ನಮಸ್ಕಾರ ಸ್ನೇಹಿತರೇ, ನಮ್ಮ ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ ಕಂತಿನ ಹಣ ಪಡೆಯಲು ರಾಜ್ಯ ಸರಕಾರ ಕಡೆಯಿಂದ ಇದೀಗ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಆದ್ದರಿಂದ ನಾವು ಈ ಒಂದು ಲೇಖನದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಇರುವ ರೂಲ್ಸ್ ಗಳೇನೂ ಹಾಗೂ ಗೃಹಲಕ್ಷ್ಮೀ ಪೆಂಡಿಂಗ್ ಇರುವ ಹಣ ಯಾವಾಗ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಇದೀಗ ನೋಡೋಣ.
Gruhalakshmi Scheme, ಗೃಹಲಕ್ಷ್ಮೀ ಯೋಜನೆ ಪೆಂಡಿಂಗ್ ಕಂತಿನ ಹಣ ಪಡೆಯಲು ಮಹಿಳೆಯರಿಗೆ ಹೊಸ ರೂಲ್ಸ್, ನಿಮ್ಮ ಖಾತೆಗೆ 6000 ಜಮಾ ಆಗುತ್ತೆ, ಕೇಂದ್ರ ಸರ್ಕಾರದಿಂದಹೊಸ ಯೋಜನೆ, Government Scheme Update
ಗೃಹಲಕ್ಷ್ಮೀ ಯೋಜನೆ
ಹೌದು ಸ್ನೇಹಿತರೇ, ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯ ಹೊಂದಿರುವ ಯೋಜನೆ ಹಾಗೂ ಅತಿ ಹೆಚ್ಚು ಸರಕಾರ ಕಡೆಯಿಂದ ಲಾಭ ಪಡೆಯುತ್ತಿರುವ ಮಹಿಳೆಯರ ಯೋಜನೆಯೆಂದರೆ ಅದು ಗೃಹಲಕ್ಷ್ಮೀ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ರಾಜ್ಯ ಸರ್ಕಾರ ವತಿಯಿಂದ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿUpdate
ಮತ್ತಷ್ಟು ಮಾಹಿತಿಗೆ: ರಾಜ್ಯದ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಗುಡ್ ನ್ಯೂಸ್, ಪಡಿತರ ಜೊತೆಗೆ ಈ ವಸ್ತುಗಳು ಫ್ರೀ, Government Scheme 2025
ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಯಾವಾಗ ಬಿಡುಗಡೆ..?
ಇಲ್ಲಿವರೆಗೂ ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರು 20 ಕಂತಿನ ಹಣ ಅಂದರೆ ಸುಮಾರು ₹40,000/- ವರೆಗೆ ಮಹಿಳೆಯರು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದರೆ ಎಂದು ಹೇಳಬಹುದು.

ಇನ್ನು ಗೃಹಲಕ್ಷ್ಮೀ ಯೋಜನೇಯ 3 ಕಂತುಗಳು ಬಂದಿಲ್ಲ. ಹೌದು ಮೇ, ಜೂನ್ ಮತ್ತು ಜುಲೈ ತಿಂಗಳ ಹಣ ಬರಬೇಕಾಗಿದೆ. ಹೌದು 21, 22 ಮತ್ತು 23ನೇ ಕಂತು ಜಮಾ ಆಗಬೇಕಾಗಿದೆ. ಅಂದ್ರೆ 6000 ಹಣ ಜಮಾ ಆಗಬೇಕಾಗಿದೆ. ಆದ್ದರಿಂದ ಸಾಕಷ್ಟು ಮಹಿಳೆಯರು ಈ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಯಾವಾಗ ಮಹಿಳೆಯರ ಖಾತೆಗೆ ಬರುತ್ತೆ ಎಂದು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೇಳಿದರೆ ಅವರು ಈ ತಿಂಗಳ ಒಳಗಡೆ ಬಿಡುಗಡೆ ಮಾಡುತ್ತೇವೆ. ಮುಂದಿನ ತಿಂಗಳು ಒಳಗಡೆ ಬಿಡುಗಡೆ ಮಾಡುತ್ತವೆ ಎಂದು ಜನರಿಗೆ ಸುಮ್ಮನೆ ಸುಳ್ಳು ಭರವಸೆ ನೀಡುತ್ತಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಸದ್ಯದಲ್ಲಿ ಈ ಎಲ್ಲಾ ಕಂತಿನ ಹಣ ಬಿಡುಗಡೆ ಮಾಡುತ್ತೇವೆ ಎಂದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಹಾಗಾಗಿ ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಇರುವಂತಹ ಯಾವುದೇ ಕಂತಿನ ಹಣ ಪಡೆಯಲು ಮಹಿಳೆಯರು ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಪಾಲಿಸಬೇಕು ಅವುಗಳು ಎನು ಎಂಬುದನ್ನ ನೋಡೋಣ.
