ನಮಸ್ಕಾರ ಸ್ನೇಹಿತರೇ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಮನೆಯ ಪಂಚಾಯಿತಿ ನಡೆಸಿಕೊಡಲಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆ ಬದಲಾಯಿಸಲಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಯಾವಾಗ ಆರಂಭ ಆಗುತ್ತೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಬಿಗ್ ಬಾಸ್ 12ನೇ ಸೀಸನ್ ಗೆ ಹೊಸ ಮನೆ, ಹೇಗಿರಲಿದೆ ಈ ಬಾರಿಯ ಬಿಗ್ ಬಾಸ್ ಮನೆ, BBK12, Bigg Boss Kannada Season 12 New House, Bigg Boss Kannada
ಎಲ್ಲಾ ಭಾಷೆಯಲ್ಲಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಇದೀಗ ಕನ್ನಡದಲ್ಲಿ ಯಾವಾಗ ಆರಂಭ ಆಗುತ್ತದೆ ಎಂದು ತುಂಬಾ ಜನ ಕೇಳುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಶೋ ತೆಲುಗು ಮತ್ತು ಮಲೆಯಾಳಂ ನಲ್ಲಿ ಆರಂಭ ಆಗುತ್ತಿದೆ. ಇನ್ನು ಇದರ ಬಗ್ಗೆ ಈ ಬಾರಿಯ ಬಿಗ್ ಬಾಸ್ ಸೀಸನ್ 12ರ ಎಲ್ಲೆಡೆ ಜೋರಾದ ಚರ್ಚೆಗಳು ಕೂಡ ನಡೆಯುತ್ತಿದೆ.

ಕನ್ನಡದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್-12ರ ನಿರೂಪಕರಾಗಿ ಮತ್ತೆ ಮುಂದುವರಿಯುತ್ತಿರುವುದು ಖಚಿತವಾಗಿದೆ. ಈ ಸೀಸನ್ ಕಾರ್ಯಕ್ರಮದ ನಿರೂಪಕ ಯಾರು ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸ್ವತಃ ಕಲರ್ಸ್ ಕನ್ನಡ ಅನೌನ್ಸ್ ಮಾಡಿದೆ. ಇದರಿಂದಾಗಿ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಈ ಜನಪ್ರಿಯ ರಿಯಾಲಿಟಿ ಶೋನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇದನ್ನ ಓದಿ: ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ – Pension Scheme
ಬಿಗ್ ಬಾಸ್ 12ರ ಹೊಸ ಮನೆ:
ಬಿಗ್ ಬಾಸ್ ನ ಮೊದಲ ಎರಡು ಸೀಸನ್ ಪುಣೆಯ ಲೋನಾವಾಲಾದಲ್ಲಿ ಚಿತ್ರೀಕರಿಸಲಾಗಿತ್ತು. ಆ ನಂತರ ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಸೀಸನ್ ಮೂರರಿಂದ ಒಂಬತ್ತನೇ ಸೀಸನ್ ನ ವರೆಗೆ ನಡೆಸಲಾಯಿತು. ಅದಾದ ನಂತರ 10ನೇ ಸೀಸನ್ ಅನ್ನು ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ನಡೆದಿತ್ತು. ಇನ್ನು 11ನೇ ಸೀಸನ್ ಕೂಡ ಅಲ್ಲೇ ನಡೆಸಲಾಯಿತು. ಆದರೆ ಇದೀಗ 12ನೇ ಸೀಸನ್ ನಡೆಸಲು ಬಿಗ್ ಬಾಸ್ ಮನೆ ಬದಲಾಯಿಸಲಾಗಿದೆ. ಹೌದು ಈ ಹಿಂದೆ ಸುಧೀರ್ಘವಾಗಿ ಬಿಗ್ ಬಾಸ್ ಕನ್ನಡ ನಡೆದ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಸೀಸನ್ 12ರ ಹೊಸ ಮನೆ ನಿರ್ಮಾಣ ಮಾಡಲಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದು ಬಂದಿದೆ.
ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ:
ಈಗಾಗಲೇ ಬಿಗ್ ಬಾಸ್ ರಿಯಾಲಿಟಿ ಶೋ ತೆಲುಗು ಹಾಗೂ ಮಲೆಯಾಳಂ ನಲ್ಲಿ ಆರಂಭ ವಾಗಿದ್ದು, ಕನ್ನಡದಲ್ಲಿ ಯಾವಾಗ ಆರಂಭವಾಗಲಿದೆ ಎನ್ನುವುದರ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಆದರೆ ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಸೆಪ್ಟಂಬರ್ ನ ಕೊನೆಯ ವಾರ ಆರಂಭವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ, Free sewing machine scheme, Karnataka Government Scheme 2025ಸ್ಪರ್ಧಿಗಳು
ಬಿಗ್ ಬಾಸ್ 12ರ ಸ್ಪರ್ಧಿಗಳು:
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 12 ಆರಂಭ ಆಗಲಿದ್ದು, ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಆದರೆ ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ರಹಸ್ಯವಾಗಿ ಉಳಿದಿದೆ. ಮೂಲಗಳ ಪ್ರಕಾರ ಕಿರುತೆರೆ, ಸಿನಿಮಾ, ಡಿಜಿಟಲ್ ಮಾಧ್ಯಮ ಮತ್ತು ಸಂಗೀತ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೆಸರುಗಳು ಹರಿದಾಡುತ್ತಿವೆ. ಇನ್ನು ಇದರ ಬಗ್ಗೆ ಯೂಟ್ಯೂಬ್ ನಲ್ಲಿ ವಿಡಿಯೋ ಕೂಡ ಇದೆ. ಅದರ ಲಿಂಕ್ ಈ ಕೆಳಗೆ ನೀಡಲಾಗಿದೆ.
ಲಿಂಕ್: Youtube Video
ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಹಾಗು ಯಾರು ಬರಬೇಕು ಎನ್ನುವುದನ್ನ ಕಾಮೆಂಟ್ ಮಾಡಿ.
ಬಿಗ್ ಬಾಸ್ 12ನೇ ಸೀಸನ್ ಗೆ ಹೊಸ ಮನೆ, ಹೇಗಿರಲಿದೆ ಈ ಬಾರಿಯ ಬಿಗ್ ಬಾಸ್ ಮನೆ, BBK12, Bigg Boss Kannada Season 12 New House, Bigg Boss Kannada
