ನಮಸ್ಕಾರ ಸ್ನೇಹಿತರೇ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಮನೆಯ ಪಂಚಾಯಿತಿ ನಡೆಸಿಕೊಡಲಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರು ಬರಲಿದ್ದಾರೆ ಹಾಗು ನಿಮ್ಮ ಪ್ರಕಾರ ಇವರಲ್ಲಿ ಯಾರು ಬಿಗ್ ಬಾಸ್ ಮನೆಗೆ ಬರಬೇಕು ಎನ್ನುವುದನ್ನ ವೋಟ್ ಮಾಡಿ ತಿಳಿಸಿ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಬಿಗ್ ಬಾಸ್ 12ನೇ ಸ್ಪರ್ಧಿಗಳು ಇವರೇ, ನಿಮ್ಮ ಪ್ರಕಾರ ಇವರಲ್ಲಿ ಯಾರು ಬರಲಿದ್ದಾರೆ, BBK12, Bigg Boss Season 12 Voting List, BBK12 Voting List
ಎಲ್ಲಾ ಭಾಷೆಯಲ್ಲಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಇದೀಗ ಕನ್ನಡದಲ್ಲಿ ಯಾವಾಗ ಆರಂಭ ಆಗುತ್ತದೆ ಎಂದು ತುಂಬಾ ಜನ ಕೇಳುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಶೋ ತೆಲುಗು ಮತ್ತು ಮಲೆಯಾಳಂ ನಲ್ಲಿ ಆರಂಭ ಆಗುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರುತ್ತಾರೆ ಎಂಬುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
Bigg Boss Most Expected Contestant List :
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 12 ಆರಂಭ ಆಗಲಿದ್ದು, ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ ಪೈಕಿ 6 ಜನರ ಹೆಸರು ಹೆಚ್ಚಾಗಿ ಕೇಳಿಬರುತ್ತಿತ್ತು. ಅದುವೇ,
- ಡಾ. ಬ್ರೋ
- ಗಿಲ್ಲಿ ನಟ
- ದಿವ್ಯಾ ವಸಂತ್
- ಬಾಳು ಬೆಳಗುಂದಿ
- ರೀಲ್ಸ್ ರೇಷ್ಮಾ
- ವಿಜಯ್ ಸೂರ್ಯ

ಈ 6 ಜನರ ಹೆಸರು ಹೆಚ್ಚಾಗಿ ಕೇಳಿಬರುತ್ತಿತ್ತು. ಇನ್ನು ಇದರ ಬಗ್ಗೆ ಈ ಮೇಲೆ ಒಂದು ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ಪ್ರಕಾರ ಇವರಲ್ಲಿ ಯಾರು ಬರಬೇಕು ಎಂಬುದನ್ನು ವೋಟ್ ಮಾಡಿ ತಿಳಿಸಿ.
ಇನ್ನು ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ರಹಸ್ಯವಾಗಿ ಉಳಿದಿದೆ. ಮೂಲಗಳ ಪ್ರಕಾರ ಕಿರುತೆರೆ, ಸಿನಿಮಾ, ಡಿಜಿಟಲ್ ಮಾಧ್ಯಮ ಮತ್ತು ಸಂಗೀತ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೆಸರುಗಳು ಹರಿದಾಡುತ್ತಿವೆ. ಇನ್ನು official ಆಗಿ ಮಾಹಿತಿ ಬಂದ ನಂತರ ನಾವು ನಿಮಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ.
ಇದನ್ನ ಓದಿ: ಬಿಗ್ ಬಾಸ್ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್ 12ರ ಹೊಸ ಲೋಗೋ, BBK12
ಈ ಬಾರಿಯ ನಿರೂಪಣೆ ಕಿಚ್ಚ:
ಕನ್ನಡದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್-12ರ ನಿರೂಪಕರಾಗಿ ಮತ್ತೆ ಮುಂದುವರಿಯುತ್ತಿರುವುದು ಖಚಿತವಾಗಿದೆ. ಈ ಸೀಸನ್ ಕಾರ್ಯಕ್ರಮದ ನಿರೂಪಕ ಯಾರು ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸ್ವತಃ ಕಲರ್ಸ್ ಕನ್ನಡ ಅನೌನ್ಸ್ ಮಾಡಿದೆ. ಇದರಿಂದಾಗಿ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಈ ಜನಪ್ರಿಯ ರಿಯಾಲಿಟಿ ಶೋನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಬಿಗ್ ಬಾಸ್ 12ರ ಹೊಸ ಮನೆ:
ಬಿಗ್ ಬಾಸ್ ನ ಮೊದಲ ಎರಡು ಸೀಸನ್ ಪುಣೆಯ ಲೋನಾವಾಲಾದಲ್ಲಿ ಚಿತ್ರೀಕರಿಸಲಾಗಿತ್ತು. ಆ ನಂತರ ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಸೀಸನ್ ಮೂರರಿಂದ ಒಂಬತ್ತನೇ ಸೀಸನ್ ನ ವರೆಗೆ ನಡೆಸಲಾಯಿತು. ಅದಾದ ನಂತರ 10ನೇ ಸೀಸನ್ ಅನ್ನು ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ನಡೆದಿತ್ತು. ಇನ್ನು 11ನೇ ಸೀಸನ್ ಕೂಡ ಅಲ್ಲೇ ನಡೆಸಲಾಯಿತು. ಆದರೆ ಇದೀಗ 12ನೇ ಸೀಸನ್ ನಡೆಸಲು ಬಿಗ್ ಬಾಸ್ ಮನೆ ಬದಲಾಯಿಸಲಾಗಿದೆ. ಹೌದು ಈ ಹಿಂದೆ ಸುಧೀರ್ಘವಾಗಿ ಬಿಗ್ ಬಾಸ್ ಕನ್ನಡ ನಡೆದ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಸೀಸನ್ 12ರ ಹೊಸ ಮನೆ ನಿರ್ಮಾಣ ಮಾಡಲಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದು ಬಂದಿದೆ.
ಇದನ್ನ ಓದಿ: Bigg Boss Kannada: ಸೀಸನ್-12ರ ಸ್ಪರ್ಧಿಗಳ ಪಟ್ಟಿ, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, BBK12 Contestants List
ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ:
ಈಗಾಗಲೇ ಬಿಗ್ ಬಾಸ್ ರಿಯಾಲಿಟಿ ಶೋ ತೆಲುಗು ಹಾಗೂ ಮಲೆಯಾಳಂ ನಲ್ಲಿ ಆರಂಭವಾಗಿದ್ದು ಇನ್ನು ಕನ್ನಡದಲ್ಲಿ ಯಾವಾಗ ಆರಂಭ ಆಗುತ್ತೆ ಎಂದು ತುಂಬಾ ಜನ ಕೇಳುತ್ತಿದ್ದಾರೆ. ಆದರೆ ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಸೆಪ್ಟಂಬರ್ ನ ಕೊನೆಯ ವಾರ ಆರಂಭವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಇನ್ನು ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಹಾಗು ಯಾರು ಬರಬೇಕು ಎನ್ನುವುದನ್ನ ಪ್ರತಿಯೊಬ್ಬರು ಕೂಡ ಕಾಮೆಂಟ್ ಮಾಡಿ.
ಬಿಗ್ ಬಾಸ್ 12ನೇ ಸ್ಪರ್ಧಿಗಳು ಇವರೇ, ನಿಮ್ಮ ಪ್ರಕಾರ ಇವರಲ್ಲಿ ಯಾರು ಬರಲಿದ್ದಾರೆ, BBK12, Bigg Boss Season 12 Voting List, BBK12 Voting List
