ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ವರ್ಷಗಳಿಂದ ತೋಟಗಾರಿಕೆಯಲ್ಲಿ ಕಳೆ ನಿಯಂತ್ರಣವು ದೊಡ್ಡ ಸವಾಲಾಗಿ ಪರಿಣಮಿಸಿದೆ, ಇದೀಗ ರೈತರಿಗೆ ಉತ್ತಮ ಪರಿಹಾರ ಒದಗಿಸಲು ತೋಟಗಾರಿಕೆ ಇಲಾಖೆಯು ಮುಂದಾಗಿದೆ.
ಕೃಷಿ ಇಲಾಖೆಯಿಂದ ರೈತರಿಗೆ ₹1 ಲಕ್ಷ ಸಬ್ಸಿಡಿ ಸ್ಕೀಮ್! Government New Scheme Update, Government Pension Scheme Update Kannada, Government Free Loan Scheme Karnataka, Mukhyamantree Shramashakti Yojana 2025 Online
ಹೌದು ಕರ್ನಾಟಕ ಸರ್ಕಾರದ MIDH ಯೋಜನೆ ಅಡಿಯಲ್ಲಿ ರೈತರು ವೀಡ್ ಮ್ಯಾಟ್ ಅನ್ನು ಖರೀದಿಸಿ ತಮ್ಮ ತೋಟಗಳಲ್ಲಿ ಬಳಸಿದರೆ, ಪ್ರತೀ ಚದರ ಮೀಟರ್‌ಗೆ ₹50 ಸಹಾಯಧನ ಮತ್ತು ಗರಿಷ್ಠ ₹1 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತದೆ. ರೈತರು ಅದಕ್ಕೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು.
ಇನ್ನು ಈ ಯೋಜನೆಯ ಲಾಭ ಪಡೆಯಲು ಯಾವೆಲ್ಲ ದಾಖಲೆಗಳು ಬೇಕು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಎಲ್ಲವನ್ನೂ ಇದೀಗ ನೋಡೋಣ.
ವೀಡ್ ಮ್ಯಾಟ್ ಎನ್ನುವುದು ಪಾಲಿಪ್ರೊಪಿಲೀನ್ ನಿಂದ ತಯಾರಿಸಲಾದ ಕೃತಕ ಜಾಲವಾಗಿದ್ದು, ಇದು ಮಣ್ಣಿನ ಮೇಲೆ ಹರಿದಿದ್ದರೆ, ಕಳೆಗಳಿಗೆ ಸೂರ್ಯನ ಬೆಳಕು ತಲುಪದಂತೆ ತಡೆಯುತ್ತದೆ.
Recent Post:
-
PM Kisa Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025
-
SSP Scholarship 2025, SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, New Scholarship Update 2025, Karnataka Scholarship
ಇದರ ಪರಿಣಾಮವಾಗಿ ಕಳೆಗಳು ಬೆಳೆಯುವುದಿಲ್ಲ, ಬೆಳೆಗಳಿಗೆ ಹಾನಿಯು ಕಡಿಮೆಯಾಗುತ್ತದೆ ಮತ್ತು ಕೃಷಿಯಲ್ಲಿ ಶ್ರಮ, ವೆಚ್ಚ ಎರಡೂ ಉಳಿಯುತ್ತವೆ. ಜೊತೆಗೆ, ಮಣ್ಣಿನ ತಾಪಮಾನ ನಿಯಂತ್ರಣ, ತೇವಾಂಶ ಕಾಪಾಡುವಿಕೆ, ಕೀಟರೋಗ ತಡೆ, ಇಳುವರಿ ಹೆಚ್ಚಳ ಹೀಗೆ ಇದೇ ತರಹ ಬಹುಪಾಲು ಪ್ರಯೋಜನಗಳಿವೆ.
ಹೆಚ್ಚುವರಿ ಆದಾಯದ ಜೊತೆಗೆ ಪರಿಸರ ಸ್ನೇಹಿಯಾದ ಕೃಷಿಗೆ ಇವು ನೆರವಾಗುತ್ತವೆ. ಇತ್ತೀಚೆಗೆ ಕರ್ನಾಟಕ ಜಿಲ್ಲೆಯ ಅನೇಕ ರೈತರು ಈ ತಂತ್ರಜ್ಞಾನವನ್ನು ತಮ್ಮ ತೋಟಗಳಲ್ಲಿ ಬಳಸುತ್ತಿದ್ದಾರೆ. ಕೇವಲ ಅಕ್ಕಿ ಅಥವಾ ಗೋಧಿ ಬೆಳೆಗಾರರಿಗಷ್ಟೇ ಅಲ್ಲ, ಹಣ್ಣು, ಹೂವಿನ ತೋಟಗಾರಿಕೆಯಲ್ಲಿ ಸಹ ಇದರ ಪ್ರಯೋಜನಗಳಿವೆ.
ಇನ್ನು ಕೃಷಿ ಇಲಾಖೆಯಿಂದ ರೈತರಿಗೆ 1 ಲಕ್ಷದ ವರೆಗೆ ಸಬ್ಸಿಡಿಯನ್ನು ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು, ರೈತರು ತಮ್ಮ ತಾಲ್ಲೂಕಿನ ತೋಟಗಾರಿಕೆ ಕಚೇರಿಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸುವ ಮೊದಲು,
- ಅವರ ಹೆಸರು ಜಮೀನಿನಲ್ಲಿ ಇದ್ದೇ ಇರಬೇಕು.
- ಜಂಟಿ ಖಾತೆಗಳಿದ್ದಲ್ಲಿ ಇತರ ಸದಸ್ಯರಿಂದ ಒಪ್ಪಿಗೆಯ ನೋಟರಿ ದಾಖಲೆ ಬೇಕಾಗುತ್ತದೆ.
- ಮಹಿಳೆಯ ಹೆಸರಿನಲ್ಲಿ ಖಾತೆ ಇದ್ದರೆ, ಅರ್ಜಿ ಕೂಡ ಮಹಿಳೆಯರ ಹೆಸರಿನಲ್ಲಿ ಸಲ್ಲಿಸಲು ಸರ್ಕಾರ ಆದೇಶಿಸಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಫೋಟೋಗಳು
- ತೋಟಗಾರಿಕೆ ಬೆಳೆ ಪ್ರಮಾಣ ಪತ್ರ
- ಜಮೀನಿನ ಪಹಣಿ
- ಬ್ಯಾಂಕ್ ಪಾಸ್‌ಬುಕ್
- ಮೊಬೈಲ್ ನಂಬರ್
- ರೇಷನ್ ಕಾರ್ಡ್
ಹೀಗೆ ಇತ್ಯಾದಿಗಳು ಬೇಕಾಗುತ್ತವೆ.
ಇನ್ನು ಈ ಪ್ರಕ್ರಿಯೆ ಸಂಪೂರ್ಣವಾಗಿ ನೇರವಾಗಿ ಕಚೇರಿಯಲ್ಲಿ ನಡೆಯುತ್ತದೆ. ಈಗಾಗಲೇ ರಾಜ್ಯದ ಹಲವಾರು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗೂ ನೀವು ಕೂಡ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು.
ಕೃಷಿ ಇಲಾಖೆಯಿಂದ ರೈತರಿಗೆ ₹1 ಲಕ್ಷ ಸಬ್ಸಿಡಿ ಸ್ಕೀಮ್, Government New Scheme Update, Government Pension Scheme Update Kannada, Government Free Loan Scheme Karnataka, Mukhyamantree Shramashakti Yojana 2025 Online