ಬಿಗ್ ಬಾಸ್‌ ಕನ್ನಡ 12ರ ಕಂಟೆಸ್ಟಂಟ್ ಲಿಸ್ಟ್ ಲೀಕ್, ಯಾರೆಲ್ಲ ಬಿಗ್ ಬಾಸ್‌ ಮನೆಗೆ ಬರಲಿದ್ದಾರೆ, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ -12′ (ಬಿಗ್ ಬಾಸ್ ಕನ್ನಡ -12) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತಿಬಾರಿಯಂತೆ ಈ ಬಾರಿಯೂ ‘ಬಿಗ್ ಬಾಸ್’ ಆರಂಭಕ್ಕೂ ಮುನ್ನ ಕುತೂಹಲ ಹುಟ್ಟಿಸಿದೆ. ಹೌದು ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ ಮಧ್ಯ ಕೆಲವು ಕಂಟೆಸ್ಟಂಟ್ ಗಳ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಅವರು ಯಾರೆಲ್ಲ ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್‌ ಕನ್ನಡ 12ರ ಕಂಟೆಸ್ಟಂಟ್ ಲಿಸ್ಟ್ ಲೀಕ್, ಯಾರೆಲ್ಲ ಬಿಗ್ ಬಾಸ್‌ ಮನೆಗೆ ಬರಲಿದ್ದಾರೆ, Bigg Boss Season 12 Contestants List, BBK12, Bigg Boss Kannada

ಕಿಚ್ಚ ಸುದೀಪ್ (Kiccha Sudeep) ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಇನ್ನಷ್ಟು ಖುಷ್ ಆಗಿಸಿದೆ. ಇತ್ತೀಚೆಗೆ ‘ಬಿಗ್ ಬಾಸ್’ ಪ್ರೋಮೋ ರಿಲೀಸ್ ಆಗಿದೆ. ಕಲರ್ಸ್ ಕನ್ನಡದ ಆಫೀಸಿಯಲ್ ಪೇಜ್ ಗಳಲ್ಲಿ ಟ್ವಿಟರ್, ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಲಿದೆ. ಕರ್ನಾಟಕದ ವಿವಿಧ ಪ್ರದೇಶ ಸಾಂಸ್ಕೃತಿಕ ಆಚರಣೆಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಕಿಚ್ಚ ಸುದೀಪ್ ಸಖತ್ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್‌ 12ರ ಕಂಟೆಸ್ಟಂಟ್ ಗಳು:

ಪ್ರೋಮೋ ರಿಲೀಸ್ ಬಳಿಕ ಬಿಗ್ ಬಾಸ್ ಮನೆಗೆ ಹೋಗಲಿರುವ ಸ್ಪರ್ಧಿಗಳ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಪೈಕಿ ಮೂವರು ಸ್ಪರ್ಧಿಗಳ ಬಿಗ್ ಬಾಸ್ ಹೋಗೋದು ಪಕ್ಕಾವೆನ್ನಲಾಗುತ್ತಿದೆ. ಅವರುಗಳು ಯಾರು ಎನ್ನುವುದನ್ನ ಇದೀಗ ನೋಡೋಣ.

ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಿಗ್ ಬಾಸ್ ಸೀಸನ್ 12 ಕ್ಕೆ ಬರಲಿರುವ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಕೇಳಿಬರುತ್ತಿರುವ ಹೆಸರುಗಳು
  • ಶ್ವೇತಾ ಪ್ರಸಾದ್
  • ಅನನ್ಯಾ ಅಮರ್
  • ಸಾಗರ್ ಬಿಳಿಗೌಡ

ಶ್ವೇತಾ ಪ್ರಸಾದ್:

ಕನ್ನಡದಲ್ಲಿ’ರಾಧಾ ರಮಣ’, ‘ಶ್ರೀರಸ್ತು ಶುಭಮಸ್ತು’ ಮುಂತಾದ ಧಾರಾವಾಹಿಗಳಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿರುವ ಶ್ವೇತಾ ಪ್ರಸಾದ್ (Shwetha Prasad) ರವರು ಈ ಬಾರಿ ಬಿಗ್ ಬಾಸ್ ಮನೆಗೆ ಬರುವುದು ಪಕ್ಕಾವೆನ್ನಲಾಗುತ್ತಿದೆ.

ಕಿರುತೆರೆ ಮಾತ್ರವಲ್ಲದೆ ಶ್ವೇತಾ ಆರ್ ಪ್ರಸಾದ್ ಅವರು ‘ಕಳ್ಳೆಟ್ಟದ ದರೋಡೆಕೋರರು’, ‘ಪದವಿ ಪೂರ್ವ’ ಸಿನಿಮಾಗಳಲ್ಲಿಯೂ ನಟಿಸಿ ಜನಪ್ರಿಯರಾಗಿದ್ದಾರೆ. ‘ಕಾಟೇರ’ದಲ್ಲಿನ ಅವರ ಅಭಿನಯ ಗಮನ ಸೆಳೆದಿತ್ತು.

ನಟನೆ ಜತೆ ಶ್ವೇತಾ ನಿರ್ಮಾಪಕಿಯಾಗಿಯೂ ಸೈ ಎನ್ನಿಸಿಕೊಂಡಿದ್ದಾರೆ. ‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಬಂಡವಾಳ ಹಾಕಿ ಗೆದ್ದಿದ್ದಾರೆ. ಶ್ವೇತಾ ಪ್ರಸಾದ್ ಬಿಗ್ ಬಾಸ್ ಮನೆಗೆ ಅಧಿಕೃತವಾಗಿದೆ ಎನ್ನಲಾಗುತ್ತಿದೆ.

ಅನನ್ಯಾ ಅಮರ್:

ಅಂಕಿತಾ ಅಮ‌ರ್ ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಮಿಂಚಿದ್ದಾರೆ. ಅವರ ಸಹೋದರಿ ಅನನ್ಯಾ ಅಮರ್‌ (Anan ya Amar) ಅವರು ಕೂಡ ಅಂಕಿತಾ ಜತೆ ಆಗಾಗ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸಂದರ್ಶನ ಸೇರಿದಂತೆ ಇತ್ತೀಚೆಗೆ ಅವರು ‘ಭರ್ಜರಿ ಬ್ಯಾಚುಲ ರ್ಸ್ ಸೀಸನ್ 2’ನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಬಾರಿ ಅನನ್ಯಾ ಅಮರ್ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಅವರು ಬಿಗ್ ಬಾಸ್‌ ಮನೆಗೆ ಬರೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಇದನ್ನ ಓದಿ: ಬಿಗ್ ಬಾಸ್‌ ಕನ್ನಡ 12ರ ಪ್ರೋಮೋ ಬಿಡುಗಡೆ, ಈ ಬಾರಿ ಬಿಗ್ ಬಾಸ್‌ 12ರ ಸ್ಪರ್ಧಿಗಳು, BBK12, Kiccha Sudeep 
ಸಾಗರ್ ಬಿಳಿಗೌಡ:

ಕಿರುತೆರೆ ಕಲಾವಿದರು ಬಿಗ್ ಬಾಸ್ ಮನೆಯ ಸ್ಪರ್ಧಿಗಳಾಗಿ ಪ್ರತಿ ಸೀಸನ್‌ನಲ್ಲಿರುತ್ತಾರೆ. ಈ ಸಾಲಿನಲ್ಲಿ ಈ ಸಲ ಸಾಗರ್ ಬಿಳಿಗೌಡ (Sagar Biligowda) ಅವರು ಇದ್ದಾರೆ. ‘ಸತ್ಯ’ ಧಾರಾವಾಹಿಯಲ್ಲಿ ಮಿಂಚಿದ ಸಾಗರ್‌ಗೆ ಅಪಾರ ಅಭಿಮಾನಿಗಳಿದ್ದಾರೆ.

ಅವರು ಈ ಸಲದ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಅವರು ದೊಡ್ಮನೆ ಆಟಕ್ಕೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಈ ಮೂವರು ಸ್ಪರ್ಧಿಗಳಾಗಿ ಪೈನಲ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆ ಹಲವರು ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಇನ್ನಷ್ಟು ಜನರ ಹೆಸರು ಕೇಳಿಬರುತ್ತಿದೆ. ಇದರ ವಿಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ. ನೀವು ಸಹ ವಿಡಿಯೋ ನೋಡಬಹುದು.

ಇಲ್ಲಿದೆ ಸ್ಪರ್ಧಿಗಳ ಲಿಸ್ಟ್ ವೀಡಿಯೋ: Video Link 

ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ.

ಬಿಗ್ ಬಾಸ್‌ ಕನ್ನಡ 12ರ ಕಂಟೆಸ್ಟಂಟ್ ಲಿಸ್ಟ್ ಲೀಕ್, ಯಾರೆಲ್ಲ ಬಿಗ್ ಬಾಸ್‌ ಮನೆಗೆ ಬರಲಿದ್ದಾರೆ, Bigg Boss Season 12 Contestants List, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment