ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಇದೀಗ ಒಂದು ಬಂಪರ್ ಆಫರ್ ಬಂದಿದೆ. ಸ್ವಂತ ಮನೆ ಹಾಗೂ ಪ್ರತಿ ತಿಂಗಳು 5000 ಪಿಂಚಣಿ ಒಂದು ಬಂದಿದೆ. ಇದರ ಲಾಭವನ್ನು ಪಡೆಯಲು ಜನರು ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಸರ್ಕಾರದ 5 ಬಂಪರ್ ಯೋಜನೆಗಳು, ಸ್ವಂತ ಮನೆ ಪ್ರತಿ ತಿಂಗಳು 5000 ಪಿಂಚಣಿ, PMJAY Scheme, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ
ಕಡಿಮೆ ಆದಾಯ ಹೊಂದಿರುವವರು ಆರೋಗ್ಯ ಸೇವೆ, ವಸತಿ, ಹಾಗೂ ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯುವುದು ಸಾಧ್ಯವೇ ಎಂಬ ಪ್ರಶ್ನೆಗೆ ಇದೀಗ ಕೇಂದ್ರ ಸರ್ಕಾರ ಉತ್ತರ ಎಂಬಂತೆ ಹೊಸ ಯೋಜನೆಯೊಂದು ತರಲಾಗಿದೆ. ಇದು ಕೇಂದ್ರ ಸರ್ಕಾರದ ಒಂದು ಉತ್ತಮ ಯೋಜನೆ ಆಗಿದೆ. ಎಲ್ಲಾ ಪೌರರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂಬುದೇ ಸರ್ಕಾರದ ಉದ್ದೇಶ. ಇನ್ನು ಈ ಯೋಜನೆಗೆ ಅರ್ಜಿ ಯಾರೆಲ್ಲ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕೆಂಬುದನ್ನ ಇದೀಗ ನೋಡೋಣ.
ಆಯುಷ್ಮಾನ್ ಭಾರತ್ (Ayushman Bharat – PMJAY):
ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಈ ಯೋಜನೆಯು ವರ್ಷಕ್ಕೆ 5 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆಯನ್ನು ನೀಡುತ್ತದೆ. ಇದು ಗಂಭೀರ ಕಾಯಿಲೆಗಳಿಗೂ ಸಹ ಚಿಕಿತ್ಸೆಯನ್ನು ನೀಡುತ್ತದೆ. ಗಂಡು, ಮಹಿಳೆ, ಮಕ್ಕಳಿಗೂ ಪ್ರಯೋಜನವಾಗುವ ಈ ಯೋಜನೆಗೆ ಆಧಾರ್ ಮತ್ತು ರೇಷನ್ ಕಾರ್ಡ್ ಬೇಕಾಗುತ್ತದೆ. ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ pmjay.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Recent Post:
-
ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ, New Ration Card Apply, ಸರ್ಕಾರದಿಂದ ಸಿಗ್ತು ಕಾಲಾವಕಾಶ, Ration Card Update Kannada, Congress
-
Bigg Boss Kannada: ಬಿಗ್ಬಾಸ್ ಸೀಸನ್-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದಾರೆ, BBK12, BBK12 Contestants List
ಪ್ರಧಾನಮಂತ್ರಿ ಶ್ರಮ ಯೋಗಿ ಮಂದ್ಹನ್ ಯೋಜನೆ (PM-SYM)
ಪ್ರತಿದಿನ ಕೂಲಿ ಕೆಲಸ ಮಾಡುವವರು, ಬೀದಿ ವ್ಯಾಪಾರಿಗಳು, ಆಟೋ ಚಾಲಕರು ಮೊದಲಾದವರಿಗೆ ತಿಂಗಳಿಗೆ 3,000 ರೂ.ಗಳ ಪಿಂಚಣಿ ಸಿಗುತ್ತದೆ. 18 ರಿಂದ 40 ವರ್ಷದೊಳಗಿನವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯ ಮುಖಾಂತರ ಪ್ರತಿ ತಿಂಗಳು 3000 ಪಿಂಚಣಿ ಪಡೆದುಕೊಳ್ಳಬಹುದು.
ಇನ್ನು ವಯಸ್ಸಿನ ಪ್ರಕಾರ ಪ್ರತಿ ತಿಂಗಳು ರೂ. 55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಗೆ ಯಾವೆಲ್ಲ ದಾಖಲೆಗಳು ಬೇಕು ಎನ್ನುವುದನ್ನು ನೋಡುವುದಾದರೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಕ್ ಖಾತೆಯ ವಿವರ. ಈ ಮೂರು ದಾಖಲೆಗಳು ನಿಮ್ಮ ಬಳಿ ಇದ್ದರೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ PM-SYM ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS):
ಈ ಯೋಜನೆಯ ಮೂಲಕ 60 ವರ್ಷ ದಾಟಿದ ಬಡವರು ಸರ್ಕಾರದ [Indian Government] ಸಹಾಯದಿಂದ ತಿಂಗಳಿಗೆ ಕನಿಷ್ಟ ₹200-₹500 ಪಿಂಚಣಿ ಪಡೆಯುಬಹುದು.
