ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಒಂದು ಗುಡ್ ನ್ಯೂಸ್. ಗೃಹಲಕ್ಷ್ಮೀ ಯೋಜನೆಯ 22ನೇ ಕಂತಿನ ಹಣ ನಿಮಗೆ ಜಮಾ ಆಗಲಿದೆ. ಹೌದು ಇದೀಗ 21ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಇದೀಗ 22ನೇ ಕಂತಿನ ಹಣಕ್ಕಾಗಿ ಎಲ್ಲರು ಕಾಯುತ್ತಿದ್ದಾರೆ. ಇದೀಗ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಇನ್ನು 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎನ್ನುವುದನ್ನ ಇದೀಗ ನೋಡೋಣ ಮತ್ತು ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
Gruhalakshmi Scheme Released, ಗೃಹಲಕ್ಷ್ಮೀ ಯೋಜನೆ 22 ಮತ್ತು 23ನೇ ಕಂತು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮ ಬಿಡುಗಡೆ, Congress Garantee Scheme, Congress, Government Garantee Scheme
ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದು. ಈ ಯೋಜನೆಯ ಮೂಲಕ ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳು ಸಿಗುತ್ತವೆ. ಇಲ್ಲಿಯವರೆಗೆ ಒಟ್ಟಾರೆಯಾಗಿ 21 ಕಂತಿನವರೆಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗಿದೆ. ಅಂದರೆ ಒಟ್ಟಾರೆಯಾಗಿ 42,000 ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನೀಡಲಾಗಿದೆ. ಇವಾಗ ನೀಡಬೇಕಾಗಿರುವುದು 22 ಮತ್ತು 23ನೇ ಕಂತಿನ ಹಣವನ್ನು ನೀಡಬೇಕಾಗಿರುವುದು.
ಇನ್ನು ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಜುಲೈ ತಿಂಗಳಲ್ಲಿ ನಾವು ಒಂದು ಕಂತಿನ ಹಣ ಜಮಾ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಯಾರಿಗೂ ಕೂಡ ಯೋಜನೆ ಹಣ ಜಮಾ ಮಾಡಲಾಗಿಲ್ಲ. ಅನಂತರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 21ನೇ ಕಂತು ಜಮಾ ಮಾಡಲಾಗಿತ್ತು. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಗೃಹಲಕ್ಷ್ಮೀ ಯೋಜನೆ 22ನೇ ಕಂತಿನ ಬಿಡುಗಡೆ ಆಗುತ್ತೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು.
ಮಹಿಳೆಯರಿಗೆ ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ..?
ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೆಗೆ 21 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 42,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈಗ ನೀಡಬೇಕಿರುವುದು 22 ಮತ್ತು 23ನೇ ಕಂತಿನ ಹಣ. ಇದೀಗ 22ನೇ ಕಂತಿನ ಹಣ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ದಾರೆ.
ಗಣೇಶ ಚತುರ್ಥಿ ಹಬ್ಬಕ್ಕೆ ಗೃಹಲಕ್ಷ್ಮೀ ಯೋಜನೆಯ ₹2,000 ಹಣ ಬಿಡುಗಡೆ..?
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ (gruh Lakshmi) ಯೋಜನೆ 22ನೇ ಕಂತಿನ (Money released) ಹಣ ₹2,000 ರೂಪಾಯಿ ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದು ಬಂದಿದೆ.
ಆದರಿಂದ ಸುಮಾರು 1.24 ಕೋಟಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಈಗಾಗಲೇ ಆದೇಶ ಮಾಡಲಾಗಿದೆ. ಹಾಗಾಗಿ ಆಯಾ ತಾಲೂಕುಗಳಲ್ಲಿ ಇರುವ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ (TPOE) ವರ್ಗಾವಣೆ ಮಾಡಲಾಗುತ್ತಿದೆ. ನಂತರ ಮಹಿಳೆಯರ ಖಾತೆಗೆ ಡೈರೆಕ್ಟ್ ಆಗಿ ಈ ಹಣ ವರ್ಗಾವಣೆ ಮಾಡಲಾಗುತ್ತದೆ.
