ಬಿಗ್ ಬಾಸ್‌ ಕನ್ನಡ 12’ಶೋ ಡೇಟ್ ಫಿಕ್ಸ್, ಯಾವಾಗ ಶುರುವಾಗುತ್ತೆ ಬಿಗ್ ಬಾಸ್‌,BBK12, Kiccha Sudeep 

ನಮಸ್ಕಾರ ಸ್ನೇಹಿತರೇ, Bigg Boss Kannada Season 11 ಮುಗಿದು ಇದೀಗ 12ನೇ ಸೀಸನ್ ಗೆ ಕಾಲಿಟ್ಟಿದೆ. ‘ಕಿಚ್ಚ ಸುದೀಪ್’ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭದ ಡೇಟ್ ಕೂಡ ಇದೀಗ ಫಿಕ್ಸ್ ಆಗಿದೆ. ಈ ಬಾರಿಯ ಬಿಗ್ಬಾಸ್ 12 ಯಾವಾಗ ಆರಂಭವಾಗುತ್ತೆ ಎನ್ನುವುದನ್ನ ಕಿಚ್ಚ ಸುದೀಪ್ ರವರು ಅನೌನ್ಸ್ ಮಾಡಿದ್ದಾರೆ. ಇನ್ನು ಬಿಗ್ ಬಾಸ್‌ ಸೀಸನ್ 12 ಯಾವಾಗ ಆರಂಭವಾಗುತ್ತೆ ಎನ್ನುವುದನ್ನ ಇದೀಗ ತಿಳಿಯೋಣ.

ಬಿಗ್ ಬಾಸ್‌ ಕನ್ನಡ 12'ಶೋ ಡೇಟ್ ಫಿಕ್ಸ್, ಯಾವಾಗ ಶುರುವಾಗುತ್ತೆ ಬಿಗ್ ಬಾಸ್‌ ಸೀಸನ್ 12, BBK12, Kiccha Sudeep, Bigg Boss Kannada
Bigg Boss kannada

‘ಕಿಚ್ಚ’ ಸುದೀಪ್ ಅವರ ಸಾರಥ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕೂಡ ಹುಟ್ಟಿಕೊಂಡಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ? ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಟಾಸ್ಕ್ ಇರಬಹುದು ಎಂಬ ಕುತೂಹಲ ಕೂಡ ಇದೆ. ಸದ್ಯ ಬಿಗ್ ಬಾಸ್ ಮನೆ ಬಗ್ಗೆ ಹೊಸದೊಂದು ಅಪ್‌ಡೇಟ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾವಣೆ ಆಗಿದೆ. ಹೌದು ಹೊಸದೊಂದು ಜಾಗದಲ್ಲಿ ಬಿಗ್ ಬಾಸ್ ನ ಮನೆ ನಿರ್ಮಾಣ ಮಾಡಲಾಗಿದೆ.

ಬಿಗ್ ಬಾಸ್‌ 12 ಯಾವಾಗ ಆರಂಭ: 

ಕಿಚ್ಚ ಸುದೀಪ್ ರವರು ಒಂದು ಖಾಸಗಿ ವೇದಿಕೆಯಲ್ಲಿ ಈ ಬಾರಿಯ ಬಿಗ್ ಬಾಸ್ 12 ಯಾವಾಗ ಆರಂಭ ಆಗುತ್ತದೆ ಎಂಬುದನ್ನು ಹೇಳಿದ್ದಾರೆ. ಹೌದು ಕಿಚ್ಚ ಸುದೀಪ್ ರವರು ಹೇಳಿರುವಂತೆ ಈ ಬಾರಿಯ ಬಿಗ್ ಬಾಸ್ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ.

