ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ಅವಕಾಶ ಕಲ್ಪಿಸುವ “ಸ್ವಾವಲಂಬಿ ಸಾರಥಿ ಯೋಜನೆ”ಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಇದೀಗ ನೋಡೋಣ.
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025, Government New Scheme 2025, Self-reliant Sarathi Scheme 2025
ಸ್ವಾವಲಂಬಿ ಸಾರಥಿ ಯೋಜನೆ:
ಕರ್ನಾಟಕದಲ್ಲಿ ನಿರುದ್ಯೋಗದ ಸಂಖ್ಯೆ ಹೆಚ್ಚಿರುವುದರಿಂದ ಇದರ ಇದರ ಸಮಸ್ಯೆಯನ್ನು ಪರಿಹರಿಸಲು ಅನೇಕ ಯೋಜನೆಗಳು ಸರ್ಕಾರ ತರುತ್ತಿರುತ್ತದೆ. ಅದೇ ರೀತಿ ಇದೀಗ ಸರ್ಕಾರದ ಹೊಸ ಯೋಜನೆ ಇದಾಗಿದೆ. ಅದುವೇ ಸ್ವಾವಲಂಬಿ ಸಾರಥಿ ಯೋಜನೆ. ಇಲ್ಲಿ ನಿಮಗೆ ಸ್ವಂತ ಉದ್ಯೋಗ ಆರಂಭಿಸಲು ಅವಕಾಶ ಕಲ್ಪಿಸಿದೆ. ಈ ಯೋಜನೆಯಲ್ಲಿ ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಇನ್ನು ಇದರ ಲಾಭವನ್ನು ಪಡೆಯಬಹುದು ಮೊದಲು ನೀವು ಅರ್ಜಿ ಸಲ್ಲಿಸಬೇಕು. ಇನ್ನು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎನು, ಎಲ್ಲಿ ಅರ್ಜಿ ಸಲ್ಲಿಸುವುದು, ಇನ್ನು ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಇದೀಗ ತಿಳಿಯೋಣ.

ಈ ಯೋಜನೆಯಯಲ್ಲಿ ನಿಮ್ಮ ವಾಹನದ ಬೆಲೆಯ 75% ಅಥವಾ ಗರಿಷ್ಠ ₹4 ಲಕ್ಷವರೆಗೆ ಸಹಾಯಧನ ನೀಡಲಾಗುತ್ತದೆ.
ಯಾರೆಲ್ಲ ಯೋಜನೆಗೆ ಅರ್ಜಿ ಸಲ್ಲಿಸಬಹುದು:
- ನೀವು ಗ್ರಾಮೀಣ ಪ್ರದೇಶದಲ್ಲಿ ಇದ್ದರೆ ನಿಮ್ಮ ಆದಾಯ ₹1.5 ಲಕ್ಷ ವಾರ್ಷಿಕ ವರಮಾನದ ಒಳಗೆ ಇರಬೇಕು.
- ನೀವು ನಗರ ಪ್ರದೇಶದಲ್ಲಿ ಇದ್ದರೆ ನಿಮ್ಮ ಆದಾಯ ₹2 ಲಕ್ಷ ವಾರ್ಷಿಕ ವರಮಾನದ ಒಳಗೆ ಇರಬೇಕು.
- ಕುಟುಂಬದಲ್ಲಿ ಸರ್ಕಾರಿ/ಅರೆಸರ್ಕಾರಿ ಉದ್ಯೋಗಿ ಇರಬಾರದು.
- ಅರ್ಜಿದಾರರ ವಯಸ್ಸು 21 ರಿಂದ 56 ವರ್ಷಗಳ ನಡುವೆ ಇರಬೇಕು.
ಇದನ್ನ ಓದಿ: Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ವಯಸ್ಸು ಮತ್ತು ನಿವಾಸದ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಚಾಲಕ ಶಾಸನ ಪತ್ರ
- ಬ್ಯಾಂಕ್ ಖಾತೆ ವಿವರ
- ವಾಹನ ದರಪಟ್ಟಿ
- ಪಾಸ್ಪೋರ್ಟ್ ಗಾತ್ರ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
- ಆನ್ಲೈನ್: ಸೇವಾ ಸಿಂಧು ಪೋರ್ಟಲ್ ಮೂಲಕನಲ್ಲಿ ನೀವು ಅರ್ಜಿ ಸಲ್ಲಿಸಬಹುದು.
- ಆಫ್ಲೈನ್: ಗ್ರಾಮ ಒನ್ ಕೇಂದ್ರ ಅಥವಾ ಸಮಾಜ ಕಲ್ಯಾಣ ಕಚೇರಿಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದು.
ಇದನ್ನ ಓದಿ: ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40345 ಹೊಸ ಮನೆಗಳ ಹಂಚಿಕೆ, ನಿಮಗೆ ಸಿಗಲು ಎನು ಮಾಡಬೇಕು,
ಇನ್ನು ಅರ್ಜಿ ಸಲ್ಲಿಸುವ ಕೊನೆ ದಿನಾಂಕ 10 ಸೆಪ್ಟೆಂಬರ್ ಆಗಿರುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಯುವಕರಿಗೆ ಸ್ವಾವಲಂಬನೆ ನೀಡುವುದು ಮತ್ತು ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಸರ್ಕಾರದ ಕೊನೆಯ ಉದ್ದೇಶ.
ಇನ್ನು ಹೆಚ್ಚಿನ ಮಾಹಿತಿಗಾಗಿ
ಅಧಿಕೃತ ವೆಬ್‌ಸೈಟ್: https://swdcorp.karnataka.gov.in
ಅರ್ಜಿ ಲಿಂಕ್:
https://swdcorp.karnataka.gov.in/ADCLPortal/schemelist
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025, Government New Scheme 2025, Self-reliant Sarathi Scheme 2025
