ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಯಾವೆಲ್ಲ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಗೊತ್ತೇ.? Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-12 ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಮನೆಯ ಪಂಚಾಯಿತಿ ನಡೆಸಿಕೊಡಲಿದ್ದಾರೆ. ಹಾಗಾಗಿ ವೀಕ್ಷಕರಿಗೆ ಇದ್ದ ಎಲ್ಲ ಗೊಂದಲಗಳು ದೂರಾಗಿವೆ. ಇನ್ನು ಈಗ ಎಲ್ಲರ ಚಿತ್ತ ಇರುವುದು ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿರುವ ಸ್ಪರ್ಧಿಗಳತ್ತ ಇದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಕೆಲವ ಸೆಲೆಬ್ರಿಟಿಗಳ ಹೆಸರುಗಳು ಓಡಾಡುತ್ತಿವೆ. ಸದ್ಯ ಹಲವು ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದ್ದು, ಅವರು ಯಾರು? ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಯಾವೆಲ್ಲ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಗೊತ್ತೇ.? Bigg Boss Kannada, BBK12, Kiccha Sudeep

ಬಿಗ್ ಬಾಸ್ ಕನ್ನಡದಲ್ಲಿ ತನ್ನ  11 ಸೀಸನ್ ಗಳನ್ನ  ಕಂಪ್ಲೀಟ್ ಮಾಡಿದ್ದು, ಈಗ ಬಿಗ್ ಬಾಸ್12 ನೆ ಸೀಸನ್ ನ  ಆರಂಭಕ್ಕೆ ಸಹ ಮುಹೂರ್ತ ಫಿಕ್ಸ ಆಗಿದೆ. ಅಷ್ಟೇ ಅಲ್ಲದೆ ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೆ ಬಿಗ್ ಬಾಸ್ ಸೀಸನ್ 12 ರ ನಿರೂಪಣೆ ಸಹ ಮಾಡಲಿದ್ದು, ಇದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ. ಹಾಗಾದ್ರೆ ಈ ಬಾರಿ ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭವಾಗಲಿದೆ, ಹಾಗೆ ಯಾವ ಸಮಯಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ ಎಂದು ನೋಡೋಣ ಬನ್ನಿ.

ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಹಾಗೆ ಯಾವ ಸಮಯಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ :

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿಗಳಿಸಿರುವ ಬಿಗ್ ಬಾಸ್ ಕಾರ್ಯಕ್ರಮವು ಸತತ 11 ಸೀಸನ್ ಗಳನ್ನ ಯಶಸ್ವಿಯಾಗಿ  ಮುಗಿಸಿದ್ದು ಈಗ ಬಿಗ್ ಬಾಸ್ 12ನೇ ಸೀಸನ್ ಅತ್ತ ಮುಖ ಮಾಡಿದೆ. ಹೌದು ಬಿಗ್ ಬಾಸ್ ಆರಂಭಕ್ಕಾಗಿ ಹಲವಾರು ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಾದರೆ ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭವಾಗಲಿದೆ ಎಂದು ನೋಡೊದಾದ್ರೆ, ಬಿಗ್ ಬಾಸ್ ಸೀಸನ್ 12 ಇದೆ ಸೆಪ್ಟೆಂಬರ್ 28 ನೇ ತಾರೀಕಿನಿಂದ ಆರಂಭವಾಗಲಿದೆ, ಹಾಗೆ ಯಾವ ಸಮಯಕ್ಕೆ ಬಿಗ್ ಬಾಸ್ ಆರಂಭವಾಗಲಿದೆ ಎಂದು ನೋಡೋದಾದ್ರೆ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಬಿಗ್ ಬಾಸ್ ಕಾರ್ಯಕ್ರಮ ರಾತ್ರಿ 9:30 ರಿಂದ ಆರಂಭವಾಗಿ 11 ಗಂಟೆಯ ವರೆಗೆ ಪ್ರಸಾರವಾಗಲಿದೆ.

Recent Post: 
ಬಿಗ್ ಬಾಸ್ ಸೀಸನ್ 12 ಸ್ಪರ್ಧಿಗಳು ಯಾರು:

ಬಿಗ್ ಬಾಸ್ ಸೀಸನ್ 12 ಆರಂಭವಾಗುತ್ತಿದೆ ಎಂದು ಕೇಳಿಬರುತ್ತಿದ್ದಂತೆ . ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ಬಿಗ್ ಬಾಸ್ ಸೀಸನ್ 12 ಕ್ಕೆ ಯಾವೆಲ್ಲ ಸ್ಪರ್ಧಿಗಳು ಬರಬಹುದು ಎನ್ನುವ ಕೆಲವು ಸ್ಪರ್ಧಿಗಳ ಹೆಸರು ಕೇಳಿಬರುತ್ತೆ. ಹಾಗಾದ್ರೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವೆಲ್ಲ ಸ್ಪರ್ಧಿಗಳು ಬರಬಹುದು ಎನ್ನುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

