ನಮಸ್ಕಾರ ಸ್ನಹಿತರೇ, Gruhalakshmi Yojane 16ನೇ ಕಂತಿನ ಹಣ ಇದೀಗ ಜಮಾ ಆಗಿದೆ. ಗೃಹಲಕ್ಷ್ಮೀ 16ನೇ ಕಂತು ಬಂದಿಲ್ವಾ ಅಂದ್ರೆ ಜನವರಿ ತಿಂಗಳಿನಲ್ಲಿ ಬರಬೇಕಿದ್ದ ಹಣ ಫೆಬ್ರವರಿ ತಿಂಗಳಿನಲ್ಲಿ ಜಮಾ ಆಗಿದೆ. ಆದರೆ ತುಂಬಾ ಜನರಿಗೆ ಗೃಹಲಕ್ಷ್ಮೀ ಯೋಜನೆ ಹಣ ಇನ್ನು ಕೂಡ ಬಂದಿಲ್ಲ. ಇದು ಕೇವಲ 16ನೇ ಕಂತು ಒಂದೆ ಅಲ್ಲ. 12,13, 14, ಹಾಗೂ 15ನೇ ಕಂತು ಕೂಡ ಬಂದಿಲ್ಲ. ಇನ್ನು ನಿಮ್ಮ ಗೃಹ ಲಕ್ಷ್ಮೀ ಯೋಜನೆ ಬಾಕಿ ಉಳಿದಿರುವ ಎಲ್ಲಾ ಕಂತು ಬರಬೇಕು ಅಂದ್ರೆ ಎನು ಮಾಡಬೇಕು ಎನ್ನುವುದನ್ನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ.
ಗೃಹಲಕ್ಷ್ಮೀ 16ನೇ ಕಂತು ಬಂದಿಲ್ವಾ ಆಗಿದ್ರೆ ಹೀಗೆ ಮಾಡಿ, Gruhalakshmi 16th Installment Release, Congress, 5 Guarantee Scheme Update, Gruhalakshmi Yojane Status Check
ನಾವು ನಿಮಗೆ ಜನವರಿ ತಿಂಗಳಿನಲ್ಲಿ ಗೃಹ ಲಕ್ಷ್ಮೀ ಹಣ ಜಮಾ ಆಗಲ್ಲ. ಗೃಹ ಲಕ್ಷ್ಮೀ ಯೋಜನೆ 16ನೇ ಕಂತು ಫೆಬ್ರವರಿ ಮೊದಲ ವಾರ ಅಥವಾ ಕೊನೆಯ ವಾರ ಜಮಾ ಆಗಲಿದೆ ಎನ್ನುವುದನ್ನ ಹೇಳಿದ್ದೆವು. ಅದೇ ರೀತಿ ಫೆಬ್ರವರಿ ಮೊದಲ ವಾರ 16ನೇ ಕಂತು ಈಗ ಜಮಾ ಆಗಿದೆ. ಇನ್ನು ಕೆಲವರಿಗೆ ಈ ಹಣ ಆವರ ಖಾತೆಗಳಿಗೆ ಜಮಾ ಆಗಿದ್ರೆ. ಇನ್ನು ಕೆಲವರ ಖಾತೆಗಳಿಗೆ ಇನ್ನು ಕೂಡ ಜಮಾ ಆಗಿಲ್ಲ. ಇದು ಕೇವಲ 16, ನೇ ಕಂತು ಒಂದೇ ಅಲ್ಲ. 12ನೇ ಕಂತಿನಿಂದ ಇಲ್ಲಿಯವರೆಗೆ ಯಾವುದೇ ಹಣ ಜಮಾ ಆಗಿಲ್ಲ. ಇನ್ನು ನಿಮಗೆ ಈ ಹಣ ಜಮಾ ಆಗಿಲ್ಲ ಅಂದ್ರೆ ಎನು ಮಾಡಬೇಕು. ಹಾಗೂ ಎನು ಮಾಡಿದ್ರೆ ನಿಮ್ಮ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
Recent Post:
-
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment
-
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration Card Apply Details, APL and BPL Ration Card
ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 15 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 30,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾವು ಯಾವುದೇ ಕಾರಣಕ್ಕೂ ಯೋಜನೆಯನ್ನ ಕ್ಯಾನ್ಸಲ್ ಮಾಡುವುದಿಲ್ಲ. ನಾವು ಗೃಹಲಕ್ಷ್ಮೀ ಹಣ ನೀಡುತ್ತೇವೆ ಅಂತ ಹೇಳಿದ್ರು. ನಾವು 16ನೇ ಕಂತು ಫೆಬ್ರವರಿ ಮೊದಲ ವಾರದಲ್ಲಿ ಜಮಾ ಮಾಡುವುದಾಗಿ ಹೇಳಿದ್ರು. ಅದೇ ರೀತಿ ಇದೀಗ ಜಮಾ ಆಗ್ತಾ ಇದೆ.
