ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಒಂದು ಬಂದಿದೆ. ಹೌದು ಗೃಹಲಕ್ಷ್ಮೀ ಯೋಜನೆ 14ನೇ ಕಂತಿನ 2000 ಹಣ ಬಿಡುಗಡೆ ಆಗಲಿದೆ. ಯಾವ ದಿನದಂದು ಯೋಜನೆ ಹಣ ಬರಲಿದೆ? ಯಾರಿಗೆಲ್ಲಾ ಈ ಯೋಜನೆ ಹಣ ಸಿಗಲಿದೆ? ಯಾವ ಜಿಲ್ಲೆಗಳಿಗೆ ಹಣ ಮೊದಲು ವರ್ಗಾವಣೆ ಆಗಲಿದೆ? ಎಲ್ಲದರ ಸಂಪೂರ್ಣ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮೀ ಯೋಜನೆ 14ನೇ ಕಂತು ಜಮಾ, Gruhalaxmi Scheme 2000 Credited On November month, Garantee Scheme Update, Congress , Gruhalaxmi Yojane
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮಅಕ್ಕಪಕ್ಕದ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆಗಳನ್ನ ತರುತ್ತಿದ್ದೇವೆ. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ, ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಲಾಗಿತ್ತು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 2 ತಿಂಗಳುಗಳು ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಗಳು ಜನರಿಗೆ ತಲುಪುವ ಹಾಗೇ ಮಾಡಲಾಗಿದೆ.
ಅವುಗಳಲ್ಲಿ ಬಹು ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 13 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 26,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಕೆಲವರಿಗೆ 11 ಕಂತುಗಳು ಅಂದ್ರೆ ಜೂನ್ ತಿಂಗಳಿನ ವರೆಗೆ ಹಣ ಜಮಾ ಮಾಡಲಾಗಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಯೋಜನೆ ಹಣ ಜಮಾ ಮಾಡಲಾಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿರುವ ಪ್ರಕಾರ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗುವ ಹಾಗೆ ಮಾಡಲಾಗಿದೆ ಎನ್ನಲಾಗುತ್ತಿದೆ. ಯಾವಾಗ ಯೋಜನೆ ಬಿಡುಗಡೆ ಆಗುತ್ತೇ ಎನ್ನುವುದರ ಸ್ಪಷ್ಟನೆಯೊಂದನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ರು. ಅವರು ಹೇಳುವ ಪ್ರಕಾರ ನಾವು ಅಕ್ಟೋಬರ್ ತಿಂಗಳಲ್ಲಿ 2 ಕಂತುಗಳನ್ನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ನೀಡುತ್ತೇವೆ.
ಅಂದ್ರೆ, ಅಕ್ಟೋಬರ್ 7ನೇ ತಾರೀಖಿನ ನಂತರ 12ನೇ ಕಂತು ಅಂದ್ರೆ ಜುಲೈ ತಿಂಗಳ ಕಂತಿನ ಹಣ ಹಾಗೂ ಅಕ್ಟೋಬರ್ 15ನೇ ತಾರೀಖಿನ ನಂತರ 13ನೇ ಕಂತು ಅಂದ್ರೆ ಆಗಸ್ಟ್ ತಿಂಗಳ ಕಂತಿನ ಹಣವನ್ನ ನಾವು ನೀಡುತ್ತೇವೆ ಅಂದಿದ್ರು. ಅದೇ ರೀತಿ ಇದೀಗ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಇದು ಅಕ್ಟೋಬರ್ ತಿಂಗಳಿನಲ್ಲಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ತುಂಬಾ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹಣ ಜಮಾ ಆಗಿಲ್ಲ. ಆದರೆ ಅವರಿಗೂ ಕೂಡ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮೀ ಯೋಜನೆ 14ನೇ ಕಂತಿನ ಹಣ:
ಮೊದಲು 14ನೇ ಕಂತಿನ ಬಗ್ಗೆ ತಿಳಿಯುವುದಾದರೆ, ಗೃಹಲಕ್ಷ್ಮೀ ಯೋಜನೆ 14ನೇ ಕಂತು ಅಂದ್ರೆ ಸೆಪ್ಟಂಬರ್ ತಿಂಗಳಿನಲ್ಲಿ ಹಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವ ಪ್ರಕಾರ ನವೆಂಬರ್ 10ನೇ ತಾರೀಕಿನಂದು ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೌದು ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ 12ನೇ ಕಂತು ಅಕ್ಟೋಬರ್ 7ನೇ ತಾರೀಖಿನ ನಂತರ ಬಿಡುಗಡೆ ಆಗಲಿದೆ ಹಾಗೂ 13ನೇ ಕಂತು ಅಂದ್ರೆ ಆಗಸ್ಟ್ ತಿಂಗಳ ಹಣ ಅಕ್ಟೋಬರ್ 14ನೇ ತಾರೀಖಿನ ನಂತರ ಬಿಡುಗಡೆ ಆಗಲಿದೆ ಎಂದು ಹೇಳಿದ್ರು, ಇನ್ನು ಅವರು ಹೇಳುವ ರೀತಿಯಲ್ಲಿ 12 ಹಾಗೂ 13ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಅದೇ ರೀತಿ ನವೆಂಬರ್ 10ನೇ ತಾರೀಖಿನ ನಂತರ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
Recent Post:
-
ಕೇಂದ್ರ ಸರ್ಕಾರದಿಂದ ಬಂತು ಹೊಸ ಯೋಜನೆ, Government News Scheme 2025, ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 6000, PM Scheme
-
PM Kisan Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025
ಯಾರಿಗೆಲ್ಲಾ ಯೋಜನೆ ಹಣ ಬಿಡುಗಡೆ ಆಗಲಿದೆ:
ಗೃಹಲಕ್ಷ್ಮೀ ಯೋಜನೆ ಹಣ ಇಲ್ಲಿಯವರೆಗೆ 13 ಕಂತುಗಳು ಅಂದ್ರೆ 26,000 ಹಣ ನೀಡಲಾಗಿದೆ. ಯಾರ್ ಯಾರು 13ನೇ ಕಂತು ಸಿಕ್ಕಿದ್ಯೋ ಅವರುಗಳಿಗೆ ನವೆಂಬರ್ 10ನೇ ತಾರೀಖಿನ ನಂತರ ಬಿಡುಗಡೆ ಆಗಲಿದೆ. ಇನ್ನು 12ನೇ ಕಂತು ಹಾಗೂ 13ನೇ ಕಂತು ಬಂದಿಲ್ಲ ಎನ್ನುವವರು ಗಾಬರಿ ಯಾಗುವ ಅವಶ್ಯಕತೆ ಇರುವುದಿಲ್ಲ. ಇವರು ಗಳಿಗೆ ನವೆಂಬರ್ ತಿಂಗಳಲ್ಲಿ ಒಂದು ಕಂತು ಅಂದ್ರೆ 2000 ನೀಡಲಾಗುತ್ತದೆ. ಇನ್ನು ಬಾಕಿ ಉಳಿದ ಹಣ ಮುಂದಿನ ದಿನಗಳಲ್ಲಿ ಅವರ ಖಾತೆಗೆ ಜಮಾ ಆಗಲಿದೆ.
ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮೀ ಹಣ ಬಿಡುಗಡೆ:
ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳು ಇಡೀ ರಾಜ್ಯದ ಜನರಿಗೆ ಮಾಡಿರುವ ಯೋಜನೆಗಳು. ಇದು ಕೆಲ ಜಿಲ್ಲೆಗಳಲ್ಲಿ ಮೊದಲು, ಆ ನಂತರ ಬಾಕಿ ಉಳಿದಿರುವ ಜಿಲ್ಲೆಗಳಲ್ಲಿ ಎನ್ನುವ ತರಹ ಅಲ್ಲ. ಸರ್ಕಾರ ಯೋಜನೆ ಹಣ ಮೊದಲು DBT ಗೆ ವರ್ಗಾವಣೆ ಆಗುತ್ತೆ. ಆನಂತರ 2 ರಿಂದ 3 ದಿನಗಳ ನಂತರ ಆಯಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತೆ. ಇಲ್ಲಿ ಮೊದಲು ಈ ಜಿಲ್ಲೆಗಳಿಗೆ, ನಂತರ ಆ ಜಿಲ್ಲೆಗಳಿಗೆ ಎನ್ನುವ ನಿಯಮವಿಲ್ಲ. ಸರಾಸರಿ ದಿನಕ್ಕೆ ಇಂತಿಷ್ಟು ಜನರಿಗೆ ಅಂತ DBT ಮೂಲಕ ಹಣ ವರ್ಗಾವಣೆ ಆಗುತ್ತೆ.
ಸ್ಪಷ್ಟನೆ:
ಗೃಹಲಕ್ಷ್ಮೀ ಯೋಜನೆ 12 ಹಾಗೂ 13ನೇ ಕಂತು ಬಂದವರಿಗೆ 14ನೇ ಕಂತು ನವೆಂಬರ್ 10ನೇ ತಾರೀಖಿನ ನಂತರ ಹಣ ಬಿಡುಗಡೆ ಆಗಲಿದೆ. ಇನ್ನು 12 ಹಾಗೂ 13ನೇ ಕಂತು ಬಂದಿಲ್ಲವರಿಗೆ ನವೆಂಬರ್ ತಿಂಗಳಲ್ಲಿ 1 ಕಂತು ಅಷ್ಟೇ ಬಿಡುಗಡೆ ಆಗಲಿದೆ. ಯಾಕಂದ್ರೆ ಕೆಲ ತಾಂತ್ರಿಕ ದೋಷದಿಂದ ಹಣ ವಿನಿಮಯ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಎಲ್ಲಾ ಸಮಸ್ಯೆಗಳನ್ನ ನಿವಾರಿಸಿ ಹಣ ವಿನಿಮಯ ಆಗಲಿದೆ.
ಇನ್ನು ಗೃಹಲಕ್ಷ್ಮೀ ಕುರಿತಾಗಿ ಯಾವುದೇ ಸಮಸ್ಯೆ ಇದ್ದಲ್ಲಿ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ. ನಾವು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ.
ಗೃಹಲಕ್ಷ್ಮೀ ಯೋಜನೆ 14ನೇ ಕಂತು ಜಮಾ, Gruhalaxmi Scheme 2000 Credited On November month, Garantee Scheme Update, Congress, Gruhalaxmi Yojane