ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಬಾಕಿ ಇರುವ 21 ಮತ್ತು 22ನೇ ಕಂತಿನ ₹4,000 ಹಣವನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಯಾವೆಲ್ಲ ಜಿಲ್ಲೆಗಳಿಗೆ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಇದೀಗ ನೋಡೋಣ ಮತ್ತು ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ.
Gruhalakshmi Scheme 21th installment, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆಯ ₹4000 ಹಣ ಬಿಡುಗಡೆ, Congress Guarantee Scheme, Gruhalakshmi scheme update kannada, Government Scheme Updateಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದು. ಈ ಯೋಜನೆಯ ಮೂಲಕ ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳು ಸಿಗುತ್ತವೆ. ಇಲ್ಲಿಯವರೆಗೆ ಒಟ್ಟಾರೆಯಾಗಿ 20 ಕಂತಿನವರೆಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗಿದೆ. ಅಂದರೆ ಒಟ್ಟಾರೆಯಾಗಿ 40,000 ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನೀಡಲಾಗಿದೆ. ಇವಾಗ ನೀಡಬೇಕಾಗಿರುವುದು 21, 22 ಮತ್ತು 23ನೇ ಕಂತಿನ ಹಣವನ್ನು ನೀಡಬೇಕಾಗಿರುವುದು.
ಇನ್ನು ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಜುಲೈ ತಿಂಗಳಲ್ಲಿ ನಾವು ಒಂದು ಕಂತಿನ ಹಣ ಜಮಾ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಯಾರಿಗೂ ಕೂಡ ಯೋಜನೆ ಹಣ ಜಮಾ ಮಾಡಲಾಗಿಲ್ಲ. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಜಮಾ ಆಗುತ್ತೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಮಾಹಿತಿಗೆ: ರಾಜ್ಯದ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಗುಡ್ ನ್ಯೂಸ್, ಪಡಿತರ ಜೊತೆಗೆ ಈ ವಸ್ತುಗಳು ಫ್ರೀ, Government Scheme 2025
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು.
ಗೃಹಲಕ್ಷ್ಮೀ ಯೋಜನೆ / Gruhalakshmi Scheme:
ಮಹಿಳೆಯರಿಗೆ ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ..?
ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೆಗೆ 20 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 40,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈಗ ನೀಡಬೇಕಿರುವುದು 3 ಕಂತಿನ ಹಣ. ಹೌದು 21,22 ಮತ್ತು 23ನೇ ಕಂತಿನ ಹಣ. ಇದು ಮೇ, ಜೂನ್ ಮತ್ತು ಜುಲೈ ತಿಂಗಳ ಹಣ ನೀಡಬೇಕಾಗಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಇನ್ನು ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಹಿಂದೆ ಹೇಳಿರುತ್ತಾರೆ. ಜುಲೈ ತಿಂಗಳಿನಲ್ಲಿ 1 ಕಂತು ಜಮಾ ಮಾಡುತ್ತೇವೆ ಅಂತ. ಆದರೆ ಜುಲೈ ತಿಂಗಳಿನಲ್ಲಿ ಯಾರಿಗೂ ಜಮಾ ಆಗಿಲ್ಲ.
ವರಮಹಾಲಕ್ಷ್ಮೀ ಹಬ್ಬಕ್ಕೆ ಒಟ್ಟಿಗೆ ಗೃಹಲಕ್ಷ್ಮೀ ಯೋಜನೆಯ ₹4,000 ಹಣ ಬಿಡುಗಡೆ..?
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ (gruh Lakshmi) ಯೋಜನೆ 21 ಮತ್ತು 22ನೇ ಕಂತಿನ (Money released) ಹಣ ಒಟ್ಟು ₹4,000 ರೂಪಾಯಿ ಬಿಡುಗಡೆಗೆ ಸಂಬಂಧಿಸಿದಂತೆ ಸರಕಾರ ಕಡೆಯಿಂದ ಆದೇಶ ಮಾಡಲಾಗಿದೆ.!
ಆದರಿಂದ ಸುಮಾರು 1.24 ಕೋಟಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಈಗಾಗಲೇ ಆದೇಶ ಮಾಡಲಾಗಿದೆ. ಹಾಗಾಗಿ ಆಯಾ ತಾಲೂಕುಗಳಲ್ಲಿ ಇರುವ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ (TPOE) ವರ್ಗಾವಣೆ ಮಾಡಲಾಗುತ್ತಿದೆ. ನಂತರ ಮಹಿಳೆಯರ ಖಾತೆಗೆ ಡೈರೆಕ್ಟ್ ಆಗಿ ಈ ಹಣ ವರ್ಗಾವಣೆ ಮಾಡಲಾಗುತ್ತದೆ.
ಮತ್ತಷ್ಟು ಮಾಹಿತಿಗೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ, Free sewing machine scheme, Karnataka Government Scheme 2025
ಹೌದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಯಿಂದ ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಪ್ರಾರಂಭವಾಗುತ್ತದೆ ಹಾಗೂ ಈ ಹಣವು ಇನ್ನೂ ಒಂದು ವಾರದ ಒಳಗಡೆ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗುವಂತೆ ಮಾಡಲಾಗುತ್ತದೆ.
ಹಾಗಾಗಿ ಹಣ ಬರುವವರೆಗೂ ಮಹಿಳೆಯರು ತಾಳ್ಮೆಯಿಂದ ಕಾಯಬೇಕು. ಮೊದಲು 21ನೇ ಕಂತಿನ ಹಣ 2000 ವರ್ಗಾವಣೆ ಮಾಡಲಾಗುತ್ತದೆ ಹಾಗೂ 22ನೇ ಕಂತಿನ ಹಣ ಈ ತಿಂಗಳ ಕೊನೆಯ ವಾರದಲ್ಲಿ ವರ್ಗಾವಣೆ ಮಾಡಲಾಗುತ್ತದೆ.
Gruhalakshmi Scheme 21th installment, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆಯ ₹4000 ಹಣ ಬಿಡುಗಡೆ, Congress Guarantee Scheme, Gruhalakshmi scheme update kannada, Government Scheme Update