ಯಾರಿಗೆಲ್ಲ 16ನೇ ಕಂತು ಜಮಾ ಆಗಿದೆ:
ಗೃಹಲಕ್ಷ್ಮೀ ಯೊಜನೆ ಹಣ ಫೆಬ್ರವರಿ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ 16ನೇ ಕಂತು ಜಮಾ ಆಗಲಿದೆ ಅಂತ ಸಚಿವ ಲಕ್ಷ್ಮೀ ಹೆಬ್ಬಾಳಕರ್ ರವರು ಹೇಳಿದ್ರು. ಅದೇ ತರ ಇದೀಗ ತುಂಬಾ ಜನರಿಗೆ ಹಣ ಜಮಾ ಆಗಿದೆ. ಇನ್ನು ಕೆಲವರಿಗೆ ಜಮಾ ಆಗಿಲ್ಲ. ಇನ್ನು ಯಾರಿಗೆಲ್ಲ ಈ ಹಣ ಜಮಾ ಆಗಿದೆ ಅನ್ನುವುದನ್ನ ನೋಡುವುದಾದರೆ, ಯಾರಿಗೆಲ್ಲ 15ನೇ ಕಂತು ಜಮಾ ಆಗುತ್ತೋ ಅವರಿಗೆಲ್ಲ ಇದೀಗ 16ನೇ ಕಂತು ಜಮಾ ಆಗಲಿದೆ. ಇದೀಗ ಕೆಲವರಿಗೆ ಈ ಹಣ ಈಗಾಗಲೇ ಜಮಾ ಆಗಿದ್ರೆ, ಇನ್ನು ಕೆಲವರಿಗೆ ಇನ್ನು ಮುಂದೆ ಜಮಾ ಆಗಲಿದೆ.
How to Check Gruhalakshmi Status / ಗೃಹಲಕ್ಷ್ಮೀ ಸ್ಟೇಟಸ್ ಚೆಕ್ ಮಾಡೊದು ಹೇಗೆ?
ಗೃಹಲಕ್ಷ್ಮೀ ಯೋಜನೆ ಹಣ ಇಲ್ಲಿಯವರೆಗೆ 15 ಕಂತುಗಳು ಜಮಾ ಮಾಡಲಾಗಿದೆ. ಇನ್ನು ಈ ತಿಂಗಳಿನಲ್ಲಿ 16ನೇ ಕಂತಿನ ಹಣ ಕೂಡ ಜಮಾ ಮಾಡುತ್ತಿದ್ದಾರೆ. ನಿಮಗೆ ಇನ್ನು ಬಂದಿಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಹಣ ಜಮಾ ಆಗುತ್ತೆ. ಇನ್ನು ಕೆಲವರಿಗೆ 3 ಅಥವಾ ಅದಕ್ಕಿಂತ ಹೆಚ್ಚಿನ ಹಣ ಬರಬೇಕಾಗಿದೆ. ಇಲ್ಲಿ ಕೆಲವರ ಗೃಹಲಕ್ಷ್ಮಿ ಖಾತೆಗಳನ್ನ ಸರ್ಕಾರ ಕ್ಯಾನ್ಸಲ್ ಮಾಡಿದೆ. ಅದ್ದರಿಂದ ಒಮ್ಮೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಅದರ ಸ್ಟೇಟಸ್ ಏನಾಗಿದೆ ಎನ್ನುವುದನ್ನ ಚೆಕ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ಆನಲೈನ್ ನಲ್ಲಿ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಎನಾಗಿದೆ ಎನ್ನುವುದನ್ನ ಒಮ್ಮೆ ಚೆಕ್ ಮಾಡಿಕೊಳ್ಳಿ. ಆನಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎನ್ನುವುದರ ಲಿಂಕ್ ಈ ಕೆಳಗೆ ನೀಡಲಾಗಿದೆ.
Online Status Check: Click here
ಇನ್ನು ಇದರ ಬಗ್ಗೆ YouTube ನಲ್ಲಿ ಆನ್ಲೈನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎನ್ನುವುದರ ವಿಡಿಯೋ ಕೂಡ ಇರುತ್ತೆ. ಒಮ್ಮೆ ಆ ವಿಡಿಯೋ ನೀವು ನೋಡಿ. ಈ ಕೆಳಗೆ ಕೊಟ್ಟಿರುವ Link ಮೇಲೆ ಕ್ಲಿಕ್ ಮಾಡಿದ್ರೆ ವಿಡಿಯೋ ನೋಡಬಹುದು.
Video Link: YouTube Video
ಇನ್ನು ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ಮತ್ತೊಮ್ಮೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.
ಗೃಹಲಕ್ಷ್ಮೀ 16ನೇ ಕಂತು ಬಂದಿಲ್ವಾ ಆಗಿದ್ರೆ ಹೀಗೆ ಮಾಡಿ, Gruhalakshmi 16th Installment Release, Congress, 5 Guarantee Scheme Update, Gruhalakshmi Yojane Status Check