ನಮಸ್ಕಾರ ಸ್ನೇಹಿತರೇ, ಬಿಪಿಎಲ್ (BPL – ಬಡತನ ರೇಖೆಗಿಂತ ಕೆಳಗಿರುವ) ರೇಷನ್ ಕಾರ್ಡು ಹೊಂದಿರುವವರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿಯೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP – National Social Assistance Programme) ಅಡಿಯಲಿ ಐದು ಪ್ರಮುಖ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿವೆ. ಇದು ಅವರಿಗೆ ಸಹಾಯವಾಗುತ್ತದೆ. ಅನೇಕ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ, ಅನೇಕರಿಗೆ ಯೋಜನೆಯ ಲಾಭಗಳು ಸಿಗದೆ ಹೋಗುತ್ತದೆ. ಇಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರಿಗೆ ಆದಷ್ಟು ನೀವು ಶೇರ್ ಮಾಡಿ.
ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಪಿಂಚಣಿ ಯೋಜನೆಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ, Government Schemes Update, Centra Government Pension Schemes 2025, BPL Ration Card Schemes
ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP) ಎಂದರೇನು?
NSAP ಒಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುತ್ತದೆ. ಈ ಕಾರ್ಯಕ್ರಮವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಿಪಿಎಲ್ ಕುಟುಂಬಗಳಿಗೆ ಸಹಾಯಕವಾಗಿದೆ ಮತ್ತು ಈ ಕೆಳಗಿನ ಪ್ರಮುಖ ಐದು ಪಿಂಚಣಿ ಯೋಜನೆಗಳನ್ನು ಒಳಗೊಂಡಿದೆ. ಈ ಮೂಲಕ ಇದರ ಲಾಭವನ್ನು ನೀವು ಸಹ ಪಡೆಯಬಹುದು.
- ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS – Indira Gandhi National Old Age Pension Scheme)
- ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (IGNWPS – Indira Gandhi National Widow Pension Scheme)
- ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ (IGNDPS – Indira Gandhi National Disability Pension Scheme)
- ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ (NFBS – National Family Benefit Scheme)
- ಅನ್ನಪೂರ್ಣ ಯೋಜನೆ (Annapurna Scheme)
ಈ ಯೋಜನೆಗಳು ಆರ್ಥಿಕ ಸಹಾಯ, ಪಿಂಚಣಿ ಹಾಗೂ ಅನ್ನಪೂರ್ಣ ಯೋಜನೆಯಡಿ ಆಹಾರ ಭದ್ರತೆಯನ್ನು ಒದಗಿಸುತ್ತವೆ. ಅನ್ನಪೂರ್ಣ ಯೋಜನೆಯು ವೃದ್ಧಾಪ್ಯ ಪಿಂಚಣಿಗೆ ಅರ್ಹರಾಗಿದ್ದರೂ ಅದರ ಪ್ರಯೋಜನ ಪಡೆಯದ ವೃದ್ಧರಿಗೆ ಆಹಾರದ ನೆರವನ್ನು ಸಹ ನೀಡುತ್ತದೆ.
ಇದನ್ನ ಓದಿ: Bigg Boss Kannada 6th Week Captaincy Task, 6th Week Captaincy Voting Line, BBK12
ಯೋಜನೆಗಳ ಪ್ರಮುಖ ಅರ್ಹತಾ ಮಾನದಂಡಗಳು
ಪ್ರತಿ ಯೋಜನೆಯು ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಹೊಂದಿದೆ, ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ:
- ಎಲ್ಲಾ ಯೋಜನೆಗಳಿಗೂ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಕ್ಕೆ ಸೇರಿದವರಾಗಿರಬೇಕು.
- ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರು 40 ವರ್ಷ ಕ್ಕಿಂತ ಕಡಿಮೆ ಇರಬೇಕು. ಇನ್ನು 50 ವರ್ಷದ ಬಳಿಕ ಪ್ರತಿ ತಿಂಗಳು ಪಿಂಚಣಿ ದೊರೆಯುತ್ತದೆ.
- 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾಸಿಕ ₹500 (ಕೇಂದ್ರದ ಪಾಲಿನಂತೆ) ನೀಡಲಾಗುತ್ತದೆ.
