ನಮಸ್ಕಾರ ಸ್ನೇಹಿತರೇ, 3 ಲಕ್ಷ ರೂ.ವರೆಗೆ ಸಾಲಕ್ಕೆ ಬಡ್ಡಿ ರಿಯಾಯಿತಿ ಸಾಲ ಸೌಲಭ್ಯ ಇದೀಗ ಸರ್ಕಾರದಿಂದ ನೀಡಲಾಗುತ್ತಿದೆ. ಇನ್ನು ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದವರಿಗೆ ಹೆಚ್ಚುವರಿ ವಿನಾಯಿತಿ ಖಾರಿಫ್ ಬೆಳೆ ಬೆಂಬಲ ಬೆಲೆ ಹೆಚ್ಚಳ ಅನುಮೋದನೆ ಯನ್ನ ಇದೀಗ Kisan Credit Card ಮೂಲಕ ಸರ್ಕಾರದ ಯೋಜನೆಗಳನ್ನು ಇದೀಗ ನೀಡಲಾಗುತ್ತಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ಏನೇನು ಮಾಡಬೇಕು ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
3 ಲಕ್ಷದವರೆಗೆ ಸಾಲಕ್ಕೆ ಬಡ್ಡಿ ರಿಯಾಯಿತಿ, Government Free Loan Scheme, Kisan Credit Card Yojana, Karnataka Rural Development, Karnataka Subsidy Scheme
Kisan Credit Card Interest: ಸಮಯಕ್ಕೆ ಸಾಲ ಪಾವತಿ (Loan Repayment) ಮಾಡುತ್ತಿರುವ ರೈತರಿಗೆ (Farmers) ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಹೌದು ಅವರುಗಳಿಗೆ ಕೇಂದ್ರ ಸರ್ಕಾರ 3% ಬಡ್ಡಿ ವಿನಾಯಿತಿಯನ್ನು (interest rebate) ನೀಡಲಿದ್ದು, ಇದರಿಂದ ಒಟ್ಟಾರೆ ಬಡ್ಡಿದರ ಕೇವಲ 4% ಆಗಲಿದೆ. ರೈತರ ಭಾರವನ್ನು ಕಡಿಮೆ ಮಾಡಲು ಈ ಕ್ರಮ ಇದೀಗ ದೊಡ್ಡ ಮಟ್ಟದಲ್ಲಿ ಸಹಾಯಕವಾಗಲಿದೆ.
ಇದೇ ಸಂದರ್ಭದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ಹೊತ್ತಿರುವ ರೈತರಿಗೆ ಮತ್ತೊಂದು ಭದ್ರತೆ ನೀಡಲು ಸರ್ಕಾರ ಮುಂದಾಗಿದೆ. ಖಾರಿಫ್ ಬೆಳೆಗಳಿಗೆ (Kharif crops) ಬೆಂಬಲ ಬೆಲೆ (MSP) ಹೆಚ್ಚಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂಲಕ ಬೆಳೆಗಳಿಗೆ ಬೆಂಬಲ ಬೆಲೆ ಏರಿಕೆಯಾಗಿದೆ.
ಹುಚ್ಚೆಳ್ಳು ಕ್ವಿಂಟಾಲ್‌ಗೆ ₹820ರಷ್ಟು ಹೆಚ್ಚಳವಾಗಿದ್ದು, ರಾಗಿಗೆ ₹596ರಷ್ಟು, ಭತ್ತಕ್ಕೆ ₹65ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಜೊತೆಗೆ ತೊಗರಿ ಬೇಳೆಗೆ ₹450, ಉದ್ದಿನ ಬೇಳೆಗೆ ₹400 ಹೆಚ್ಚಳವೂ ಒಪ್ಪಿಗೆಯಾಗಿದೆ. ಈ ಮೂಲಕ ಸರ್ಕಾರ ಸಿದ್ಧತೆ ಮಾಡಿಕೊಂಡಿರುವುದು ರೈತರ ಪರವಾದ ನಿಲುವನ್ನು ದೃಢಪಡಿಸುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ:
- ಅರ್ಜಿದಾರ ರೈತರು ಭಾರತೀಯ ಪ್ರಜೆಯಾಗಿರಬೇಕು.
- ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
- ಬೇರೆಯವರ ಜಮೀನಿನಲ್ಲಿ ಸಾಗುವಳಿ ಮಾಡುವ ವ್ಯಕ್ತಿಯೂ ಈ ಕಾರ್ಡ್ ಮಾಡಿಸಿಕೊಳ್ಳಬಹುದು.
- ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
Recent Post:
-
9 to 5 Job ಗೆ ಹೇಳಿ ಗುಡ್ ಬೈ; ಮನೆಯಲ್ಲೇ ಕುಳಿತು ಲಕ್ಷ ಗಟ್ಟಲೆ ಸಂಪಾದಿಸಿ ಕೈ ತುಂಬ ಹಣ! Work Form Home, Online Earning Tips 2025
-
SBI Scholarship 2025, ಎಸ್ ಬಿ ಐ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತೆ 20 ಲಕ್ಷ ಸ್ಕಾಲರ್ಶಿಪ್, SBIF ಆಶಾ ವಿದ್ಯಾರ್ಥಿವೇತನ, Scholarship 2025
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅಗತ್ಯವಿರುವ ದಾಖಲೆಗಳು:
- ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆಗಳನ್ನು ಹೊಂದಿರಬೇಕು.
- ಬೇರೆಯವರ ಜಮೀನಿನಲ್ಲಿ ರೈತರು ಸಾಗುವಳಿ ಮಾಡಿದರೆ, ಹೊಲಗಳ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ ಹೊಂದಿರಬೇಕು.
- ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
- ಜಮೀನಿನ ಆರ್‌ಟಿಸಿ ಪ್ರತಿ
- ಅರ್ಜಿದಾರರ ಪ್ಯಾನ್ ಕಾರ್ಡ್
- ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ
- ಅರ್ಜಿದಾರರು ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲಗಾರರಾಗಿಲ್ಲದ ಅಫಿಡವಿಟ್
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ:
- ಅರ್ಜಿದಾರ ರೈತರು ಭಾರತೀಯ ಪ್ರಜೆಯಾಗಿರಬೇಕು.
- ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
- ಬೇರೆಯವರ ಜಮೀನಿನಲ್ಲಿ ಸಾಗುವಳಿ ಮಾಡುವ ವ್ಯಕ್ತಿಯೂ ಈ ಕಾರ್ಡ್ ಮಾಡಿಸಿಕೊಳ್ಳಬಹುದು.
- ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್‌ಸೈಟ್ ಗೆ ಭೇಟಿ ನೀಡಿ.
ಹಂತ 2: ವೆಬ್‌ಸೈಟ್ ತೆರೆದ ನಂತರ, ನೀವು ಸೈಟ್‌ನ ಮುಖಪುಟದಿಂದ ಕೆಳಗೆ ಸ್ಕ್ರಾಲ್ ಮಾಡಿ, ಸ್ಕ್ರೀನ್‌ನ ಬಲಭಾಗದಲ್ಲಿ ಕಾಣುವ KCC ಫಾರ್ಮ್ ಡೌನ್‌ಲೋಡ್ ಮಾಡುವ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಅರ್ಜಿ ಡೌನ್‌ಲೋಡ್ ಆಗುತ್ತದೆ.
ಹಂತ 3: ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದರಲ್ಲಿ ಕೇಳಲಾದ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಲು ನೀವು ಸುಶಿಕ್ಷಿತ ವ್ಯಕ್ತಿಯ ಸಹಾಯ ಪಡೆಯಬಹುದು.
ಹಂತ 4: ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅಗತ್ಯವಿರುವ ದಾಖಲೆಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಹಂತ 5: ನಂತರ ಅರ್ಜಿಯನ್ನು ನೀವು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಸಲ್ಲಿಸಿ.
ಹಂತ 6: ಬ್ಯಾಂಕ್ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ ನಿಮ್ಮ ದಾಖಲೆಗಳು ಸರಿಯಾಗಿ ಕಂಡುಬಂದರೆ ನಂತರ ನೀವು 15 ದಿನಗಳಲ್ಲಿ ಕಾರ್ಡ್ ಪಡೆಯುತ್ತೀರಿ.
ಇದರಿಂದ ರೈತರಿಗೆ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗಳಲ್ಲಿ ಅಥವಾ ಖರೀದಿ ಕೇಂದ್ರಗಳಲ್ಲಿ ಮಾರಿದಾಗ ಬರುವ ಹಣವನ್ನು ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವ ಮತ್ತು ಇನ್ ಪುಟ್ ಡೀಲರ್‌ಗಳೊಂದಿಗೆ ಸರಳವಾಗಿ ವ್ಯವಹರಿಸುವ ಅನಕೂಲತೆಯನ್ನು ನೀಡುತ್ತವೆ