ಇದನ್ನ ಓದಿ: ಬಿಗ್ ಬಾಸ್ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್ 12ರ ಹೊಸ ಲೋಗೋ, BBK12
ಹೌದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಯಿಂದ ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಪ್ರಾರಂಭವಾಗುತ್ತದೆ ಹಾಗೂ ಈ ಹಣವು ಇನ್ನೂ ಒಂದು ವಾರದ ಒಳಗಡೆ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗುವಂತೆ ಮಾಡಲಾಗುತ್ತದೆ. ಹಾಗಾಗಿ ಹಣ ಬರುವವರೆಗೂ ಮಹಿಳೆಯರು ತಾಳ್ಮೆಯಿಂದ ಕಾಯಬೇಕು. ಇನ್ನು 21ನೇ ಕಂತಿನ ಹಣ ನಿಮಗೆ ಜಮಾ ಆಗಿಲ್ಲ ಅಂದ್ರೆ ಯಾರು ಕೂಡ ಭಯ ಪಡುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗಳಿಗೆ ಜಮಾ ಆಗುತ್ತೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ಸ್ಪಷ್ಟಣೆ:
ಗೃಹಲಕ್ಷ್ಮೀ ಯೋಜನೆ 21ನೇ ಕಂತಿನವರೆಗೆ ಜಮಾ ಆಗಿದೆ. ಇನ್ನು ಜುಲೈ ತಿಂಗಳಿನಲ್ಲಿ ಜಮಾ ಆಗಿಲ್ಲ. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೌದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿರುವಂತೆ ಆಗಸ್ಟ್ ತಿಂಗಳಿನಲ್ಲಿ 2 ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದೇವೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಒಂದು ಕಂತು ಹಾಗೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಇನ್ನೊಂದು ಕಂತಿನ ಹಣ ಜಮಾ ಆಗಲಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಗೃಹಲಕ್ಷ್ಮೀ ಯೋಜನೆ ಕೆಲ ಕಂತುಗಳು ಬರದೆ ಇರುವುದು:
ರಾಜ್ಯದಲ್ಲಿ ಕೆಲವರಿಗೆ ಗೃಹಲಕ್ಷ್ಮೀ ಯೋಜನೆ ಕಂತುಗಳು ಬಂದಿದ್ರೆ, ಇನ್ನು ಕೆಲವರಿಗೆ ಅನೇಕ ಕಂತುಗಳು ಬಂದಿಲ್ಲ. ಅಂತವರು ಯಾವುದೇ ರೀತಿಯಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ. ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ನಲ್ಲಿ ಕೆಲ ತಾಂತ್ರಿಕ ದೋಷಗಳನ್ನ ಪರಿಹರಿಸಿ ನಂತರ ಹಣ ಜಮಾ ಮಾಡಲಿದ್ದೇವೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರೆ. ಇನ್ನು ಈ ಮಧ್ಯೆ ಕೆಲವರ ಗೃಹಲಕ್ಷ್ಮೀ ಅಪ್ಲಿಕೇಷನ್ ಗಳನ್ನ ಕ್ಯಾನ್ಸಲ್ ಮಾಡಲಾಗಿದೆ. ಅವರುಗಳು ಮತ್ತೆ ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ನೀವು ಅರ್ಜಿಯನ್ನ ಸಲ್ಲಿಸಬೇಕು. ಹೊಸ ಅರ್ಜಿ ಸಲ್ಲಿಸಿದ ನಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಜಮಾ ಆಗುತ್ತದೆ.
ಇದನ್ನ ಓದಿ: 2 lakhs ರೇಷನ್ ಕಾರ್ಡ್ Cancel, ರಾಜ್ಯದಲ್ಲಿ 2ಲಕ್ಷ BPL ರೇಷನ್ ಕಾರ್ಡ್ ರದ್ದು, Cancelled Ration Card List 2025
ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Gruhalakshmi Scheme Released, ಗೃಹಲಕ್ಷ್ಮೀ ಯೋಜನೆ 22 ಮತ್ತು 23ನೇ ಕಂತು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮ ಬಿಡುಗಡೆ, Congress Garantee Scheme, Congress, Government Garantee Scheme
