ನಮಸ್ಕಾರ ಸ್ನೇಹಿತರೇ, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ. ಎಷ್ಟೋ ಜನರ ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಗಳು ಕ್ಯಾನ್ಸಲ್. ಹೌದು ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 21ನೇ ಕಂತು ಜಮಾ ಆಗಿತ್ತು. ಆದರೆ ಇಲ್ಲಿ ತುಂಬಾ ಜನರಿಗೆ ಯೋಜನೆ ಹಣ ಬಂದಿಲ್ಲ. ತುಂಬಾ ಜನರಿಗೆ 4 ರಿಂದ 5 ಕಂತುಗಳು ಬರುವುದು ಪೆಂಡಿಂಗ್ ನಲ್ಲಿಯೇ ಇದೆ. ಕೆಲವರಿಗೆ ಯೋಜನೆ ಹಣ ಬಿಡುಗಡೆ ಆಗ್ತಾ ಇದ್ರೆ, ಇನ್ನು ಕೆಲವರಿಗೆ ಯೋಜನೆ ಹಣ ಸಿಗುತ್ತಿಲ್ಲ. ಹೌದು, ಇನ್ನು ಇದರ ಮಧ್ಯ ತುಂಬಾ ಜನರ ಗೃಹ ಲಕ್ಷ್ಮೀ ಅಪ್ಲಿಕೇಶನ್ ಗಳನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ. ಇನ್ನು ನಿಮ್ಮ ಗೃಹಲಕ್ಷ್ಮೀ ಅಪ್ಲಿಕೇಶನ್ ಕ್ಯಾನ್ಸಲ್ ಆಗಿದ್ದಲ್ಲಿ ಎನು ಮಾಡಬೇಕು ಹಾಗೂ ಬಾಕಿ ಇರುವ ಕಂತಿನ ಹಣ ಜಮಾ ಆಗಲು ಎನು ಮಾಡಬೇಕು ಎಂಬುದನ್ನ ಇದೀಗ ನೋಡೋಣ. ಇನ್ನು ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಮತ್ತು ಗೃಹಲಕ್ಷ್ಮೀ ಯೋಜನೆಯ ಫಲಾನುಬಾವಿಗಳಿಗೆ ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ.
ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದು. ಈ ಯೋಜನೆಯ ಮೂಲಕ ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳು ಸಿಗುತ್ತವೆ. ಇಲ್ಲಿಯವರೆಗೆ ಒಟ್ಟಾರೆಯಾಗಿ 21ನೇ ಕಂತಿನವರೆಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗಿದೆ. ಅಂದರೆ ಒಟ್ಟಾರೆಯಾಗಿ 42,000 ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನೀಡಲಾಗಿದೆ. ಇವಾಗ 22 ಮತ್ತು 23ನೇ ಕಂತಿನ ಹಣವನ್ನು ನೀಡಬೇಕಾಗಿರುವುದು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು.

ಆದರೆ ಇಲ್ಲಿ ತುಂಬಾ ಜನರಿಗೆ ಯೋಜನೆ ಹಣ ಜಮಾ ಆಗುತ್ತಿಲ್ಲ. ಇನ್ನು ಆಗಸ್ಟ್ ತಿಂಗಳಿನಲ್ಲಿ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಕೆಲವರಿಗೆ ಈ ಕಂತು ಬಂದಿದ್ರೆ ಇನ್ನು ಕೆಲವರಿಗೆ ಯೋಜನೆ ಹಣ ಬಂದಿಲ್ಲ. ಇನ್ನು ನಿಮಗೆ 20ನೇ ಕಂತಿನ ಹಣ ಬಂದು 21ನೇ ಕಂತಿನ ಹಣ ಬಂದಿಲ್ಲ ಅಂದ್ರೆ ಇಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗಳಿಗೆ ಜಮಾ ಆಗುತ್ತದೆ.
ಆದರೆ ಕೆಲವರಿಗೆ ಮಾರ್ಚ್ ತಿಂಗಳಿನ ನಂತರ ಯಾವುದೇ ಹಣ ಬಿಡುಗಡೆ ಆಗುತ್ತಿಲ್ಲ. ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳನ್ನು ಸರ್ಕಾರದ ಕ್ಯಾನ್ಸಲ್ ಮಾಡಲಾಗಿದೆ. ಹೌದು ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ನಲ್ಲಿ ಕೆಲವು ತೊಂದರೆ ಗಳು ಕಾಣಿಸಿಕೊಂಡಲ್ಲಿ ಕ್ಯಾನ್ಸಲ್ ಮಾಡಲಾಗಿದೆ. ಹಾಗೂ ಅವರು ಅನರ್ಹರಾಗಿರುವುದರಿಂದ ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ಕ್ಯಾನ್ಸಲ್ ಆಗಿದೆ.
ಇದನ್ನ ಓದಿ: 2 lakhs ರೇಷನ್ ಕಾರ್ಡ್ Cancel, ರಾಜ್ಯದಲ್ಲಿ 2ಲಕ್ಷ BPL ರೇಷನ್ ಕಾರ್ಡ್ ರದ್ದು, Cancelled Ration Card List 2025
ಕ್ಯಾನ್ಸಲ್ ಆಗಲು ಕಾರಣ:
ಗೃಹಲಕ್ಷ್ಮೀ ಯೋಜನೆ ಕಾಂಗ್ರೇಸ್ ಸರ್ಕಾರ ನೀಡಿರುವುದು ಬಡವರಿಗೆ ಸಹಾಯವಾಗಲು. ಆದರೆ ಇಲ್ಲಿ ತುಂಬಾ ಜನ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇದರಿಂದ ತುಂಬಾ ಜನರ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳು ಕ್ಯಾನ್ಸಲ್ ಮಾಡಲಾಗಿದೆ. ಇನ್ನು ಕ್ಯಾನ್ಸಲ್ ಆಗಲು ಕಾರಣಗಳು ಯಾವುದು ಎಂದು ನೋಡುವುದಾದರೆ,
- ರೇಷನ್ ಕಾರ್ಡ್: ಇಲ್ಲಿ ಎಪಿಎಲ್ ರೇಷನ್ ಕಾರ್ಡುದಾರರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯುತ್ತಾ ಇದ್ದರು. ಅವರುಗಳ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳನ್ನು ಸರ್ಕಾರ ಕ್ಯಾನ್ಸಲ್ ಮಾಡಿದೆ.