ಗೃಹಲಕ್ಷ್ಮೀ ಯೋಜನೆ ಬಾಕಿ ಹಣ ಪಡೆಯಲು ಇರುವ ರೂಲ್ಸ್ ಗಳು..?
ಹೌದು ಸ್ನೇಹಿತರೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಯಾವ ಮಹಿಳೆಯರಿಗೆ ಇನ್ನು ಐದು ಅಥವಾ ಹತ್ತು ಕಂತಿನ ಹಣ ಜಮಾ ಆಗಿಲ್ಲ ಅಂತ ಮಹಿಳೆಯರು ಈ ಕೆಳಗಡೆ ನೀಡಿದ ಹೊಸ ರೂಲ್ಸ್ ಪಾಲಿಸಬೇಕು. ಒಂದು ವೇಳೆ ನಿಮಗೆ ಮಾರ್ಚ್ ತಿಂಗಳ ಕಂತಿನ ಹಣ ಬಂದಿದ್ದರೆ ನೀವು ಏನು ಮಾಡುವಂತ ಅವಶ್ಯಕತೆ ಇರುವುದಿಲ್ಲ.
ಮತ್ತಷ್ಟು ಮಾಹಿತಿಗೆ: Good news For all Karnataka Women, ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30000 ದಿಂದ 50000 ವರೆಗೆ ಸಿಗಲಿದೆ, Government New Scheme
ಬ್ಯಾಂಕ್ ಖಾತೆ ಸರಿಪಡಿಸಿ: ಗೃಹಲಕ್ಷ್ಮೀ ಯೋಜನೆಯ ಮೂಲಕ ಹಣ ಪಡೆಯುವಂತ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಯು ಇನ್ನೂ ಸರಿಯಾಗಿಲ್ಲ. ಒಂದು ಅಂದಾಜಿನ ಪ್ರಕಾರ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಯು ಸರಿಯಾಗಿ ಇಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಹಾಗಾಗಿ ನಿಮಗೆ ಇನ್ನೂ 8 ಅಥವಾ 10 ಕಂತಿನ ಹಣ ಬಾಕಿ ಇದ್ದರೆ ಕೂಡಲೇ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳಿ ಅಂದರೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ E-KYC ಪ್ರಕ್ರಿಯೆ ಪೂರ್ಣಗೊಳಿಸಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ NPCI ಮ್ಯಾಪಿಂಗ್ ಮಾಡುವುದು ಕಡ್ಡಾಯವಾಗಿದೆ
ರೇಷನ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿ ಸರಿಪಡಿಸಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಮಹಿಳೆಯರು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ E-KYC ಪ್ರಕ್ರಿಯೆ ಪೂರ್ಣಗೊಳಿಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಮತ್ತು ಕುಟುಂಬದ ಮುಖ್ಯಸ್ಥರ ಹೆಸರು ಹಾಗೂ ಬ್ಯಾಂಕ್ ಖಾತೆಯ ಹೆಸರು ಮತ್ತು ಗೃಹಲಕ್ಷ್ಮೀ ಅರ್ಜಿಯ ಹೆಸರು ಒಂದೇ ಇರಬೇಕಾಗುತ್ತದೆ.
ಗೃಹಲಕ್ಷ್ಮೀ ಯೋಜನೆಯ ಅರ್ಜಿಯ E-KYC ಪೂರ್ಣಗೊಳಿಸಿ: ಗೃಹಲಕ್ಷ್ಮೀ ಯೋಜನೆಯ ಅರ್ಜಿ E-kyc ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಇದನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ
ಹೆಚ್ಚಿನ ಮಾಹಿತಿ ಪಡೆಯಲು DWCD ಇಲಾಖೆಗೆ ಭೇಟಿ ನೀಡಿ: ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಲವಾರು ಕಂತಿನ ಹಣ ಬಾಕಿ ಇದ್ದರೆ ಹಾಗೂ ನಿಮಗೆ ಪ್ರತಿ ತಿಂಗಳು ಹಣ ಜಮಾ ಆಗುತ್ತಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
Gruhalakshmi Scheme, ಗೃಹಲಕ್ಷ್ಮೀ ಯೋಜನೆ ಪೆಂಡಿಂಗ್ ಕಂತಿನ ಹಣ ಪಡೆಯಲು ಮಹಿಳೆಯರಿಗೆ ಹೊಸ ರೂಲ್ಸ್, ನಿಮ್ಮ ಖಾತೆಗೆ 6000 ಜಮಾ ಆಗುತ್ತೆ, ಕೇಂದ್ರ ಸರ್ಕಾರದಿಂದಹೊಸ ಯೋಜನೆ, Government Scheme Update
