ಇವರು ಈ ಬಾರಿ ಬಿಗ್ ಬಾಸ್ ಸೀಸನ್ 12ರಲ್ಲಿ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಅಮೃತಾ: ಕನ್ನಡದ ಕೆಲ ಧಾರಾವಾಹಿಗಳಲ್ಲಿ ಕಾಣಿಸಿ ಕೊಂಡಿರುವ ಇವರು ಈ ಬಾರಿಯ ಬಿಗ್ ಬಾಸ್ 12ರ ಕಂಟೆಸ್ಟಂಟ್ ಆಗಿ ಕಾಣಿಸಿ ಕೊಳ್ಳಲಿದ್ದಾರೆ.
ಡಾಕ್ಟರ್ ಬ್ರೋ: ಕನ್ನಡದ ಖ್ಯಾತ ಯೂಟ್ಯೂಬರ್ “ಡಾಕ್ಟರ್ ಬ್ರೋ” ಎಂದು ಕರೆಯಲ್ಪಡುವ ಗಗನ್ ಶ್ರೀನಿವಾಸ್ ಅವರು ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ಅದರ ವಿಡಿಯೋಗಳನ್ನು ಹಂಚಿಕೊಂಡಿರುವ ಗಗನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಸಾಗರ್ : ಜನಪ್ರಿಯ ಧಾರಾವಾಹಿ ಸತ್ಯದಲ್ಲಿ ನಟಿಸಿರುವ ಸಾಗರ್ ಬಿಳಿಗೌಡ ಅವರು ಕನ್ನಡ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ 12ರ ಮನೆಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಇದನ್ನ ಓದಿ: 2 lakhs ರೇಷನ್ ಕಾರ್ಡ್ Cancel, ರಾಜ್ಯದಲ್ಲಿ 2ಲಕ್ಷ BPL ರೇಷನ್ ಕಾರ್ಡ್ ರದ್ದು, Cancelled Ration Card List 2025
ಪ್ರೇರಣಾ: ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿರುವ ಇವರು ತೆಲುಗು ಬಿಗ್ ಬಾಸ್ ಸೀಸನ್ 8ರಲ್ಲಿ ಕಂಟೆಸ್ಟಂಟ್ ಆಗಿದ್ದರು. ಇನ್ನು ಇವರು ಈ ಸಲದ ಬಿಗ್ ಬಾಸ್ ಸೀಸನ್ 12ರಲ್ಲಿ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಶ್ವೇತಾ ಪ್ರಸಾದ್: ರಾಧಾರಮಣ ಹಾಗು ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಅವರು ಕೂಡ ಈ ಬಾರಿ ಬಿಗ್ಬಾಸ್ ಮನೆಗೆ ಬರಲಿದ್ದಾರೆ.
ಬಾಳು ಬೆಳಗುಂದಿ: ಕನ್ನಡದ ಜಾನಪದ ಗಾಯಕ ಹಾಗೂ ಸರಿಗಮಪ ಖ್ಯಾತಿಯ ಬಾಳು ಬೆಳಗುಂದಿ ಕೂಡ ಬಿಗ್ಬಾಸ್ ಮನೆಗೆ ಬರುವ ಸಾಧ್ಯತೆ ಇದೆ.
ಗಗನಾ: ಮಹಾನಟಿ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿರುವ ಗಗನಾ ರವರು ಕೂಡ ಈ ಬಾರಿಯ ಬಿಗ್ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿದೆ.
ಸುಕೃತಾ ನಾಗ್: ಇವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದು, ಈ ಹಿಂದೆ ಒಂದು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರು ಸಹ ಈ ಬಾರಿಯ ಬಿಗ್ ಬಾಸ್ ಸೀಸನ್ 12ರಲ್ಲಿ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ದಿವ್ಯಾ ವಸಂತ್: ಕನ್ನಡ ವಾಹಿನಿ ಸುದ್ದಿ ನಿರೂಪಕಿ ಹಾಗೂ ವಿವಾದಗಳಿಂದ ಖ್ಯಾತಿ ಗಳಿಸಿರುವ ದಿವ್ಯಾ ವಸಂತಾ ಈ ಬಾರಿಯ ಬಿಗ್ ಬಾಸ್ 12ರ ಮನೆಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಸುನಿಲ್: ಸರಿಗಮಪ ಮೂಲಕ ಖ್ಯಾತಿ ಗಳಿಸಿರುವ ಗಾಯಕ ಸುನಿಲ್ ಅವರು ತಮ್ಮ ಸಂಗೀತದ ಪ್ರತಿಭೆಯಿಂದ ಮನೆಮಾತಾಗಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಸುನಿಲ್ ಅವರು ಕೂಡ ಬಿಗ್ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಇದಿಷ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಸ್ಪರ್ಧಿಗಳ ಲಿಸ್ಟ್ ಆಗಿರುತ್ತದೆ. ಇದು ಕೇವಲ Expected Contestant ಗಳ ಲಿಸ್ಟ್ ಆಗಿರುತ್ತದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ಬಾಸ್ ಮನೆಗೆ ಯಾರ್ಯಾರು ಬರಲಿದ್ದಾರೆ ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada, ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಪಟ್ಟಿ, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, BBK12 Contestants List, Bigg Boss 12 Contestants List