ರಾಜ್ಯ ಸರ್ಕಾರ ಈ ಮೊತ್ತವನ್ನು ಹೆಚ್ಚಿಸಬಹುದು. ಗ್ರಾಮ ಪಂಚಾಯತ್ ಅಥವಾ ಮ್ಯುನಿಸಿಪಲ್ ಕಚೇರಿಯಲ್ಲಿ ಈ ಪಿಂಚಣಿಗೆ ಅರ್ಜಿ ಹಾಕಬಹುದು. ಈ ಯೋಜನೆ ಸಂಪೂರ್ಣ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿ ಅಥವಾ ಮುನ್ಸಿಪಲ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಧಾನಮಂತ್ರಿ ಆವಾಸ್ ಯೋಜನೆ (PMAY):
ಈ ಯೋಜನೆಯ ಮೂಲಕ ನಿಮ್ಮ ಸ್ವಂತ ಮನೆ (Own House) ಕನಸು ನನಸಾಗಿಸಿಕೊಳ್ಳಬಹುದು. ನಗರ ಪ್ರದೇಶದಲ್ಲಿ ಮನೆ ಕಟ್ಟಲು 2.67 ಲಕ್ಷ ರೂ.ವರೆಗೆ ಸಾಲ (Loan) ಬಡ್ಡಿ ರಿಯಾಯಿತಿ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೇರವಾಗಿ ₹1.2 ರಿಂದ ₹1.3 ಲಕ್ಷವರೆಗೆ ಹಣವನ್ನು ಸರ್ಕಾರ ನೀಡುತ್ತದೆ.
ಪಿಎಂ ಆವಾಸ್ ಯೋಜನೆ: ನಿಮ್ಮ ವಾರ್ಷಿಕ ಆದಾಯವನ್ನು ಆಧರಿಸಿ EWS, LIG ಅಥವಾ MIG (Middle Income Group) ವರ್ಗವಾಗಿ ಅಪ್ಲೈ ಮಾಡಬಹುದು. pmaymis.gov.in ನಲ್ಲಿ ಅಥವಾ ಸ್ಥಳೀಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಅಟಲ್ ಪಿಂಚಣಿ ಯೋಜನೆ (APY):
ಈ ಯೋಜನೆಯ ಮೂಲಕ 60 ವರ್ಷ ನಂತರ ನೀವು ಆರಿಸಿದ ಪ್ಲಾನ್‌ಗೆ ಅನುಗುಣವಾಗಿ ₹1,000 ರಿಂದ ₹5,000 ವರೆಗೆ ಗ್ಯಾರಂಟೀ ಪಿಂಚಣಿ ಸಿಗುತ್ತದೆ. 18-40 ವಯಸ್ಸಿನವರು, ಬ್ಯಾಂಕ್ ಖಾತೆ ಇರುವವರು ಸೇರಬಹುದು. ಆದರೆ ಇನ್‌ಕಮ್ ಟ್ಯಾಕ್ಸ್ (Income Tax) ಕಟ್ಟದವರೇ ಇದರಲ್ಲಿ ಸೇರಬಹುದಾಗಿದೆ. ಇದರ ಮಾಸಿಕ ಹೂಡಿಕೆ ಕಡಿಮೆಯಾಗಿರುತ್ತದೆ. ಬ್ಯಾಂಕ್‌ನಲ್ಲಿ ನೇರವಾಗಿ ಈ ಯೋಜನೆಗೆ ಸೇರಬಹುದಾಗಿದೆ.
ಈ ಎಲ್ಲಾ ಯೋಜನೆಗಳು ಸಾಮಾನ್ಯ ಜನರಿಗೆ ಬದುಕಿನಲ್ಲಿ ಭದ್ರತೆಯ ಜೊತೆಗೆ ಭರವಸೆ ನೀಡುತ್ತಿದೆ. ಕೇವಲ ನಿಮ್ಮ ಎಲ್ಲಾ ದಾಖಲೆಗಳನ್ನು ತಯಾರಾಗಿ ಇಟ್ಟುಕೊಂಡರೆ ಸಾಕು, ಸರಳ ಪ್ರಕ್ರಿಯೆಯಿಂದ ಯೋಜನೆಗಳಲ್ಲಿ ನೀವು ಸಹ ಸೇರಬಹುದು.