ವಿಜಯ್ ಸೂರ್ಯ:  ಅಗ್ನಿಸಾಕ್ಷಿ ಧಾರವಾಹಿ ಮೂಲಕ ಖ್ಯಾತಿಗಳಿಸಿರುವ ವಿಜಯ್ ಸೂರ್ಯ ಮೊದಲು ನಟಿಸಿದ್ದು ಜಿ ಕನ್ನಡದ ಪಾರ್ವತಿ ಪರಮೇಶ್ವರ ಎನ್ನುವ ಧಾರಾವಾಹಿಯಲ್ಲಿ. ಈ ಬಳಿಕ ಕ್ರೇಜಿ ಲೋಕ ಎನ್ನುವ ಸಿನಿಮಾದಲ್ಲಿ ನಟಿಸಿದ ವಿಜಯ್ ಸೂರ್ಯ ಅವರು ಮತ್ತೆ ಕಿರುತೆರೆಗೆ ಮರಳುತ್ತಾರೆ ಈ ಬಳಿಕ ಅವರು ಅಗ್ನಿಸಾಕ್ಷಿ, ಪ್ರೇಮ ಲೋಕ, ಲಕ್ಷ್ಮೀ ಬಾರಮ್ಮ, ಜೊತೆ ಜೊತೆಯಲಿ, ನಮ್ಮ ಲಚ್ಚಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ, ಹಾಗೆ ಇಷ್ಟ ಕಾಮ್ಯ, ಗಾಳಿಪಟ 2, ಕದ್ದು ಮುಚ್ಚಿ ಎನ್ನುವ ಸಿನಿಮಾದಲ್ಲಿ ಸಹ ನಟಿಸಿದ್ದು, ಸದ್ಯ ದೃಷ್ಟಿ ಬೊಟ್ಟು ಎನ್ನುವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

ಮೌನ ಗುಡ್ಡೆಮನೆ: ರಾಮಾಚಾರಿ ಧಾರವಾಹಿ ಮೂಲಕ ಚಿಕ್ಕ ವಯಸ್ಸಿನಲ್ಲೇ ಕಿರುತೆರೆಗೆ ಎಂಟ್ರಿ ಕೊಟ್ಟ ಮೌನ ಗುಡ್ಡೇಮನೆ ಅವರು ನಂತರ ಕುಲದಲ್ಲಿ ಕೀಳ್ಯಾವುದೋ ಎನ್ನುವ ಸಿನಿಮಾದಲ್ಲಿ ಸಹ ನಟಿಸಿದ್ದು, ಸದ್ಯ ರಾಮಾಚಾರಿ ಧಾರವಾಹಿ ಮುಕ್ತಾಯಗೊಂಡ ನಂತರ ಮೌನ ಗುಡ್ಡೆಮನೆ ಅವರು ಸಹ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬಾಳು ಬೆಳಗುಂದಿ: ಜನಪದ ಹಾಡುಗಳ ಮೂಲಕ ಖ್ಯಾತಿಗಳಿಸಿರುವ ಬಾಳು ಬೆಳಗುಂದಿ ಅವರು ಸರಿಗಮಪ ಸೀಸನ್ 21 ರ ಸ್ಪರ್ಧಿಯಾಗಿ ಸಹ ಕಾಣಿಸಿಕೊಂಡಿದ್ದು, ಈಗ ಇವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಂಜನಾ ಬರ್ಲಿ: ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಗುರುತಿಸಿಕೊಂಡಿರುವ ಸಂಜನಾ ಬರ್ಲಿ ಅವರು ಇದಕ್ಕೂ ಮೊದಲು ಲಗ್ನ ಪತ್ರಿಕೆ ಎನ್ನುವ ಸೀರಿಯಲ್ ನಲ್ಲಿ ನಟಿಸಿದ್ದು ಈ ಧಾರಾವಾಹಿಯು ಕಾರಣಾಂತರಗಳಿಂದ ಅರ್ಧದಲ್ಲೇ ನಿಲ್ಲಿಸಲಾಯಿತು, ಈ ಬಳಿಕ ಅವರಿಗೆ ಅವಕಾಶ ಸಿಕ್ಕಿದ್ದೇ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ, ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆಗಳಿಸಿದ ಯಾರು ಈ ಬಳಿಕ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರನಡೆದಿದ್ದು, ಈಗ ಇವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

MD ಸಮೀರ್: ಯೂಟ್ಯೂಬರ್ ಆಗಿರುವ ಸಮೀರ್ ಅವರು ಸದ್ಯ  ಸೌಜನ್ಯ ಕೇಸ್ ಬಗ್ಗೆ ಯೂಟ್ಯೂಬ್ ನಲ್ಲಿ ಮಾತನಾಡುವ ಮೂಲಕ ಸಂಚಲನ ಮೂಡಿಸುವ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದು, ಇವರು ಸಹ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪಾಯಲ್ ಚಂಗಪ್ಪ: ಅಮೃತಾಂಜನ್ ಎನ್ನುವ ಶೋರ್ಟ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಪಾಯಲ್ ಚಂಗಪ್ಪ ಅವರು ನಂತರ -18+ , ಹ್ಯಾಪಿ ಮ್ಯಾರೀಡ್ ಲೈಫ್, ಜುಗ್ಗ ಗಂಡ 2 ಇನ್ನೂ ಮುಂತಾದ ಶಾರ್ಟ್ ಸಿನಿಮಾ ಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದು, ಇವರು ಸಹ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇನ್ನು ಮುಂತಾದ ಸ್ಪರ್ಧಿಗಳು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಇದಿಷ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಸ್ಪರ್ಧಿಗಳ ಲಿಸ್ಟ್ ಆಗಿರುತ್ತದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಕಾಮೆಂಟ್ ಮಾಡಿ.

ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಯಾವೆಲ್ಲ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಗೊತ್ತೇ.? Bigg Boss Kannada, BBK12, Kiccha Sudeep

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment