ನಮಸ್ಕಾರ ಸ್ನಹಿತರೇ, Gruhalaxmi Yojane 19 ಮತ್ತು 20ನೇ ಕಂತು ಜಮಾ ಆಗುತ್ತೆ. ಒಂದು ಇದೀಗ 2 ಕಂತಿನ ಹಣದ ಬಗ್ಗೆ ಮಾಹಿತಿಯೊಂದು ತಿಳಿದು ಬಂದಿದೆ. ಇನ್ನು 2 ಕಂತುಗಳು ಒಂದೆ ಅಲ್ಲ. 3 ಕಂತುಗಳನ್ನ ಒಟ್ಟಿಗೆ ಬಿಡುಗಡೆ ಮಾಡಲಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದು ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. ಹೌದು ಇದೀಗ 18ನೇ ಕಂತಿನ ವರೆಗೆ ಗೃಹಲಕ್ಷ್ಮೀ ಹಣ ಬಂದಿದೆ. ಇದೀಗ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಕೆಲ ಮಾಹಿತಿಯೊಂದನ್ನ ನೀಡಿದ್ದಾರೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ.
ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಒಂದೇ ಸಲ 3 ಕಂತುಗಳು ಜಮಾ ಆಗುತ್ತೆ, Congress Guarantee Scheme
ಇದೀಗ ಗೃಹಲಕ್ಷ್ಮೀ ಯೋಜನೆಯ 19 ಮತ್ತು 20ನೇ ಕಂತಿನ ಹಣ ಮೇ ತಿಂಗಳ ಮೊದಲ ವಾರ ಒಂದು ಕಂತು ಬರಲಿದೆ. ಇನ್ನು 20ನೇ ಕಂತಿನ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಂದಿಲ್ಲ. ಇನ್ನು ಎಪ್ರಿಲ್ ತಿಂಗಳಲ್ಲಿ ಒಂದು ಕಂತು ಬಂದಿತ್ತು. ಹಾಗೆ ಬಾಕಿ ಉಳಿದಿರುವ ಕಂತುಗಳಲ್ಲಿ ಮೇ ಮೊದಲ ವಾರ ಒಂದು ಕಂತು ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಇನ್ನು ಕೆಲವರಿಗೆ 2 ರಿಂದ 3 ತಿಂಗಳ ಕಂತು ಇನ್ನು ಕೂಡ ಜಮಾ ಆಗಿಲ್ಲ. ಅವರುಗಳಿಗೆ ಈ ಒಂದು ಕೆಲಸವನ್ನು ಮಾಡಲೇಬೇಕು. ಅದನ್ನ ಮಾಡಿದ್ರೆ ಮಾತ್ರ ಅವರ ಖಾತೆಗಳಿಗೆ ಪ್ರತಿ ತಿಂಗಳು ಹಣ ಜಮಾ ಆಗಲಿದೆ ಎನ್ನುವ ಸುದ್ದಿಯೊಂದು ಬಂದಿದೆ. ಅವರುಗಳಿಗೆ ಈ ಗೃಹಲಕ್ಷ್ಮೀ ಯೋಜನೆ ಹಣ ಬರಬೇಕು ಅಂದ್ರೆ ಈ ಒಂದು ಕೆಲಸವನ್ನು ಅವರು ಮಾಡಲೇಬೇಕು. ಹಾಗಾದ್ರೆ ಅದು ಎನು ಎನ್ನುವುದನ್ನ ಇದೀಗ ನೋಡೋಣ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
Recent Post:
-
SBI Scholarship 2025, ಎಸ್ ಬಿ ಐ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತೆ 20 ಲಕ್ಷ ಸ್ಕಾಲರ್ಶಿಪ್, SBIF ಆಶಾ ವಿದ್ಯಾರ್ಥಿವೇತನ, Scholarship 2025
-
ಭಾರತೀಯ ರೈಲ್ವೇ ನೇಮಕಾತಿ 2025, Railway Recruitment 2025, ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗಳಿಗೆ ಅರ್ಜಿ ಪ್ರಾರಂಭ, Indian Railway Vacancy
ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 18 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 36,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾವು ಯಾವುದೇ ಕಾರಣಕ್ಕೂ ಯೋಜನೆಯನ್ನ ಕ್ಯಾನ್ಸಲ್ ಮಾಡುವುದಿಲ್ಲ. ನಾವು ಗೃಹಲಕ್ಷ್ಮೀ ಹಣ ನೀಡುತ್ತೇವೆ ಅಂತ ಹೇಳಿದ್ರು. ನಾವು 18ನೇ ಕಂತು ಎಪ್ರಿಲ್ ನ ಮೊದಲ ವಾರದಲ್ಲಿ ಜಮಾ ಮಾಡುವುದಾಗಿ ಹೇಳಿದ್ರು. ಅದೇ ರೀತಿ ಇದೀಗ ಜಮಾ ಆಗಿದೆ.
19ನೇ ಕಂತು ಮತ್ತು 20ನೇ ಕಂತು ಜಮಾ:
ಗೃಹಲಕ್ಷ್ಮೀ ಯೋಜನೆಯ 18ನೇ ಕಂತಿನ ಹಣ ಎಪ್ರಿಲ್ ತಿಂಗಳಿನಲ್ಲಿ ಜಮಾ ಆಗಿತ್ತು. ಇದೀಗ ಅವರುಗಳು ಕಾಯುತ್ತಿರುವುದು, 19 ಹಾಗೂ 20ನೇ ಕಂತಿನ ಹಣಕ್ಕೆ. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿರುವ ಪ್ರಕಾರ ಮೇ 6ನೇ ತಾರೀಖಿನ ನಂತರ ಒಂದು ಕಂತು ಹಾಗೂ ಮೇ 3ನೇ ವಾರದಲ್ಲಿ ಇನ್ನೊಂದು ಕಂತು ಬರಲಿದೆ ಎನ್ನುವ ಮಾಹಿತಿ ಇದೀಗ ತಿಳಿದು ಬಂದಿದೆ.
