ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಹೊಸ ಯೋಜನೆಯೊಂದು ತರಲಾಗಿದೆ. ಇಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆ ನಂತರ ಬಾಕಿ ಉಳಿದ ಜನರು ಸಹ ಇದರ ಲಾಭವನ್ನು ಪಡೆಯಬಹುದು. ಸ್ವಂತ ವ್ಯವಹಾರ ಪ್ರಾರಂಭಿಸಲು ಕರ್ನಾಟಕ ಸರ್ಕಾರದಿಂದ ಸ್ವಯಂ ಉದ್ಯೋಗದ ನೇರಸಾಲ ಯೋಜನೆ ತರಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ಸಹಾಯಧನ ಹಾಗೂ ಕಡಿಮೆ ಬಡ್ಡಿದರದ ಸಾಲ ಸೌಲಭ್ಯವನ್ನು ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಸರ್ಕಾರದ ಭರ್ಜರಿ ಗಿಫ್ಟ್! 50000 ಸಹಾಯಧನ, ತಳ್ಳುಗಾಡಿ ಸಣ್ಣ ವ್ಯಾಪಾರಿಗಳಿಗೆ ಸುವರ್ಣಾವಕಾಶ, Business Loan Scheme 2025, Direct Loan Scheme for Self-Employment, Congress Garantee Scheme
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಸಹಾಯಧನ + ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ರೆ ₹50,000 ವನ್ನು ಸಹಾಯಧನವನ್ನು ಪಡೆಯಬಹುದು.

Small Business Loan Scheme : ಕರ್ನಾಟಕ ಸರ್ಕಾರವು ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸಲು ಸ್ವಯಂ ಉದ್ಯೋಗ ನೇರಸಾಲ ಯೋಜನೆ ಅನ್ನು ಆರಂಭಿಸಿದೆ.
ಸಣ್ಣ ಮಟ್ಟದ ವ್ಯಾಪಾರ, ಹಣ್ಣು-ಹಂಪಲು ಮಳಿಗೆ, ತಳ್ಳುಗಾಡಿ, ಅಥವಾ ಇತರ ಸ್ವಂತ ಉದ್ಯೋಗ ಚಟುವಟಿಕೆ ಆರಂಭಿಸಲು ಈ ಯೋಜನೆ ನೆರವಾಗಲಿದೆ.
ಇದನ್ನ ಓದಿ: ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ – Pension Schem
ಇನ್ನು ಘಟಕ ವೆಚ್ಚ ₹1,00,000 ಆಗಿದ್ದು, ಇದರಲ್ಲಿನ ₹50,000 ಸಹಾಯಧನವಾಗಿದ್ದು ಉಳಿದ ₹50,000 ಅನ್ನು ವರ್ಷಕ್ಕೆ ಕೇವಲ 4% ಬಡ್ಡಿದರದಲ್ಲಿ ಸಾಲವಾಗಿ (Loan) ನೀಡಲಾಗುತ್ತದೆ. ಇದು ಸರ್ಕಾರದ ಸಬ್ಸಿಡಿ ಆಗಿದ್ದು, ಇದರ ಲಾಭವನ್ನು ನೀವು ಸಹ ಪಡೆಯಬಹುದು.
ಯಾರೆಲ್ಲ ಯೋಜನೆಗೆ ಅರ್ಜಿ ಸಲ್ಲಿಸಬಹುದು:
- ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಕನಿಷ್ಠ 15 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು.
- ಅವರ ಕುಟುಂಬದ ಸದಸ್ಯರಲ್ಲಿ ಯಾರೂ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು.
- ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ ₹1,50,000 ಒಳಗಿರಬೇಕು.
- ನಗರ ಪ್ರದೇಶದಲ್ಲಿ ₹2,00,000 ಒಳಗಿರಬೇಕು. ವಿಕಲಚೇತನರಿಗೆ ಸೌಲಭ್ಯ ಪಡೆಯಲು ಅಧಿಕೃತ ದೃಢೀಕರಣ ಪತ್ರ ಅಗತ್ಯ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಪಡಿತರ ಚೀಟಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋ
- ಮೊಬೈಲ್ ನಂಬರ್ ಮತ್ತು ಮೇಲ್ ಐಡಿ
- ವಾಸಸ್ಥಳ ಪ್ರಮಾಣ ಪತ್ರ
ಇದನ್ನ ಓದಿ: ಪ್ರತಿ ತಿಂಗಳು ನಿಮ್ಮ ಖಾತೆಗೆ 6000 ಜಮಾ ಆಗುತ್ತೆ, ಕೇಂದ್ರ ಸರ್ಕಾರದಿಂದಹೊಸ ಯೋಜನೆ, ಅರ್ಜಿ ಸಲ್ಲಿಸಿದ್ರೆ ಮಾತ್ರ
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಮೂಲಕ ಸಲ್ಲಿಸಬಹುದು. ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಯೋಜನೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 10, 2025 ಆಗಿರುವುದರಿಂದ ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಬೇಕು. ಮತ್ತು ಇದರ ಲಾಭವನ್ನು ಪಡೆಯಬಹುದು. ಸರ್ಕಾರದ ಕೆಲ ಯೋಜನೆಗಳು ಜನರಿಗೆ ತಲುಪದೆ ಇದರ ಪ್ರಯೋಜನೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿಕೊಳ್ಳಿ.
ಸರ್ಕಾರದ ಭರ್ಜರಿ ಗಿಫ್ಟ್! 50000 ಸಹಾಯಧನ, ತಳ್ಳುಗಾಡಿ ಸಣ್ಣ ವ್ಯಾಪಾರಿಗಳಿಗೆ ಸುವರ್ಣಾವಕಾಶ, Business Loan Scheme 2025, Direct Loan Scheme for Self-Employment, Congress Garantee Scheme