ಇದನ್ನ ಓದಿ: ಬಿಗ್ ಬಾಸ್ 12ನೇ ಸ್ಪರ್ಧಿಗಳು ಇವರೇ, ನಿಮ್ಮ ಪ್ರಕಾರ ಇವರಲ್ಲಿ ಯಾರು ಬರಲಿದ್ದಾರೆ, BBK12
ಬಿಗ್ ಬಾಸ್ ಮನೆ ಬದಲಾವಣೆ:

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮೊದಲ ಎರಡು ಸೀಸನ್‌ಗಳನ್ನು ಪುಣೆಯ ಲೋನಾವಾಲಾದಲ್ಲಿ ನಡೆಸಲಾಯಿತು. ಇನ್ನು ಮೂರನೇ ಸೀಸನ್‌ನಿಂದ ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಯ್ತು. ಆರಂಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ವಿನ್ಯಾಸ ಮಾಡಲಾಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 3’ ರಿಂದ ‘ಬಿಗ್ ಬಾಸ್ ಕನ್ನಡ 9’ ವರೆಗಿನ ಶೋಗಳು ಹಾಗೂ ‘ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1’ ಕೂಡ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಡೆಸಲಾಗಿತ್ತು. ಆ ನಂತರ ಅಲ್ಲಿಂದ ಲೊಕೇಷನ್‌ ಅನ್ನು ಶಿಫ್ಟ್ ಮಾಡಲಾಯಿತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ.

ಬಿಗ್ ಬಾಸ್‌ ಕನ್ನಡ 12'ಶೋ ಡೇಟ್ ಫಿಕ್ಸ್, ಯಾವಾಗ ಶುರುವಾಗುತ್ತೆ ಬಿಗ್ ಬಾಸ್‌ ಸೀಸನ್ 12, BBK12, Kiccha Sudeep, Bigg Boss Kannada, Kannada news, big boss 12 update, kiccha Sudeep, trending news, my edu update kannada

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮನೆ ನಿರ್ಮಾಣ:
ಇದೀಗ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದೀಗ ಪುನಃ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಬಿಗ್ ಬಾಸ್‌ 12ರ ಪ್ರೋಮೋ:

ಇನ್ನು ಬಿಗ್ ಬಾಸ್‌ 12 ಸೆಪ್ಟೆಂಬರ್ 28 ರಿಂದ ಶುರುವಾಗಿದ್ದು, ಇದೀಗ ಎಲ್ಲರ ನಿರೀಕ್ಷೆ ಬಿಗ್ ಬಾಸ್‌ ಪ್ರೋಮೋ ಯಾವಾಗ ಅಂತ. ಈ ಬಾರಿಯ ಬಿಗ್ ಬಾಸ್ 12ರ ಪ್ರೋಮೋ  ಕಿಚ್ಚ ಸುದೀಪ್ ರವರ ಬರ್ತಡೇ ದಿನದಂದು ಬಿಗ್ ಬಾಸ್‌ 12ರ ಪ್ರೋಮೋ ಬಿಡುಗಡೆ ಆಗಲಿದೆ. ಹೌದು, ಸೆಪ್ಟಂಬರ್ 2ರಂದು ಬಿಗ್ ಬಾಸ್‌ ತಂಡದಿಂದ ಸೀಸನ್ 12ರ ಪ್ರೋಮೋ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇನ್ನು ಕಲರ್ಸ್ ಕನ್ನಡದ ಆಫೀಸಿಯಲ್ ಪೇಜ್ ಗಳಲ್ಲಿ ಟ್ವಿಟರ್, ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಲಿದೆ.

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು:

ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿರುವುದು ಈ ಬಾರಿಯ ಬಿಗ್ ಬಾಸ್‌ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಇರುತ್ತಾರೆ ಎಂಬುವುದು. ಇದೀಗ ಒಂದಿಷ್ಟು ಜನರ ಹೆಸರುಗಳು ಇದೀಗ ಕೇಳಿಬರುತ್ತಿದೆ. ಅದರ ಬಗ್ಗೆ ನಮ್ಮ ಚಾನೆಲ್ ನಲ್ಲಿ ಒಂದು ಲೇಖನ ಈಗಾಗಲೇ ಬರೆಯಲಾಗಿದೆ. ಒಮ್ಮೆ ಅದನ್ನ ನೀವು ಕೂಡ ಓಡಿ.

ಇಲ್ಲಿದೆ ಸ್ಪರ್ಧಿಗಳ ಪಟ್ಟಿ: Video

ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ.

ಬಿಗ್ ಬಾಸ್‌ ಕನ್ನಡ 12’ಶೋ ಡೇಟ್ ಫಿಕ್ಸ್, ಯಾವಾಗ ಶುರುವಾಗುತ್ತೆ ಬಿಗ್ ಬಾಸ್‌ ಸೀಸನ್ 12, BBK12, Kiccha Sudeep, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment