ನಮಸ್ಕಾರ ಸ್ನೇಹಿತರೇ, Bigg Boss Kannada Season 11 ಮುಗಿದು ಇದೀಗ 12ನೇ ಸೀಸನ್ ಗೆ ಕಾಲಿಟ್ಟಿದೆ. ‘ಕಿಚ್ಚ ಸುದೀಪ್’ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೀಘ್ರದಲ್ಲೇ ಆರಂಭವಾಗಲಿದ್ದು, ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಹೆಚ್ಚಿಸಿದೆ.
ಬಿಗ್ ಬಾಸ್ ಕನ್ನಡ 12' ಶೋ ಗಾಗಿ ಮನೆ ನಿರ್ಮಾಣ, Bigg Boss Kannada 12 New House Review, ಈ ಸಲದ ಬಿಗ್ ಬಾಸ್ ನ ಹೊಸ ಮನೆ ಎಲ್ಲಿ ನಿರ್ಮಾಣವಾಗಲಿದೆ, BBK12, Kiccha Sudeep
ಈ ಬಾರಿ ಬಿಗ್ ಬಾಸ್ ಮನೆಯ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹೌದು, ಹೊಸ ವಿನ್ಯಾಸದೊಂದಿಗೆ ಮನೆ ನಿರ್ಮಾಣವಾಗುತ್ತಿದ್ದು, ಕುಂಬಳಗೋಡು ಸಮೀಪದ ಇದ್ದ ಬಿಗ್ ಬಾಸ್ ಮನೆ ಈಗ ಶಿಫ್ಟ್ ಆಗುತ್ತಿದೆ. ಹಾಗಾದ್ರೆ, ಎಲ್ಲಿ ನಡೆಯಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಕಿಚ್ಚ’ ಸುದೀಪ್ ಅವರ ಸಾರಥ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕೂಡ ಹುಟ್ಟಿಕೊಂಡಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ? ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಟಾಸ್ಕ್ ಇರಬಹುದು ಎಂಬ ಕುತೂಹಲ ಕೂಡ ಇದೆ. ಸದ್ಯ ಬಿಗ್ ಬಾಸ್ ಮನೆ ಬಗ್ಗೆ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾವಣೆ ಆಗಲಿದೆ. ಹೌದು ಹೊಸದೊಂದು ಜಾಗದಲ್ಲಿ ಬಿಗ್ ಬಾಸ್ ನ ಮನೆ ನಿರ್ಮಾಣ ಕೂಡ ಆಗುತ್ತಿದೆ.

ಬಿಗ್ ಬಾಸ್ ಮನೆ ಬದಲಾವಣೆ:
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮೊದಲ ಎರಡು ಸೀಸನ್ಗಳನ್ನು ಪುಣೆಯ ಲೋನಾವಾಲಾದಲ್ಲಿ ನಡೆಸಲಾಯಿತು. ಇನ್ನು ಮೂರನೇ ಸೀಸನ್ನಿಂದ ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಯ್ತು. ಆರಂಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ವಿನ್ಯಾಸ ಮಾಡಲಾಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 3’ ರಿಂದ ‘ಬಿಗ್ ಬಾಸ್ ಕನ್ನಡ 9’ ವರೆಗಿನ ಶೋಗಳು ಹಾಗೂ ‘ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1’ ಕೂಡ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಡೆಸಲಾಗಿತ್ತು. ಆ ನಂತರ ಅಲ್ಲಿಂದ ಲೊಕೇಷನ್ ಅನ್ನು ಶಿಫ್ಟ್ ಮಾಡಲಾಯಿತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್ಗಳನ್ನು ನಡೆಸಲಾಗಿದೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮನೆ ನಿರ್ಮಾಣ:
ಇದೀಗ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದೀಗ ಪುನಃ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಯಾವಾಗ ಶುರುವಾಗುತ್ತೆ ಬಿಗ್ ಬಾಸ್?
ಬಿಗ್ ಬಾಸ್ ಕನ್ನಡ 12 ಶೋವನ್ನು ಈ ಬಾರಿ ಸೆಪ್ಟೆಂಬರ್ ನ ಕೊನೇ ವಾರದಿಂದ ಆರಂಭಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಸುದೀಪ್ ಕೂಡ ಹಿಂದೊಮ್ಮೆ ಸೆಪ್ಟೆಂಬರ್ನಲ್ಲಿ ಬಿಗ್ ಬಾಸ್ ಆರಂಭವಾಗುವ ಬಗ್ಗೆ ಸಣ್ಣ ಹಿಂಟ್ ನೀಡಿದ್ದರು. ಅದೇ ರೀತಿ ಈ ಬಾರಿಯ ಬಿಗ್ ಬಾಸ್ ಸೀಸನ್ ಕೂಡ ಸೆಪ್ಟೆಂಬರ್ ನ ಕೊನೆಯ ವಾರ ಶುರು ವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು:
ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿರುವುದು ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಇರುತ್ತಾರೆ ಎಂಬುವುದು. ಇದೀಗ ಒಂದಿಷ್ಟು ಜನರ ಹೆಸರುಗಳು ಇದೀಗ ಕೇಳಿಬರುತ್ತಿದೆ. ಅದರ ಬಗ್ಗೆ ನಮ್ಮ ಚಾನೆಲ್ ನಲ್ಲಿ ಒಂದು ಲೇಖನ ಈಗಾಗಲೇ ಬರೆಯಲಾಗಿದೆ. ಒಮ್ಮೆ ಅದನ್ನ ನೀವು ಕೂಡ ಓಡಿ
ಮತ್ತಷ್ಟು: Bigg Boss Kannada: ಬಿಗ್ಬಾಸ್ ಸೀಸನ್-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದಾರೆ, BBK12, BBK12 Contestants List
ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ಬಾಸ್ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ.
ಬಿಗ್ ಬಾಸ್ ಕನ್ನಡ 12′ ಶೋ ಗಾಗಿ ಮನೆ ನಿರ್ಮಾಣ, Bigg Boss Kannada 12 New House Review, ಈ ಸಲದ ಬಿಗ್ ಬಾಸ್ ನ ಹೊಸ ಮನೆ ಎಲ್ಲಿ ನಿರ್ಮಾಣವಾಗಲಿದೆ, BBK12, Kiccha Sudeep
