ನಮಸ್ಕಾರ ಸ್ನೇಹಿತರೇ, Gruhalakshmi Yojane ಎಲ್ಲಾ ಕಂತುಗಳು ಇದೀಗ ಎಲ್ಲರಿಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹೌದು ಮಾರ್ಚ್ ತಿಂಗಳಲ್ಲಿ 2 ಕಂತುಗಳು ನೀಡಲಾಗಿತ್ತು.
ಗೃಹಲಕ್ಷ್ಮೀ ಯೋಜನೆ ಎಲ್ಲಾ ಬಾಕಿ ಕಂತುಗಳು ಜಮಾ, ಸ್ಪಷ್ಟನೆ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ, Gruhalakshmi Scheme amount Released, Congress Guarantee Scheme, Laxmi Hebbalkar
ಇದೀಗ ಬಾಕಿ ಉಳಿದಿರುವ ಕಂತುಗಳು ಜಮಾ ಮಾಡಲಾಗುತ್ತಿದೆ. ಇದೀಗ ಯಾವೆಲ್ಲಾ ರಾಜ್ಯಗಳಿಗೆ ಮೊದಲು ಜಮಾ ಆಗುತ್ತೆ. ಇನ್ನು ಗೃಹಲಕ್ಷ್ಮೀ ಯೋಜನೆ ಹಣ ಜಮಾ ಆಗಿಲ್ಲ ಎನ್ನುವವರಿಗೆ ಅವರಿಗೆ ಈ ಯೋಜನೆ ಹಣ ಜಮಾ ಆಗಬೇಕು ಅಂದ್ರೆ ಎನು ಮಾಡಬೇಕು ಅನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೋಡೋಣ.
ಹೌದು ಗೃಹಲಕ್ಷ್ಮೀ ಯೋಜನೆ 16 ಮತ್ತು 17ನೇ ಕಂತು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅಂದ್ರೆ ಮಾರ್ಚ್ ತಿಂಗಳಿನಲ್ಲಿ 4000 ಹಣ ( 2 ಕಂತುಗಳು ) ಜಮಾ ಮಾಡಲಾಗಿತ್ತು. ಆದರೆ ಇದೀಗ ಎಪ್ರಿಲ್ ತಿಂಗಳಿನಲ್ಲಿ ಮತ್ತೆ ಎರಡು ಕಂತುಗಳು ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೌದು ಇದು 18 ಮತ್ತು 19ನೇಯ ಕಂತು ಆಗಿರುತ್ತದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.

ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೆಗೆ 17 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 34,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೇ ಎನ್ನುವ ಸ್ಪಷ್ಟನೆಯೊಂದನ್ನ ನೀಡಿದ್ರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿರುವಂತೆ ಇದೀಗ 18 ಮತ್ತು 19ನೇ ಯ ಕಂತು ಬಿಡುಗಡೆ ಮಾಡುವುದರ ಬಗ್ಗೆ ಸ್ಪಷ್ಟನೆಯೊಂದನ್ನ ನೀಡಿದ್ದರೆ. ಇದೀಗ 17ನೇ ಕಂತಿನ ಹಣದ ವರೆಗೆ ಜಮಾ ಮಾಡಲಾಗಿದೆ. ಅಂದೇ 34,000 ವರೆಗೆ ಇದು ಮಾರ್ಚ್ ತಿಂಗಳಿನಲ್ಲಿ 16 ಮತ್ತು 17ನೇ ಕಂತು 4000 ಹಣ ಒಟ್ಟಿಗೆ ಬಿಡುಗಡೆ ಮಾಡಲಾಗಿತ್ತು. ಇದೀಗ 18 ಹಾಗೂ 19ನೇ ಕಂತಿನ ಹಣದ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಸ್ಪಷ್ಟಣೆಯೊಂದನ್ನ ನೀಡಿದ್ದಾರೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
18 ಹಾಗೂ 19ನೇ ಕಂತಿನ ಹಣ ಯಾವಾಗ ಬರುತ್ತೆ:
ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆ ಹಣ 17ನೇ ಕಂತು ಮಾರ್ಚ್ ತಿಂಗಳಿನಲ್ಲಿ ಬಂದಿತ್ತು. ಒಟ್ಟು 34,000 ವರೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮಾ ಮಾಡಲಾಗಿದೆ. ಇನ್ನು ಇವರುಗಳಿಗೆ ಬರಬೇಕಾಗಿದ್ದು, 18ನೇ ಕಂತು ಎಪ್ರಿಲ್ ಮೊದಲ ವಾರ ಒಂದು ಕಂತು ಜಮಾ ಆಗಿತ್ತು. ಇನ್ನು 19ನೇ ಕಂತು ಎಪ್ರಿಲ್ ನ 3ನೇ ವಾರ ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೆಲ ತಾಂತ್ರಿಕ ದೋಷಗಳ ಕಾರಣದಿಂದ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಹಣ ಬಿಡುಗಡೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾದ್ಯಮಗಳ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಕೆಲ ಕಂತುಗಳು ಬರದೆ ಇರುವುದು:
ರಾಜ್ಯದಲ್ಲಿ ಕೆಲವರಿಗೆ ಗೃಹಲಕ್ಷ್ಮೀ ಯೋಜನೆ ಕಂತುಗಳು ಬಂದಿಲ್ಲ. ಇನ್ನು ಕೆಲವರಿಗೆ ಅನೇಕ ಕಂತುಗಳು ಬಂದಿಲ್ಲ. ಅಂತವರು ಯಾವುದೇ ರೀತಿಯಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ. ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ನಲ್ಲಿ ಕೆಲ ತಾಂತ್ರಿಕ ದೋಷಗಳನ್ನ ಪರಿಹರಿಸಿ ನಂತರ ಹಣ ಜಮಾ ಮಾಡಲಿದ್ದೇವೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರೆ. ಇನ್ನು ಈ ಮಧ್ಯೆ ಕೆಲವರ ಗೃಹಲಕ್ಷ್ಮೀ ಅಪ್ಲಿಕೇಷನ್ ಗಳನ್ನ ಕ್ಯಾನ್ಸಲ್ ಮಾಡಲಾಗಿದೆ. ಅವರುಗಳು ಮತ್ತೆ ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ನೀವು ಅರ್ಜಿಯನ್ನ ಸಲ್ಲಿಸಬೇಕು. ಹೊಸ ಅರ್ಜಿ ಸಲ್ಲಿಸಿದ ನಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಜಮಾ ಆಗುತ್ತದೆ.
ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
ಗೃಹಲಕ್ಷ್ಮೀ ಯೋಜನೆ ಎಲ್ಲಾ ಬಾಕಿ ಕಂತುಗಳು ಜಮಾ, ಸ್ಪಷ್ಟನೆ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ, Gruhalakshmi Scheme amount Released, Congress Guarantee Scheme, Laxmi Hebbalkar