- 40 ರಿಂದ 79 ವರ್ಷದೊಳಗಿನ ವಿಧವೆಯರು ಈ ಯೋಜನೆಗೆ ಅರ್ಹರು. ಮಾಸಿಕ ₹300 ನೆರವು ದೊರೆಯುತ್ತದೆ.
- 18 ರಿಂದ 79 ವರ್ಷದೊಳಗಿನವರು ಮತ್ತು 80% ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅವರಿಗೆ ಮಾಸಿಕ ₹300 ನೆರವು ಸಿಗುತ್ತದೆ.
- ಕೇಂದ್ರ ಸರ್ಕಾರವು ನೀಡುವ ಈ ಮೊತ್ತಕ್ಕೆ ರಾಜ್ಯ ಸರ್ಕಾರಗಳು ತಮ್ಮದೇ ಆದ ಹೆಚ್ಚುವರಿ ಪಾಲನ್ನು ಸೇರಿಸಿ ಒಟ್ಟು ಪಿಂಚಣಿ ಮೊತ್ತವನ್ನು ಹೆಚ್ಚಿಸುತ್ತವೆ.
ಇದನ್ನ ಓದಿ: Bigg Boss Kannada 7th Week Voting Line, 7th Week Nomination Voting Result, BBK12
ಅರ್ಜಿ ಸಲ್ಲಿಸುವ ವಿಧಾನ (ಆನ್‌ಲೈನ್)
NSAP ಯೋಜನೆಯಡಿಯಲ್ಲಿ ಪಿಂಚಣಿ ಪಡೆಯಲು ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಈ ಕೆಳಗೆ ನೀಡಲಾಗಿರುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ವೆಬ್ಸೈಟ್ ಓಪನ್ ಆಗುತ್ತದೆ.
- ಮೊದಲಿಗೆ, ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ (NSAP)ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಲ್ಲಿ ಹೊಸ ಅರ್ಜಿ (New Application) ಅಥವಾ ಅನ್ವಯಿಸು’ (Apply) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ವಿವರಗಳು, ವಿಳಾಸ, ಬ್ಯಾಂಕ್ ಖಾತೆ ವಿವರಗಳು, ರೇಷನ್ ಕಾರ್ಡ್ ಮಾಹಿತಿ, ವಯಸ್ಸಿನ ಪುರಾವೆ ಮತ್ತು ಅಂಗವೈಕಲ್ಯದ ಪ್ರಮಾಣಪತ್ರ (ಅನ್ವಯಿಸಿದರೆ) ಇತ್ಯಾದಿ ಅಗತ್ಯ
- ಮಾಹಿತಿಯನ್ನು ನಮೂದಿಸಬೇಕು.
- ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿ. ಇದರ ನಂತರ, ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತದೆ.
ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಗಳು ಸಕ್ರಿಯ ಪಾತ್ರ ವಹಿಸುತ್ತವೆ. ಅರ್ಜಿ ಸಲ್ಲಿಸಲು ಕಷ್ಟವಾಗುವವರು ಸ್ಥಳೀಯ ಸಂಸ್ಥೆಗಳ ನೆರವು ಪಡೆಯಬಹುದು.
ನೆರವು ವಿತರಣೆ ಮತ್ತು ಮೇಲ್ವಿಚಾರಣೆ
ಡಿಬಿಟಿ (DBT) ವಿಧಾನ: ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ನೇರ ಲಾಭ ವರ್ಗಾವಣೆ (Direct Benefit Transfer – DBT) ಮೂಲಕ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಸುಮಾರು 94% ಹಣ ಈ ವಿಧಾನದಲ್ಲಿ ತಲುಪುತ್ತದೆ.
ಜವಾಬ್ದಾರಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಗಳ ಅನುಷ್ಠಾನಕ್ಕಾಗಿ ಇಲಾಖೆಗಳನ್ನು ಆಯ್ಕೆ ಮಾಡಬಹುದು ಮತ್ತು ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಮಟ್ಟದಲ್ಲಿ ನೋಡಲ್ ಕಾರ್ಯದರ್ಶಿಗಳನ್ನು ನೇಮಿಸಬೇಕು.
ರೇಷನ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಐದು ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಆರ್ಥಿಕ ನೆರವು ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಪಿಂಚಣಿ ಯೋಜನೆಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ, Government Schemes Update, Centra Government Pension Schemes 2025, BPL Ration Card Schemes