- ನಾಲ್ಕು ಚಕ್ರ ವಾಹನಗಳು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಮನೆಯ ಯಜಮಾನಿ ಪಡೆಯುತ್ತಿದರೆ, ಅವರ ಕುಟುಂಬದಲ್ಲಿ ಕಾರು ಹೊಂದಿದ್ದರೆ ಅವರ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳನ್ನು ಸರ್ಕಾರ ಕ್ಯಾನ್ಸಲ್ ಮಾಡುತ್ತಿದ್ದಾರೆ.
- ಸರ್ಕಾರಿ ನೌಕರಿ: ಮನೆಯ ಯಜಮಾನಿ ಗೃಹಲಕ್ಷ್ಮೀ ಯೋಜನೆ ಲಾಭವನ್ನು ಪಡೆಯುತ್ತಿದ್ದಾರೆ, ಕುಟುಂಬದ ಒಬ್ಬ ಸದಸ್ಯ ಸರ್ಕಾರಿ ನೌಕರಿಯನ್ನು ಪಡೆದಿದ್ದರೆ, ಅವರ ಗೃಹಲಕ್ಷ್ಮೀ ಅಪ್ಲಿಕೇಶನ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ.
- 2 ಹಾಗು ಹೆಚ್ಚು ರೇಷನ್ ಕಾರ್ಡು: ಒಂದು ಕುಟುಂಬದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ರೇಷನ್ ಕಾರ್ಡು ಇದ್ದರೆ ಅವರ ಗೃಹಲಕ್ಷ್ಮೀ ಅಪ್ಲಿಕೇಶನ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ.
- Documnet Error: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ document ನಲ್ಲಿ ಕೆಲವು ಸಮಸ್ಯೆಗಳು ಇರುವ ಕಾರಣದಿಂದ ಯೋಜನೆ ಹಣ ಪಲನುಭವಿಗಳ ಖಾತೆಗೆ ಜಮಾ ಆಗದೆ ಪೆಂಡಿಂಗ್ ನಲ್ಲಿ ಇರುವ ಕಾರಣದಿಂದ ತುಂಬಾ ಜನರ ಗೃಹಲಕ್ಷ್ಮೀ ಅಪ್ಲಿಕೇಶನ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ.
ಮೇಲಿರುವ ಕಾರಣಗಳು ಅವರುಗಳು ಅನರ್ಹರು ಎಂದು ಗುರುತಿಸುತ್ತದೆ. ಆದರೆ ಕೊನೆಯ ಕಾರಣ ಇಲ್ಲಿ ಪಾಲನುಭವಿಯ ಕೆಲವು document ನಲ್ಲಿ ಇರುವ ಸಮಸ್ಯೆಯನ್ನು ಪರಿಯರಿಸಿದರೆ ನಿಮ್ಮ ಪೆಂಡಿಂಗ್ ನಲ್ಲಿರುವ ಯೋಜನೆ ಹಣ ಜಮಾ ಆಗುತ್ತದೆ.
ಯೋಜನೆ ಹಣ ಬರಲು ದಾರಿ:
ಗೃಹಲಕ್ಷ್ಮೀ ಅಪ್ಲಿಕೇಶನ್ ನಲ್ಲಿ ಕೆಲವು Error ಇರುವ ಕಾರಣದಿಂದ ಇದರ ವೆರಿಫಿಕೇಶನ್ ಅನ್ನು ಸರ್ಕಾರ ಮಾಡಲು ಮುಂದಾಗಿದೆ. ನಿಮಗೆ ಯೋಜನೆ ಬಂದಿಲ್ಲ ಅಂದ್ರೆ ಈ ವೆರಿಫಿಕೇಶನ್ ಆದ ಬಳಿಕ ಬಾಕಿ ಉಳಿದಿರುವ ಎಲ್ಲಾ ಕಂತುಗಳು ನಿಮಗೆ ಜಮಾ ಆಗುತ್ತೆ. ಇನ್ನು ಇದರ ವೆರಿಫಿಕೇಶನ್ ಅನ್ನು ಸರ್ಕಾರ ಮಾಡಲು ಮುಂದಾಗಿದೆ. ಇದು ಅಂಗನವಾಡಿ ಕೇಂದ್ರಗಳ ಮೂಲಕ ಆಶಾ ಕಾರ್ಯಕರ್ತೆಯರು ಇದನ್ನ ಮಾಡುತ್ತಾರೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ವಿಚಾರಿಸಬಹುದು.
ಇದನ್ನ ಓದಿ: Bigg Boss Kannada: ಸೀಸನ್-12ರ ಸ್ಪರ್ಧಿಗಳ ಪಟ್ಟಿ, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, BBK12 Contestants List
ಮತ್ತು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.
ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
ಇನ್ಮುಂದೆ ಇವರುಗಳಿಗೆ ಗೃಹಲಕ್ಷ್ಮೀ ಹಣ ಬರೋದಿಲ್ಲ, ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಗಳು ಕ್ಯಾನ್ಸಲ್, Gruhalakshmi Scheme Cancel, Congress Garantee Scheme Update, how to get Gruhalakshmi Scheme amount
