ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme

ನಮಸ್ಕಾರ ಸ್ನೇಹಿತರೇ, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮತ್ತು ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಮಾಡುವ ಸಲುವಾಗಿ ಒಂದು ಯೋಜನೆ ಇದೆ. ಅದಕ್ಕೆ ನೀವು ಅರ್ಜಿ ಸಲ್ಲಿಸಬೇಕು. ಇನ್ನು ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme, Karnataka Government New Scheme 2026, How to Apply Ugyogini Scheme 2026

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವ ಮತ್ತು ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಮಾಡುಲು ಒಂದು ಯೋಜನೆ ಇದೆ. ಅದುವೇ ಸ್ತ್ರೀ ಶಕ್ತಿ ಪ್ಯಾಕೇಜ್. ಇಲ್ಲಿ ನಿಮಗೆ ಸ್ವಂತ ಉದ್ಯಮವನ್ನು ಆರಂಭಿಸಲು ಇದೀಗ ಭಾರತೀಯ ಸ್ಟೇಟ್ ಬ್ಯಾಂಕ್ ಈ ‘ಸ್ತ್ರೀ ಶಕ್ತಿ ಪ್ಯಾಕೇಜ್’ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಇಲ್ಲಿ ಸಣ್ಣ ಉದ್ದಿಮೆಗಳಿಂದ ಹಿಡಿದು ವೃತ್ತಿಪರ ಸೇವೆಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ಇದರ ಲಾಭವನ್ನು ಪಡೆಯಲು ಇದಕ್ಕೆ ನೀವು ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗುತ್ತೆ. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎನೇನು ಎನ್ನುವುದನ್ನ ಇದೀಗ ನೋಡೋಣ.

ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme, Karnataka Government New Scheme 2026, How to Apply Ugyogini Scheme 2026, ಸ್ತ್ರೀಶಕ್ತಿ ಯೋಜನೆ, ಮಹಿಳೆಯರ ಉದ್ಯಮ, SBI ಮಹಿಳಾ ಸಾಲ, ಕರ್ನಾಟಕ ಸರ್ಕಾರ ಯೋಜನೆ, ಉದ್ಯೋಗಿಣಿ ಯೋಜನೆ, ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ, ಹೊಸ ಯೋಜನೆ 2026, ಅರ್ಜಿ ಸಲ್ಲಿಸುವುದು ಹೇಗೆ, ವ್ಯವಹಾರ ಆರಂಭ

ಇಲ್ಲಿ ನೀವು ಚಿಲ್ಲರೆ ವ್ಯಾಪಾರ ಮತ್ತು ಸಣ್ಣ ಉದ್ಯಮಗಳಿಗೆ ₹50,000 ದಿಂದ ₹2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ವೃತ್ತಿಪರರು ಮತ್ತು ಕೈಗಾರಿಕಾ ಘಟಕಗಳಿಗೆ ₹50,000 ದಿಂದ ಗರಿಷ್ಠ ₹25 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇಲ್ಲಿ ಆಕರ್ಷಕ ಅಂಶವೇನೆಂದರೆ ಯಾವುದೇ ಮಹಿಳಾ ಉದ್ಯಮಿ ಪಡೆಯುವ ಸಾಲದ ಮೊತ್ತವು ₹2 ಲಕ್ಷಕ್ಕಿಂತ ಹೆಚ್ಚಿದ್ದರೆ, ಬಡ್ಡಿದರದಲ್ಲಿ ಶೇ. 0.5 ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಸ್ತ್ರೀ ಶಕ್ತಿ ಪ್ಯಾಕೇಜ್ ಯೋಜನೆಯ ಉದ್ದೇಶ: 

ಈ ಯೋಜನೆಯ ಪ್ರಮುಖ ಉದ್ದೇಶ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು. ಅನೇಕ ಮಹಿಳೆಯರು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ತಮ್ಮ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಕಷ್ಟಪಡುತ್ತಾರೆ. ಅಂತಹವರಿಗೆ ಕಡಿಮೆ ಬಡ್ಡಿದರದಲ್ಲಿ ಮತ್ತು ಸರಳ ನಿಯಮಗಳೊಂದಿಗೆ ಸಾಲ ನೀಡಿ, ಅವರು ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿ.