ಹಾಗಾದ್ರೆ 3 ಕಂತು ಅಂದ್ರೆ 6000 ಯಾರಿಗೆ ಬರುತ್ತೆ:
ಗೃಹಲಕ್ಷ್ಮೀ ಯೋಜನೆಯ 18ನೇ ಕಂತಿನ ಹಣ ಎಪ್ರಿಲ್ ತಿಂಗಳಿನಲ್ಲಿ ಕೆಲವರಿಗೆ ಜಮಾ ಆಗಿಲ್ಲ. ಆದ್ದರಿಂದ ಅವರುಗಳಿಗೆ 18, 19 ಹಾಗೂ 20ನೇ ಕಂತಿನ ಹಣ ಇದೀಗ ಒಂದೇ ಸಲ ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ನಿಮಗೆ ಕೊನೆಯ ಕಂತು ಯಾವ ತಿಂಗಳಿನಲ್ಲಿ ಜಮಾ ಆಗಿತ್ತು ಎನ್ನುವುದನ್ನ ಕಮೆಂಟ್ ನಲ್ಲಿ ತಿಳಿಸಿ.
ಹಣ ಬಂದಿಲ್ಲ ಅಂದ್ರೆ ಈ ಕೆಲ್ಸ ಮಾಡಿ:
ಇದೀಗ ಗೃಹಲಕ್ಷ್ಮೀ ಯೋಜನೆ 18ನೇ ಕಂತು ಜಮಾ ಆಗಿದೆ. ಇನ್ನು ಕೆಲವರಿಗೆ 2 ರಿಂದ 3 ಕಂತುಗಳು ಬಂದಿಲ್ಲ. ಇದೀಗ ಅವರುಗಳಿಗೆ ಗೃಹಲಕ್ಷ್ಮೀ DBT ಮೂಲಕ ಹಣ ಜಮಾ ಅಗೋದಿಲ್ಲ. ಯಾಕಂದ್ರೆ ಇದೀಗ ಹೊಸ ನಿಯಮವೊಂದನ್ನ ತರಲಾಗಿದೆ. ನಿಮ್ಗೆ ಹಣ ಜಮಾ ಆಗಿಲ್ಲ ಅಂದ್ರೆ ನಿಮ್ಮ ಗ್ರಾಮ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಒಂದು ವೆರಿಫಿಕೇಷನ್ ಅನ್ನು ಮಾಡಲಾಗುತ್ತೆ. ಅದಾದ ನಂತರ ಯಾವ ತಿಂಗಳ ಹಣ ಬರಬೇಕಿತ್ತೋ ಆ ಹಣ ನಿಮ್ಮ ಖಾತೆಗಳಿಗೆ ಜಮಾ ಆಗುತ್ತೆ. ಅಂದ್ರೆ ಯಾವೆಲ್ಲ ಹಣ ಬರಬೇಕಿತ್ತೋ ಎಲ್ಲಾ ಹಣ ಜಮಾ ಆಗುತ್ತೆ. ಆದ್ದರಿಂದ ಮೊದಲು ಆ ಒಂದು verification ಮಾಡಲು ಮುಂದಾಗಿದೆ. ಆದ್ದರಿಂದ ಯಾರು ಕೂಡ worry ಮಾಡುವ ಅವಶ್ಯಕತೆ ಇರುವುದಿಲ್ಲ.
ಯಾರಿಗೆಲ್ಲ 18ನೇ ಕಂತು ಜಮಾ ಆಗಿದೆ:
ಗೃಹಲಕ್ಷ್ಮೀ ಯೊಜನೆ ಹಣ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಒಂದು ಕಂತು ಹಾಗೂ ಮೂರನೇ ವಾರದಲ್ಲಿ ಇನ್ನೊಂದು ಕಂತು ಅಂದ್ರೆ ಎಪ್ರಿಲ್ ತಿಂಗಳಿನಲ್ಲಿ 2 ಕಂತುಗಳು ಜಮಾ ಆಗಲಿದೆ ಅಂತ ಸಚಿವ ಲಕ್ಷ್ಮೀ ಹೆಬ್ಬಾಳಕರ್ ರವರು ಹೇಳಿದ್ರು. ಆದರೆ ಎಪ್ರಿಲ್ ತಿಂಗಳಲ್ಲಿ ಒಂದೇ ಕಂತು ಜಮಾ ಆಗಿದೆ. ಅದೇ ತರ ಇದೀಗ ತುಂಬಾ ಜನರಿಗೆ ಹಣ ಜಮಾ ಆಗಿದೆ. ಇನ್ನು ಕೆಲವರಿಗೆ ಜಮಾ ಆಗಿಲ್ಲ. ಇನ್ನು ಯಾರಿಗೆಲ್ಲ ಎಪ್ರಿಲ್ ತಿಂಗಳಿನಲ್ಲಿ ಜಮಾ ಆಗಿದ್ಯೋ ಅವರುಗಳಿಗೆ ಮೇ ತಿಂಗಳ ಮೊದಲ ವಾರ ಒಂದು ಕಂತು ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ನಿಮ್ಮ ಗೃಹಲಕ್ಷ್ಮೀ ಯೋಜನೆ ಹಣ ಬರ್ತಾ ಇಲ್ಲ ಅಂದ್ರೆ ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿರುತ್ತದೆ. ಮತ್ತೊಮ್ಮೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.
ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಒಂದೇ ಸಲ 3 ಕಂತುಗಳು ಜಮಾ ಆಗುತ್ತೆ, Congress Guarantee Scheme