ನಮಸ್ಕಾರ ಸ್ನೇಹಿತರೇ, ಇದೀಗ ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಉಚಿತ ಮನೆಗಳನ್ನ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಕರ್ನಾಟಕದ ವಸತಿ ಯೋಜನೆಗಳು ಗಮನಾರ್ಹ ಗತಿಯಲ್ಲಿ ಮುನ್ನಡೆಯುತ್ತಿವೆ ಎಂದು ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಿಳಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ರಾಜ್ಯದಾದ್ಯಂತ ನಿರ್ಮಾಣ ಹಂತದಲ್ಲಿರುವ 1,80,253 ಮನೆಗಳನ್ನು ಡಿಸೆಂಬರ್ 2026ರೊಳಗಾಗಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಇದೀಗ ನೋಡೋಣ.
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40345, ಹೊಸ ಮನೆಗಳ ಹಂಚಿಕೆ,ರಾಜೀವ್ ಗಾಂಧಿ ವಸತಿ ನಿಗಮ, PMAY Scheme, Free House Scheme for Government
ಹೌದು ವಸತಿ ಸಚಿವ ಜಮೀರ್ ಅಹಮದ್ ಖಾನ್ ರವರು ಹೇಳಿರುವಂತೆ ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರ ಮನೆ ನಿರ್ಮಿಸಿ ಮನೆಗಳನ್ನು ಹಂಚಿಕೆ ಮಾಡಲು ಹೊರಟಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ ಪ್ರಗತಿಯ ಮೊದಲ ಹಂತದಲ್ಲಿ ಈಗಾಗಲೇ 36,789ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗಿದೆ. ಇನ್ನು ಎರಡನೇ ಹಂತದಲ್ಲಿ 40,345 ಹೆಚ್ಚುವರಿ ಮನೆಗಳ ಹಂಚಿಕೆಗೆ ಸಿದ್ಧತೆಗಳು ಮಾಡಿಕೊಳ್ಳುತ್ತಿದೆ.
ಸರ್ಕಾರದ ಮಹತ್ವದ ನಿರ್ಧಾರಗಳು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರವು ಒಂದು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಫಲಾನುಭವಿಗಳು ತಮ್ಮ ಷೇರು ವಂತಿಗೆ (share contribution) ಪಾವತಿಸಲು ಅಸಮರ್ಥರಾದ ಕಾರಣ ಯೋಜನೆಗಳು ತಡವಾಗುತ್ತಿದ್ದವು. ಈ ಸಮಸ್ಯೆಂ ಪರಿಹರಿಸಲು, ಸರ್ಕಾರವೇ ಈ ವಂತಿಗೆಯನ್ನು ಪಾವತಿಸಲು ನಿರ್ಧರಿಸಿದೆ. ಈ ಕ್ರಮವು ಯೋಜನೆಯ ವೇಗಗೊಳಿಸಲು ನೆರವಾಗುವುದು.
ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆ:
ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 47,870 ಮನೆಗಳ ನಿರ್ಮಾಣವೂ ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವೇ ಇದರ ಖರ್ಚು ಭರಿಸಲು ತಾತ್ವಿಕ ಒಪ್ಪಿಗೆ ನೀಡಿದೆ. ಈ ಪ್ರಸ್ತಾವವನ್ನು ಶೀಘ್ರದಲ್ಲೇ ಮಂಡಲಿ ಸಭೆಯಲ್ಲಿ ಮಂಡಿಸಿ ಅಂತಿಮ ಒಪ್ಪಿಗೆ ಪಡೆಯಲು ಇದೀಗ ಮುಂದಾಗಿದೆ.
ಇದನ್ನ ಓದಿ: ಬಿಗ್ ಬಾಸ್ 12ನೇ ಸ್ಪರ್ಧಿಗಳು ಇವರೇ, ನಿಮ್ಮ ಪ್ರಕಾರ ಇವರಲ್ಲಿ ಯಾರು ಬರಲಿದ್ದಾರೆ, BBK12
ಯೋಜನೆಯ ಮುಖ್ಯ ಅಂಶಗಳು:
- ಮಧ್ಯಮ ಗುಂಪು: ಅರ್ಥಿಕವಾಗಿ ದುರ್ಬಲ ವರ್ಗದ ಗುಂಪು, ಕನಿಷ್ಠ ಆದಾಯದ ಗುಂಪು (LIG), ಮಧ್ಯಮ ವರ್ಗದ ಗುಂಪು, SC/ST/OBC ಸಮುದಾಯ, ವೃದ್ಧರು, ದಿವ್ಯಾಂಗರು ಮತ್ತು ವಿಧವೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಆರ್ಥಿಕ ಸಹಾಯ: ನಗರ ಪ್ರದೇಶಗಳಲ್ಲಿ ₹1.5 ಲಕ್ಷದಿಂದ ₹2.67 ಲಕ್ಷ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ₹1.2 ಲಕ್ಷದಿಂದ ₹1.3 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
- ಬಡ್ಡಿ ರಿಯಾಯಿತಿ: 3% ರಿಂದ 6.5% ರಷ್ಟು ರಿಯಾಯಿತಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ:
- ಅರ್ಜಿದಾರ ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಯಾವುದೇ ಮನೆ
ಮಾಲೀಕತ್ವ ಹೊಂದಿರಬಾರದು. - ಅರ್ಜಿದಾರನ ಕೆಲ ದಾಖಲೆಗಳು ಬೇಕು. ಅದರ ಬಗ್ಗೆ ಮಾಹಿತಿಗಾಗಿ ಇದರ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಇದರ ಮಾಹಿತಿ ಪಡೆಯಿರಿ.
ಇದನ್ನ ಓದಿ: Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್
ಹೇಗೆ ಅರ್ಜಿ ಸಲ್ಲಿಸುವುದು?
ಯೋಜನೆಯ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಬೆಟ್ ಆಗಿರುವ https://pmaymis.gov.in ಗೆ ಬೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.
ಈ ಕ್ರಮವು ರಾಜ್ಯದಲ್ಲಿ ‘ಎಲ್ಲರಿಗೂ ವಸತಿ’ ಎಂಬ ದೃಷ್ಟಿಯನ್ನು ಸಾಧಿಸುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆ ಇದಾಗಿದೆ.
ಇದನ್ನ ಆದಷ್ಟು ಎಲ್ಲರಿಗೂ ತಲುಪುವ ಹಾಗೆ ಶೇರ್ ಮಾಡಿ.
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40345, ಹೊಸ ಮನೆಗಳ ಹಂಚಿಕೆ,ರಾಜೀವ್ ಗಾಂಧಿ ವಸತಿ ನಿಗಮ, PMAY Scheme, Free House Scheme for Government