ಇದನ್ನ ಓದಿ: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, Subsidy for construction of new house For Government, Canara Bank New Scheme 2026
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: 
  • ಸಾಲವನ್ನು ಪಡೆಯಲು ಉದ್ದಿಮೆಯ ಮಾಲೀಕತ್ವವು ಮಹಿಳೆಯರ ಹೆಸರಿನಲ್ಲಿರಬೇಕು.
  • ಒಂದು ವೇಳೆ ಅದು ಪಾಲುದಾರಿಕೆ (Partnership) ಸಂಸ್ಥೆಯಾಗಿದ್ದರೆ, ಕನಿಷ್ಠ ಶೇ. 51 ರಷ್ಟು ಪಾಲು ಅಥವಾ ಬಂಡವಾಳವು ಮಹಿಳೆಯರ ಹೆಸರಿನಲ್ಲಿರಬೇಕು.
  • ಚಿಲ್ಲರೆ ವ್ಯಾಪಾರ, ಉತ್ಪಾದನಾ ಘಟಕಗಳು, ಕೃಷಿ ಸಂಬಂಧಿತ ಚಟುವಟಿಕೆಗಳು ಅಥವಾ ಸೇವಾ ವಲಯದಲ್ಲಿ ತೊಡಗಿರುವ ಮಹಿಳೆಯರು ಅರ್ಹರು.
  • ಅರ್ಜಿದಾರರು ರಾಜ್ಯ ಏಜೆನ್ಸಿಗಳು ನಡೆಸುವ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಅಥವಾ ಅಂತಹ ತರಬೇತಿ ಪಡೆದಿರುವುದು ಅವಶ್ಯಕ.
  • ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಆರ್ಕಿಟೆಕ್ಟ್‌ಗಳು ಮತ್ತು ಬ್ಯೂಟಿ ಪಾರ್ಲರ್ ನಡೆಸುವಂತಹ ವೃತ್ತಿಪರ ಮಹಿಳೆಯರೂ ಈ ಸಾಲವನ್ನು ಪಡೆಯಬಹುದು.
ಭದ್ರತೆ ಅಥವಾ ಶ್ಯೂರಿಟಿ:
  • ₹5 ಲಕ್ಷದವರೆಗಿನ ಸಾಲಕ್ಕೆ ಯಾವುದೇ ರೀತಿಯ ಆಸ್ತಿ ಅಥವಾ ಮನೆ ಪತ್ರಗಳಂತಹ ಭದ್ರತೆಯನ್ನು ನೀಡುವ ಅವಶ್ಯಕತೆಯಿಲ್ಲ.
  • ಸಣ್ಣ ವಲಯದ ಘಟಕಗಳಿಗೆ ₹25 ಲಕ್ಷದವರೆಗೂ ಕೆಲವು ಸಂದರ್ಭಗಳಲ್ಲಿ ಭದ್ರತೆಯಿಲ್ಲದೆ ಸಾಲ ನೀಡುವ ಅವಕಾಶಗಳಿವೆ.
ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ವಿದ್ಯುತ್ ಬಿಲ್ ಅಥವಾ ರೇಷನ್ ಕಾರ್ಡ್
  • ವ್ಯಾಪಾರ ನೋಂದಣಿ ಪ್ರಮಾಣಪತ್ರ
  • ವ್ಯಾಪಾರದ ಲಾಭ-ನಷ್ಟದ ಅಂದಾಜು ವಿವರಗಳು.
  • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಮೊಬೈಲ್ ನಂಬರ್ ಹಾಗೂ ಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯ ಲಾಭ ಪಡೆಯಲು ಯಾವುದೇ ಆನ್‌ಲೈನ್ ಲಿಂಕ್‌ಗಳಿಗಿಂತ ನೇರವಾಗಿ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡುವುದು ಉತ್ತಮ. ಅಲ್ಲಿನ ಅಧಿಕಾರಿಗಳಿಂದ ಸ್ತ್ರೀ ಶಕ್ತಿ ಪ್ಯಾಕೇಜ್ ಬಗ್ಗೆ ಮಾಹಿತಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಬ್ಯಾಂಕ್ ಅಧಿಕಾರಿಗಳು ನಿಮ್ಮ ಉದ್ಯಮದ ವರದಿಯನ್ನು ಪರಿಶೀಲಿಸಿದ ನಂತರ ಸಾಲ ಮಂಜೂರು ಮಾಡುತ್ತಾರೆ.

SBI ಸ್ತ್ರೀ ಶಕ್ತಿ ಪ್ಯಾಕೇಜ್ ಕೇವಲ ಸಾಲವಲ್ಲ, ಇದು ಮಹಿಳೆಯರ ಕನಸಿಗೆ ರೆಕ್ಕೆ ನೀಡುವ ಒಂದು ಆರ್ಥಿಕ ಬೆಂಬಲವಾಗಿದೆ. ಕಡಿಮೆ ಬಡ್ಡಿದರ ಮತ್ತು ಭದ್ರತೆಯಿಲ್ಲದ ಸಾಲದ ಸೌಲಭ್ಯವು ಮಧ್ಯಮ ವರ್ಗದ ಮಹಿಳೆಯರಿಗೆ ಸ್ವಂತ ಕಾಲ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ. ನೀವು ಸ್ವಂತ ಉದ್ಯಮ ಆರಂಭಿಸುವ ಹಂಬಲದಲ್ಲಿದ್ದರೆ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವುದು ಉತ್ತಮ.

ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme, Karnataka Government New Scheme 2026, How to Apply Ugyogini Scheme 2026

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment